25/08/2019
ಎಷ್ಟೇ ಸಮರ್ಥನಾದ ಅಡಿಗೆಯವನಾದರೂ ಅಡಿಗೆಗೆ ಬೇಕಾದ ಪದಾರ್ಥಗಳು ಹಾಗೂ ಅಡಿಗೆ ಮಾಡಲು ಸ್ಥಳ ಇಲ್ಲದೇ ಇದ್ದರೆ ಅಡಿಗೆ ಮಾಡಲು ಸಾಧ್ಯವಿಲ್ಲ. ಹಾಗೆ, ದೇವರು ಪರಮಸಮರ್ಥನಾಗಿದ್ದರೂ ಅವ್ಯಾಕೃತ ಆಕಾಶ-ಪ್ರಕೃತಿಗಳಿಲ್ಲದೇ ಸೃಷ್ಟಿ ಮಾಡಲು ಸಾಧ್ಯವಿಲ್ಲ ಅಲ್ಲವೇ ಎಂಬ ಪ್ರಶ್ನೆಗೆ ಭಾಗವತ ನೀಡಿದ ಉತ್ತರದ ವಿವರಣೆ ಇಲ್ಲಿದೆ. ಇನ್ನು, ಅವಿಲ್ಲದೆಯೂ ಸೃಷ್ಟಿ ಮಾಡಬಲ್ಲ ಸಾಮರ್ಥ್ಯ ದೇವರಿಗಿದ್ದಿದ್ದರೆ, ಅವಿಲ್ಲದೆಯೇ ಸೃಷ್ಟಿ ಮಾಡಬೇಕಾಗಿತ್ತು, ಹಾಗೆ ಮಾಡಿಲ್ಲವಾದ್ದರಿಂದಲೇ, ಇವಿಲ್ಲದೇ ದೇವರಿಗೆ ಸೃಷ್ಟಿ ಮಾಡುವ ಸಾಮರ್ಥ್ಯವಿಲ್ಲ ಎಂದು ನಿಶ್ಚಿತವಾಗುತ್ತದೆ ಎಂಬ ಪೂರ್ವಪಕ್ಷಕ್ಕೆ ಶ್ರೀಮದ್ ಭಾಗವತ ನೀಡಿದ ಅದ್ಭುತ ಉತ್ತರದ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನ — षष्ठोऽध्यायः मैत्रेय उवाच — भगवानेक आसेदमग्र आत्माऽऽत्मनां विभुः। आत्मेच्छानुगतो ह्यात्मा नानाशक्त्युपलक्षितः ॥१॥ भागवततात्पर्यम् — आत्मनां विभुर्जीवाधिपतिः ॥
Play Time: 44:17
Size: 5.51 MB