Upanyasa - VNU840

ಶ್ರೀ ನಾರಾಯಣಪಂಡಿತಾಚಾರ್ಯರ ಸ್ತೋತ್ರ

ಶ್ರೀ ಮಧ್ವವಿಜಯ, ಸಂಗ್ರಹರಾಮಾಯಾಣ, ಯೋಗದೀಪಿಕಾ, ನಯಚಂದ್ರಿಕಾ ಮುಂತಾದ ಸರ್ವಶ್ರೇಷ್ಠ ಕೃತಿಗಳನ್ನು ಅನುಗ್ರಹಿಸಿದ ಶ್ರೀಮನ್ ನಾರಾಯಣಪಂಡಿತಾಚಾರ್ಯರನ್ನು ನೆನೆಯಲು ನಾನು ರಚಿಸುತ್ತಿರುವ ವಿಷ್ಣುಗಾಥಾಮೃತದ ಒಂದು ಪದ್ಯ ಹಾಗೂ ಸಂಸ್ಕೃತದ ಒಂದು ಶ್ಲೋಕ. ಅರ್ಥವಿವರಣೆಯೊಂದಿಗೆ. 

ಕ್ರೂರತರಸಂಸಾರಸರ್ಪದ
ಘೋರವಿಷದಿಂ ಭೀತಜನರಿಗೆ
ಚಾರುತರ ಶ್ರೀಮಧ್ವಚರಿತೆಯ ಅಮೃತ ಉಣಿಸುತಲಿ।
ಪಾರಗಾಣಿಪ ರಾಮಚಂದ್ರನ
ಸಾರಕಥೆಯನು ದಯದಿ ಪೇಳಿದ
ಕಾರುಣ್ಯನಿಧಿ ನಾರಾಯಣಾರ್ಯರ ಚರಣ ಶರಣೆನಗೆ।

ಸಚ್ಚಂದ್ರಿಕಾಪ್ರಕಟನಾಶಿತಸಾಧುತಾಪಂ
ಸದ್ಯೋಗದೀಪವರದರ್ಶಿತ ವಿಷ್ಣುಮಾರ್ಗಮ್ ।
ಶ್ರೀರಾಮಮಧ್ವಚರಿತಾಮೃತಸ್ಯಂದಿಚಂದ್ರಂ
ನಾರಾಯಣಾರ್ಯಮಹಮಾದರತೋ ನಮಾಮಿ ।

Play Time: 04:11

Size: 1.45 MB


Download Upanyasa Share to facebook View Comments
2731 Views

Comments

(You can only view comments here. If you want to write a comment please download the app.)
  • Vishwnath MJoshi,Bengaluru

    2:28 PM , 16/10/2019

    ಗುರುಗಳ.ಪಾದಗಳಿಗೆ ನಮಸ್ಕಾರ ನಿಮ್ಮ ನ್ನ ಗುರುಗಳಾಗಿ ಪಡೆದದ್ದಕ್ಕೆ ತುಂಬಾ ಸಂತೋಷ ವಾಗುತ್ತಿದೆ