Upanyasa - VNU881

ದ್ರೌಪದಿಗೆ ಶ್ರೀಕೃಷ್ಣ ವಸ್ತ್ರಗಳನ್ನು ಹೇಗೆ ನೀಡಿದ್ದು? ಹಾಗೂ ಈ ಘಟನೆಯ ಆಧ್ಯಾತ್ಮಿಕ ಮುಖವೇನು?

ಗುರುಗಳೇ ದ್ರೌಪದಿಯ ವಸ್ತ್ರಾಪಹರಣದ ಕುರಿತ ನನ್ನ ಅನೇಕ ಪ್ರಶ್ನೆಗಳಿವೆ. ದಯವಿಟ್ಟು ಪರಿಹರಿಸಬೇಕಾಗಿ ವಿನಂತಿ. 

1. ನಾವು ಸಿನಿಮಾ ನಾಟಕಗಳಲ್ಲಿ ನೋಡಿದಂತೆ ಕೃಷ್ಣ ಮೇಲೆ ನಿಂತಿರುತ್ತಾನೆ, ಅವನ ಕೈಯಿಂದ ಸೀರೆ ಬರುತ್ತಿರುತ್ತದೆ. ಘಟನೆ ಈ ರೀತಿ ನಡೆಯಲು ಸಾಧ್ಯವೇ ಇಲ್ಲ ಅಲ್ಲವೇ. ದೇವರು ದ್ರೌಪದಿಗೆ ಹೇಗೆ ಸೀರೆಯನ್ನು ನೀಡಿದ ಎನ್ನುವದನ್ನು ತಿಳಿಸಿ. 

2. ಮಹಾಭಾರತ ಅಧ್ಯಾತ್ಮಿಕ ಅರ್ಥದಿಂದ ಕೂಡಿದ್ದು ಎನ್ನುತ್ತಾರೆ. ದ್ರೌಪದಿಯ ವಸ್ತ್ರಾಪಹರಣಕ್ಕೇನಾದರೂ ಆಧ್ಯಾತ್ಮಿಕ ಅರ್ಥ ಇದ್ದಲ್ಲಿ ತಿಳಿಸಿ. 

3. ದಾಸಸಾಹಿತ್ಯದಲ್ಲಿ ಮೇಲಿಂದ ಮೇಲೆ ದ್ರೌಪದೀರಕ್ಷಣೆಯ ಕುರಿತ ಮಾತು ಬರುತ್ತದೆ, ಏನಾದರೂ ವಿಶೇಷ ಕಾರಣವಿದೆಯೇ?

4. ಭಾರತೀ ವಾಯುದೇವರಿಗೆ ದುಃಖವಿಲ್ಲ ಎನ್ನುತ್ತಾರೆ, ವಸ್ತ್ರಾಪಹರಣದ ಸಂದರ್ಭದಲ್ಲಿ ದುಃಖವಾಯಿತಲ್ಲವೇ?

ಕಡೆಯ ಪ್ರಶ್ನೆ — 

5. ವಸ್ತ್ರಾಪಹರಣದಂತಹ ಘೋರ ಕೃತ್ಯ ನಡೆಯಬೇಕಾದರೆ ಪಾಂಡವರೇಕೆ ಸುಮ್ಮನಿದ್ದರು?

Play Time: 22:54

Size: 1.37 MB


Download Upanyasa Share to facebook View Comments
4690 Views

Comments

(You can only view comments here. If you want to write a comment please download the app.)
 • Abhi,Banglore

  11:45 AM, 31/05/2020

  ನಮಸ್ಕಾರ ಗುರುಗಳೇ , 
  ದ್ರೌಪದಿ ದೇವಿಯಲ್ಲಿ ಮೊದಲೇ ಸೀರೆ ಇತ್ತು ಅಂದ್ರೆ .... ಭಗವಂತ ಬಂದ ಕಾರಣ ಏನು ?
 • DESHPANDE P N,BANGALORE

  10:39 AM, 15/03/2020

  S.Namaskargalu. Anugrahvirali
 • Arvind Mittimani,Delhi

  2:16 PM , 16/01/2020

  I am unable to download any audio file, can someone guide.

  Vishnudasa Nagendracharya

  By clicking the download button, the download starts. Files will be stored in Vishwanandini Folder in your mobile for offline usage. 
  
  Please let us know what error you are getting. You can whatsapp a screenshot to 9901551491
 • Vijayashree Pramod,Bengaluru

  10:49 AM, 16/01/2020

  ಅತ್ಯದ್ಭುತ ವಿವರಣೆ ಆಚಾರ್ಯರೆ..🙏🙏
  ರೋಮಾಂಚನವಾಯಿತು...
  ಈ ಪಾಪಿ ಕಲಿಗಾಲದಲ್ಲಿಯೂ ನಮ್ಮ ಉದ್ಧಾರ ಸಾಧ್ಯ ಎಂದು ತಿಳಿದು ಅವರ್ಣನೀಯ ಸಂತೋಷವಾಗುತ್ತಿದೆ..
  ಅನಂತ ನಮನಗಳು...🙏🙏
  ಆಶೀರ್ವಾದವಿರಲಿ ಸದಾ...🙏🙏