(You can only view comments here. If you want to write a comment please download the app.)
Badrinath,Bangalore
10:56 PM, 08/12/2021
ಆಚಾರ್ಯರೇ, ಧನುರ್ಮಾಸದಲ್ಲಿ ಪವಮಾನ ಹೋಮವನ್ನು ಮಾಡಬೇಕೆಂಬ ಸಂಕಲ್ಪವಿದೆ. ಹೋಮ, ನೈವೇದ್ಯ, ಬ್ರಾಹ್ಮಣ ಸಂತರ್ಪಣೆ ಎಲ್ಲವೂ ತಡವಾಗುತ್ತದೆ. ವಿಳಂಬ ಸಂತರ್ಪಣೆ ಸಾಧುವೇ?? ಬ್ರಾಹ್ಮಣರನ್ನು ಕಾಯಿಸಿದಂತಾಗುತ್ತದೆಯೇ??
Vishnudasa Nagendracharya
ಧನುರ್ಮಾಸದ ಬೆಳಗಿನ ಭೋಜನದ ನಿಯಮ ದ್ವಾದಶಿಯ ಪಾರಣೆಯ ನಿಯಮದಂತೆ ಕಡ್ಡಾಯವಲ್ಲ. ಅಂದರೆ ಬೆಳಿಗ್ಗೆಯೇ ಭೋಜನ ಮಾಡದಿದ್ದರೆ ದೋಷವುಂಟಾಗುತ್ತದೆ ಎಂದಿಲ್ಲ. ಆದರೆ ಪ್ರಾತಃಕಾಲದಲ್ಲಿಯೇ ಭೋಜನ ಮಾಡುವದರಿಂದ ವಿಶೇಷ ಫಲ ಉಂಟು.
ಹೀಗಾಗಿ ಹೋಮ ಇತ್ಯಾದಿಗಳ ನಿಮಿತ್ತದಿಂದ ಭೋಜನ ವಿಳಂಬವಾದರೆ ದೋಷವಿಲ್ಲ. ಮಾಡಿ.