15/09/2019
ಬ್ರಹ್ಮಾಂಡದ ಆಚೆಯಲ್ಲಿ ಮಹತ್ ತತ್ವದಿಂದ ಆರಂಭಿಸಿ ಪೃಥಿವೀ ತತ್ವದ ವರೆಗಿನ ಎಲ್ಲ ತತ್ವಗಳಿಗೆ ಅಭಿಮಾನಿಗಳಾದ ದೇವತೆಗಳು ಹುಟ್ಟಿ ಬಂದ ಕ್ರಮದ ನಿರೂಪಣೆ ಇಲ್ಲಿದೆ. ಮಾಯಾ ವಾಸುದೇವರಿಂದ ಪುರುಷನಾಮಕ ಬ್ರಹ್ಮದೇವರು ಜಯಾ ಸಂಕರ್ಷಣರಿಂದ ಸೂತ್ರನಾಮಕ ಪ್ರಾಣದೇವರು ಕೃತಿ-ಪ್ರದ್ಯುಮ್ನರಿಂದ ಪ್ರಕೃತಿ-ಶ್ರದ್ಧಾ ನಾಮಕ ಸರಸ್ವತಿ ಭಾರತಿಯರು ಆ ನಂತರ ಪುರುಷ-ಪ್ರಕೃತಿಯರಿಂದ ಮತ್ತು ಸೂತ್ರ-ಶ್ರದ್ಧೆಯರಿಂದ ಅಹಂಕಾರ ತತ್ವಾಭಿಮಾನಿಯಾದ ರುದ್ರದೇವರು ಜೀವಾಭಿಮಾನಿಯಾದ ಶೇಷದೇವರು ಕಾಲಾಭಿಮಾನಿಯಾದ ಗರುಡದೇವರು ಜಯ-ವಿಜಯ, ವಿಷ್ವಕ್ಸೇನಾದಿ ವಿಷ್ಣುಪಾರ್ಷದರು ಹುಟ್ಟಿಬರುತ್ತಾರೆ. ಇದಾದ ನಂತರ ಶಾಂತಿ-ಅನಿರುದ್ಧರಿಂದ ಸ್ಥೂಲದೇಹದಿಂದ ಹತ್ತುಕೋಟಿ ಕೋಟಿ ಯೋಜನವಿಸ್ತೀರ್ಣವಾದ ಶರೀರವುಳ್ಳ ಬ್ರಹ್ಮದೇವರು ಹುಟ್ಟಿಬರುತ್ತಾರೆ. ಆ ನಂತರ ಮೂರು ರೂಪದ ರುದ್ರದೇವರು, ಅವರಿಂದ ವೈಕಾರಿಕ ದೇವತೆಗಳು, ಇಂದ್ರಿಯಾಭಿಮಾನಿದೇವತೆಗಳು, ತನ್ಮಾತ್ರಾಗಳಿಗೆ ಮತ್ತು ಪಂಚಭೂತಗಳಿಗೆ ಅಭಿಮಾನಿದೇವತೆಗಳು ಹುಟ್ಟಿಬರುವ ವಿಷಯಗಳ ನಿರೂಪಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ततोऽभवन्महत्तत्त्वमव्यक्तात् कालचोदितात्। विज्ञानात्माऽऽत्मदेहस्थं विश्वं व्यञ्जंस्तमो नुदन् ॥५॥ सोऽप्यंशगुणकालात्मा भगवद्-दृष्टिगोचरः। आत्मानं व्यकरोदात्मा विश्वस्यास्य सिसृक्षया ॥६॥ भागवततात्पर्यम् — अंशो जीवः ॥ “कालजीवगुणादीनामभिमानी चतुर्मुखः। सर्वजीवाभिमानित्वादंश इत्येव चोच्यते” इति ब्राह्मे ॥ महत्तत्त्वाद् विकुर्वाणादहंतत्त्वं व्यजायत। कार्यकारणकर्त्रात्मा भूतेन्द्रियमनोभवः ॥७॥ वैकारिकस्तैजसश्च तामसश्चेत्यहं त्रिधा। अहंतत्त्वाद् विकुर्वाणान् मनो वैकारिकादभूत् ॥८ वैकारिकाश्च ये देवा अर्थाभिव्यञ्जनं यतः। तैजसानीन्द्रियाण्येव ज्ञानकर्ममयानि च ॥९॥ तामसो भूतसूक्ष्मादिर्यतः खं लिङ्गमात्मनः ॥१०॥ कालमायांशयोगेन भगवद्वीक्षितं नभः। तामसाऽनुसृतं स्पर्शं विकुन् निर्ममेऽनिलम् ॥११॥ अनिलोऽपि विकुर्वाणो नभसोरुबलान्वितः। ससर्ज रूपतन्मात्रं ज्योतिर्लोकस्य लोचनम् ॥१२॥ अनिलेनान्वितं ज्योतिर्विकुर्वत् परवीक्षितम्। आधत्ताम्भो रसमयं कालमायांशयोगतः ॥१३॥ ज्योतिषाम्भोऽनुसंसृष्टं विकुर्वद् ब्रह्मवीक्षितम्। महीं गन्धगुणामाधात् कालमायांशयोगतः ॥१४॥ भागवततात्पर्यम् — कालमायांश योगतः। कालपरिणामात् प्रकृतेर्हिरण्यगर्भात् च ॥ भूतानां नभआदीनां यद् यद् भाव्यं परात् परम्। तेषां परानुसंसर्गाद् यथा सङ्ख्यं गुणान् विदुः ॥१५॥ एते देवाः कला विष्णोः कालमायांशलिङ्गिनः। नानात्वात् स्वक्रियानीशाः प्रोचुः प्राञ्जलयो विभुम्। ॥१६॥ भागवततात्पर्यम् — कालमायांशलिङ्गिनः तन्निमित्तशरीराः। हिरण्यगर्भस्यैव कालाभिमानि जीवाभिमानि च द्विविधं रूपम्। “कालजीवाभिमानेन रूपद्वन्द्वी चतुर्मुखः” इति पाद्मे ॥
Play Time: 45:16
Size: 1.37 MB