20/10/2019
ಕುಂಜಾರುಗಿರಿಯಲ್ಲಿ ಪುಟ್ಟ ವಾಸುದೇವನ ಜೊತೆಯಲ್ಲಿ ದುರ್ಗಾದೇವಿಯರು ಆಟವಾಡುತ್ತಿದ್ದ ಪ್ರಸಂಗದ ವಿವರಣೆ ಇಲ್ಲಿದೆ.
Play Time: 04:44
Size: 1.14 MB
10:34 PM, 17/12/2021
🙏🙏🙏
1:21 PM , 24/10/2019
ಆವ ಜನ್ಮದ ಸುಕೃತವೊ ನಾನು ಕಾಣೆನು, ಗುರು ಪೇಳಿದ ಮಧ್ವಚರಿತಾಮೃತವ ನಾ ಪಾನ ಮಾಡಿದೆ.... ಸತ್ಯಲೋಕಾಧಿಪತಿಯಂತೆ ಮೊದಲ ಭೂಸ್ಪಶ೯ವಂತೆ ರೂಪ್ಯಪೀಠಪುರಕ್ಕಂತೆ.. ೧೨ ವರುಷದ ತಪಸ್ಸಿನ ಫಲವಂತೆ.... ವೇದವತಿಯ ಗಭ೯ದಿ ಜನಿಸಿದ ಜೀವನ ತಳ್ಳಿದರಂತೆ ಅಲ್ಲಿ ನಿಂದರಂತೆ... ಪಾಜಕದಲ್ಲೆಡೆ ಸಂತಸವಂತೆ.... ಆವ ಜನ್ಮದ ಸುಕೃತವೊ ಮಧ್ವಚರಿತಾಮೃತವ ನಾ ಪಾನ ಮಾಡಿದೆ.... ನಾಮಕರಣವಂತೆ ಸಕಲ ದೇವತೆಗಳ ನಾಮಹೊತ್ತ ಜೀವೊತ್ತಮನಿಗಂತೆ... ವಾಸುದೇವನೆಂಬ ನಾಮವಂತೆ.... ಪುಟ್ಟ ಕೂಸಂತೆ... ಭೂತಪಿಶಾಚಿಗಳಿಂದ ಪಾರು ಮಾಡಿದನಂತೆ... ಆವ ಜನ್ಮದ ಸುಕೃತವೊ ಮಧ್ವಚರಿತಾಮೃತವ ನಾ ಪಾನ ಮಾಡಿದೆ.... ರಚ್ಚೆ ಹಿಡಿದು ಮಗುವು ಅತ್ತಿತಂತೆ....ಹುರುಳಿಯ ಮೆದ್ದ ಮಗುವ ನೆನೆದೊಡೆ ಅಜೀಣ೯ದೋಷವೆ ಪರಿಹಾರವಂತೆ... ೧೪ ಲೋಕದ ಓಡೆಯನಂತೆ ಅಪ್ಪ ಅಮ್ಮವೆನುತ ತೊದಲ್ನುಡಿಯಾಡಿ ಲೋಕವಿಡಂಬನೆಯ ಮಾಡಿದರಂತೆ.... ಆವ ಜನ್ಮದ ಸುಕೃತವೊ ಮಧ್ವಚರಿತಾಮೃತವ ನಾ ಪಾನ ಮಾಡಿದೆ.... ವರುಷ ತುಂಬಿದ ಕೂಸಂತೆ ಎತ್ತಿನ ಬಾಲವ ಪಿಡಿದು ಕಾಡಿಗೆ ಪೋದನಂತೆ... ಮತ್ತೆ ಬಂದು ಹೆತ್ತವರ ಆತಂಕ ಪರಿಹರಿಸಿದನಂತೆ.. ಮನನ ಮಾಡಿದವರಿಗೆ ಕಳಕೊಂಡದ್ದು ದಕ್ಕುವದಂತೆ... ಆವಜನ್ಮದ ಸುಕೃತವೊ ಮಧ್ವಚರಿತಾಮೃತ ನಾ ಪಾನ ಮಾಡಿದೆ.... ಧನಿಕನಲ್ಲಿ ತನ್ನ ತಂದೆಯು ಮಾಡಿದ ಸಾಲವಂತೆ.... ಹುಣಸೆ ಬೀಜವ ಲೆಕ್ಕಮಾಡಿ ಕೊಟ್ಟನಂತೆ... ತಂದೆಯ ಸಾಲ ತೀರಿಸಿದನಂತೆ.. ಮೋಕ್ಷವನ್ನೆ ಪಡೆದ ಆ ಪುಣ್ಯವಂತ ಧನಿಕನಂತೆ.. ನೆನದವರ ಸಾಲಭಾದೆ ಪೋಪುದಂತೆ.... ಆವ ಜನ್ಮದ ಸುಕೃತವೊ ಮಧ್ವಚರಿತಾಮೃತವ ನಾ ಪಾನ ಮಾಡಿದೆ... ಭೂತ ಪಿಶಾಚಿಗಳಿರುವ ಕಾಡ ಪೊಕ್ಕನಂತೆ... ಮೂರುವರುಷದ ಬಾಲನಂತೆ... ಕಾನನ ದೇವತಾ ಸದನ ದಾಟಿದನಂತೆ... ಅನಂತಾಸನನಿಗೆ ನಮಸ್ಕಾರವಂತೆ.. ಜಗಕೆ ನಮಸ್ಕಾರದ ಮಹತ್ವ ತೋರಿದನಂತೆ... ಆವ ಜನ್ಮದ ಸುಕೃತವೊ ಮಧ್ವಚರಿತಾಮೃತವ ನಾ ಪಾನ ಮಾಡಿದೆ.... ನಿಜ೯ನ ಗಿರಿಯಂತೆ.. ಕುಂಜಾರು ಬೆಟ್ಟವಂತೆ ಆಟ ಊಟ ಮಾಡಿದನಂತೆ ಜಗದಂಬಿಕೆಯೊಡನೆಯಂತೆ. ಮುಖ್ಯಪ್ರಾಣತನ್ನ ಮಗನೆಂದಳಂತೆ.... ಆವ ಜನ್ಮದ ಸುಕೃತವೊ ಮಧ್ವಚರಿತಾಮೃತವ ನಾ ಪಾನ ಮಾಡಿದೆ... ಗುರು ನೀಡಿದ ಮಧ್ವಚರಿತಾಮೃತವ ನಾ ಪಾನ ಮಾಡಿದೆ....🙏🙏