08/09/2019
ಪ್ರಲಯಕಾಲದಲ್ಲಿ ದೇವರು ಯೋಗನಿದ್ರೆಯಲ್ಲಿ ಮಲಗಿದ್ದಾಗ “ಸೃಷ್ಟಿ ಮಾಡು” ಎಂದು ಪ್ರಾರ್ಥಿಸಿ ಅವನನ್ನು ಎಬ್ಬಿಸಿದ್ದು ಮಹಾಲಕ್ಷ್ಮೀದೇವಿಯರು. ಹಾಗಾದರೆ, ಲಕ್ಷ್ಮೀದೇವಿಯರು ಎಬ್ಬಿಸಿರಲಿಲ್ಲವಾದರೆ ದೇವರು ಸೃಷ್ಟಿ ಮಾಡುತ್ತಲೇ ಇರಲಿಲ್ಲ. ಹೀಗಾಗಿ ಸೃಷ್ಟಿಗೆ ಪ್ರಧಾನ ಕಾರಣ ಲಕ್ಷ್ಮಿಯೇ ಹೊರತು ನಾರಾಯಣನಲ್ಲ ಎಂಬ ಪ್ರಶ್ನೆಗೆ ಭಾಗವತ ನೀಡುವ ಅದ್ಭುತ ಉತ್ತರಗಳ ಸಂಕಲನ ಇಲ್ಲಿದೆ. ಸೃಷ್ಟಿಯ ಆರಂಭದ ದೇವರನ್ನು ಪರಿಚಯಿಸುವಾಗ ಶ್ರೀಮದ್ ಭಾಗವತ ದೇವರನ್ನು ಸುಪ್ತಶಕ್ತಿಃ, ಅಸುಪ್ತದೃಕ್ ಎಂಬ ಶಬ್ದಗಳನ್ನು ಬಳಸುತ್ತದೆ. ಮೇಲ್ನೋಟದ ಅರ್ಥಕ್ಕೆ ದೇವರು ಕಣ್ಣು ಮುಚ್ಚಿರಲಿಲ್ಲ, ಆದರೆ, ಅವನ ಶಕ್ತಿ ಸುಪ್ತವಾಗಿತ್ತು ಎಂದು ತೋರುತ್ತದೆ. ಇದು ಶಾಸ್ತ್ರವಿರುದ್ಧವಾದ ತತ್ವ, ಕಾರಣ ದೇವರು ಪ್ರಲಯಕಾಲದಲ್ಲಿ ಕಣ್ಗಳನ್ನು ಮುಚ್ಚಿದ್ದ ಮತ್ತು ಅವನ ಶಕ್ತಿ ಸಾಮರ್ಥ್ಯಗಳು ಎಂದಿಗೂ ಯಾವ ಕಾರಣಕ್ಕೂ ಸುಪ್ತವಾಗುವದಿಲ್ಲ. ಹಾಗಾದರೆ ಭಾಗವತದ ಮಾತಿಗೆ ಅರ್ಥವೇನು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಪ್ರಮಾಣ ಸಮೇತವಾಗಿ ಅದ್ಭುತ ಪ್ರಮೇಯಗಳೊಂದಿಗೆ ನಮಗೆ ಅರ್ಥವನ್ನು ತಿಳಿಸುತ್ತಾರೆ. ಶಕ್ತಿ ಎನ್ನುವ ಶಬ್ದದ ಅಪೂರ್ವ ಅರ್ಥ, ಮಹಾಲಕ್ಷ್ಮೀದೇವಿಯರ ಕುರಿತ ಮಹತ್ತ್ವದ ಪ್ರಮೇಯಗಳ ನಿರೂಪಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ವಚನಗಳು — स वा एष तदा द्रष्टा नापश्यद् विश्वमेकराट्। मेनेऽसन्तमिवाऽत्मानं सुप्तशक्तिरसुप्तदृक् ॥२॥ भागवततात्पर्यम्। “परमात्मा यतो जीवं मेनेऽसन्तमशक्तितः। असन्नसौ ततो नित्यं सत्यज्ञानो यतो हरिः” इत्याग्नेये। “शक्यत्वाच्छक्तयो भार्याः शक्तिः समयमुच्यते” इति ब्रह्मतर्के। “सुप्तिस्तु प्रकृतेः प्रोक्ता अतीव भगवद्रतिः। अनास्थाऽन्यत्र च प्रोक्ता विष्णोश्चक्षुर्निमीलनम्” इति व्योमसंहितायाम् ॥
Play Time: 47:28
Size: 5.51 MB