Upanyasa - VNU836

ಅಜೀರ್ಣದೋಷವನ್ನು ಪರಿಹಾರ ಮಾಡುವ ಚರಿತ್ರೆ

ನಿಮಗಾಗಲೀ, ನಿಮ್ಮ ಹಿರಿಯರಿಗಾಗಾಲಿ, ಮಕ್ಕಳಿಗಾಗಲೀ, ನಿಮ್ಮ ಪ್ರೀತಿಪಾತ್ರರಿಗಾಗಲೀ ದೇಹದಲ್ಲಿ ಆನಾರೋಗ್ಯವಾಗಿದ್ದಾಗ, ಮುಖ್ಯವಾಗಿ ಅಜೀರ್ಣದೋಷದಿಂದ ಬಳಲುವಾಗ, ಯಾವ ಪದಾರ್ಥವನ್ನೂ ತಿನ್ನಲು ಸಾಧ್ಯವಾಗದೇ ಇದ್ದಾಗ ಆಚಾರ್ಯರ ಈ ಚರಿತ್ರೆಯನ್ನು ಪ್ರತೀನಿತ್ಯವೂ ಊಟ ಮಾಡುವ ಮುನ್ನ ಕೇಳುತ್ತಿರಿ. ಆ ಸಕಲ ದೇಹದೋಷಗಳೂ ಪರಿಹಾರವಾಗುತ್ತವೆ. 

ಆಚಾರ್ಯರು ಇನ್ನೂ ಕೈಕೂಸಾಗಿದ್ದಾಗ ಅವರ ತಾಯಿ ಅನಿವಾರ್ಯವಾಗಿ ಬೇರೆಡೆಗೆ ಹೋಗಬೇಕಾದ ಪ್ರಸಂಗ ಬಂದಿರುತ್ತದೆ. ತಮ್ಮ ಮಗಳಿಗೆ ಕೂಸಿನ ಜವಾಬ್ದಾರಿಯನ್ನು ವಹಿಸಿ ಆ ತಾಯಿ ಹೊರಗೆ ಹೋಗಿರುತ್ತಾರೆ. ಅಮ್ಮ ಹೊರಟ ತಕ್ಷಣ ಅಳಲಿಕ್ಕೆ ಆರಂಭಿಸಿದ ಮಗುವಿಗೆ ಆ ಪುಟ್ಟ ವಯಸ್ಸಿನ ಹುಡುಗಿ, ದನಗಳಿಗಾಗಿ ಇಟ್ಟಿದ್ದ ಹುರುಳಿಯನ್ನು ತಿನ್ನಿಸಿಬಿಡುತ್ತಾಳೆ. ಹಾಲು ಕುಡಿಯುವ ವಯಸ್ಸಿನಲ್ಲಿ ಹುರುಳಿಯನ್ನು ತಿಂದು ಅರಗಿಸಿಕೊಂಡ ಆಚಾರ್ಯರ ಮಹಿಮೆಯ ಚಿತ್ರಣ ಇಲ್ಲಿದೆ. स्तन्येन बालमनुतोष्य मुहुः स्वधाम्नो
माता कदाचन ययौ विरहासहाऽपि ।
विश्वस्य विश्वपरिपालकपालनाय 
कन्यां निजामनुगुणां किल भीरुरेषा ॥ 35॥

सा बालकं प्ररुदितं परिसान्त्वयन्ती
मुग्धाक्षरेण वचसाऽनुनिनाय मुग्धा ।
मा तात तात सुमुखेति पुनः प्ररोदी
र्माता तनोति रुचितं त्वरितं तवेति ॥ 36॥

रोदे क्रियासमभिहारत एव वृत्ते
पोतस्य मातरि चिरादपि नागतायाम्‌ ।
जग्राह बालमथ चैक्षत मातृमार्गं
साऽपि क्रियासमभिहारत एव बाला ॥ 37॥

कर्तव्यमौढ्यमभिपद्य निरूप्य सा तं
प्राभोजयत्‌ खलु कुलित्थकुलं प्रपक्वम्‌ ।
शीतं पयोऽपि सततं परिपाययन्ती
यस्योष्णरोगमतिवेलमशङ्कताम्बा ॥ 38॥

नूनं पिपासुरतिरोदिति हन्त बालो
धिङ्‌ मां दयाविरहितां परकृत्यसक्ताम्‌ ।
इत्याकुला गृहमुपेत्य तदा प्रसन्नं
पुर्णोदरं सुतमवैक्षत विप्रपत्नी ॥ 39॥

पृष्ट्वाऽवगम्य सकलं च ततः प्रवृत्तं
यूनां च दुःसहमिदं शिशुनोपभुक्तम्‌ ।
इत्थं विचिन्त्य तनयां बहु भर्त्सयन्त्या
भीतं तयाऽनु कुपितं मनसाऽनुतप्तम्‌ ॥ 40॥

आरोग्यशालिनि तदाऽपि पुरेव पुत्रे 
विस्मेरतामुपजगाम जनन्यमुष्य ।
यस्य त्रिलोकजननी जननी विषेऽपि
पीते न विस्मयमवाप समस्तशक्तेः ॥ 41॥ 

स्तन्यं मुहुः किल ददौ जननी गृहीत्वा
क्षेमाय तं किल दधज्जनको जजाप ।
अन्यो जनोऽपि किल लालयति स्म किन्तु
सर्वोऽपि तन्मुखसुहासरसायनोत्कः ॥ 42॥

Play Time: 13:00

Size: 3.03 MB


Download Upanyasa Share to facebook View Comments
2574 Views

Comments

(You can only view comments here. If you want to write a comment please download the app.)
 • Sowmya,Bangalore

  7:31 PM , 14/12/2021

  🙏🙏🙏
 • Santosh Patil,Gulbarga

  2:36 PM , 12/10/2019

  Thanks Gurugale
 • Jasyashree Karunakar,Bangalore

  11:28 AM, 12/10/2019

  836
  
  ಗುರುಗಳೆ 
  
  ಶ್ರವಣ ಮಾಡುತ್ತಾ ಮಾಡುತ್ತಾ ಕೇವಲ ಉಸಿರಾಟ ಮಾತ್ರ ಗೋಚರವಾಗುತ್ತಿತ್ತು ದೇಹವೇ ಮರೆತು ಹೋಗಿತ್ತು.....
  ಪ್ರಾಣದೇವರ ಮಹಿಮೆಯನ್ನು ಕೇಳುತ್ತಿದ್ದೇವೆ.....ಅವರೇ ಮಾಡಿಸುವ ಉಸಿರಾಟ ಗಮನಕ್ಕೆ ಬಾರದಿಲು ಸಾಧ್ಯವೇ....
  
  ಆನಂದತೀಥ೯ಗುರುಗಳ ಮಹಿಮೆಯ ಶ್ರವಣದಿಂದಾಗಿ, ಮನಸ್ಸು ಆನಂದದಾಯಕವಾಗಿ, ಲೆಕ್ಕವಿಲ್ಲದಷ್ಟು ಆನಂದಭಾಷ್ಪಗಳು ಜಾರಿದವು...
  
  "ಯಾವ ಮುಖ್ಯಪ್ರಾಣದೇವರಿಗೆ, ಸಮಗ್ರ ಜಗತ್ತಿನ ರಕ್ಷಣೆಯ ಜವಾಬ್ದಾರಿಯನ್ನು ಭಗವಂತ ನೀಡಿದ್ದನೊ, ಅಂತಹ ಮುಖ್ಯಪ್ರಾಣದೇವರ ರಕ್ಷಣೆಯ ಜವಾಬ್ದಾರಿಯನ್ನು ಪುಟ್ಟ ಕೂಸಾದ ಕಲ್ಯಾಣೀದೇವಿ ವಹಿಸಿಕೊಂಡದ್ದು....."
  
  ಎಂತಹ ಮಾತು....!!!
  ಎಂತಹ ಆನಂದದಾಯಕ ಘಟನೆ......
  
   ವಣ೯ನೆ ಮಾಡಹೋರಟರೆ......
  
  ಬಾಯಿಯಿಂದ ಬರುವ 
  ಪದಗಳಿಗಿಂತ ಜಾಸ್ತಿ 
  
  ಕಣ್ಣಿಂದ ಆನಂದ ಭಾಷ್ಪವೇ ಬರುತ್ತಿದೆ......