20/10/2019
ಲೌಕಿಕದ ಜಂಜಾಟವನ್ನು ದೂರ ಮಾಡಿಸಿ, ಸಾಧನೆ ಮಾಡುವ ಧೈರ್ಯ ಅರ್ಹತೆಗಳನ್ನು ಭಕ್ತರಿಗೆ ಕರುಣಿಸುವ ಚರಿತ್ರೆ. “ಅರತಿರ್ಜನಸಂಸದಿ” “ಲೌಕಿಕ ಜನರ ಸಂಪರ್ಕದಲ್ಲಿರಬಾರದು” ಎನ್ನುವದು ಸಾಧಕನಲ್ಲಿರಬೇಕಾದ ಒಂದು ಗುಣ ಎಂದು ಭಗವದ್ಗೀತೆ ತಿಳಿಸುತ್ತದೆ. “ನ ಹಿ ತೇ ವಣಗ್-ವೀಥ್ಯಾಂ ವರ್ತಂತೇ” “ಸಾಧಕರು ಲೌಕಿಕಕಾರ್ಯಗಳ ಮಾರುಕಟ್ಟೆಯ ಮಧ್ಯದಲ್ಲಿರುವದಿಲ್ಲ” ಎಂದು ಟೀಕಾಕೃತ್ಪಾದರು ಹೇಳುತ್ತಾರೆ. ಭಗವಂತನನ್ನು ಅರಸುವ ವ್ಯಕ್ತಿ ಏಕಾಂತವಾಸ ಮಾಡಲೇಬೇಕು, ಸಜ್ಜನರ ಸಹವಾಸದಲ್ಲಿಯೇ ಇರಬೇಕು. ಈ ಲೌಕಿಕವವನ್ನು ಬಿಡುವದು ಅಷ್ಟು ಸುಲಭದ ಮಾತಲ್ಲ, ಸಹಜವಾಗಿ ಸಾಧ್ಯವೂ ಆಗುವದಿಲ್ಲ. ಬದುಕಿನ ಪ್ರಲೋಭನೆ ವ್ಯಾಮೋಹಗಳನ್ನು ತೊರೆದು ಏಕಾಂತದಲ್ಲಿ ಬದುಕಿ ಬದುಕನ್ನು ಸಾರ್ಥಕ ಮಾಡಿಕೊಳ್ಳುವದಕ್ಕೂ ಪುಣ್ಯ ಬೇಕು, ಅರ್ಹತೆ ಬೇಕು. ಅಂತಹ ಪುಣ್ಯ ಅರ್ಹತೆಗಳನ್ನು ಅನುಗ್ರಹಿಸುವ ಮಧ್ವಚರಿತ್ರೆ ಇಲ್ಲಿದೆ. ಸಾಧನೆ ಮಾಡಲು ಬಯಸುವ ಪ್ರತಿಯೊಬ್ಬರೂ, ಲೌಕಿಕ ಜಂಜಾಟಗಳಿಂದ ದೂರವಾಗಬೇಕೆನ್ನುವರರು ಈ ಕಥೆಯನ್ನು ನಿರಂತರ ಶ್ರವಣ ಮಾಡಿ.
Play Time: 19:28
Size: 4.51 MB