Upanyasa - VNU889

ಋಷ್ಯಶೃಂಗರ ಜನ್ಮ

ಸಾಧನೆ ಮಾಡುವ ಸಂದರ್ಭದಲ್ಲಿ ಯಾವ ರೀತಿಯ ಭ್ರಾಂತಿಗೂ ಒಳಗಾಗಬಾರದು, ನಮಗೆ ವಿಹಿತವಲ್ಲದ ಮಾರ್ಗದಲ್ಲಿ ನಡೆಯಬಾರದು ಎಂಬ ಬಹಳ ದೊಡ್ಡ ಪಾಠವನ್ನು ಕಲಿಸುವ ಕಥೆ ಋಷ್ಯಶೃಂಗರ ಕಥೆ. 

ಮಹಾಭಾರತದ ವನಪರ್ವದಲ್ಲಿ, ವಾಲ್ಮೀಕಿರಾಮಾಯಣದ ಬಾಲಕಾಂಡದಲ್ಲಿ ಮತ್ತು ಸಂಗ್ರಹರಾಮಾಣಯದಲ್ಲಿ ನಿರೂಪಿತವಾದ ಕಥೆಯ ನಿರೂಪಣೆ ಇಲ್ಲಿದೆ, ಮಧ್ಯದಲ್ಲಿ ಮೂಡಿಬರುವ ಪ್ರಶ್ನೆಗಳಿಗೆ ಉತ್ತರ ನೀಡುವದರಿಂದಿಗೆ.

ಋಷಿಗಳು ವಿಚಿತ್ರವಾದ ರೀತಿಯಲ್ಲಿ ಮಕ್ಕಳನ್ನು ಪಡೆಯುವದನ್ನು ನಾವು ಪುರಾಣಗಳಲ್ಲಿ ತಿಳಿಯುತ್ತೇವೆ. ಋಷಿಗಳು ಕಾಮಾಂಧರಲ್ಲ ಎನ್ನುವ ತತ್ವದ ನಿರೂಪಣೆಯೊಂದಿಗೆ ಅವರ ಅಪಾರ ಇಂದ್ರಿಯನಿಗ್ರಹದ ಕುರಿತ ಚಿಂತನೆ ಇಲ್ಲಿದೆ. 

ಅಪ್ಸರೆಯೊಬ್ಬಳು ಬ್ರಹ್ಮದೇವರ ಶಾಪದಿಂದ ಜಿಂಕೆಯಾಗಿರುತ್ತಾಳೆ. ಜಿಂಕೆಯಾಗಿ ಋಷಿಯೊಬ್ಬನನ್ನು ಹಡೆದರೆ ಶಾಪವಿಮೋಚನೆಯಾಗುತ್ತದೆ ಎಂದು ಅನುಗ್ರಹಿಸಿರುತ್ತಾರೆ. ಅಮೋಘವೀರ್ಯರಾದ ವಿಭಾಂಢಕರಿಗೆ ಊರ್ವಶಿಯನ್ನು ಕಂಡು ರೇತಃಸ್ಖಲನವಾದಾಗ ಆ ವೀರ್ಯವನ್ನು ಕುಡಿದ ಜಿಂಕೆ ಋಷ್ಯಶೃಂಗರನ್ನು ಹಡೆದ ಘಟನೆಯ ವಿವರ ಇಲ್ಲಿದೆ. 

ಅಂಗದೇಶದ ರಾಜ ರೋಮಪಾದ. ಮಹಾಧಾರ್ಮಿಕ. ಆದರೂ ಅವನಿಂದ ಒಮ್ಮೆ ಮಹತ್ತರ ಅಪಚಾರವಾಗುತ್ತದೆ. ಅದನ್ನು ನೀಡುತ್ತೇನೆ, ಇದನ್ನು ನೀಡುತ್ತೇನೆ ಎಂದು ಶ್ರೇಷ್ಠ ಬ್ರಾಹ್ಮಣರಿಗೆ ಹೇಳಿ ಅವರಿಂದ ಯಜ್ಞ ಮಾಡಿಸುತ್ತಾನೆ, ಯಜ್ಞ ಮುಗಿದ ನಂತರ ಅವರಿಗೆ ಅದನ್ನು ನೀಡದೆ ಕಳುಹಿಸಿಬಿಡುತ್ತಾನೆ, ಈ ಅಪಚಾರದಿಂದ ಅವನ ರಾಜ್ಯದಲ್ಲಿ ಮಳೆಯಾಗದೇ ಕ್ಷಾಮ ಆವರಿಸಿಬಿಡುತ್ತದೆ. ಪ್ರಾಸಂಗಿಕವಾಗಿ “ಅಸಂತುಷ್ಟೋ ದ್ವಿಜೋ ನಷ್ಟಃ” ಎಂಬ ವಾಕ್ಯದ ವಿವರಣೆ ಇಲ್ಲಿದೆ. 

Play Time: 31:38

Size: 1.37 MB


Download Upanyasa Share to facebook View Comments
4164 Views

Comments

(You can only view comments here. If you want to write a comment please download the app.)
 • Mukund Rao,Tumakuru

  8:43 PM , 23/05/2020

  ಋಷ್ಯಶೃಂಗ ರ ಕಥೆ ಕೇಳಲು ಪ್ರಾರಂಭ ಮಾಡಿ ದೆ.. ಮಳೆ... ತುಂತುರು ಮಳೆ.. ತುಮಕೂರಿನ ಲ್ಲಿ...🙏🙏🙏🙏 8:30pm 23.05.20
 • prema raghavendra,coimbatore

  1:11 PM , 07/05/2020

  Anantha namaskara! Danyavada!
 • DESHPANDE P N,BANGALORE

  2:00 PM , 30/03/2020

  S.Namaskargalu. Ramayanada kathea attyanta roachakawaadaddu ella patragala addhyyana maadi tilidukollabeaku
 • Santosh Patil,Gulbarga

  10:49 AM, 24/03/2020

  Thanks Gurugale 🙏🙏🙏
 • Vishwnath MJoshi,Bengaluru

  5:43 AM , 24/03/2020

  ಗುರುಗಳಿಗೆ ನಮಸ್ಕಾರ ಅದು ಕೊಪ್ಪ ಅಲ್ಲ ಆಊರಿನ ಹೆಸರು ಕಿಗ್ಗಾ ಅಂಥ, tupping mistake ಆಗಿದೆ
 • Vishwnath MJoshi,Bengaluru

  5:39 AM , 24/03/2020

  श्रीगुरुभ्यो नमः। अथ गुरुपादौ नमस्करोमि
  ಶೃಂಗೇರಿ ಹತ್ತಿರ ಕೊಪ್ಪ ಅನ್ನುವ ಒಂದು ಸಣ್ಣ ಊರು ಅಲ್ಲಿ ಋಷ್ಯ ಶೃಂಗರ ಆಶ್ರಮ ವಿದೆ.ಮತ್ತು ಅವರು ಬಂದು ಅಲ್ಲಿ ಒಂದು ಪರಮ ಪವಿತ್ರವಾದ. ಬೆಟ್ಟದಲ್ಲಿ ತಪಸ್ಸು ಮಾಡಿದ್ದಾರೆ. ಅದೆ ನರಸಿಂಹ ಪರ್ವತ ನರಸಿಂಹ ದೇವರ ಒಂದು ಕಲ್ಲಿ ನಲ್ಲಿ ಮೂರ್ತಿ ಇದೆ. ನಾನು ಕಳೆದ ವರ್ಷ ನರಸಿಂಹ ಪರ್ವತಕ್ಕೆ ಹೋದಾಗ ,ಅಲ್ಲಿ ಕೊಪ್ಪದಲ್ಲಿ ಒಂದು ರಾತ್ರೀ ಬ್ರಾಹ್ಮಣರ ಮನೆಯಲ್ಲಿ ಇದ್ದೆ ಅವರು ಇದೇ ಕಥೆ ಹೇಳಿದರು.ಅಲ್ಲೇ ,ಕಿಗ್ಗಾದಲ್ಲೇ ಅವರ ದೇವಸ್ಥಾನ ವಿದೆ.
 • Vishwnath MJoshi,Bengaluru

  5:39 AM , 24/03/2020

  श्रीगुरुभ्यो नमः। अथ गुरुपादौ नमस्करोमि
  ಶೃಂಗೇರಿ ಹತ್ತಿರ ಕೊಪ್ಪ ಅನ್ನುವ ಒಂದು ಸಣ್ಣ ಊರು ಅಲ್ಲಿ ಋಷ್ಯ ಶೃಂಗರ ಆಶ್ರಮ ವಿದೆ.ಮತ್ತು ಅವರು ಬಂದು ಅಲ್ಲಿ ಒಂದು ಪರಮ ಪವಿತ್ರವಾದ. ಬೆಟ್ಟದಲ್ಲಿ ತಪಸ್ಸು ಮಾಡಿದ್ದಾರೆ. ಅದೆ ನರಸಿಂಹ ಪರ್ವತ ನರಸಿಂಹ ದೇವರ ಒಂದು ಕಲ್ಲಿ ನಲ್ಲಿ ಮೂರ್ತಿ ಇದೆ. ನಾನು ಕಳೆದ ವರ್ಷ ನರಸಿಂಹ ಪರ್ವತಕ್ಕೆ ಹೋದಾಗ ,ಅಲ್ಲಿ ಕೊಪ್ಪದಲ್ಲಿ ಒಂದು ರಾತ್ರೀ ಬ್ರಾಹ್ಮಣರ ಮನೆಯಲ್ಲಿ ಇದ್ದೆ ಅವರು ಇದೇ ಕಥೆ ಹೇಳಿದರು.ಅಲ್ಲೇ ,ಕಿಗ್ಗಾದಲ್ಲೇ ಅವರ ದೇವಸ್ಥಾನ ವಿದೆ.