Upanyasa - VNU885

ರಾಮಾಯಣದ ರಚನೆ

ನಮ್ಮ ಪ್ರಾಚೀನರು ಯಾವ ಕ್ರಮದಲ್ಲಿ ಗ್ರಂಥ ರಚನೆ ಮಾಡುತ್ತಿದ್ದರು, ಏನೆಲ್ಲ ನಿಯಮಗಳನ್ನು ಅನುಸರಿಸುತ್ತಿದ್ದರು ಎಂಬ ಮಹತ್ತ್ವದ ತತ್ವಗಳ ಅನಾವರಣ ಇಲ್ಲಿದೆ. ಲಕ್ಷ ಲಕ್ಷ ವರ್ಷಗಳ ಹಿಂದೆ ರಚಿತವಾಗಿ ಸೂರ್ಯ ಚಂದ್ರರಿರುವವರೆಗೆ ಉಳಿಯಲಿರುವ ಶ್ರೀಮದ್ ರಾಮಾಯಣ ನಿರ್ಮಾಣವಾದ ರೋಮಾಂಚಕಾರಿ ಘಟನೆಯ ವಿವರದೊಂದಿಗೆ. 

Play Time: 38:04

Size: 1.37 MB


Download Upanyasa Share to facebook View Comments
3403 Views

Comments

(You can only view comments here. If you want to write a comment please download the app.)
 • Soundarya,Bangalore

  12:23 PM, 19/10/2021

  ಆಚಾರ್ಯರಿಗೆ ನಮಸ್ಕಾರಗಳು, ದಯವಿಟ್ಟು ರಾಮಾಯಣ ಶಬ್ದದ ಅರ್ಥ ತಿಳಿಸಿಹೇಳಿ
  ಧನ್ಯವಾದಗಳು.

  Vishnudasa Nagendracharya

  ಅಯನ ಎಂದರೆ ಆಶ್ರಯ. ರಾಮನನ್ನು ಆಶ್ರಯಿಸಿದ ಕಥೆ, ಗ್ರಂಥ, ರಾಮಾಯಣ. ಯಾವ ಕಥೆಗೆ ಗ್ರಂಥಕ್ಕೆ ಶ್ರೀರಾಮನೇ ಆಧಾರನೋ ಆ ಕಥೆ ಆ ಗ್ರಂಥ ರಾಮಾಯಣ. 
 • Raghavendra,Hyderabadp

  4:33 PM , 28/04/2020

  Sri gurubhyo namaha
 • prema raghavendra,coimbatore

  2:27 PM , 28/04/2020

  Anantha namaskara! Danyavada!
 • Abburu Rajeeva,Channapattana

  2:16 PM , 26/04/2020

  🙏🙏🙏👌
 • Vikram Shenoy,Doha

  1:25 AM , 21/03/2020

  🙏🙏🙏🙏👏🙏🙏
 • Padmini Acharya,Mysuru

  7:50 PM , 17/03/2020

  🙏ಶ್ರೀ ಗುರುಭ್ಯೋ ನಮಃ🙏
  
  ನೂರು ಕೋಟಿ ಶ್ಲೋಕದ ರಾಮಾಯಣವನ್ನು
  ವಾಲ್ಮೀಕಿ ಋಷಿಗಳು ಯಾಕಾಗಿ 24,000 ಶ್ಲೋಕಗಳಾಗಿ ರಚನೆ ಮಾಡಿದರು?
  
  ಮತ್ತು 24000 ಸಂಖ್ಯೆಯೇ ಏಕೆ?

  Vishnudasa Nagendracharya

  ನೂರು ಕೋಟಿ ಶ್ಲೋಕಗಳುಳ್ಳ ಶ್ರೀಮನ್ ಮೂಲರಾಮಾಯಣ ಸಾಮಾನ್ಯ ಮನುಷ್ಯರಿಗೆ ಅಧ್ಯಯನ ಮಾಡಲು ಅಸಾಧ್ಯ ಎಂಬ ಕಾರಣಕ್ಕಾಗಿ ಶ್ರೀ ವಾಲ್ಮೀಕಿ ಮಹರ್ಷಿಗಳು ಅದನ್ನು 24000 ಶ್ಲೋಕಗಳ ಸಂಕ್ಷಿಪ್ತ ಕೃತಿಯನ್ನು ರಚಿಸಿದರು. 
  
  ಗಾಯತ್ರಿಯಲ್ಲಿ 24 ಅಕ್ಷರಗಳಿವೆ. ತಾವು ರಚಿಸುತ್ತಿರುವ ರಾಮಾಯಣ ವೇದಾಧ್ಯಯನ ಶೀಲರಿಗೆ ವೇದಾರ್ಥವನ್ನು ತಿಳಿಯಲು ಸಾಧನ ಮತ್ತು ವೇದಾಧ್ಯಯನದ ಅಧಿಕಾರವಿಲ್ಲ ಸ್ತ್ರೀಯರು, ಶೂದ್ರರು, ಬ್ರಹ್ಮಬಂಧುಗಳಿಗೆ ಸಾಕ್ಷಾದ್ ವೇದರೂಪವೇ ಎನ್ನುವದನ್ನು ತೋರಿಸಲು 24000 ಸಂಖ್ಯೆಯಲ್ಲಿ ಶ್ಲೋಕಗಳನ್ನು ರಚಿಸಿದ್ದಾರೆ. 
 • Jayashree Karunakar,Bangalore

  3:25 PM , 18/03/2020

  ಹೌದು ಗುರುಗಳೆ
  
  ರಾಮಾಯಾಣ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಕಥೆಯೆ
  ಯಾಕೆ ಮಾಡುತ್ತಿದ್ದಾರೆ ಅಂತ ಅನಿಸಿತ್ತು....
  
  ಆದರೆ ಕೇವಲ ಎರಡು ಮೂರು ಉಪನ್ಯಾಸದ ಶ್ರವಣ ಮಾಡುವಷ್ಟರಲ್ಲೇ ಗೊತ್ತಾಯಿತು...
  
  *ನಮಗೇನೂ ಗೊತ್ತಿಲ್ಲ* ಅಂತ..
  
  ಸರಿಯಾಗಿ ತಿಳಿದುಕೊಂಡಿರುವದು ಸ್ವಲ್ಪ ಮಾತ್ರ...
  ಹೆಚ್ಚಾಗಿ ತಿಳಿದುಕೊಂಡಿರುವ ವಿಷಯಗಳೆಲ್ಲವೂ ತಪ್ಪು ತಪ್ಪೇ...
  ತಿಳಿಯದೇ ಇರುವದೇ ಜಾಸ್ತಿ....😊
  ಆದರೀಗ ಶ್ರವಣ ಮಾಡಿದಷ್ಟೂ ತೃಪ್ತಿಯಾಗುತ್ತಿಲ್ಲ...ಮಾತು ಬರುತ್ತಿಲ್ಲ....ಕೇವಲ ಆನಂದಾಶ್ರುಗಳು ಬರುತ್ತಿವೆ...
  
  ಕಾರಣ ಎಷ್ಟೊಂದು ವಿಷಯಗಳು ಗೊತ್ತೇ ಇಲ್ಲ...ಹಾಗಾಗಿ ದಿನದಿನವೂ ಕುತೂಹಲ...ಅದೆಷ್ಟು ಜ್ಞಾನಸಾಗರವೇ ನಿಮ್ಮ ಬಳಿಯಿದೆ...
  ಹೆಮ್ಮೆಯಾಗುತ್ತಿದೆ ...ಇಂತಹ ರಾಮಾಯಣವನ್ನು ನಿಮ್ಮಿಂದ ಶ್ರವಣ ಮಾಡಲು...
  
  ನಮ್ಮೆಲ್ಲರ ಯೋಗ್ಯತೆಯ ಅರಿವಿರುವ ನೀವು , ನಮ್ಮ ತಪ್ಪನ್ನು
  ಸರಿಪಡಿಸಿ, ಪರಿಶುದ್ಧವಾದ ರಾಮಾಯಾಣವನ್ನು ನಾವು ಕುಳಿತಲ್ಲಿಯೇ ಆಸ್ವಾದಿಸುವಂತೆ ಮಾಡಿದ ಗುರುಗಳಿಗೊಂದು ಭಕ್ತಿಪೂವ೯ಕ ನಮಸ್ಕಾರಗಳು..🙏🙏
 • DESHPANDE P N,BANGALORE

  2:02 PM , 17/03/2020

  S.Namaskargalu. The interest is being created by listening day today. Anugrahvirali
 • deashmukhseshagirirao,Banglore

  5:09 AM , 17/03/2020

  🙏🏻🙏🏻🙏🏻🙏🏻🙏🏻