Upanyasa - VNU826

ಶ್ರೀಮದ್ ಭಾಗವತಮ್‌ — 242 — ಭಜಿಸಿ ಬದುಕೆಲೋ ಮಾನವ

ತತ್ವಾಭಿಮಾನಿ ದೇವತೆಗಳು ಬ್ರಹ್ಮಾಂಡದ ನಿರ್ಮಾಣಕ್ಕಾಗಿ ದೇವರನ್ನು ಸ್ತುತಿಸಿದ ಶಕ್ತಿಗೀತೆಯ ಎರಡನೆಯ ಭಾಗ. 

“ಮುಖಪದ್ಮನೀಡೈಃ ಛಂದಃಸುಪರ್ಣೈಃ”. ಎಂಬ ಮಾತಿಗೆ ಶ್ರೀಮದ್ ವಿಜಯಧ್ವಜಾಚಾರ್ಯರು ತಿಳಿಸಿರುವ ಪರಮಸುಂದರವಾದ ಸಾಂಪ್ರದಾಯಿಕ ಅರ್ಥದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯನಿರ್ಣದ ವಚನಗಳು — 

मार्गन्ति यत् ते मुखपद्मनीडैश्छन्दःसुपर्णैरृषयो विविक्ते। 
यच्चाघमर्षो द्युसरिद्धरायाः पदं पदं तीर्थपदः प्रपन्नाः॥१९॥

भागवततात्पर्यम् — द्युसरितो धरायाश्च ॥

यच्छ्रद्धया श्रुतवत्या च भक्त्या सम्मृज्यमाने हृदयेऽवधाय। 
ज्ञानेन वैराग्यबलेन धीरा व्रजेम तत् तेऽङ्घ्रिसरोजपीठम्। ॥२०॥

विश्वस्य जन्मस्थितिसंयमार्थे कृतावतारस्य पदाम्बुजं ते। 
व्रजेम सर्वे शरणं यदीश स्मृतं प्रयच्छत्यभयं स्वपुंसाम् ॥२१॥

यत् सानुबन्धेऽसति देहगेहे ममाहमित्यूढदुराग्रहाणाम्। 
पुंसां सुदूरं वसतोऽपि पुर्यां भजेम तत् ते भगवन् पदाब्जम् ॥२२॥

तं त्वामसद्वृत्तिभिरक्षिभिर्ये पराहृतान्तर्मनसः परेश। 
अथो न पश्यन्त्युरुगाय नूनं ये ते पदन्यासविलासलक्ष्याः ॥२३॥Play Time: 52:54

Size: 1.37 MB


Download Upanyasa Share to facebook View Comments
10842 Views

Comments

(You can only view comments here. If you want to write a comment please download the app.)
 • Vishwanandini User,Hubli

  2:26 PM , 25/10/2019

  Acharyarige anantha namaskaragalu.. Nimmindha devaru nudisuthiruva bhagavatha vannu shravana maduva naave punyavantharu.. Hari vayu gurugalu heege Nimmindha jnana karya madisali.. Bhaktipurvaka namaskaragalu...
 • Naveenkumar,Kollar

  2:22 PM , 26/09/2019

  Acharyare beautiful upanyasa 
  Sastanga namaskaragalu..
  
  
  And also 
  One of the best comments ever written by you madam jayashree karunakar 
  
  It shows how beautifully you have been doing sb aswadhana
 • H N Ranganatha Rao,Bangalore

  12:52 PM, 26/09/2019

  ಪ್ರತಿ shlokada ಅರ್ಥ ಕೇಳುವುದು ನಮ್ಮ ಪುಣ್ಯ. ಶ್ರೀ ಮತಿ     ಜಯಶ್ರೀ ಯವರ comments ಯಾವಾಗಲೂ ತುಂಬಾ   ಚೆನ್ನಾಗಿ ರುತ್ತದೆ
 • H N Ranganatha Rao,Bangalore

  12:33 PM, 26/09/2019

  ಪ್ರವಚನ ಕೇಳಿ ಆನಂದ ಭಾಷ್ಪ ವಾಯಿತು. ನಿಮ್ಮಿಂದ ಶ್ರೀಭಾಗವತದ
 • T venkatesh,Hyderabad

  9:47 PM , 18/09/2019

  @Smt. Jayashri Madam hats off to your patience for typing such a lengthy comment.
 • Jasyashree Karunakar,Bangalore

  4:45 PM , 18/09/2019

  ಭಕ್ತಿರಸವನ್ನು ಹರಿಸುವಂತಹ, ವಿಶೇಷವಾದ ತತ್ವಗಳಿಂದ ಭಗವಂತನ ಚಿಂತನೆಯನ್ನು ಮಾಡಿಸುವ, ಹಲವಾರು ವಿಷಯಗಳಿಂದ ಕೂಡಿದ, ಸ್ವಾರಸ್ಯಕರವಾದ ಉಪನ್ಯಾಸವಿದು...
  
  ಯಾವುದನ್ನು ಹೇಳಲಿ....ಯಾವುದನ್ನು ಬಿಡಲಿ....
  
  ಕಾಯ೯ಸಾಧನೆಯನ್ನು ಮಾಡಿ ಹಿಂದಿರುಗಿದ, ಪಂಜರದ ಗಿಳಿಯಂತೆ......
   ಬ್ರಹ್ಮಾದಿ ದೇವತೆಗಳು ಭಕ್ತಿಪುರಸ್ಸರವಾಗಿ ವೇದ ಪಠಣ ಮಾಡಿ, ಫಲಗಳನ್ನು ಪಡೆದದ್ದು........ಕೇಳಿ ಮನಸ್ಸು ಸಂಭ್ರಮಪಟ್ಟಂತಹ ಉಪನ್ಯಾಸವಿದು..
  
  ಭಾಗೀರಥಿಯು ಸೊಂಕಿದ ಪಾದ, ಬಲಿಯು ಮೆಟ್ಟಿದ ಪಾದ, ಬಂಡೆಯ ಬಾಲೆಯ ಮಾಡಿದ ಪಾದ....ಅಂತ....ಶ್ರೀಪಾದರಾಜರು ತಿಳಿಸಿದ ಭಗವಂತನ ಪಾದಾರವಿಂದದ ಚಿಂತನೆಯನ್ನು ಶ್ರದ್ಧೆಯಿಂದ ಮಾಡಿಸುತ್ತಾ, ಕ್ಷಣಹೊತ್ತು ಜೀವನದ ಜಂಜಾಟವನ್ನು ಮರೆಸಿದ ಉಪನ್ಯಾಸವಿದು....
  
  ದ್ವಾದಶ ಸ್ತೋತ್ರದ ಸಾಲುಗಳು ತಿಳಿಸಿದ  "ನಮ್ಮೊಳಹೊರಗೂ ವ್ಯಾಪ್ತನಾದ ಭಗವಂತ ಹತ್ತಿರವಿದ್ದರೂ, ಪಾದವನ್ನು ಆಶ್ರಯಿಸದೇ ಇರುವವರಿಗೆ ದೂರವಾಗುತ್ತಾನೆ" ಅನ್ನುವ ವಿವರಣೆ ಕೇಳುವಾಗ, ಇನ್ನಷ್ಟು ಸ್ತೋತ್ರಗಳ ವಿವರಣೆ ಮುಂದುವರಿಯಬಾರದೇ ಅಂತ ಅನಿಸಿತು...
  
   ನಾವು ಪ್ರೀತಿ ಪಾತ್ರರಿಗೆ ಉಡುಗೊರೆನೀಡುವಾಗಿನ ಸಂಭ್ರಮದಂತೆ......
  
  ದೇವತೆಗಳು ಒಂದೊಂದು ಕಮ೯ವನ್ನೂ ಸಮಪ೯ಣೆ ಮಾಡಿ , ಭಗವಂತನ ದಾಸರಾಗುವದನ್ನು ಕೇಳಿ, ಕಣ್ಣು ಒದ್ದೆಯಾಯಿತು...
  
  ಭಗವಂತನ ಪಾದದೊರೆಯುವದು, ಕಮ೯ನ್ಯಾಸ ಮಾಡುವವರಿಗೆ ಮಾತ್ರ .... ಅನ್ನುವ ವಿವವರಣೆಯ ಕ್ರಮ ಮನಸ್ಸಿಗೆ ತುಂಬಾ ಇಷ್ಟವಾಯಿತು.... 
  
  ಪಾಂಡವರು ಯಜ್ಞ ಯಾಗಾದಿಗಳನ್ನು ಮಾಡುವಾಗ, ತಮ್ಮ ಜೀವ ಚೈತನ್ಯವನ್ನೂ ಅಪ೯ಣೆ ಮಾಡುವ ಪರಿಯನ್ನು ಕೇಳಿದಾಗ.....ನಮ್ಮಲ್ಲಿರುವ ಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಎನೆಲ್ಲ ವಿಷಗಳು ಬೇಕೊ ಅದನ್ನೆಲಾ ನೀಡುವ ಶ್ರೀಮದ್ಭಾಗವತದ ಪರಿಯನ್ನು ನೆನೆದು, ಮೂಕವಾಯಿತು ಮನಸ್ಸು....
  
  "ಧಮ೯ ಪ್ರೋಜ್ಹಿತ ಕೈತವೂತ್ರ.....ಅಂತ ವೇದವ್ಯಾಸ ದೇವರು ಹೇಳಿದ್ದನ್ನು, ಬ್ರಹ್ಮಾದಿ ದೇವತೆಗಳೇ ಆಚರಿಸಿ ತೋರಿಸಿದ್ದನ್ನು ಕೇಳಿ.....ಮತ್ತೆ ಮತ್ತೆ ಮೊದಲ ಶ್ಲೋಕಗಳ ಅಥ೯ವಿಸ್ತಾರದ ಕ್ರಮವನ್ನು ತಿಳಿದಂತಾಯಿತು....ನೀವು ಹೇಳದೇ ಹೋಗಿದ್ದರೆ , ನಮ್ಮ ಬುದ್ಧಿಯು ಗ್ರಹಿಸುತ್ತಿರಲಿಲ್ಲ.....
  
   ಭಾಗವತದ ರಸವತ್ತಾದ ಶಬ್ದಗಳಲ್ಲಿರುವ 
   ಭಗವದಾನಂದವನ್ನು ನಾವೂ ಕೂಡ ಅನುಭವಿಸುವಂತೆ ತಿಳಿಸಿದ ಗುರುವಿನ ಪಾದಗಳಿಗೆ ನಮೋ ನಮಃ