Upanyasa - VNU886

ಕುಶ ಲವರ ರಾಮಾಯಣ ಗಾಯನ

ಮೂಲರಾಮಾಯಣವನ್ನು ನಾರದರಿಂದ ಕೇಳಿ, ರಾಮಚಂದ್ರನನ್ನು ಸಾಕ್ಷಾತ್ತಾಗಿ ಕಾಣುತ್ತ, ಬ್ರಹ್ಮದೇವರ ಅನುಗ್ರಹದಿಂದ ಸಮಗ್ರ ರಾಮಾಯಣದ ಎಲ್ಲ ಘಟನೆಗಳನ್ನೂ ಮನಃಪಟಲದಲ್ಲಿ ಕಂಡ ವಾಲ್ಮೀಕಿ ಮಹರ್ಷಿಗಳು ಪರಮಾದ್ಭುತವಾಗಿ ರಾಮಾಯಣವನ್ನು ರಚಿಸಿ ಅದನ್ನು ತಮ್ಮ ಆಶ್ರಮದಲ್ಲಿ ರಾಮನ ಮಕ್ಕಳಿಂದಲೇ ಪ್ರಯೋಗ ಮಾಡಿಸುತ್ತಾರೆ. 

ಕುಶೀಲವರಾದ (ಅದ್ಭುತ ಪ್ರತಿಭೆ ಉಳ್ಳವರನ್ನು ಕುಶೀಲವ ಎನ್ನುತ್ತಾರೆ) ಕುಶಲವರಿಬ್ಬರೂ ಸಮಗ್ರ ರಾಮಾಯಣವನ್ನು ಋಷಿಗಳ ಸಭೆಯಲ್ಲಿ ಹಾಡಿದಾದ ಆ ಮುನಿಗಳೆಲ್ಲರೂ ತಮ್ಮ ಕಣ್ಣ ಮುಂದೆಯೇ ರಾಮಾಯಣ ನಡೆಯುತ್ತಿದೆ ಎನ್ನುವಂತೆ ಆಸ್ವಾದಿಸುತ್ತಾರೆ. ಗುರುಗಳ ಆಜ್ಙೆಯಂತೆ ಗ್ರಾಮಗ್ರಾಮಗಳಲ್ಲಿ ರಾಮಾಯಣದ ಗಾನವನ್ನು ಮಾಡುವಾಗ, ಸ್ವಯಂ ಶ್ರೀರಾಮಚಂದ್ರನೂ ಅದನ್ನು ಕೇಳಿ, ತನ್ನ ಸಭೆಗೆ ಕರೆಯಿಸಿ ಆ ತನ್ನ ಮಕ್ಕಳಿಂದ ರಾಮಾಯಣವನ್ನು ಶ್ರವಣ ಮಾಡಿದ ಘಟನೆಯ ವಿವರ ಇಲ್ಲಿದೆ. 

Play Time: 33:32

Size: 1.37 MB


Download Upanyasa Share to facebook View Comments
6808 Views

Comments

(You can only view comments here. If you want to write a comment please download the app.)
 • Ravikiran m s,Udupi

  10:28 PM, 23/07/2022

  🙏🙏🙏
 • Ravikiran m s,Udupi

  10:28 PM, 23/07/2022

  🙏🙏🙏
 • prema raghavendra,coimbatore

  12:49 PM, 12/05/2020

  Anantha namaskara! Danyavada!
 • Ashwathnarayan,gulbarga

  12:57 PM, 06/05/2020

  🙏
  ಕುಶ ಲವರು ರಾಮಾಯಣ ಹಾಡುತ್ತಿದ್ದಾಗ ಅದರಲ್ಲಿ ಬರುವ ಅವರ ಪಾತ್ರವು ಅವರಿಗೆ ತಿಳಿದಿರಬೇಕು ಅಲ್ಲವೆ ಅಚಾರ್ಯರೇ ?
  ಅಂದ್ರೆ ಅವರ ತಂದೆ ಯಾರು ? ಶ್ರೀ ರಾಮಚಂದ್ರ ಅಂತ ತಿಳಿದಿತ್ತೆ ಆ ಸಂದರ್ಭದಲ್ಲಿ ?🙏🙏🙏🙏

  Vishnudasa Nagendracharya

  ಅವಶ್ಯವಾಗಿ ತಿಳಿದಿತ್ತು. 
  
  ಕುಶಲವರು ಬೆಳೆದು ಬುದ್ಧಿ ಬರುತ್ತಿದ್ದಂತೆಯೇ ಅವರಿಗೆ ತಾವು ಶ್ರೀರಾಮನ ಮಕ್ಕಳು ಎಂದು ತಿಳಿದಿತ್ತು. 
  
  ಕುಶ ಲವರಿಗೆ ತಂದೆ ಯಾರು ಎಂದು ತಿಳಿದಿರಲಿಲ್ಲ, ರಾಮನಿಗೂ ಅವರಿಗೂ ಯುದ್ಧವಾಯಿತು, ಇವೆಲ್ಲವೂ ಸಹ ಸುಳ್ಳು ಕಥೆಗಳು, ಸಿನಿಮಾಗಳಿಂದ ಪ್ರಚಾರ ಪಡೆದ ವಿಷಯವದು.
 • prema raghavendra,coimbatore

  2:14 PM , 30/04/2020

  Anantha namaskara! Danyavada!
 • Abburu Rajeeva,Channapattana

  8:01 PM , 27/04/2020

  🙏🙏🙏
 • Mythreyi Rao,Bengaluru

  10:18 AM, 01/04/2020

  🙏🙏🙏
 • Poornima Sowda,Bangalore

  4:31 PM , 18/03/2020

  ನಮಸ್ಕಾರ ಗುರುಗಳೇ. ರಾಮಾಯಣ ಪ್ರವಚನ ತುಂಬಾ ಅದ್ಭುತವಾಗಿ ಮೂಡಿಬರ್ತಾಯಿದೆ.
  
  ನನ್ನ ಪ್ರಶ್ನೆ, ನೀವು ಪ್ರತಿಬಾರಿ ಕುಶ - ಲವರು ಎಂದು ಸಂಭೋಧಿಸಿದ್ದಿರಾ‌. ನಾನು ರಾಮಾಯಣ ಕಥೆ ಕೇಳಿದಾಗ ರಾಮನ ಮಕ್ಕಳ ಹೆಸರು ಲವ - ಕುಶರು ಎಂದೇ ಕೇಳಿದ್ದೇನೆ. ಇದೇ ಮೊದಲ ಬಾರಿಗೆ ನಿಮ್ಮ ಪ್ರವಚನದಲ್ಲಿ ಕುಶ - ಲವರು ಎಂದು ಕೇಳಿದೆನು. ಇದರ ಕಾರಣ ವೇನು? ಇದಕ್ಕೆ ಒಳ ಅರ್ಥವಿದೆಯಾ?

  Vishnudasa Nagendracharya

  ಉತ್ತಮ ಪ್ರಶ್ನೆ. VNP181ರಲ್ಲಿ ವಿಸ್ತೃತವಾಗಿ ಉತ್ತರಿಸಿದ್ದೇನೆ. 
 • Padmini Acharya,Mysuru

  10:18 PM, 19/03/2020

  🙏ಶ್ರೀ ಗುರುಭ್ಯೋ ನಮಃ🙏
  
  ರಾಮ ದೇವರ ಕಥೆಯ ಸೊಬಗು 
  ದೇವರನ್ನು ಕಾಣಬೇಕು ಎಂದು ಬಯಸುವ ವ್ಯಕ್ತಿ 
  ಯಾವ ರೀತಿಯಾಗಿ ರಾಮಾಯಣವನ್ನು ಕೇಳಬೇಕು ಅನ್ನುವುದು ಸಹ ನಮಗೆ ಕಲಿಸುವ ಆ ರಾಮ ದೇವರ ಕಾರುಣ್ಯಕೆ 🙏🙏
 • Jayashree Karunakar,Bangalore

  2:46 PM , 18/03/2020

  ಗುರುಗಳೆ
  
   ತಪ್ಪು ತಪ್ಪು ಆಗಿಯಾದರೂ ರಾಮಾಯಣವನ್ನು ಒಮ್ಮೆಯಾದರೂ ಕೇಳಿದ್ದೇವಲ್ಲ....ಆ ಪುಣ್ಯವೋ ಎನೊ....
  ಇದೀಗ ವ್ಯವಸ್ಥಿತವಾಗಿ ಕೇಳುವ.....ಅಲ್ಲ.....
  ಆಸ್ವಾದಿಸುವ ಸೌಭಾಗ್ಯ ಒದಗಿ ಬಂದಿದೆ....
  ನಿಮ್ಮ ಮೂಲಕ 🙏
  
  ಪ್ರತೀನಿತ್ಯವೂ ಶ್ರವಣದ ವೇಳೆ ಸಂಭ್ರಮದ ಹಬ್ಬವಾಗುತ್ತಲಿದೆ...
  
  ಅದಕ್ಕಾಗಿಯೇ....ಆ ಸಮಯಕ್ಕಾಗಿಯೇ ಕಾಯುವಂತಾಗಿದೆ..
  ಆ ರಾಮ ಕಥೆಯ ಸವಿಯನ್ನು ಪಾನ ಮಾಡಲು...
  
  ಶ್ರೀಮದ್ಭಾಗವತದ ಶ್ರವಣ ಒಂದು ರೀತಿಯ ಆನಂದ ನೀಡಿದರೆ....ಶ್ರೀಮದ್ ರಾಮಾಯಣದ ಸೊಬಗು ಇನ್ನೊಂದು ರೀತಿಯಲ್ಲಾಗುತ್ತಿದೆ....
  
  ಮಹಾಗ್ರಂಥಗಳ ರಸಾಸ್ವಾದವನ್ನು ನಮ್ಮಂತಹ ಸಾಮಾನ್ಯರಿಗೂ ಪಾನಮಾಡಿಸುವ ಗುರುಗಳಿಗೆ, ಶ್ರವಣ ಮಾಡುವಾಗಲೊಮ್ಮೆ ಭಕ್ತಿಯ ನಮಸ್ಕಾರಗಳನ್ನು ಮಾಡುವಂತಾಗುತ್ತಿದೆ....ಕಾರಣ ದೇಹದ ಪೋಷಣೆಗೆ ಮಾತ್ರ ಪ್ರಾಮುಖ್ಯತೆ ನೀಡುವ, ಈ ಜೀವನ ಜಂಜಾಟದಲ್ಲಿ , ಮನಸ್ಸಿಗೂ ಪೌಷ್ಟಿಕವಾದ ಆಹಾರ ಕೊಡುತ್ತಿದ್ದೀರಿ....
  
  ಮನಸ್ಸು ಪ್ರಸನ್ನವಾಗುತ್ತಿದೆ...
  🙏🙏
 • DESHPANDE P N,BANGALORE

  2:07 PM , 18/03/2020

  S.Namaskargalu. Indra/Aggani gala avatar aada Lava/Kusha rinda Sampurna Ramayana kealalu baloo ananda. Anugrahvirali