Upanyasa - VNU810

ಶ್ರೀಮದ್ ಭಾಗವತಮ್ — 229 — ಭಾರತ ಭಾಗವತಗಳ ಸಂಬಂಧ

ಶ್ರೀಮನ್ ಮಹಾಭಾರತವನ್ನು ಓದುವದರಿಂದ ವೈಷಯಿಕ ಸುಖದಲ್ಲಿ ಮನಸ್ಸು ಆಸಕ್ತವಾಗುತ್ತದೆ ಎಂದು ಭ್ರಾಂತಿ ಬರುವಂತಹ ವಾಕ್ಯವೊಂದರ ಪರಿಶುದ್ಧ ಅರ್ಥವನ್ನು ಶ್ರೀಮದಾಚಾರ್ಯರು ತಿಳಿಸುತ್ತಾರೆ. ಶ್ರೀಮದಾಚಾರ್ಯರ ವ್ಯಾಖ್ಯಾನವನ್ನು ಏಕೆ ಒಪ್ಪಬೇಕು ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ ಮಹಾಭಾರತ ನಮ್ಮ ಮೇಲೆ ಉಂಟು ಮಾಡುವ ಮಹತ್ತರ ಪರಿಣಾಮದ ಕುರಿತ ವಿವರಣೆ ಇಲ್ಲಿದೆ. 

ಬ್ರಹ್ಮಸೂತ್ರಗಳಿಂದಾರಂಭಿಸಿ ಸಕಲ ಸಚ್ಚಾಸ್ತ್ರಗಳಿಗೂ ಇರುವ ಸಂಬಂಧದ ಚಿಂತನೆಯೊಂದಿಗೆ ಶ್ರೀಮದ್ ಭಾಗವತ ಮತ್ತು ಶ್ರೀಮನ್ ಮಹಾಭಾರತಗಳ ಅಪೂರ್ವ ಸಂಬಂಧದ ನಿರೂಪಣೆ ಈ ಭಾಗದಲ್ಲಿ. ಶ್ರೀಮನ್ ಮಹಾಭಾರತದ ಅದ್ಭುತ ವೈಶಿಷ್ಟ್ಯದ ಚಿತ್ರಣದೊಂದಿಗೆ. 

ಇಲ್ಲಿ ವಿವರಣೆಗೊಂಡ ವಾಕ್ಯಗಳು — 

यैस्तत्त्वभेदैरधिलोकनाथो लोकानलोकान् सह लोकपालान्। 
अचीकॢपद् यत्र हि सर्वसत्त्वनिकायभेदोऽधिकृतः प्रतीतः ॥८॥

येन प्रजानामुत आत्मकर्म रूपाभिधानेन भिदां व्यधत्त। 
नारायणो विश्वसृगात्मयोनिरेतच्च नो वर्णय विप्रवर्य ॥९॥

परावरेषां भगवन् कृतानि श्रुतानि मे व्यासमुखादभीक्ष्णम्। 
न तृप्नुमः कर्णसुखावहानां तेषामृते कृष्णकथामृतौघात्॥१०॥

भागवततात्पर्यम् — 

ऋते अवगमे। “ऋ गतौ” इति धातोः। तेषां तात्पर्यावगमे कृष्णकथामृतौघ एवासौ यतः ॥

कस्तृप्नुयात् तीर्थपदोऽभिधानात् सत्रेषु वः सूरिभिरीड्यमानात्। 
यः कर्णनाडीं पुरुषस्य यातो भयप्रदां गेहरतिं छिनत्ति ॥११॥

मुनिर्विवक्षुर्भगवद्गुणानां सखाऽपि ते भारतमाह कृष्णः। 
यस्मिन् नृणां ग्राम्यसुखानुवादैर्मतिर्गृहीता न हरेः कथायाम् ॥१२॥

भागवततात्पर्यम् — यस्मिन् भारते। हरेः कथायां ग्राम्यसुखानुवादैर्मतिर्न गृहिता । 

“भारतान्नाधिकं विष्णोर्महिमावाचकं क्वचित्। 
भारतान्न विरागाय भारतान्न विमुक्तये” इति पाद्मे ॥
Play Time: 54:28

Size: 5.51 MB


Download Upanyasa Share to facebook View Comments
7420 Views

Comments

(You can only view comments here. If you want to write a comment please download the app.)
 • DESHPANDE P N,BANGALORE

  7:04 AM , 03/09/2019

  S.N. You are requested to kindly commence Srimad Mahabharat once SrimadBhagwata is completed
 • prema raghavendra,coimbatore

  12:13 PM, 26/08/2019

  Anantha namaskara! Danyavada!
 • Jasyashree Karunakar,Bangalore

  3:42 PM , 23/08/2019

  ಗುರುಗಳೆ
  
  ಇಲ್ಲಿ ಬಂದಿರುವ ಸಂಸ್ಕೃತ ಶ್ಲೋಕಗಳ ವಾಕ್ಯವನ್ನು ಅಪಾಥ೯ ಮಾಡಿಕೊಳ್ಳದೇ ಸರಿಯಾದ ಕ್ರಮದಲ್ಲಿ ಅಥ೯ಮಾಡಿಕೊಳ್ಳುವ ರೀತಿಯನ್ನು ಮಹಾನುಭಾವರ ಅಭಿಪ್ರಾಯಗಳನ್ನು ನೀಡಿ ತಿಳಿಸಿದ್ದೀರಿ.....
  
  ಆದರೆ ನಾವು ಇನ್ನೂ ಯಾವ ರೀತಿಯಾದ ಅಥ೯ವನ್ನೂ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದೇವೆ....
  
   ಸುರಭಿಯ ಆಗಮನದ ನಿರೀಕ್ಷೆಯಲ್ಲಿದ್ದೇವೆ....
  
  ಇಂತಹ ಶ್ಲೋಕಗಳ ವಿವರಣೆಯನ್ನು ಕೇಳುವಾಗೆಲ್ಲ.....ಆ ನಿರೀಕ್ಷೆಯ ವೇಗ ಹೆಚ್ಚಾಗುತ್ತಿದೆ.....
  
  ಆದರೆ ತಾಳ್ಮೆಯಿಂದ ಕಾಯುವಂತಾದರೆ, ಎಲ್ಲವನ್ನೂ ಸರಿಯಾದ ಕಾಲಕ್ಕೆ, ಸರಿಯಾದ ರೀತಿಯಲ್ಲಿಯೇ ಅಧ್ಯಾತ್ಮ ಮಾಗ೯ದಲ್ಲಿ ನಡೆಯುವವರಿದ್ದೇವೆ ಅಂತ, ಈ ದಿನದ, ಭಾರತ- ಭಾಗವತಾದಿ ವಿಷಯಗಳ ಉಲ್ಲೇಖದಿಂದ ಮತ್ತಷ್ಟು ಸ್ಪಷ್ಟವಾಯಿತು....
  
  ಬದುಕಿನ ಪ್ರಾಯೋಗಿಕ ಪರೀಕ್ಷೆಗಳನ್ನು , ವಿಶ್ವನಂದಿನಿ ನೀಡುವ ಜ್ಞಾನ, ಭಕ್ತಿ, ವೖರಾಗ್ಯಗಳೊಂದಿಗೆ, ಎದುರಿಸುವಂತಾಗುತ್ತಿರುವದರಿಂದ, ಮುಂದೊಂದು ದಿನ ನಾವೂ ಕೂಡ ನಮ್ಮ ಯೋಗ್ಯತೆಯಂತೆ, ಲೋಕದ ಕುರಿತು ಆಸಕ್ತಿಯನ್ನು ಕಳೆದುಕೊಳ್ಳುವಂತಾಗಲಿ ಅನ್ನುವ ಆಶಯ......
  ನಿಮಗೆ ಭಕ್ತಿಯ ವಂದನೆಗಳು🙏🙏
 • Mudigal sreenath,Bengulutu

  9:14 AM , 23/08/2019

  Sree manmahabharathada vysistyavannu bahula channagi thilisidda acharyarige namanagalu