Upanyasa - VNU834

ಮಾಡುವ ದಾನ ಸಫಲವಾಗುವಂತೆ ಕರುಣಿಸುವ ಚರಿತ್ರೆ

ಶಾಸ್ತ್ರ ತಿಳಿಸಿದ ರೀತಿಯಲ್ಲಿ ದಾನ ಮಾಡುವದಕ್ಕೂ ವಿಶಿಷ್ಟ ಪುಣ್ಯ ಬೇಕು. ಸತ್ಪಾತ್ರರಿಗೆ, ಶಾಸ್ತ್ರೋಕ್ತವಾದ ಕ್ರಮದಲ್ಲಿ ದಾನ ನೀಡುವ ಅರ್ಹತೆಯನ್ನು ನಮಗೆ ಕರುಣಿಸುವ, ನಾವು ಮಾಡುವ ದಾನದಿಂದ ಜ್ಞಾನ ಭಕ್ತಿ ವೈರಾಗ್ಯಗಳ ಮಹಾಫಲವನ್ನು ದೊರೆಯುವಂತೆ ಅನುಗ್ರಹಿಸುವ ಆಚಾರ್ಯರ ಶ್ರೇಷ್ಠವಾದ ಚರಿತ್ರೆ. 

ಯಾವುದೇ ದಾನವನ್ನು ಮಾಡಬೇಕಾದರೂ ಅರ್ಥಾನುಸಂಧಾನಪೂರ್ವಕವಾಗಿ ಈ ಶ್ಲೋಕವನ್ನು ಪಠಿಸಿ ದಾನವನ್ನು ಮಾಡಿ. 

ಪೂರ್ವಾಲಯರ ಮೇಲೆ ಅನುಗ್ರಹ

ಪಾತುಂ ಪಯಾಂಸಿ ಶಿಶವೇ ಕಿಲ ಗೋಪ್ರದೋಸ್ಮೈ
ಪೂರ್ವಾಲಯಃ ಸ್ವಸುತಸೂನುತಯಾ ಪ್ರಜಾತಃ
ನಿರ್ವಾಣಹೇತುಮಲಭಿಷ್ಟ ಪರಾತ್ಮವಿದ್ಯಾಂ
ದಾನಂ ಧ್ರುವಂ ಫಲತಿ ಪಾತ್ರಗುಣಾನುಕೂಲ್ಯಾತ್

ಶ್ರೀಮದಾಚಾರ್ಯರು ಸಣ್ಣ ಕೂಸಾಗಿದ್ದಾಗ, ಮಗು ಹಾಲು ಕುಡಿಯಲಿ ಎಂದು ಬ್ರಾಹ್ಮಣರೊಬ್ಬರು ಆಚಾರ್ಯರ ತಂದೆಗೆ ಹಸುವೊಂದನ್ನು ದಾನ ಮಾಡಿರುತ್ತಾರೆ. ಆ ದಾನದ ಫಲವಾಗಿ, ಆ ಬ್ರಾಹ್ಮಣೋತ್ತಮರು ತಮ್ಮ ಮಗನಿಗೇ ಮಗನಾಗಿ ಹುಟ್ಟಿ ಬಂದು ಮಧ್ವಶಾಸ್ತ್ರದ ಜ್ಞಾನವನ್ನು ಪಡೆಯುತ್ತಾರೆ. Play Time: 06:10

Size: 1.46 MB


Download Upanyasa Share to facebook View Comments
1717 Views

Comments

(You can only view comments here. If you want to write a comment please download the app.)
 • Darshan,Mumbai

  12:26 PM, 28/11/2022

  🙏🙏🙏🙇‍♂️🙇‍♂️
 • Sowmya,Bangalore

  7:07 PM , 07/12/2021

  🙏🙏🙏
 • H.Suvarna kulkarni,Bangalore

  7:56 PM , 22/10/2019

  ಗುರುಗಳಿಗೆ ನಮಸ್ಕಾರಗಳು ಗೋದಾನ ದ ಮಹತ್ವ ಮತ್ತು ಯಾವುದೇ ದಾನವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿದೆವು
 • Santosh Patil,Gulbarga

  7:49 AM , 14/10/2019

  Tnx Gurugale
 • Chandrika prasad,Bangalore

  10:50 AM, 12/10/2019

  ಸತ್ಯವಾದ ಮಾತು ಜಯ.ಶ್ರೀ ಅವರೇ 🙏. ಮಂದಮತಿಗಳು ನಾವು. ಶಾಸ್ತ್ರದ ರೀತಿ ನೀತಿಗಳು ಗೊತ್ತಿಲ್ಲದೇ ನಮ್ಮ ಮನಸ್ಸು ಬಂದಂತೆ ಅನುಕೂಲ ಸಿಂಧು ಆಗಿಬಿಟ್ಟಿದ್ದೇವೆ. ಆಚಾರ್ಯ ರ ನುಡಿಮುತ್ತು ಗಳ ಮಾರ್ಗ ದರ್ಶನ ದಿಂದ ನಮ್ಮೆಲ್ಲರ ಕಣ್ಣುಗಳು ತೆರೆಯಲಿ. ನನ್ನ ಪ್ರಣಾಮಗಳು 🙏
 • Jasyashree Karunakar,Bangalore

  1:41 PM , 10/10/2019

  ಇಂಧನ ಮುಗಿದ ವಾಹನವು ಮತ್ತೆ ತುಂಬಿಸಿಕೊಂಡಾಗಲೇ ಮುನ್ನಡೆಯಲು ಸಾಧ್ಯವಾಗುವಂತೆ.....
  
  ಈ ಲೌಕಿಕ ಜಂಜಾಟದ ಮಧ್ಯದಲ್ಲಿ ನಮ್ಮ ಯೋಗ್ಯತೆಯಂತೆ ಸಾಧನೆ ಮಾಡುತ್ತಾ ಮುನ್ನಡೆಯಲು, ಆ ಮಹಾಗುರುಗಳ, "ನಿರಂತರ ಕಥಾ ಶ್ರವಣವು" ನಮ್ಮೊಳಗೆ ಒಂದು ಶಕ್ತಿಯನ್ನು ತುಂಬುವಂತೆ ಮಾಡುತ್ತಿದೆ...
  
  ಗೋದಾನ ಮಾಡಿದ ಆ ಪೂವಾ೯ಲಯರ ಭಾಗ್ಯ ದೊಡ್ಡದು.....
  
  ಹಾಲೂಡಿಸಿದ ಆ ಹಸುವಿನ ಭಾಗ್ಯ ದೊಡ್ಡದು.....
  
  ದಾನ ಮಾಡಿದ ಫಲವಾಗಿ, ತಮ್ಮ ಮಗನಿಗೇ ಮಗನಾಗಿ ಮತ್ತೆ ಹುಟ್ಟಿ , ಬಂದು ಮಹಾಗುರುಗಳಿಂದಲೇ ಶಾಸ್ತ್ರ ಶ್ರವಣಮಾಡಿದ ಪೂವಾ೯ಲಯರು ಧನ್ಯರು....
  
  ಕಲ್ಲು ಮಣ್ಣಿನ ಗುಡಿಯೊಳಗೆ ಮಾತ್ರ ದೇವರನ್ನು ಹುಡುಕುವ ನಮ್ಮಂತಹ ಮಂದಮತಿಗಳ ಅಜ್ಞಾನವನ್ನು ಕಳೆದು, ಶುದ್ದ ಜ್ಞಾನವನ್ನು ಕರುಣಿಸುವ ಶ್ರೀಮದಾನಂದತೀಥ೯ಭಗವತ್ಪಾದಾಚಾಯ೯ ಗುರುಗಳ ಇಂತಹ ಮಹಿಮೆಯನ್ನು ನಿಮ್ಮಿಂದ ಕೇಳುವ ನಾವೇ ಧನ್ಯರು...
  
   ಗುರುಗಳೆ ನಿಮ್ಮ ಪಾದಗಳಿಗೊಂದು ಭಕ್ತಿಯ ನಮನಗಳು...🙏