11/10/2019
ಅತ್ಯಂತ ಪ್ರೀತಿಪಾತ್ರರಾದ ವ್ಯಕ್ತಿಯನ್ನೊ, ಅಥವಾ ಅತ್ಯಂತ ಮಹತ್ತ್ವದ ವಸ್ತುವನ್ನೋ ಕಳೆದುಕೊಂಡು ಬಿಟ್ಟಿರುತ್ತೇವೆ. ಎಷ್ಟು ಪ್ರಯತ್ನ ಪಟ್ಟರೂ ದೊರೆಯದಾಗ ಆಚಾರ್ಯರ ಈ ಚರಿತ್ರೆಯನ್ನು ಕೇಳುವದರಿಂದ ಅದನ್ನು ಪಡೆಯುತ್ತೇವೆ. ಮುಖ್ಯವಾಗಿ ಸಂಸಾರಕ್ಕೆ ಬಂದು ನಾವೇ ಕಳೆದುಹೋಗಿದ್ದೇವೆ. ಕಳೆದುಹೋಗಿರುವ ನಮ್ಮ ನೈಜತೆ ಈ ಕಥಾಶ್ರವಣದಿಂದ ದೊರೆಯುತ್ತದೆ. ಆಚಾರ್ಯರು ಒಂದು ವರ್ಷದ ಕೂಸು. ಮನೆಯಲ್ಲಿನ ಎತ್ತಿನ ಬಾಲವನ್ನು ಹಿಡಿದು ವಾಸುದೇವ ಹೊರಟುಬಿಡುತ್ತಾನೆ ಮನೆಯವರಿಗೆಲ್ಲ ಇದು ತಿಳಿಯದೇ ಆತಂಕಕ್ಕೊಳಗಾಗುತ್ತಾರೆ. ಇಡಿಯ ಊರನ್ನು ಹುಡುಕಾಡುತ್ತಾರೆ, ಯಾವುದಾದರೂ ಬಾವಿಯಲ್ಲಿ ಕೂಸು ಬಿದ್ದು ಬಿಟ್ಟಿತೇನೋ ಎಂದು ಆತಂಕಕ್ಕೊಳಗಾಗುತ್ತಾರೆ. ಸಂಜೆಯಲ್ಲಿ ಎತ್ತಿನ ಬಾಲ ಹಿಡಿದು ಹಿಂತಿರುಗಿದ್ದನ್ನು ಕಂಡು ಮಧ್ಯಗೇಹದಂಪತಿಗಳಿಗೆ ಜೀವ ಮರಳಿದಂತಾಗುತ್ತಾಗುತ್ತದೆ. ಆ ಘಟನೆಯ ವಿವರ ಇಲ್ಲಿದೆ. ಎತ್ತಿನ ಜೊತೆ ಓಡಾಡಿ ಬಂದ ಘಟನೆ पुच्छान्तमच्छमवलम्ब्य कदाचिदेष प्रातर्व्रजाद्व्रजत एव निजर्रषभस्य । प्रायात् प्रियस्य सहसा स्वजनैरदृष्टो ननावनेषु चरतश्चरतस्तृणानि ॥ 45॥ उत्तुङ्गशृङ्गलसितस्य महिष्ठमूर्तेः पादावृतावनितलस्य सुरन्ध्रकस्य । आश्रित्य तस्य शुशुभेऽवयवैकदेशं बालो दिवाकर इवोदयपर्वतस्य ॥ 46॥ लीलां करोति नु गृहान्तरगो नु बालः कूपान्तरे नु पतितः प्रकृतिस्वतन्त्रः । इत्थं विचिन्त्य स मुहुः स्वजनो विमृग्य हन्तानवेक्ष्य तनयं हृदि तापमाप ॥ 47॥ बालस्य बालपरिलम्बनगोचरं त- द्वश्वस्यतापिवचनं वनगोचरोक्तम् । यत् सायमैक्षत जनः शिशुमाव्रजन्तं एकाब्दकं वृषभबालकृतावलम्बम् ॥ 48॥ चिन्तामणीन्द्रमिव चिन्तितदं दरिद्रो विज्ञानमार्गमिव विष्णुपरं मुमुक्षुः । नष्टं च नन्दनमिति स्वजनोऽस्य लब्ध्वा नाथस्य तस्य तमनुग्रहमेव मेने ॥ 49॥
Play Time: 09:46
Size: 2.29 MB