Upanyasa - VNU884

ಶೋಕ ಶ್ಲೋಕವಾದ ಕಥೆ

ನಾರದರಿಂದ ರಾಮಾಯಣದ ಉಪದೇಶ ಪಡೆದ ವಾಲ್ಮೀಕಿಮಹರ್ಷಿಗಳು ಅದೇ ಗುಂಗಿನಲ್ಲಿ ಸಂಜೆಯ ಸಂಧ್ಯಾವಂದನೆಗೆ ತೆರಳುತ್ತಾರೆ. ರಮಣೀಯವಾದ ಪ್ರಕೃತಿಯನ್ನು ಅಸ್ವಾದಿಸುವಾಗ, ಸ್ವಚ್ಛಂದವಾಗಿ ತುಂಬು ಸಂತೋಷದಿಂದ ವಿಹಾರ ಮಾಡುತ್ತಿದ್ದ ಎರಡು ಹಕ್ಕಿಗಳು ಕಾಣುತ್ತವೆ. ಆಗ ಬೇಡನೊಬ್ಬ ಒಂದು ಹಕ್ಕಿಯನ್ನು ಹೊಡೆದು ಹಾಕುತ್ತಾನೆ, ವಾಲ್ಮೀಕಿ ಋಷಿಗಳ ಮುಖದಿಂದ ಅದ್ಭುತ ಪದಪುಂಜವೊಂದು ಹೊರಹೊಮ್ಮುತ್ತದೆ. 

ಆ ನಂತರ ಬ್ರಹ್ಮದೇವರು ಅವರ ಆಶ್ರಮಕ್ಕೆ ಬಂದು ಪರಮಾದ್ಭುತ ವರಗಳನ್ನು ಅನುಗ್ರಹಿಸಿ ಅವರ ಮುಖದಿಂದ ಬಂದ ಶ್ಲೋಕದ ರೀತಿಯಲ್ಲಿಯೇ ರಾಮಾಯಣವನ್ನು ರಚಿಸುವ ಆದೇಶವನ್ನು ಮಾಡುತ್ತಾರೆ. 
Play Time: 38:47

Size: 1.37 MB


Download Upanyasa Share to facebook View Comments
4042 Views

Comments

(You can only view comments here. If you want to write a comment please download the app.)
 • Prahllada A M,Belupalli

  11:57 AM, 05/04/2022

  ಆಚಾರ್ಯರಿಗೆ ನಮಸ್ಕಾರಗಳು 🙏 ಈ ಪ್ರವಚನ ಅಲ್ಲಿ ವಾಲ್ಮೀಕಿ ಮಹರ್ಷಿಗಳು ಸಾಂಶರು ಎಂದು ಹೇಳಿದಿರಿ. ಸಾಂಶರು ಎಂದರೇ ಯಾರು. ಈ ಶಬ್ದದ ಅರ್ಥ ತಿಳಿಸಿಕೊಡಿ.

  Vishnudasa Nagendracharya

  ಸಾಂಶರು ಎಂದರೆ ಒಂದೇ ಕಾಲಕ್ಕೆ ಅನೇಕ ದೇಹಗಳನ್ನು ಸ್ವೀಕರಿಸಿ ಅನೇಕ ಪ್ರದೇಶಗಳಲ್ಲಿರುವ ದೇವತೆಗಳು. 
  
  ಶ್ರೀಮದ್ ಭಾಗವತದ 110 ನೇ ಉಪನ್ಯಾಸದಲ್ಲಿ (ವಿದುರರ ತೀರ್ಥಯಾತ್ರೆ ಎಂಬ ಪ್ರವಚನ) 40 ನೇ ನಿಮಿಷದಿಂದ ಈ ವಿಷಯದ ಕುರಿತ ಪರಿಸ್ಪಷ್ಟ ನಿರೂಪಣೆ ಇದೆ, ಕೇಳಿ. 
 • prema raghavendra,coimbatore

  2:00 PM , 27/04/2020

  Anantha Namaskara! Danyavada!
 • Abburu Rajeeva,Channapattana

  1:08 PM , 26/04/2020

  ಅಧ್ಭುತ ..
  ನಮಸ್ಕಾರ ಆಚಾರ್ಯ
 • Shravan Prabhu,Kumta taluk near gokarna

  11:20 AM, 28/03/2020

  ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು🙏🙏🙏, ಆಚಾರ್ಯರೇ, ಶ್ರೀ ಹರಿವಾಯು ಗುರುಗಳ ಅನುಗ್ರಹ ದಿಂದ ಶ್ರೀರಾಮಾಯಣದ ಪ್ರವಚನ ಪರಮಾ ಅದ್ಬುತವಾಗಿ ಮೂಡಿಬರುತ್ತಿದೆ.
  ತಮ್ಮ ಅನುಗ್ರಹ ನಮ್ಮ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
  
  ಆಚಾರ್ಯರೇ, ತಾವು ಶ್ರೀ ವಾಲ್ಮೀಕಿ ಮಹರ್ಷಿಗಳನ್ನು ಅವರ ಮೂಲ ರೂಪದಲ್ಲಿ ಸಾಂಶರು ಎಂದು ಹೇಳಿದ್ದೀರಿ, ಇಲ್ಲಿ ಸಾಂಶರು ಎಂದರೆ ಯಾವ ದೇವತೆ, ತಾರತಮ್ಯದ ಲ್ಲಿ ಇವರು ಯಾವ ಕಕ್ಷೆಯಲ್ಲಿ ಬರುತ್ತಾರೆ. ದಯವಿಟ್ಟು ತಿಳಿಸಿಕೊಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
  🙏🙏🙏

  Vishnudasa Nagendracharya

  ಬ್ರಹ್ಮದೇವರಿಂದ ಆರಂಭಿಸಿ ಆಜಾನಜ ದೇವತೆಗಳವರೆಗಿನ ಎಲ್ಲರೂ ಸಾಂಶರು. 
  
  ಸಾಂಶರು ಎಂದರೆ ಒಂದೇ ಕಾಲದಲ್ಲಿ ಅನೇಕ ಪ್ರದೇಶಗಳಲ್ಲಿ ಅನೇಕ ರೂಪಗಳಿಂದ ಇರುವ ಸಾಮರ್ಥ್ಯವುಳ್ಳ ಜೀವರಾಶಿಗಳು. 
  
  ವಾಲ್ಮೀಕಿ ಮಹರ್ಷಿಗಳ ಹೆಸರನ್ನು ನಿಖರವಾಗಿ ಉಲ್ಲೇಖಿಸಿ ಇಂತಹುದೇ ಕಕ್ಷೆಯಲ್ಲಿ ಬರುತ್ತಾರೆ ಎಂಬ ವಚನ ದೊರೆತಿಲ್ಲ. ಆದರೆ ವಾಲ್ಮೀಕಿ ಋಷಿಗಳು ಸಾಂಶರು ಎನ್ನುವದರಿಂದ ಅವರು ಕಶ್ಯಪ-ಚ್ಯವನ-ಉಚಥ್ಯ ಮುಂತಾದ ತೊಂಭತ್ತು ಜನ ಋಷಿಗಳಲ್ಲಿ ಒಬ್ಬರು ಎಂದು ಪರಿಗಣಿಸಬೇಕಾಗುತ್ತದೆ. 
  
  ಕಾರಣ, ಉಳಿದ ಋಷಿಗಳು ಆಜಾನಜದೇವತೆಗಳಿಗಿಂತ ಕಡಿಮೆಯವರು. ಹೀಗಾಗಿ ಸಾಂಶರಾಗಲು ಸಾಧ್ಯವಿಲ್ಲ. ಇವರು 
  
  ಈ ಸಾಂಶ ಜೀವರ ಕುರಿತು ಶ್ರೀಮದ್ ಭಾಗವತದ ಪ್ರಥಮಸ್ಕಂಧದಲ್ಲಿ SB110, {VNU624} ರಲ್ಲಿ ವಿಸ್ತಾರವಾಗಿ ತಿಳಿಸಿದ್ದೇನೆ. 44ನೆಯ ನಿಮಿಷದಿಂದ. ಕೇಳಿ.
  
 • Nagendra,Bengaluru

  2:55 PM , 18/03/2020

  Namaskara Acharyare - illi ullekhisuva Bharadwajaru, Bharadwaja gothra moola rishigala? Thilisi 🙏

  Vishnudasa Nagendracharya

  ವಾಲ್ಮೀಕಿಗಳ ಶಿಷ್ಯರಾದ ಭರದ್ವಾಜರು, ಬೃಹಸ್ಪತ್ಯಾಚಾರ್ಯರ ಮಗ ಭರದ್ವಾಜರಲ್ಲ ಭಾರದ್ವಾಜಗೋತ್ರದಲ್ಲಿ ಬಂದಿರುವ ಒಬ್ಬರಿರಬೇಕು ಎನ್ನುವದು ನನ್ನ ಅನಿಸಿಕೆ. ಸ್ಪಷ್ಟವಾದ ಪ್ರಮಾಣಗಳಿಗಾಗಿ ಸಂಶೋಧಿಸುತ್ತಿದ್ದೇನೆ. ತಿಳಿದ ನಂತರ ಪ್ರಕಟಿಸುತ್ತೇನೆ. 
 • Santosh Patil,Gulbarga

  11:49 PM, 19/03/2020

  Tnx Gurugale
 • Padmini Acharya,Mysuru

  2:22 PM , 17/03/2020

  ಶ್ರೀ ಗುರುಭ್ಯೋ ನಮಃ🙏🙏
  
   ಕ್ರೌಂಚ ಪಕ್ಷಿಯ ಭಾಗ ನಮ್ಮ ಸಂಸಾರವನ್ನು ನೆನಪು ಮಾಡಿಕೊಡುತ್ತದೆ ಈ ಕ್ಷಣದಲ್ಲಿ ಇದ್ದ ಸಂತೋಷ ಮುಂದಿನ ಕ್ಷಣದಲ್ಲಿ ಇರುವುದಿಲ್ಲ 
  
  ಶ್ಲೋಕಕ್ಕೆ ಶ್ಲೋಕ ಎಂಬ ಹೆಸರು ಬಂದ ಪರಿ ತುಂಬಾ ಚೆನ್ನಾಗಿದೆ 
  🙏🙏🙏🙏
 • Jayashree Karunakar,Bangalore

  11:39 AM, 19/03/2020

  ಗುರುಗಳೆ 
  
  ಕಥೆಯನ್ನು ಹೇಳುವ ಆಚಾಯ೯ರು ಸಿಕ್ಕಾರು...
  ಪರಿಶುದ್ಧತತ್ವಗಳನ್ನೂ ಕಥೆಯೊಂದಿಗೆ ತಿಳಿಸಿಕೊಡುವವರೂ ಸಿಗಬಹುದು...ಆದರೆ ಅದೆಲ್ಲದರ ಜೊತೆಗೆ, ಕಥೆಯಲ್ಲಿ ಬರುವ ವ್ಯಕ್ತಿತ್ವಗಳನ್ನು ಪೂಣ೯ಮನದಿಂದ ಪರಿಚಯಮಾಡಿ, ಕಥೆ ಕೇಳಿದ ಕ್ಷಣ ಅವರ ಮಹಾನ್ ಗುಣಗಳು ನಮ ಚಿಂತನೆಗೆ ಬರುವಂತೆ ತಿಳಿಸುವ ನಿಮ್ಮಂತಹ ಗುರುಗಳು ಸಿಗುವದು ತುಂಬಾ ಕಷ್ಟಸಾಧ್ಯ...
  
  ನೀವು ಒಬ್ಬೊಬ್ಬ ಪಾತ್ರಗಳ ವ್ಯಕ್ತಿತ್ವ ಪರಿಚಯವನ್ನೂ ಗೌರವದಿಂದ, ತುಂಬು ಹೃದಯದಿಂದ ಮಾಡುತ್ತೀರಿ...
  ಶ್ರೀಮದ್ಭಾಗವತದಲ್ಲಿ ನಾವು ಕೇಳಿದ ವಿದುರರು, ಧಮ೯ರಾಜ, ಕುಂತಿ ಮುಂತಾದ...ಮತ್ತು ಇದೀಗ ರಾಮಾಯಣದಲ್ಲಿ ಬರುವ ಭಾರದ್ವಾಜರು ತಮ್ಮ ಗುರುಗಳಿಗೆ ಮಾಡುವ ಗೌರವದಲ್ಲಿಯೂ, ಸಹ ....
  
  ಹೀಗೆ ಪ್ರತಿಯೊಂದು ಹೆಸರನ್ನು ಕೇಳಿದ ಕ್ಷಣ ಆ ಮಹಾನುಭಾವರ ಬಗೆಗೆ ನಮಗೆ ಗೌರವ ನೂಮ೯ಡಿಯಾಗುವಂತೆ ಮನಸ್ಸಿನಲ್ಲಿ ಅದು ನಿಲ್ಲುವಂತೆ ಹೇಳುತ್ತೀರಿ...
  
  ನಮ್ಮ ಪ್ರೀತಿ ಪಾತ್ರರ ಹೆಸರು ಕೇಳಿದ ಕ್ಷಣ ಅವರು ನಮ್ಮಲ್ಲಿ ತೋರಿದ ಪ್ರೀತಿಯ ಕ್ಷಣಗಳೇ ನೆನಪಾಗುವಂತೆ.....!!!
  
  
  ಇದರಿಂದ ನಮಗೆ
  ಭಕ್ತಿ ಶ್ರದ್ಧೆಗಳು ಹೆಚ್ಚಾಗುತ್ತದೆ.....
  ಎಲ್ಲಿಯಾದರೂ ಬೇರೆಯವರು ಹಗುರವಾಗಿ (ನಾರದ, ರಂಬೆ, ಊವ೯ಶಿ...etc.. ) ಅವರ ಬಗ್ಗೆ ಮಾತನಾಡಿದಾಗ,
  ಮಾತಿನಲ್ಲಿ ಅದನ್ನು ಖಂಡನೆ ಮಾಡುವಷ್ಟು ಎತ್ತರವನ್ನು ನಾವು ಇನ್ನೂ ಮುಟ್ಟಿಲ್ಲವಾದರೂ, ಮನಸ್ಸು ಅದನ್ನು ವಿರೋಧ ಮಾಡಿ.. ಬುದ್ಧಿಯು ಜಾಗ್ರತವಾಗುವಂತೆ....
  ಮಾಡುತ್ತೀರಿ....
  
  ಮುಖ್ಯಪಾತ್ರದಿಂದಾರಂಭಿಸಿ, ಅಲ್ಲಿ ಬರುವ ಆ ಕಾಲದಲ್ಲಿದ್ದ ಅತೀ ಸಾಮಾನ್ಯ ಮನಷ್ಯನ ತನಕವೂ....
  ಆ ಕಾಲಕ್ಕೆ ಹುಟ್ಟಿ ಬರಲು ಹಲವು ಜನ್ಮಗಳ ಸಾಧನೆ ಮಾಡಿ ಬಂದಿದ್ದರು ಅಂತ ಮಧ್ವವಿಜಯದಲ್ಲಿ.....ಹೀಗೆ...
  
  
  ಪ್ರತಿಯೊಂದು ಪಾತ್ರವನ್ನೂ ಪೂಜ್ಯ ಭಾವನೆ ಬರುವಂತೆ ಹೇಳುತ್ತೀರಿ...
  
  ನಿಮ್ಮ ಅನೇಕ ಉಪನ್ಯಾಸಗಳನ್ನು ಆಲಿಸಿದಾಗ ನನ್ನ ಅನಿಸಿಕೆಗಳು ಇದು...
  ಉತ್ಪ್ರೇಕ್ಷೆ ಮಾಡಿ ಹೇಳಿದ ಮಾತುಗಳಲ್ಲ...
 • Prabhanjan Joshi,Ankola

  9:05 AM , 17/03/2020

  ಗುರುಗಳಿಗೆ ನಮಸ್ಕಾರಗಳು...
  ರಾಮಾಯಣ ಅದ್ಬುತವಾಗಿದೆ. ನಾನು ಕೇಳಿದ ತಪ್ಪು ರಾಮಾಯಣಕ್ಕೂ ಮತ್ತು ನೀವು ಹೇಳಿದ ಪರಿಶುದ್ಧ ತುಂಬಾ ವ್ಯತ್ಯಾಸವಿದೆ.... ನಿಮಗೆ ನನ್ನ ಅನಂತಾನಂತ ಧನ್ಯವಾದಗಳು
 • Santosh Patil,Gulbarga

  10:42 PM, 16/03/2020

  Thanks Gurugale 🙏🙏
 • Jayashree Karunakar,Bangalore

  4:10 PM , 16/03/2020

  ಗುರುಗಳೆ
  
  ಕಥೆಯಲ್ಲಿ ಬರುವ ಪರಿಸರದ ವಣ೯ನೆ....
  
  ಅದು ಅವರ ಮೇಲೆ ಬೀರವ ಪರಿಣಾಮ...
  
  ಗಂಡು ಕ್ರೌಂಚ ಪಕ್ಷಿಯ ದೇಹದ ನೋವು, ಅದಕ್ಕೆ ಸರಿಸಮಾನವಾದ
  ಹೆಣ್ಣು ಕ್ರೌಂಚ ಪಕ್ಷಿಯ ಮನದ ನೋವು .....
  ಅದನ್ನು ತಾವು ಹೇಳುವ ರೀತಿ...
  
  ಪ್ರಶಾಂತವಾಗಿದ್ದ ಋುಷಿಗಳ ಮನಸ್ಸು ......
  
  ದುಃಖತಪ್ತವಾಗುವ ಪರಿ ....
  
  ಮತ್ತು ಅವರು ಅದನ್ನು ಗಮನಿಸುವ ಪರಿ......
  
  ಕೇವಲ ಕಥೆಯನ್ನು ಗ್ರಹಿಸುವುದಲ್ಲದೇ...
  
  ಎಲ್ಲವೂ ಒಂದು ರೀತಿಯಲ್ಲಿ ನಮ್ಮ ಮೇಲೂ ಪರಿಣಾಮವಾಗುತ್ತದೆ....
  
  ಏನೊ ಒಂದು ವಿಭಿನ್ನ ರೀತಿಯಲ್ಲಿ ಬರುತ್ತಿದೆ ರಾಮಾಯಣ...
  
  ನಾವು ತಪ್ಪು ತಪ್ಪಾಗಿ ಕೇಳಿದ್ದ ರಾಮಾಯಣವು ಇದೀಗ edit ಆಗುತ್ತಿದೆ ನಿಮ್ಮಿಂದ.....tysm.. 🙏
 • Uma Rajesh,Bengaluru

  2:47 PM , 16/03/2020

  Very unique episode, most people may not know these very interesting details. Looking forward to tomorrow ....
 • DESHPANDE P N,BANGALORE

  2:12 PM , 16/03/2020

  S.Namaskargalu. listening to Ramayana daily is our good luck & listening to entire Ramayana will be a very big bliss. Almighty should provide best health & mind set.