Upanyasa - VNU821

ಶ್ರೀಮದ್ ಭಾಗವತಮ್ — 239 — ಬ್ರಹ್ಮದೇವರ ಸೃಷ್ಟಿ

ಮಹತ್-ತತ್ವಕ್ಕೆ ಅಭಿಮಾನಿಯಾದ ಬ್ರಹ್ಮದೇವರು ಹುಟ್ಟಿಬಂದ ಬಗೆಯ ಅದ್ಭುತ ಚಿತ್ರಣ ಇಲ್ಲಿದೆ. ಮಕ್ಕಳನ್ನು ಪಡೆಯುವದಕ್ಕಿಂತ ಮುಂಚೆಯ ನಮ್ಮಲ್ಲಿರಬೇಕಾದ ಎಚ್ಚರಗಳ ಕುರಿತ ಚಿಂತನೆಯೊಂದಿಗೆ. 

ಕತ್ತಲೆಯನ್ನು ಕಳೆಯುತ್ತ ಬ್ರಹ್ಮದೇವರು ಹುಟ್ಟಿಬಂದರು ಎಂದು ಈ ಸಂದರ್ಭದಲ್ಲಿ ಭಾಗವತ ತಿಳಿಸುತ್ತದೆ — “ವಿಶ್ವಂ ವ್ಯಂಜನ್ ತಮೋ ನುದನ್” ಎಂದು. ಆದರೆ, ಬ್ರಹ್ಮದೇವರ ಉತ್ಪತ್ತಿಗಿಂತ ಮುಂಚೆ ಲಕ್ಷ್ಮೀ-ನಾರಾಯಣರು ಇದ್ದಾಗ ಅವರ ದೇಹದ ಪ್ರಕಾಶದಿಂದಲೇ ಕತ್ತಲೆ ಕಳೆಯಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತದ ವಚನ — 

ततोऽभवन्महत्तत्त्वमव्यक्तात् कालचोदितात्। 
विज्ञानात्माऽऽत्मदेहस्थं विश्वं व्यञ्जंस्तमो नुदन् ॥५॥

Play Time: 49:16

Size: 5.51 MB


Download Upanyasa Share to facebook View Comments
8999 Views

Comments

(You can only view comments here. If you want to write a comment please download the app.)
 • DESHPANDE P N,BANGALORE

  8:31 AM , 26/09/2019

  S.Namaskargalu. Anugrahvirali
 • prema raghavendra,coimbatore

  7:04 PM , 16/09/2019

  Anantha namaskara! Danyavada!
 • Jasyashree Karunakar,Bangalore

  9:25 PM , 13/09/2019

  ನೀವು ತಿಳಿಸಿದ್ದು ಅಷ್ಟು..
  ಆದರೆ ನನ್ನ ಬುದ್ಧಿಗೆ ಗೋಚರವಾಗಿದ್ದು ಇಷ್ಟು...
  
  ಪ್ರಳಯಕಾಲದಲ್ಲಿ ಬ್ರಹ್ಮದೇವರ 87 1/2
  ವಷಗಳು ಕಳೆದಿವೆ...
  
  ಇದ್ದರೂ ಇಲ್ಲದಂತಿರುವ ಅಸ್ವಾತಂತ್ರರಾದ ಅನಂತ ಜೀವರಾಶಿಗಳನ್ನು ತನ್ನ ಉದರದಲ್ಲಿಟ್ಟುಕೊಂಡ ಭಗವಂತ ಪ್ರಳಯಕಾಲದ ಜಲದಲ್ಲಿ ವಟಪತ್ರಶಾಯಿಯಾಗಿ ಕಣ್ಣುಮುಚ್ಚಿಕೊಂಡಿದ್ದಾನೆ...
  
  ಮಹಾಲಕ್ಷ್ಮೀದೇವಿಯು ಲೋಕದ ಸಕಲ ವ್ಯಾಪಾರವನ್ನೂ ತ್ಯಾಗಮಾಡಿ, ಭಗವಂತನ ಸವಾ೯ಂಗ ಸಾಯುಜ್ಯವನ್ನು ಪಡೆದು, ಅತ್ಯಂತ ಆನಂದವನ್ನು ಅನುಭವಿಸುತ್ತಾ ಭಗವಂತನ ಕೈಂಕಯ೯ವನ್ನು ಮಾಡುತ್ತಿದ್ದಾರೆ...
  
  ಕಾಲ, ಸ್ವಭಾವ,ಪ್ರಕೃತಿಗಳ ಅನುಸಾರವಾಗಿ, ಜೀವರಾಶಿಗಳ ಕಮ೯ವನ್ನು ಪಕ್ವಗೊಳಿಸುವ ಕಾರಣದಿಂದ, ಸೃಷ್ಟಿ ಮಾಡುವ ಇಚ್ಛೆಯಿಂದ, ಭಗವಂತ, ತನ್ನಲ್ಲಿರುವ ಎಲ್ಲ ಜೀವರನ್ನೂ ವೀಕ್ಷಿಸಿದ....
  ಎಲ್ಲಕ್ಕೂ ಕಾರಣವಾದ ಅವ್ಯಕ್ತ ಪ್ರಕೃತಿಯನ್ನೂ ನಿಯಮನ ಮಾಡುವ ಸಾಮಥ್ಯ೯ವಿರುವ ಮಹಾಲಕ್ಷ್ಮೀದೇವಿಯನ್ನು ತನ್ನ ಪ್ರಧಾನ ಕಿಂಕರಿಯನ್ನಾಗಿ ಸ್ವೀಕಾರ ಮಾಡಿದ.....
  
  ಜೀವರ ಮೇಲಿನ ಕಾರುಣ್ಯ ತೋರುವ ಬುದ್ಧಿಯನ್ನು ಮಹಾಲಕ್ಷ್ಮೀದೇವಿಗೆ ನೀಡಿದ ಭಗವಂತ, ಸೃಷ್ಟಿ ಮಾಡಲು ತನ್ನನ್ನು ಪ್ರಾಥ೯ನೆ ಮಾಡುವಂತೆ ಪ್ರೇರಣೆ ನೀಡಿದ....
  
  ಸವ೯ಕಾಲದಲ್ಲಿಯೂ ಕಾಲನಾಮಕನಾದ ಈ ಪ್ರಳಯಕಾಲದ ಪರಮಾತ್ಮ
  ಮಹಾಲಕ್ಷ್ಮೀದೇವಿಗೆ ಮನೋವೃತ್ತಿಯನ್ನು ನೀಡಿದ...
  
  ಬ್ರಹ್ಮಾಂಡವನ್ನು ಸೃಷ್ಟಿಮಾಡುವ ಸಲುವಾಗಿ ಮಹದಾದಿತತ್ವಗಳನ್ನು ತನ್ನ ವೀಯ೯ದಲ್ಲಿಟ್ಟುಕೊಂಡ, ಅಪ್ರಾಕೃತ ಶರೀರದ ಪುರುಷರೂಪದ ಭಗವಂತ, ವಾಸುದೇವರೂಪದಿಂದ ಮಾಯಾರೂಪದ, ಮಹಾಲಕ್ಷ್ಮೀದೇವಿಯರಲ್ಲಿ , ಪ್ರಾಕೃತವಾದ ವೀಯಾ೯ಧಾನವನ್ನು ಮಾಡಿದ....
  
  ತ್ರಿಗುಣಾತ್ಮಿಕವಾದ, ಅವ್ಯಕ್ತ ಪ್ರಕೃತಿಯನ್ನು ನಿಯಮನಮಾಡುವ ಮಹಾಲಕ್ಷ್ಮೀದೇವಿಯ ಅಂಡವನ್ನು ಮಹತತ್ವವಾಗಿ ಪರಿಣಾಮ ಹೊಂದುವ ಶಕ್ತಿಯನ್ನು ಭಗವಂತ ನೀಡಿದ...
  
  ಸಕಲ ಜೀವರಾಶಿಗಳ ಕಮ೯ದೊಂದಿಗೆ, ಬ್ರಹ್ಮದೇವರ ಕಮ೯ದೊಂದಿಗೆ, ಸರಿಹೊಂದುವಂತಹ, ಜೀವಘನರಾದ, ಮಹತತ್ವದ ಅಭಿಮಾನಿಯರನ್ನಾಗಿಯೇ,ಅಂಡದಲ್ಲಿ ಬ್ರಹ್ಮದೇವರ ಶರೀರದ ನಿಮಾ೯ಣವಾಯಿತು..
  
  ಕತ್ತಲನ್ನು, ಕಳೆಯುತ್ತಾ, ಗ್ಲಾನಿ, ಭ್ರಾಂತಿಗಳಿಲ್ಲದೆ, ಜ್ಞಾನಯುಕ್ತರಾಗಿಯೇ, ಬ್ರಹ್ಮದೇವರು ಹುಟ್ಟಿಬಂದರು...
  
  ದುಂಬಿಯು ಒಂದೇಬಾರಿಗೆ ಹೊವಿನಲ್ಲಿರುವ ಮಕರಂದವೆಲ್ಲವನ್ನೂ ಹೀರಿಕೊಂಡು ಹೋಗುವದಿಲ್ಲ. ಅದರ ಪುಟ್ಟ ಬಾಯಿಯ ಸಾಮಥ್ಯ೯ಕ್ಕೆ ತಕ್ಕಂತೆ ಹೀರಿಕೊಂಡು ಹೋಗುತ್ತದೆ...
  
  ಅಂತೆಯೇ ನಮ್ಮ ಯೋಗ್ಯತೆಯ ಅರಿವಿರುವ ಗುರುಗಳು , ವಿಷಯಗಳನ್ನು ಒಂದೇಬಾರಿ ಹೇಳದೇ, ಅಲ್ಲಲ್ಲಿ ಸ್ಪಶ೯ಮಾಡುತ್ತಾ, ಪ್ರತೀಬಾರಿಯು ಅದಕ್ಕೆ ಸಂಭಂದ ಪಟ್ಟಂತೆ ಹೊಸ ಹೊಸ ಅಂಶಗಳನ್ನು ತಿಳಿಸುತ್ತಾ, ಮನಸ್ಸಿಗೆ ಗ್ರಹಿಕೆಯಾಗುವಂತೆ ಅಥ೯ಮಾಡಿಸುವ ಕ್ರಮ ತುಂಬಾ ಉಪಯೋಗವಾಗುತ್ತಿದೆ....