18/09/2019
ಶಕ್ತಿಗೀತೆಯ ಮೂರನೆಯ ಭಾಗ ಮಾಧ್ವರಲ್ಲಿ ಯೋಗಮಾರ್ಗವನ್ನು ಅನುಸರಿಸುವ ಜನ ತುಂಬ ಕಡಿಮೆ ಎಂಬ ಆಕ್ಷೇಪ ಒಂದಿದೆ. ಯೋಗಮಾರ್ಗದಿಂದ ದೇವರನ್ನು ಪಡೆಯುವದು ಶ್ರೇಷ್ಠವೋ, ಜ್ಞಾನಮಾರ್ಗದಿಂದ ದೇವರನ್ನು ಪಡೆಯುವದು ಶ್ರೇಷ್ಠವೋ, ಎರಡೂ ಮಾರ್ಗಗಳಲ್ಲಿರುವ ವ್ಯತ್ಯಾಸವೇನು ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ದೇವರೂ ಸಹ ಪ್ರಾಕೃತ ವೀರ್ಯವನ್ನು ಸೃಷ್ಟಿಸಿಯೇ ಬ್ರಹ್ಮದೇವರನ್ನು ಪಡೆದದ್ದು, ಆದರೆ, ಜಗತ್ತಿನ ಸ್ತ್ರೀ-ಪುರುಷರಂತೆ ಅಲ್ಲ ಎಂದು ಅಲ್ಲಿ ತಿಳಿಯಬೇಕಾದ ಸೂಕ್ಷ್ಮ ಪ್ರಮೇಯವೊಂದನ್ನು ಕೂಟಸ್ಥ ಎಂಬ ಶಬ್ದಕ್ಕೆ ವಿವರಣೆಯನ್ನು ನೀಡುತ್ತ ಶ್ರೀ ವಿಜಯಧ್ವಜತೀರ್ಥ ಶ್ರೀಪಾದಂಗಳವರು ವಿವರಿಸುತ್ತಾರೆ. पानेन ते देव कथासुधायाः प्रवृद्धभक्त्या विशदाशया ये। वैराग्यसारं प्रतिलभ्य बोधं यथाऽऽञ्जसा त्वेयुरकुण्ठधिष्ण्यम् ॥२४॥ तथाऽपरे चाऽत्मसमाधियोगबलेन जित्वा प्रकृतिं बलिष्ठाम्। त्वामेव धीराः पुरुषं विशन्ति तेषां श्रमः स्यान्न तु सेवया ते ॥२५॥ भागवततात्पर्यम्। “वायोश्च प्रकृतेर्विष्णोर्जयो भक्त्यैव नान्यथा” इति दत्तात्रेययोगे ॥
Play Time: 47:50
Size: 1.37 MB