(You can only view comments here. If you want to write a comment please download the app.)
Divya Pai,Udupi
11:45 AM, 27/04/2022
Guruji
Nanage Ramayana Mahabharatada mele tumbane chikka vayasinindale aasakti. Yaru helladene naanagiye Ramayana Mahabharata 10yrs irovagle odlikke start madide. Doubts kellidre answer maduvaru yaru irlilla. Nimage dhanyada.
Nanna doubts higene yavaglu clear madi anta kellikoltene.
Thank you so much
Vishnudasa Nagendracharya
ಖಂಡಿತ
Divya Pai,Udupi
6:28 PM , 26/04/2022
Guruji,
New to this app. nimma jnana bhandara tumba doddadu. Nimma hattira matra nanna prashnege uttara irodu. Nivu hellidri Rama 11,700 varsha rajyavannallidru anta. Aavaga bharata shatrugnaradigallu badukidra? Obba manushyana life time 100-150yrs irode jasti.. Rama devaru but ullidavarellaur saadarana manushyaru. Avarellaru badukidra?
Vishnudasa Nagendracharya
ತ್ರೇತಾಯುಗದಲ್ಲಿ ಹುಟ್ಟಿ ಬರುವ ಅತ್ಯಂತ ಸಾಮಾನ್ಯ ಮನುಷ್ಯನ ಆಯುಷ್ಯವೂ, ಕನಿಷ್ಠ 10000 ವರ್ಷಗಳು. ಅದರಲ್ಲಿ ವಿಶೇಷವಾಗಿ ರಾಮದೇವರ ಆಡಳಿತದ ಕಾಲದಲ್ಲಿ ಒಬ್ಬ ವ್ಯಕ್ತಿಗೂ ಸಹ ಅಪಮೃತ್ಯು ಉಂಟಾಗಿರಲಿಲ್ಲ. ಹೀಗಾಗಿ ಎಲ್ಲರೂ ಬದುಕಿದ್ದರು.
ಲಕ್ಷ್ಮಣ, ಭರತ, ಶತ್ರುಘ್ನರು ಮೂರೂ ಜನರೂ ಸಹ ಶ್ರೀರಾಮದೇವರ ಜೊತೆಯಲ್ಲಿ ಪರಂಧಾಮ ಪ್ರವೇಶ ಮಾಡುತ್ತಾರೆ. ಅಲ್ಲಿಯವರೆಗೆ ಜೊತೆಯಲ್ಲಿಯೇ ಇರುತ್ತಾರೆ. ಇದರಲ್ಲಿ ಲಕ್ಷ್ಮಣರ ದೇಹತ್ಯಾಗ ಮಾತ್ರ ರಾಮದೇವರ ಪರಂಧಾಮ ಪ್ರವೇಶಕ್ಕಿಂತ ಕೆಲವು ದಿವಸಗಳ ಮೊದಲು ಆಗುತ್ತದೆ.
Sampada,Belgavi
5:55 AM , 30/07/2020
🙏🙏🙏🙏🙏
prema raghavendra,coimbatore
2:01 PM , 27/04/2020
Danyavada!
prema raghavendra,coimbatore
1:58 PM , 27/04/2020
Anantha namaskara! Danya
Abburu Rajeeva,Channapattana
9:00 PM , 21/04/2020
ನಮೋನಮಃ...
Prasad Joshi,Gadag
8:10 PM , 13/04/2020
ಆಚಾರ್ಯರಿಗೆ ದಂಡವತ್ ಪ್ರಣಾಮಗಳು...
ರಾಮಾಯಣಕ್ಕೆ ಸಂಬಂಧ ಪಟ್ಟಂತೆ ಕೆಲವು ಪ್ರಶ್ನೆಗಳಿಗೆ ನಿಖರವಾಗಿ ಉತ್ತರಗಳು ಬೇಕಾಗಿವೆ..
ಅವುಗಳು ಈ ಕೆಳಗಿನಂತಿವೆ ...
೧) ಶ್ರೀರಾಮದೇವರು ಒಟ್ಟು ಎಷ್ಟುವರ್ಷಗಳ ಕಾಲ ರಾಜ್ಯಭಾರ ಮಾಡಿದರು.
೨) ಸೀತಾದೇವಿಯರ ಅವತಾರದ ಅವಧಿ ಎಷ್ಟು?
೩) ಲವ-ಕುಶರು ಜನಿಸಿದಾಗ ಆಗ ಸೀತಾದೇವಿಯರಿಗೆ ಎಷ್ಟು ವರ್ಷಗಳು?
೪) ಸೀತಾದೇವಿಯರು ಅಂತರ್ಧಾನದ(ಅವತಾರದ ಸಮಾಪ್ತಿ ಬಳಿಕ) ಬಳಿಕ ಎಷ್ಟು ವರ್ಷಗಳ ಕಾಲ ಶ್ರೀರಾಮದೇವರು ರಾಜ್ಯಭಾರಮಾಡಿದರು?
ಮುಂಚಿತವಾಗಿ ಧನ್ಯವಾದಗಳು ಅಚಾರ್ಯರೇ..
Vishnudasa Nagendracharya
नक्षत्रमासगणितं त्रयोदशसहस्रकम् ।
ब्रह्मलोकसमं चक्रे समस्तं क्षितिमण्डलम्
360 ದಿವಸಗಳು ಒಂದು ವರ್ಷ ಎಂಬ ಲೆಕ್ಕದಲ್ಲಿ ಭಗವಂತ 11700 ವರ್ಷಗಳ ಕಾಲ ರಾಜ್ಯಭಾರವನ್ನಾಳಿದ. ಅದರಲ್ಲಿ 700 ವರ್ಷಗಳು ಸೀತಾಪರಿತ್ಯಾಗದ ವಿಡಂಬನೆಯ ನಂತರ. ಹನ್ನೊಂದು ಸಾವಿರ ವರ್ಷಗಳ ಕಾಲ ಸೀತೆಯೊಡನೆ ಇದ್ದು ರಾಜ್ಯವನ್ನಾಳಿದ. ವಾಲ್ಮೀಕಿ ರಾಮಾಯಣ ಹೇಳುವದು ಅದನ್ನೇ —
ದಶವರ್ಷಸಹಸ್ರಾಣಿ ದಶವರ್ಷಶತಾನಿ ಚ
ರಾಮೋ ರಾಜ್ಯಮುಪಾಸಿತ್ವಾ ಬ್ರಹ್ಮಲೋಕಂ ಗಮಿಷ್ಯತಿ ಎಂದು.
ರಾಮ ಹನ್ನೊಂದು ಸಾವಿರ ವರ್ಷಗಳ ರಾಜ್ಯಭಾರವನ್ನಾಳಿದ ನಂತರ, ಇನ್ನೂ ಪರಂಧಾಮ ಪ್ರವೇಶಕ್ಕೆ ಮುಂಚೆ ರಾಮಾಯಣ ರಚನೆಯಾದದ್ದರಿಂದ, ಮುಂದಿನ 700 ವರ್ಷಗಳನ್ನು ಬಿಟ್ಟು ವಾಲ್ಮೀಕಿ ಋಷಿಗಳು ತಿಳಿಸಿದರು.
ಶ್ರೀಮದ್ ಭಾಗವತ ನಕ್ಷತ್ರಮಾಸದ ಲೆಕ್ಕದಲ್ಲಿ ನಿಖರವಾಗಿ ಹದಿಮೂರು ಸಾವಿರ ವರ್ಷಗಳು ರಾಮರಾಜ್ಯದ ಕಾಲ ಎಂದು ತಿಳಿಸುತ್ತದೆ —
ತ್ರಯೋದಶಾಬ್ದಸಾಹಸ್ರಮಗ್ನಿಹೋತ್ರಮಖಂಡಿತಮ್ ಎಂದು.
ಈ 13000 ಎನ್ನುವದು ನಕ್ಷತ್ರಮಾಸದ ಲೆಕ್ಕ ಎಂದು ಆಚಾರ್ಯರು ನಿರ್ಣಯಿಸಿದ್ದಾರೆ — “ನಾಕ್ಷತ್ರಮಾಸಗಣಿತಂ ತ್ರಯೋದಶಸಹಸ್ರಕಮ್” ಎಂದು.
ನಕ್ಷತ್ರಮಾಸ ಎಂದರೆ 27 ದಿವಸಗಳ ಮಾಸ. 27x12=324. ಒಂದು ನಕ್ಷತ್ರವರ್ಷದಲ್ಲಿ 324 ದಿವಸಗಳಿರುತ್ತವೆ.
324x13000=4212000 ದಿವಸಗಳಾದವು.
4212000 ದಿವಸಗಳನ್ನು 360 ದಿವಸಗಳ ಲೆಕ್ಕದಲ್ಲಿ ತೆಗೆದುಕೊಂಡಾಗ 11700 ವರ್ಷಗಳಾದವು. 4212000/360=11700
ಹೀಗಾಗಿ ಎರಡೂ ಯುಕ್ತವಾಯಿತು.
ನಕ್ಷತ್ರಮಾಸದ ಗಣನೆಯ ಲೆಕ್ಕವನ್ನೇಕೆ ಹೇಳಿದ್ದಾರೆ ಎಂಬ ಪ್ರಶ್ನೆಗೆ ಅದ್ಭುತ ಉತ್ತರವಿದೆ. ಮುಂದೆ ಆ ಪ್ರಸಂಗದಲ್ಲಿ ವಿವರಿಸುತ್ತೇನೆ.
2. ಸೀತಾಕಲ್ಯಾಣದ ಸಂದರ್ಭದಲ್ಲಿ ರಾಮನ ವಯಸ್ಸು 14. ಸೀತೆಯ ವಯಸ್ಸು 11 ಎಂದು ಹಿಡಿಯೋಣ. ರಾಮದೇವರು 11700 ವರ್ಷಗಳ ಕಾಲ ರಾಜ್ಯವನ್ನಾಳಿದರು. ಅದಕ್ಕಿಂತ 700 ವರ್ಷಗಳ ಮುಂಚೆ ಸೀತಾದೇವಿಯರು ಭೂಮಿಪ್ರವೇಶ ಮಾಡಿ ಅಂತರ್ಧಾನರಾದರು. ಆದರೆ ರಾಮನ ಜೊತೆಯಲ್ಲಿಯೇ ಇದ್ದರು ಮತ್ತು ಪರಂಧಾಮಪ್ರವೇಶಕಾಲದಲ್ಲಿ ಸ್ಪಷ್ಟವಾಗಿ ಪ್ರಕಟರಾದ್ದರಿಂದ ಇಬ್ಬರೂ ಪ್ರಕಟ ಮಾಡಿದ ಆಯುಷ್ಯ ಒಂದೇ.
3. ಲವಕುಶರು ಜನಿಸಿದಾಗ ಸೀತಾದೇವಿಯರಿಗೆ 11000 ವರ್ಷಗಳು. ರಾಮಾಯಣ ರಚನೆಯಾದದ್ದೂ ಆಗಲೇ.
4. 700 ವರ್ಷ.
RAVIKUMAR Joshi,Hungund
5:20 PM , 14/04/2020
ವನವಾಸದ ಸಮಯದಲ್ಲಿ ಶ್ರೀರಾಮಚಂದ್ರನ ಭೇಟಿಯಾದ ಭರತ ಅಂತ ಹೇಳಿದಿರಿ. ಅದು ವನವಾಸದ ನಿಯಮ ಮುರಿದಂತಾಯಿತಲೢ.
Vishnudasa Nagendracharya
ವನವಾಸದ ಕಾಲದಲ್ಲಿ ರಾಮದೇವರು ನಗರವಾಸ ಮಾಡಬಾರದು. ನಾಗರೀಕರ ಜೊತೆ ಮಾತನಾಡಬಾರದು ಎಂದೇನೂ ನಿಯಮವಿಲ್ಲ.
ಮತ್ತು ಭರತರು ಕಾಡಿಗೇ ಬಂದು ರಾಮದೇವರನ್ನು ಭೇಟಿಯಾಗುತ್ತಾರೆ. ರಾಮದೇವರು ನಾಡಿಗೆ ಬಂದು ಭೇಟಿಯಾಗುವದಿಲ್ಲ.
ವನವಾಸ ಎಂದರೆ ವನದಲ್ಲಿ ವಾಸ ಮಾಡಬೇಕು ಎಂದಷ್ಟೇ ನಿಯಮ. ಕಾಡಿನಲ್ಲಿ ಇಂಥವರನ್ನು ಬೇಟಿಯಾಗಬಾರದು ಎಂದೇನೂ ನಿಯಮವನ್ನು ಕೈಕಯಿ ಹಾಕಿಲ್ಲ.
Padmini Acharya,Mysuru
4:16 PM , 10/04/2020
ಪ್ರತಿದಿವಸವೂ ಸಂಪೂರ್ಣ ರಾಮಾಯಣ ಕೇಳುವ ಅಪೇಕ್ಷೆ ಇತ್ತು. ಈ ಪ್ರವಚನದಿಂದ ಅದು ಪೂರ್ಣವಾಯಿತು. ಇದನ್ನು ಕೇಳಿದ ನಂತರವೇ ನಮ್ಮ ಮನೆಯ ದಿನಚರಿ ಆರಂಭ.🙏
Santosh Patil,Gulbarga
10:41 PM, 16/03/2020
Thanks Gurugale 🙏🙏
Uma Rajesh,Bengaluru
1:57 PM , 16/03/2020
What a surprise to receive Ramayanam from you so soon...may we all be blessed with more such surprises. ನಮ್ಮ ಪುಣ್ಯ, ಗುರುಗಳ ಕಾರುಣ್ಯ, ದೇವರ ಅನುಗ್ರಹ
DESHPANDE P N,BANGALORE
6:08 PM , 13/03/2020
S.Namaskargalu. The entire Ramayana to be covered without any gap & distrabanc by grace of Almighty. The food you are feeding is never to be unforgettable. Warm regards. Anugrahvirali
Jayashree Karunakar,Bangalore
5:19 PM , 13/03/2020
ಗುರುಗಳೆ
ಅಯೋಧ್ಯೆಯಲ್ಲಿ ರಾಮ ಮಂದಿರ ನಿಮಾ೯ಣವಾಗಿ ರಾಮದೇವರ ಪ್ರತಿಮೆ ಯಾವಾಗ ಪ್ರತಿಷ್ಟಾಪನೆ ಆಗುತ್ತದೊ ಗೊತ್ತಿಲ್ಲ....
ಆದರೆ ಶ್ರೀಮದ್ ರಾಮಾಯಣವನ್ನು ನಿಮ್ಮ ವಾಣಿಯಲ್ಲಿ ಆಲಿಸುತ್ತಿದ್ದರೆ......
ನಮ್ಮ ಹೃದಯಮಂದಿರದಲ್ಲೇ........
ಶ್ರೀರಾಮನ ಆರಾದನೆಯಾಗುತ್ತಲಿದೆ...
ಮನಸ್ಸು , ಹೃದಯ ರಾಮಮಯವಾಗುತ್ತಲಿದೆ...
ಕಿವಿಗಳಿಗೆ ಹಬ್ಬವಾಗುತ್ತಲಿದೆ....
ನಿಮ್ಮ ಈ ಮಹತ್ತರವಾದ ಜ್ಞಾನಸತ್ರದಿಂದಾಗಿ ಎಲ್ಲರ ಮನಸ್ಸಿನಲ್ಲಿ ಈ ರೀತಿಯಾದ ಭಾವತರಂಗಗಳು ತುಂಬಿ...ಹೃದಯದಲ್ಲಿ ಶ್ರೀರಾಮನನ್ನು ತುಂಬಿಕೊಂಡಾಗ...
ಅಯೋಧ್ಯೆಯಲ್ಲಿ ನಿಮಾ೯ಣವಾಗುವದು ಏನೂ ಕಷ್ಟದ ಕೆಲಸವಲ್ಲ...🙏🙏
ಗುರುಗಳೆ ಕಥೆಗನುಗುಣವಾಗಿ ಬರುವ ಎಲ್ಲ ಶಾಸ್ತ್ರೀಯವಾದ ಪ್ರಶ್ನೋತ್ತರಗಳನ್ನೂ ತಿಳಿಯಲು ಕಾತರರಾಗಿದ್ದೇವೆ.... 🙏