Upanyasa - VNU813

ಶ್ರೀಮದ್ ಭಾಗವತಮ್ — 231 — ವಿದುರರ ಮಾಹಾತ್ಮ್ಯ

ವಿದುರರು ಕಷ್ಟ ಸುಖಗಳನ್ನು ಸ್ವೀಕರಿಸಿದ ರೀತಿ, ಸಜ್ಜನರ ಮೇಲೆ ಅವರಿಗಿರು ಕಾರುಣ್ಯ, ಪ್ರತಿಯೊಬ್ಬರಿಗೂ ಒಳಿತನ್ನು ಬಯಸುವ ಹೃದಯವಂತಿಕೆ, ಶತ್ರುಗಳನ್ನೂ ಶಾಂತಗೊಳಿಸುವ ಅವರ ಪ್ರಸನ್ನವಾದ ನಡವಳಿಕೆ, ದೇವರನ್ನು ಅನನ್ಯವಾಗಿ ನಂಬಿದ್ದ ಅವರ ಪರಿಶುದ್ಧ ಭಕ್ತಿ ಮುಂತಾದ ಮಹಾಗುಣಗಳ ವರ್ಣನೆಯೊಂದಿಗೆ ವೇದವ್ಯಾಸದೇವರ ಮಗನಾಗಿ ಹುಟ್ಟಿಬಂದ ಅವರ ಮಾಹಾತ್ಮ್ಯದ ಚಿಂತನೆ ಇಲ್ಲಿದೆ. 

ಶೂದ್ರ ಜನ್ಮವನ್ನು ಪಡೆಯಬೇಕೆಂಬ ಅಪೇಕ್ಷೆಯಿಂದ ಯಮಧರ್ಮದೇವರು ತಾವಾಗಿ ಮಾಂಡವ್ಯರಿಂದ ಶಾಪವನ್ನು ಪಡೆದ ಘಟನೆಯ ಸಂಕ್ಷಿಪ್ತ ನಿರೂಪಣೆ ಇಲ್ಲಿದೆ. ವಿದುರರ ತಾಯಿಯ ಕುರಿತ ಮಹತ್ತ್ವದ ನಿರೂಪಣೆಯೊಂದಿಗೆ. 

ಅನನ್ಯವಾಗಿ ದೇವರನ್ನು ನಂಬುವದು ಎಂದರೆ ಏನು ಎಂಬ ಪ್ರಶ್ನೆಗೆ ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿದ ಉತ್ತರದ ಸಂಗ್ರಹ ಇಲ್ಲಿದೆ. 

ಗೌರವ ಎಂಬ ಶಬ್ದದ ಅರ್ಥವಿವರಣೆ ಇಲ್ಲಿದೆ. 

Play Time: 61:08

Size: 5.51 MB


Download Upanyasa Share to facebook View Comments
8038 Views

Comments

(You can only view comments here. If you want to write a comment please download the app.)
 • Naveen ulli,Ilkal

  11:10 PM, 06/09/2020

  ಗುರುಗಳೇ ನಮಸ್ಕಾರ 🙏
  ನಾವು ಪ್ರವಚನದಲ್ಲಿ ಕೇಳಿದೆವು 14 ವರ್ಷದ ಒಳಗಿನ ಮಕ್ಕಳು ಮಾಡಿದ ಪಾಪವನ್ನ ಸ್ವಾಮಿ ಅವರ ತಂದೆ ತಾಯಿಯರಿಗೆ ನೀಡ್ತಾನೆ ಅಂತ ಅದು ನಿಜಾನಾ? ನಿಜವಾದ್ರೆ, 14 ವರ್ಷದ ಒಳಗಿನ  ಮಕ್ಕಳು ಮಾಡಿದ ಪುಣ್ಯವನ್ನ ಯಾರಿಗೆ ನೀಡ್ತಾರೆ? ಮತ್ತು ನಾವು 14 ವರ್ಷದ ನಂತರ ಮಾಡಿದ ಕರ್ಮಗಳಿಗೆ ಮಾತ್ರ ಫಲ ಇದೆಯಾ?  ದಯವಿಟ್ಟು ತಿಳಿಸಬೇಕಾಗಿ ವಿನಂತಿ.
 • DESHPANDE P N,BANGALORE

  1:39 PM , 06/09/2019

  S.Namaskargalu. Attyanta shrestthatamawwada pravachan anugrahvirali
 • Jasyashree Karunakar,Bangalore

  3:47 PM , 28/08/2019

  ಗುರುಗಳೆ
  
  "ಅನನ್ಯ ಭಾವೇನ" 
  
  "ಅತೀ ಪೌರುಷಾಣಿ "
  
   ಅನ್ನುವ, ಅದ್ಭುತವಾದ ಅಥ೯ನೀಡುವ, ಶಬ್ದಗಳ ವಿವರಣೆಯನ್ನು , ನಮ್ಮ ಅಲ್ಪವಾದ ಬುದ್ಧಿಯು ಗ್ರಹಿಸುವಂತೆ ತಿಳಿಸಿಹೇಳಿದ
  ನಿಮಗೆ ಕೃತಜ್ಞರಾಗಿದ್ದೇವೆ🙏🙏
  
  ಶಾಸ್ತ್ರಾಧ್ಯಯನ ಮಾಡದ ನಮ್ಮಂತಹ ಸಾಮಾನ್ಯರು
  ಅಪಾಥ೯ ಮಾಡಿಕೊಳ್ಳುವಂತಹ "ಬಾದರಾಯಣವೀಯ೯ಜೆ" ಅನ್ನುವ ಶಬ್ದದ ಹಿಂದಿರುವ ಅಥ೯ವನ್ನು ತಿಳಿಸುತ್ತಾ, ಅದಕ್ಕೆ ಸಂಭಂದಪಟ್ಟ ಘಟನೆಯ, ಹಿಂದಿರುವ ತತ್ವದ ವಿವರಣೆಯನ್ನು ಪರಿಸ್ಪಷ್ಟವಾಗಿ ತಿಳಿಸಿಹೇಳಿದ, ನಿಮ್ಮ ವಾಕ್ಚಾತುಯ೯ಕ್ಕೆ ಮೂಕರಾಗಿಬಿಟ್ಟಿದ್ದೇವೆ ಗುರುಗಳೆ....
  
  ಭಯಂಕರನಲ್ಲವೋ .....ನೀನು ಗುಣಾ೯ಣವ...
  ನೀನು ಸ್ವತಂತ್ರ....
  ಅಬ್ಬಾ!!!!!
  
  ಮನಸ್ಸಿನಲ್ಲಿ ವೇದವ್ಯಾಸದೇವರ ದಶ೯ನವನ್ನೇ ಮಾಡಿಸಿತು
  
  ಪ್ರಾಸಂಗಿಕವಾಗಿ ಬರುವ ಇಂತಹ ಕೆಲವು ಘಟನೆಗಳನ್ನೂ ಸಹ ಮನಸ್ಸಿಗೆ ನಾಟುವಂತೆ ಹೇಳುತ್ತೀರಿ....
  
  ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳ ಪರಿಚಯವನ್ನು ಭಕ್ತಿಪೂವ೯ಕವಾಗಿ ಇಲ್ಲಿಯೇ ತಿಳಿಯುತ್ತಾ, ಮುಂದೆ ಮಹಾಭಾರತವನ್ನು ತಿಳಿಯಲು, ಭಕ್ತಿಯ ತಳಪಾಯವನ್ನೇ ಹಾಕುತ್ತಿದೆ ಶ್ರೀಮದ್ಭಾಗವತ 🙏🙏