Upanyasa - VNU870

ಶ್ರೀ ಮಧ್ಯಗೇಹಾರ್ಯರ ಅರೆ ಮನಸ್ಸಿನ ಒಪ್ಪಿಗೆ

“ನೀನು ಸಂನ್ಯಾಸ ತೆಗೆದುಕೊಂಡರೆ ನಾನು ಸಾಯುತ್ತೇನೆ” ಎಂದು ಮಧ್ಯಗೇಹಾರ್ಯರು ಮಗನನ್ನು ಬೆದರಿಸುತ್ತಾರೆ, ಆ ಮಾತಿಗೆ ಅದ್ಭುತ ಉತ್ತರ ನೀಡುವ ವಾಸುದೇವ, ಸಾವಿನ ಮಾತಾಡಿದ ತಂದೆಯ ಬಾಯಿಂದಲೆ, “ನಿನ್ನ ವಿರಹದ ದುಃಖವನ್ನು ನಾನು ತಡೆಯಬಲ್ಲೆ” ಎಂಬ ಅಂತರಂಗದ ಮಾತನ್ನು ಹೊರತರಿಸುತ್ತಾನೆ. ಆ ಘಟನೆಯ ಚಿತ್ರಣ ಇಲ್ಲಿದೆ. 

Play Time: 32:34

Size: 1.37 MB


Download Upanyasa Share to facebook View Comments
1567 Views

Comments

(You can only view comments here. If you want to write a comment please download the app.)
 • Sowmya,Bangalore

  8:13 PM , 08/02/2022

  🙏🙏🙏
 • Jayashree Karunakar,Bangalore

  1:21 PM , 04/12/2019

  ಮಗ ಅಚ್ಯುತಪ್ರೇಕ್ಷಾಚಾಯ೯ರ ಹಿಂಬಾಲಕನಾಗಿ,ಅವರ ಸೇವೆಯನ್ನು ಮಾಡುತ್ತಾ  ಶ್ರೇಷ್ಟ ದಾರಿಯಲ್ಲಿದ್ದರೂ, 
  ಮಗನ ಮೇಲಿನ ವಾತ್ಸಲ್ಯ
   ಮಧ್ಯಗೇಹಾಯ೯ರನ್ನು, ಕುತ್ಯಾಡಿಯ ತನಕ ಬಂದು, ನಾನಾ ವಿಧದ ಮಾತಿನ ಅಸ್ತ್ರದ ಮೂಲಕ, ತಮ್ಮೊಂದಿಗೆ ಕರೆಯುತ್ತಿರುವ ದೃಶ್ಯವನ್ನು ಸಾಕ್ಷಾತ್ತಾಗಿ ಕಂಡ *ಅನುಭವ* ವಾಯಿತು...
  
  ತಂದೆಯ ಶಾಸ್ತ್ರೀಯವಾದ ಪ್ರಶ್ನೆಗೆ, ಅದೇ ರೀತಿಯಲ್ಲಿಯೇ ಉತ್ತರಕೊಡುವ , ವಾಯುದೇವರ ಅವತಾರರಾದ ವಾಸುದೇವನ ಉತ್ತರಗಳು.....
  
  ರುದ್ರದೇವರಿಗೂ ಆಯುಷ್ಯವನ್ನು ಕರುಣಿಸುವ ಶ್ರೀಮದಾಚಾಯ೯ರು, ತಂದೆಯ ದೇಹದಿಂದ ತಾವು ಹೊರನಡೆದರೆ ಮಾತ್ರ, ಸಾಯುತ್ತೇನೆ ಅಂತ ಹೊರಟ ಮಧ್ಯಗೇಹ್ಯರ ಪ್ರಾಣಹೋಗಲು ಸಾಧ್ಯ....ಅನ್ನುವ ಮಾತುಗಳು..
  
  ಅಬ್ಬಾ ಅದೆಂತಹ ಚಿಂತನೆ....🙏🙏..
  
   ಸಣ್ಣ ಸಣ್ಣ ವಿಷಯಗಳಿಗೂ ಆತ್ಮಹತ್ಯೆಯ ತನಕ ಬಂದು ನಿಲ್ಲುವ, ನಮ್ಮ ಪ್ರಾಣ ನಮ್ಮ ಕೖೆಯಲ್ಲಿಯೇ ಇದೆ ಅಂತ ತಿಳಿಯುವವರು ಕೇಳಲೇಬೇಕಾದ ಪರಮ ಮಂಗಲಕರವಾದ ಭಾಗ....
  
  ತನ್ನ ತಂಪನೆಯ ಕೖೆಯಿಂದ, ಮಾತಿಗೆ ಕಟ್ಟು ಬಿದ್ದು ಸೋತ ತಂದೆಯ ಕೖೆ ಹಿಡಿದು, ಸಾಂತ್ವನ ಮಾಡುವ ದೃಶ್ಯ ಕಣ್ಣಮುಂದೆಯೇ ನಡೆದಂತಾಯಿತು ಗುರುಗಳೆ....🙏
  
  ಒಮ್ಮೆ ಕೇಳಿದರೂ ಮತ್ತೆ ಮತ್ತೆ ಕೇಳುವಂತೆ ಮಾಡುವ ವಿಷಯಗಳ ನಿರೂಪಣೆ ಮನ ಮುಟ್ಟುವಂತೆ ಮಾಡಿದೆ.🙏
 • Santosh Patil,Gulbarga

  12:18 PM, 04/12/2019

  Sri Gurugalige 🙏