Upanyasa - VNU887

ಹೇಗಿತ್ತು ಅಂದಿನ ಅಯೋಧ್ಯೆ

ಹಿಂದಿನವರೆಲ್ಲ ದಡ್ಡರು, ಇಂದಿನ ನಾವು ತುಂಬ ಅಭಿವೃದ್ಧಿ ಹೊಂದಿದವರು ಎಂಬ ಭ್ರಮೆ ಅನೇಕರಿಗುಂಟು. ಲಕ್ಷಲಕ್ಷ ವರ್ಷಗಳ ಹಿಂದೆ ಇದ್ದಂತಹ ಅಯೋಧ್ಯಾ ನಗರ ಎಷ್ಟು ಅದ್ಭುತವಾಗಿ ವೈಜ್ಞಾನಿಕವಾಗಿ ನಿರ್ಮಾಣಗೊಂಡಿತ್ತು ಎನ್ನುವದನ್ನು ವಾಲ್ಮೀಕಿ ಋಷಿಗಳು ರಾಮಾಯಣದಲ್ಲಿ ದಾಖಲಿಸಿದ್ದಾರೆ. ರಸ್ತೆಗಳು, ಕಟ್ಟಡಗಳು, ಸೌಲಭ್ಯಗಳು, ಸುರಕ್ಷತೆ ಮುಂತಾದ ಎಲ್ಲ ದೃಷ್ಟಿಗಳಿಂದಲೂ ಪರಿಪೂರ್ಣವಾದ ನಗರ ಹೇಗಿರಬೇಕು ಎನ್ನುವದನ್ನು ನಮಗೆ ಮನದಟ್ಟು ಮಾಡಿಸುತ್ತಾರೆ. 

Play Time: 39:58

Size: 1.37 MB


Download Upanyasa Share to facebook View Comments
4478 Views

Comments

(You can only view comments here. If you want to write a comment please download the app.)
 • prema raghavendra,coimbatore

  2:02 PM , 04/05/2020

  Anantha namaskara! Danyavada!
 • Achala,Bengaluru

  5:02 PM , 28/04/2020

  ನಮಸ್ಕಾರ ಆಚಾರ್ಯರೆ🙏🏻🙏🏻
  
  ರಾಮಾಯಣ ಉಪನ್ಯಾಸ ಕೇಳುವಾಗ ಅನೇಕ ಪ್ರಶ್ನೆಗಳು ಬರ್ತಾಯಿದೆ.
  
  ದಶರಥ ಮಹಾರಾಜರು ಇಡಿಯ ಭಾರತವನ್ನು ಆಳುತ್ತಿದ್ದರು, ಹಾಗಾದಾಗ ಜನಕ, ರೂಮಾಪದ ಮುಂತಾದ ರಾಜರು ಯಾವ ದೇಶ ಆಳುತ್ತಿದ್ದರು??
  
  ಹಾಗೆ, ಅಂದಿನ ಕಾಲದಲ್ಲಿ ಅಥವಾ ಉಳಿದ ಯುಗಗಳಲ್ಲಿ ಇವಾಗಿನ America, Europe ಮುಂತಾದ ದೇಶಗಳು, ಖಂಡಗಳು ಎಲ್ಲಿದ್ದವು?? ಈಗ ನಾವು ಏನು ಗ್ರೇಕ್ ರೋಮನ್ civilization ಅಂತಾರೆ ಅಲ್ವಾ ಅವೆಲ್ಲ ಯಾವಾಗಿದ್ದವು?? ಅವರವರ ದೇವತೆಗಳು Zeus, Poseidon, Jupiter ಅಂತೆಲ್ಲ ಇದ್ದರೆ ಅಲ್ವಾ ಅವರೆಲ್ಲ ಯಾರು? ಅವರು ಮಹಾ ಬಲಿಷ್ಠರು ವರವನ್ನು ನೀಡುತ್ತಿದ್ದರು ಆಯಾ ಜನಗಳಿಗೆ.
  
  ಈ ಪ್ರಶ್ನೆ ಬಹಳ ಕಾಲದಿಂದ ನನ್ನ ಮನಸಲ್ಲಿ ಇದೆ, ಆದರೆ ಸರಿಯಾದ ಉತ್ತರ ಸಿಗ್ತಿಲ್ಲ. ದಯವಿಟ್ಟು ತಿಳಿಸಿವೆ🙏🏻🙏🏻
 • Padma Sirisha,Mysore

  4:38 PM , 30/03/2020

  ನಮಸ್ಕಾರಗಳು ಗುರುಗಳಿಗೆ,
  
  ಇದೀಗ ಇಲ್ಲಿ ಮಧು ಅವರು ಕೇಳಿದ ಪ್ರಶ್ನೆಗೆ ಮತ್ತೊಂದು ಪ್ರಶ್ನೆ ಹುಟ್ಟಿ ಬಂದಿದೆ. ದಯವಿಟ್ಟು ಉತ್ತರ ತಿಳಿಸಿ..
  
  ರಾವಣನಿಗೆ ರಾಮದೇವರ ಪೂರ್ವಜರಿಂದ ಶಾಪ ಬಂದಿದೆ ಆತನು ರಘುವಂಶದಲಿ ಹುಟ್ಟಿಬಂದವರಿಂದ ಭವಿಷ್ಯದಲಿ ಸಾಯ್ತಾನೆ ಅಂತ..
  
  ಅಂದಮೇಲೆ ಕಂಸನಂತೆ ದೇವಕಿದೇವಿಯರನ್ನು ಖೈದು ಮಾಡಿ, ದುರ್ಗಾದೇವಿಯರ ಮಾತಿನಂತೆ, ಮತ್ತೆ ಮತ್ತೆ ಗೋಕುಲದಮೇಲೆ ರಾಕ್ಷಸರರನ್ನು ಕಳಿಸಿದಂತೆ,
  
   ಇಲ್ಲಿ ಶಾಪಪಡೆದ ರಾವಣನು ನಾರದರ ಮಾತಿಗೆ ಅಯೋಧ್ಯೆಯ ಮೇಲೆ ಯುದ್ಧಕ್ಕೆ ಹೋಗದಿರುವುದು ಹೇಗೆ ಸರಿ .. ದಯವಿಟ್ಟು ತಿಳಿಸಿ

  Vishnudasa Nagendracharya

  ಎಲ್ಲ ರಾಕ್ಷಸರೂ ಒಂದೇ ರೀತಿ ಆಲೋಚನೆ ಮಾಡಬೇಕು ಎಂದೇನಿಲ್ಲ. ಕಂಸನೂ ಸಹ ದೇವಕಿ ವಸುದೇವರನ್ನು ಕೊಂದೇ ಬಿಡಬಹುದಿತ್ತಲ್ಲವೇ? ಕಾರಾಗೃಹದಲ್ಲಿ ಏಕಿಡಬೇಕಿತ್ತು. 
  
  ಮತ್ತು, ಭವಿಷ್ಯವನ್ನು ತಿಳಿದ ಮಾತ್ರಕ್ಕೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಬದಲಾಯಿಸಲು ಸಾಧ್ಯವಾದರೆ ಅದು ಭವಿಷ್ಯ ಹೇಗೆ?
  
  ಅನರಣ್ಯ ಮಹಾರಾಜರು ಸಾಯುವ ಸಂದರ್ಭದಲ್ಲಿ ಶಾಪ ಕೊಟ್ಟದ್ದು. ಸಾಯುವ ವ್ಯಕ್ತಿಯ ಬಡಬಡಿಕೆಯಿದು ಎಂದು ರಾವಣ ಉಪೇಕ್ಷಿಸಿದ್ದ. 
 • Suraj Sudheendra,Bengaluru

  6:13 PM , 30/03/2020

  Gurugale ashwamedha yagnakaagi yaava ashwavannu jagatella tirugadusi matte ayodhyege tandaro aa ashwavu raavananidda lanke gu hogirallilave? Illavendare jagatella sutti banditu yendu hege artha maaduvudu? Athawa howdu yendare ravana adannu nillisi dasharatha maharajara mele yudda maadutidda. Dayamaadi tatva tilisabekagi vinanti.

  Vishnudasa Nagendracharya

  ಲಂಕೆಯನ್ನು ಹೊರತು ಪಡಿಸಿ ಉಳಿದ ಕಡೆಯಲ್ಲಿ ಅಶ್ವದ ಸಂಚಾರ. 
  
  ನಾರದರ ಮಾತಿನಂತೆ ರಾವಣ ಮನುಷ್ಯ ರಾಜರ ಮೇಲೆ ಆಕ್ರಮಣ ಮಾಡುತ್ತಿರಲಿಲ್ಲ. ಈ ರಾಜರು ರಾವಣನ ಬಳಿಗೆ ಹೋಗುತ್ತಿರಲಿಲ್ಲ. 
  
  VNU895 (ಯಜ್ಞ ದಾನಗಳ ವೈಭವ) ಉಪನ್ಯಾಸದ ಕಾಮೆಂಟಿನಲ್ಲಿ ಸಂದೀಪ್ ಕಟ್ಟಿಯವರ ಪ್ರಶ್ನೆಗೆ ಉತ್ತರದಲ್ಲಿ ಮತ್ತಷ್ಟು ಮಾಹಿತಿ ಇದೆ. ನೋಡಿ. 
 • Madhu Simha,Bangalore

  10:05 PM, 28/03/2020

  ನಮಸ್ಕಾರ ಆಚಾರ್ಯರೆ, ದಶರಥ ಮಹಾರಾಜನು ದುರುಳನಾದ ರಾವಣನಿಂದ ಅಯೋಧ್ಯೆ ಯನ್ನು ಹೇಗೆ ಕಾಪಡಿದ್ದನು? ಇಲ್ಲ ರಾವಣನಿಂದಲೂ ಅಯೋಧ್ಯೆ ಅಭೇದ್ಯವಾಗಿತ್ತೇ?

  Vishnudasa Nagendracharya

  ರಾವಣ ಆರಂಭದಲ್ಲಿ ಒಮ್ಮೆ ಅಯೋಧ್ಯೆಯ ಮೇಲೆ ಆಕ್ರಮಣ ಮಾಡಿರುತ್ತಾನೆ. ಆಗ ಅನರಣ್ಯಮಹಾರಾಜರು ಆಳುತ್ತಿರುತ್ತಾರೆ. ಮಹಾಪರಾಕ್ರಮದಿಂದ ಅವರು ಯುದ್ಧ ಮಾಡುತ್ತಾರೆ. ಆದರೆ ಬ್ರಹ್ಮದೇವರ ವರಬಲವಿದ್ದ ಕಾರಣಕ್ಕೆ ರಾವಣ ಅನರಣ್ಯ ಮಹಾರಾಜರನ್ನು ಕೊಲ್ಲುತ್ತಾನೆ. ಸಾಯುವ ಸಂದರ್ಭದಲ್ಲಿ ಅನರಣ್ಯ ಮಹಾರಾಜರು ನನ್ನ ವಂಶದಲ್ಲಿ ಶ್ರೀಹರಿ ಹುಟ್ಟಿ ಬಂದು ನಿನ್ನನ್ನು ಕೊಲ್ಲುತ್ತೇನೆ ಎಂದು ಶಪಿಸಿ ಪ್ರಾಣ ಬಿಡುತ್ತಾರೆ. 
  
  ಹಾಗೆಯೇ ಕುರುವಂಶದ ದುಃಷಂತ ಮಹಾರಾಜರ ಮೇಲೂ ರಾವಣ ಆಕ್ರಮಣ ಮಾಡಿ ಸೋಲಿಸಿರುತ್ತಾನೆ. ಈ ಎಲ್ಲ ಘಟನೆಗಳು ನಡೆದ ಬಳಿಕ ನಾರದರು ರಾವಣನ ಬಳಿಗೆ ಬಂದು ನಿನಗೆ ಮನುಷ್ಯರಿಂದ ಭಯವೇ ಇಲ್ಲ, ಯಾಕಾಗಿ ಅವರನ್ನು ಹಿಂಸಿಸುತ್ತಿ ಎಂದು ತಿಳಿಸಿ ರಾವಣನ ಆಕ್ರಮಣವನ್ನು ನಿಲ್ಲಿಸಿರುತ್ತಾರೆ. 
  
  ಮನುಷ್ಯರಿಂದ ನನಗೆ ಯಾವ ಭಯವೂ ಇಲ್ಲ ಎಂದು ಬಗೆದಿದ್ದ ರಾವಣ ಮುಂದಿನ ರಾಜರ ಮೇಲೆ ಆಕ್ರಮಣವನ್ನು ಮಾಡಿರುವದಿಲ್ಲ.
  
  ಆದರೆ ಮನುಷ್ಯರಾಜರಿಗೆ ರಾವಣನ ಭಯವಿದ್ದೇ ಇರುತ್ತದೆ. ದಶರಥ ಮಹಾರಾಜರಿಗೂ ಆ ಭಯವಿತ್ತು. ಮುಂದೆ ವಿಶ್ವಾಮಿತ್ರರ ಮುಂದೆ ಸ್ವಯಂ ದಶರಥ ಮಹಾರಾಜರು ಈ ಮಾತನ್ನು ಹೇಳಿಕೊಳ್ಳುತ್ತಾರೆ. 
  
  ಹೀಗೆ ರಾವಣ ತಾನಾಗಿ ಆಕ್ರಮಣ ಮಾಡುವದನ್ನು ನಿಲ್ಲಿಸಿದ್ದ ಕಾರಣಕ್ಕೆ ಮನುಷ್ಯರಾಜರು ಮತ್ತು ಅವರ ರಾಜ್ಯಗಳು ಉಳಿದಿದ್ದವು. 
 • Sandeep katti,Yalahanka, bengalooru

  12:56 PM, 29/03/2020

  Namaste Poojya gurugalee...
  Taavu Dasharath mahaarajaru Santaanakkagi Ashwamedha yagna sankalpisidaru endu helidiri.. aadare Putrakaamesthi yaaga maadidaru endu kelavaru heluthaare... Dayavittu tilisikodi

  Vishnudasa Nagendracharya

  ದಶರಥ ಮಹಾರಾಜರು ಸಂಕಲ್ಪಿಸುವದು ಅಶ್ವಮೇಧ ಯಜ್ಞ್ವವನ್ನೇ. ವಸಿಷ್ಠಾದಿಗಳು ಅನುಮೋದಿಸಿದ ಬಳಿಕ ಮಹಾರಾಜರು ನಿರ್ಣಯಿಸುತ್ತಾರೆ. ಆ ನಂತರ ಸುಮಂತ್ರರು ಬಂದು ಋಷ್ಯಶೃಂಗರ ವೃತ್ತಾಂತವನ್ನು ತಿಳಿಸುತ್ತಾರೆ. ಋಷ್ಯಶೃಂಗರನ್ನು ಬಂದು ಅಶ್ವಮೇಧ ಮಾಡಿಸಿದ ನಂತರ ದಶರಥರಿಂದ ಪುತ್ರಕಾಮೇಷ್ಟಿಯನ್ನೂ ಮಾಡಿಸುತ್ತಾರೆ. ಪುತ್ರಕಾಮೇಷ್ಟಿಯಲ್ಲಿಯೇ ಪಾಯಸದ ಪ್ರಸಾದ ದೊರೆಯುವದು. 
  
  ಪುತ್ರಕಾಮೇಷ್ಟಿ ಎನ್ನುವದು ಯಜ್ಞವಲ್ಲ. ಸುಮಾರು ಅರ್ಧಗಂಟೆಯಲ್ಲಿ ಮುಗಿಯುವ ಒಂದು ಪುಟ್ಟ ಕಾರ್ಯ. ಅಶ್ವಮೇಧ ಒಂದು ವರ್ಷದ ಅವಧಿಯಲ್ಲಿ ನಡೆಯುವ ಕಾರ್ಯ. ದಿಗ್ವಿಜಯವನ್ನು ಮಾಡದೇ ಅಶ್ವಮೇಧ ಮಾಡುವಂತಿಲ್ಲ. 
  
  
 • DESHPANDE P N,BANGALORE

  1:48 PM , 27/03/2020

  S.Namaskargalu. there was delay in listing fantastic to listen. Anugrahvirali
 • Jayashree Karunakar,Bangalore

  11:19 AM, 20/03/2020

  ಗುರುಗಳೆ 
  
  ಅಯೋಧ್ಯೆಯಲ್ಲಿ ಅಷ್ಟು ಸೈನಿಕರಿದ್ದರು, ಯುದ್ಧೋಪಕರಣಗಳು ಇತ್ತು, ಭದ್ರವಾದ ರಕ್ಷಣೆ ಇತ್ತು, ಅಂತೆಲ್ಲ ಹೇಳಿದ್ದೀರಿ....
  
  ರಾಮ ರಾಜ್ಯದಲ್ಲಿ ಯಾರಿಗೂ ಯಾವುದರ ಭಯವೂ ಇರಲಿಲ್ಲ...ಯಾವ ಅತೃಪ್ತಿಯೂ ಇರಲಿಲ್ಲ...ದಂಡೆತ್ತಿ ಬರುವ ಶತ್ರುಗಳೇ ಇರಲಿಲ್ಲ, ಹಾಗಾಗಿ ಅವರ ಭಯವೂ ಇಲ್ಲ....ವೈಮನಸ್ಸು ಇರಲಿಲ್ಲ...ಅಂತೆಲ್ಲ ಇತಿಹಾಸದಲ್ಲಿ ಕೇಳುತ್ತೇವೆ...
  
  ಹಾಗಾದರೆ ಯಾಕಾಗಿ ಇಂತಹ ಭದ್ರವಾದ ರಕ್ಷಣೆಗಳು ?
  
  
  ರಕ್ಷಣಾ ಸಾಮಗ್ರಿಗಳನ್ನು ಹೊಂದದೇ ಇರುವದು ಆ ರಾಜ್ಯದ ಹೆಮ್ಮೆಯ ವಿಷಯವಾಗುತ್ತಿತ್ತಲ್ಲವೇ...?

  Vishnudasa Nagendracharya

  ಮೊದಲ ಉತ್ತರ — ಲವಕುಶರು ಆರಂಭದಲ್ಲಿ ವರ್ಣನೆ ಮಾಡಿದ್ದು ದಶರಥಮಹಾರಾಜರ ಕಾಲದ ಅಯೋಧ್ಯೆಯನ್ನು. ರಾಮದೇವರ ಕಾಲದ ಅಯೋಧ್ಯೆಯ ವರ್ಣನೆಯನ್ನು ಮುಂದೆ ಉತ್ತರಕಾಂಡದಲ್ಲಿ ಮಾಡುತ್ತಾರೆ. 
  
  ಎರಡನೆಯ ಉತ್ತರ — ಕಳ್ಳರಿಲ್ಲ ಎಂದ ಮಾತ್ರಕ್ಕೆ ಭದ್ರ ಮಾಡಬಾರದು ಎಂದಿಲ್ಲ. ಶತ್ರುಗಳಿಲ್ಲ ಎಂದ ಮಾತ್ರಕ್ಕೆ ಕ್ಷತ್ರಿಯರು ಯುದ್ಧಾಭ್ಯಾಸ ಮಾಡಬಾರದು, ರಕ್ಷಣೆಯ ವ್ಯವಸ್ಥೆ ಮಾಡಿರಬಾರದು ಎಂದಿಲ್ಲ. 
  
  ಕ್ಷತ್ರಿಯರು ಸದಾಕಾಲದಲ್ಲಿಯೂ ಶಸ್ತ್ರಧಾರಿಗಳಾಗಿರಬೇಕು, ನಿರಂತರವಾಗಿ ಯುದ್ಧದ ಅಭ್ಯಾಸ (ಅದಕ್ಕಾಗಿಯೇ ಬೇಟೆಯ ಪದ್ಧತಿ ಇರುವದು) ಮಾಡುತ್ತಲೇ ಇರಬೇಕು ಮತ್ತು ಸೈನಿಕರನ್ನು ಸದಾ ಹುರಿಗಟ್ಟಿಸಿಯೇ ಇರಬೇಕು. ಸೈನಿಕರು ಸಿದ್ಧರಾಗಿಲ್ಲ ಎಂದಾದರೆ ಸಾಮಾನ್ಯ ಶತ್ರುವಿನ ಮುಂದೆಯೂ ಸೋತುಬಿಡಬೇಕಾಗುತ್ತದೆ. 
  
  ಮೂರನೆಯ ಉತ್ತರ — ರಾಮರಾಜ್ಯದ ಕಡೆಯ ಭಾಗದಲ್ಲಿ ದೇವರ ಇಚ್ಚೆಯಂತೆ ಶತ್ರುಗಳು ಇದ್ದೇ ಇರುತ್ತಾರೆ. ರಾಮದೇವರು ತಮ್ಮ ತಮ್ಮಂದಿರಿಂದ ಆ ಶತ್ರುಗಳ ನಿಗ್ರಹವನ್ನು ಮಾಡಿಸುತ್ತಾರೆ. 
  
  ನಾಲ್ಕನೆಯ ಉತ್ತರ — ದೇವರು ಮನುಷ್ಯರಿಗೆ ಶಿಕ್ಷಣ ಕೊಡಲು ಅವತರಿಸಿ ಬಂದಿದ್ದಾನೆ. ದೇವರಿಗೆ ಯಾರ ಭಯವೂ ಇಲ್ಲ ನಿಜ. ಆದರೆ, ಉಳಿದ ರಾಜರಿಗೆ ಶತ್ರುಗಳ ಭೀತಿ ಇದ್ದೇ ಇರುತ್ತದೆ. ಅದರಿಂದ ಸದಾ ಸನ್ನದ್ಧರಾಗಿಯೇ ಇರಬೇಕು ಎಂದು ಭಗವಂತ ಸೂಚಿಸುತ್ತಿದ್ದಾನೆ. 
  
  
 • Santosh Patil,Gulbarga

  11:50 PM, 19/03/2020

  Tnx Gurugale
 • Prabhanjan Joshi,Ankola

  9:26 PM , 19/03/2020

  ಗುರುಗಳಿಗೆ ನಮಸ್ಕಾರಗಳು.🙏🏻 
  ಗುರುಗಳೇ ಅದೆಷ್ಟು ಚೆನ್ನಾಗಿ ವರ್ಣಿಸಿದ್ದಿರಿ ಅಯೋಧ್ಯೆಯನ್ನು ಆಹಾ... ಇವತ್ತಿನ ಜನ ಹೇಳಿಕೊಳ್ಳುವುದನ್ನು ನೋಡಿದರೆ ನಗು ಬರುತ್ತದೆ. ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಆ ಅಯೋಧ್ಯೆಯನ್ನು... ಅಷ್ಟು ಅಧ್ಬುತ. ನಿಮಗೆ ನನ್ನ ಶಿರ ಸಾಷ್ಟಾಂಗ ಅನಂತಾನಂತ ನಮಸ್ಕಾಗಳು.