01/01/2020
ಶ್ರೀಮದ್ ಹೃಷೀಕೇಶತೀರ್ಥಸಂಸ್ಥಾನದ (ಶ್ರೀ ಪಲಿಮಾರು ಮಠ) ಭೂಷಾಮಣಿಗಳಾದ ಶ್ರೀ ರಘುವರ್ಯತೀರ್ಥಶ್ರೀಪಾದಂಗಳವರು ಒಂದು ಅದ್ಭುತವಾದ ಮಧ್ವಾಷ್ಟಕವನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀಮದಾಚಾರ್ಯರ ಚರಿತ್ರೆಯ ಮಹಿಮೆಯನ್ನು ನಮಗೆ ಅರ್ಥ ಮಾಡಿಸುವ ಒಂದು ಶ್ಲೋಕದ ಅರ್ಥವಿವರಣೆ ಇಲ್ಲಿದೆ. ಭಕ್ತ್ಯಾ ಯಚ್ಚರಿತಂ ಶೃಣೋತಿ ಮನುಜೋ ವ್ಯಾಖ್ಯಾತಿ ವಾ ತಸ್ಯ ಕಿಂ ಕೃತ್ಯಂ ಸರ್ವಸವೈರ್ಜಪೈಶ್ಚ ವಿವಿಧೈಃ ಸ್ನಾನೈರ್ನದೀಷೂಚ್ಚಕೈಃ। ಪ್ರಾಯಶ್ಚಿತ್ತಮಶೇಷಪಾತಕತತೇಃ ಯತ್ಸೇವನಂ ದೇಹಿನಾಂ ಸ್ವರ್ಮೋಕ್ಷೈಹಿಕವರ್ಷಣೇ ಸುರತರುಂ ತಂ ಮಧ್ವನಾಥಂ ಭಜೇ ಯಾರ ಚರಿತ್ರೆಯನ್ನು ಭಕ್ತಿಯಿಂದ ಶ್ರವಣ ಮಾಡುವ ಶಿಷ್ಯನಿಗೆ ಯಾರ ಚರಿತ್ರೆಯನ್ನು ಶಿಷ್ಯರಿಗೆ ಉಪದೇಶ ಮಾಡುವ ಗುರುವಿಗೆ ಸಕಲ ಯಜ್ಞಗಳಿಂದ, ಶ್ರೇಷ್ಠ ನದಿಗಳಲ್ಲಿ ಮಾಡುವ ಸ್ನಾನಗಳಿಂದ ಮಿಗಿಲಾದ ಪುಣ್ಯ ದೊರೆಯುತ್ತದೆ. ಆಚಾರ್ಯರ ಚರಿತ್ರೆಯ ಶ್ರವಣ ಸಕಲ ಪಾಪಗಳನ್ನೂ ಕಳೆಯುವ ಶ್ರೇಷ್ಠ ಪ್ರಾಯಶ್ಚಿತ್ತ ಕರ್ಮ ಭೂಲೋಕದಲ್ಲಿ, ಸ್ವರ್ಗದಲ್ಲಿ ಮತ್ತು ಮೋಕ್ಷದಲ್ಲಿ ಸಹಿತ ನಮ್ಮೆಲ್ಲ ಅಭೀಷ್ಟಗಳನ್ನು ಪೂರ್ಣಮಾಡುವ ಆ ಮಧ್ವಕಲ್ಪವೃಕ್ಷವನ್ನು ಆಶ್ರಯಿಸುತ್ತೇನೆ.
Play Time: 4:25
Size: 1.75 MB