Upanyasa - VNU890

ವೇಶ್ಯೆಯರ ಸಾಹಸ

ಋಷ್ಯಶೃಂಗರು ಹುಟ್ಟಿನಿಂದ ಹೆಣ್ಣನ್ನೇ ಕಂಡಿಲ್ಲ, ಹೀಗಾಗಿ ಹೆಣ್ಣಿನ ಪ್ರಲೋಭನೆಯನ್ನೊಡ್ಡಿ ಅವರನ್ನು ನಮ್ಮ ರಾಜ್ಯಕ್ಕೆ ಕರೆತರಬಹುದು ಎಂದು ಆಲೋಚಿಸಿದ ರೋಮಪಾದ ನಗರದ ವೇಶ್ಯೆಯರಿಗೆ ಈ ಕಾರ್ಯ ಮಾಡಲು ತಿಳಿಸುತ್ತಾನೆ. ಆದರೆ ಶಾಪದ ಭಯದಿಂದ ಅವರ್ಯಾರೂ ಸಿದ್ಧರಾಗದೇ ಇದ್ದಾಗ ಮುದಿ ವೇಶ್ಯೆಯೊಬ್ಬಳು ಬಂದು ತಾನು ಕೇಳುವ ಪದಾರ್ಥಗಳನ್ನು ನೀಡಿದರೆ ನಾನು ಪ್ರಯತ್ನಿಸುತ್ತೇನೆ ಎನ್ನುತ್ತಾಳೆ. 

ಅವಳು ಕೇಳಿದ ಎಲ್ಲ ವ್ಯವಸ್ಥೆಯೂ ಆಗುತ್ತದೆ. ತನ್ನ ಮಗಳನ್ನೇ ಸಿದ್ಧಗೊಳಿಸಿ ಆ ಮುದುಕಿ ಋಷ್ಯಶೃಂಗರನ್ನು ಕರೆತರುವ ಸಾಹಸಕ್ಕೆ ಕೈ ಹಾಕುತ್ತಾಳೆ. ಆ ವೇಶ್ಯೆಯರು ಮಾಡಿದ ಸಾಹಸ, ಋಷ್ಯಶೃಂಗರ ಮುಗ್ಧತೆಯ ಚಿತ್ರಣ ಇಲ್ಲಿದೆ. 

ಒಟ್ಟಾರೆ ಈ ಪ್ರಸಂಗದಿಂದ ನಾವು ಕಲಿಯಬೇಕಾದ ಪಾಠಗಳ ಚಿಂತನೆ ಇಲ್ಲಿದೆ. ಬ್ರಹ್ಮಚರ್ಯ, ಸಮಾಜರಕ್ಷಣೆ ಮುಂತಾದ ವಿಷಯಗಳಲ್ಲಿ ಹುಚ್ಚುಚ್ಚು ಆಲೋಚನೆಗಳು ಸಲ್ಲದು ಎಂಬ ತತ್ವದ ನಿರೂಪಣೆಯೊಂದಿಗೆ. Play Time: 56:04

Size: 1.37 MB


Download Upanyasa Share to facebook View Comments
4594 Views

Comments

(You can only view comments here. If you want to write a comment please download the app.)
 • Divya Pai,Udupi

  2:37 PM , 30/04/2022

  One doubt-
  1.Avagina kaaladalli Rashigallu iddaru, ivagina kaaladalli kuda iddara? 
  2.Aavagina Rashigallu andare ivagina Swamigalla? 
  For example ivaga namma udupiyalli swanigallu iddare, Rashigallu Swamigalla tarane jeevana nadesutiddara? 
  3. Stree kuda Rashi aagabahuditta? 
  Nanna prashnege dayavittu uttarisi

  Vishnudasa Nagendracharya

  1. ಋಷಿಗಳು ಈಗಲೂ ಇದ್ದಾರೆ. ಆದರೆ ಮಹಾಬದರಿಕಾಶ್ರಮ ಮುಂತಾದ ಮನುಷ್ಯರಿಗೆ ಅಗಮ್ಯ ಪ್ರದೇಶಗಳಲ್ಲಿ ಮಾತ್ರ. ಇನ್ನು ಮಲಯ ಪರ್ವತ ಮುಂತಾದ ಕಡೆಯಲ್ಲಿ ಶ್ರೀ ಅಗಸ್ತ್ಯಮುನಿಗಳೇ ಮುಂತಾದವರಿದ್ದರೂ ನಮ್ಮ ಕಣ್ಣಿಗೆ ಕಾಣುವದಿಲ್ಲ. ಇನ್ನು ಕಲಿಮಲ ಕಲುಷಿತವಾದ ಪಟ್ಟಣ ಮುಂತಾದವುಗಳಲ್ಲಿ, ನಾವು ಮನುಷ್ಯರಿರುವಂತೆ ಸರ್ವಥಾ ಇಲ್ಲ.
  
  2. ಋಷಿಗಳಲ್ಲಿ ಗೃಹಸ್ಥರೂ ಇದ್ದಾರೆ, ಸಂನ್ಯಾಸಿಗಳೂ ಇದ್ದರಾ. ಋಷಿಗಳಲ್ಲೇ ಸರ್ವಶ್ರೇಷ್ಠ ಋಷಿಗಳಾದ ಶ್ರೀ ನಾರದಮಹರ್ಷಿಗಳು ಸಂನ್ಯಾಸಿಗಳು. ಅವರ ನಂತರದ ಸ್ಥಾನದಲ್ಲಿರುವ ಭೃಗು ಮಹರ್ಷಿಗಳು, ಆ ನಂತರದ ಶ್ರೀ ವಸಿಷ್ಠರೇ ಮುಂತಾದವರು ಗೃಹಸ್ಥರು. 
  
  3. ಋಷಿಯ ಪತ್ನಿಯರೂ ಋಷಿ ಎಂದು ಕರೆಸಿಕೊಳ್ಳುತ್ತಾರೆ. ವೇದ ದ್ರಷ್ಟಾರರಾದ ಋಷಿಪತ್ನಿಯರೂ ಇದ್ದಾರೆ. ಋಷಿಗಳ ಸ್ತ್ರೀಸಂತಾನ ಋಷಿಕುಮಾರಿಯರು ಎಂದೇ ಕರೆಸಿಕೊಳ್ಳುತ್ತಾರೆ. ಯ
  
  
 • Divya Pai,Udupi

  2:17 PM , 30/04/2022

  Nivu idannu tumba chennagi explain madiddiri. Namge Rashyshrangara mele gaurava innu hechagide. Nimge vandane
 • Divya Pai,Udupi

  2:17 PM , 30/04/2022

  Nivu idannu tumba chennagi explain madiddiri. Namge Rashyshrangara mele gaurava innu hechagide. Nimge vandane
 • Jyothi Gayathri,Harihar

  8:04 AM , 17/04/2022

  🙏🙏🙏🙏🙏
 • Abburu Rajeeva,Channapattana

  9:13 PM , 15/05/2020

  🙏🙏🙏
 • prema raghavendra,coimbatore

  12:44 PM, 12/05/2020

  Anantha namaskara! Danyavada!
 • Abhi deshmuk,Banglore

  12:28 PM, 08/05/2020

  ಆಚಾರ್ಯರಿಗೆ ಹೃದಯ ಪೂರ್ವಕ ಧನ್ಯವಾದಗಳು. ನಮಗೆ ಒಂದು ಪ್ರಶ್ನೆ : 
   . ವೈಶ್ಯರು ಅಂದ್ರೆ ಯಾರು ? ಅವರ ಕಾರ್ಯ ಏನು ಸಮಾಜಕ್ಕೆ ? 
  ಸಂಕ್ಷಿಪ್ತವಾಗಿ ತಿಳಿಸಿ 🙏

  Vishnudasa Nagendracharya

  ವೈಶ್ಯರು ಬೇರೆ ವೇಶ್ಯೆಯರು ಬೇರೆ. 
  
  “ವೇಶ್ಯೆಯರ ಸಾಹಸ” ಎಂಬ ಉಪನ್ಯಾಸದಲ್ಲಿ ನೀವು ಈ ಪ್ರಶ್ನೆ ಕೇಳಿರುವದರಿಂದ ನೀವು ವೇಶ್ಯೆಯರ ಬಗ್ಗೆ ಕೇಳುತ್ತಿದ್ದೀರಿ ಎಂದು ತಿಳಿದಿದ್ದೇನೆ. 
  
  ವೈಶ್ಯರು ಎಂದರೆ ವರ್ತಕರು. ಜಗತ್ತಿನಲ್ಲಿ ಸಂಪತ್ತಿನ ಅಭಿವೃದ್ಧಿಯನ್ನು ಮಾಡುವ ಜನರು. 
  
  ವೇಶ್ಯೆಯರು ಎಂದರೆ ಮದುವೆಯಾಗದೇ ಬೇರೆ ಪುರುಷರಿಗೆ ಲೈಂಗಿಕ ಸುಖವನ್ನು ನೀಡುವ ಸ್ತ್ರೀಯರು. ಆ ಸುಖಕ್ಕೆ ಪ್ರತಿಯಾಗಿ ಹಣವನ್ನು ಪಡೆಯುವವರು. ಅದೇ ಅವರ ವೃತ್ತಿ. 
  
  ನಮ್ಮ ಪ್ರಾಚೀನ ಭಾರತದದಲ್ಲಿ ವೇಶ್ಯೆಯರಿಗೂ ಸಹ ಗೌರವದಿಂದ ಬದುಕುವ ಅವಕಾಶವಿತ್ತು. ವೇಶ್ಯೆಯರಾಗಿಯೂ ಸಾಧನೆ ಮಾಡಿಕೊಂಡು ದೇವರ ಸಾಕ್ಷಾತ್ಕಾರ ಪಡೆದ ಮಹಾನುಭಾವರಿದ್ದಾರೆ. ಉದಾಹರಣೆಗೆ ಶ್ರೀಕೃಷ್ಣನ ಅನುಗ್ರಹವನ್ನು ಪಡೆದ ಕುಬ್ಜೆ. ಆ ಕುಬ್ಜೆ ಹಿಂದಿನ ಜನ್ಮದಲ್ಲಿ ಪಿಂಗಳಾ ಎನ್ನುವ ಹೆಸರಿನ ವೇಶ್ಯೆ. ಭಗವಂತನ ಅನನ್ಯ ಭಕ್ತಳು. ಆ ಭಕ್ತಿಯಿಂದ ಶ್ರೀಕೃಷ್ಣ ಅವತಾರ ಮಾಡಿದ ಕಾಲಕ್ಕೆ ಕುಬ್ಜೆಯಾಗಿ ಹುಟ್ಟುತ್ತಾಳೆ. ಕುಬ್ಜೆಯ ಜನ್ಮದಲ್ಲಿ ಅವಳು ವೇಶ್ಯೆಯಲ್ಲ. ಭಕ್ತಿಯ ಫಲವಾಗಿ ಪರಮಾತ್ಮನನ್ನೇ ಪತಿಯನ್ನಾಗಿ ಪಡೆಯುತ್ತಾಳೆ. ಅವಳಲ್ಲಿ ಹುಟ್ಟುವ ಮಗ ವಿಶೋಕರೂ ಸಹ ಶ್ರೇಷ್ಠ ಭಗವದ್ಭಕ್ತರು. ಭೀಮಸೇನದೇವರ ರಥದ ಸಾರಥಿ. 
  
  ಅನೇಕ ಪುರುಷರ ಜೊತೆಯಲ್ಲಿ ಮಲಗುವದು ವೇಶ್ಯೆಯರ ವೃತ್ತಿ. ಅದು ವ್ಯಭಿಚಾರವಲ್ಲ. ಮದುವೆಯಾದ ಒಬ್ಬ ಹೆಣ್ಣು ಮತ್ತೊಬ್ಬ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಪಡೆದರೆ ಅದು ಹಾದರ, ವ್ಯಭಿಚಾರ. ಅದು ಮಹತ್ತರ ಪಾಪ. ಗಂಡಸಿಗೂ ಹಾಗೆಯೇ. ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬ ಸ್ತ್ರೀಯೊಂದಿಗೆ ಲೈಂಗಿಕ ಸಂಪರ್ಕ ಪಡೆದರೆ ಮಹತ್ತರ ಪಾಪ. ಅಂತಹ ಅನೈತಿಕ ಸಂಬಂಧಗಳಿಂದ ಹುಟ್ಟುವ ಮಕ್ಕಳು ಸಮಾಜದಿಂದ ಬಹಿಷ್ಕೃತರಾಗುತ್ತಿದ್ದರು. 
  
  ಸಮಾಜದಲ್ಲಿ ಈ ವ್ಯಭಿಚಾರವನ್ನು ತಪ್ಪಿಸಲಿಕ್ಕಾಗಿ ಇರುವ ವರ್ಗ, ವೇಶ್ಯೆಯರು. ಕಾಮ ಅಧಿಕವಾದ ವ್ಯಕ್ತಿ ವೇಶ್ಯೆಯರ ಸಂಪರ್ಕ ಮಾಡಬಹುದಿತ್ತು. ಆದರೆ, ಅದಕ್ಕೂ ಸಹ ಸಾಕಷ್ಟು ನಿಯಮ ನಿಬಂಧನೆಗಳಿವೆ. ಬ್ರಾಹ್ಮಣನಿಗೆ ವೇಶ್ಯಾಸಂಪರ್ಕ ಸರ್ವಥಾ ನಿಷಿದ್ಧ. ವೇಶ್ಯಾಸಂಪರ್ಕ ಮಾಡಿದರೆ “ಅವಟೋದ” ಎಂಬ ನೀರು ನೆರಳಿಲ್ಲದ ನರಕದಲ್ಲಿ ಬೀಳುತ್ತಾನೆ. ಮುಂದಿನ ಏಳು ಜನ್ಮಗಳಲ್ಲಿ ತೋಳ ಹಂದಿ ಕಾಗೆ ಮುಂತಾದ ದುಷ್ಟಯೋನಿಯಲ್ಲಿ ಹುಟ್ಟಿಬರುತ್ತಾನೆ ಎಂದು ಬ್ರಹ್ಮವೈವರ್ತ ಪುರಾಣ ತಿಳಿಸುತ್ತದೆ. 
  
  यो द्बिजः कुलटाङ्गच्छेत् वृषलीं पुंश्चलीमपि ।
  युङ्गीं वेश्यां महावेश्यां अवटोदं प्रयाति सः ॥
  
  “वेश्यागामी वृकस्तथा। 
  युङ्गीगामी शूकरश्च सप्तजन्मसु भारते ।”
  
  ಉಳಿದ ವರ್ಗದವರಿಗೆ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ವೇಶ್ಯಾಸಂಪರ್ಕ ದೋಷವಲ್ಲ. ಉದಾಹರಣೆಗೆ, ಹಿಂದಿನ ಕಾಲದಲ್ಲಿ ಒಬ್ಬ ರಾಜ ಮತ್ತೊಂದು ಕಡೆಗೆ ಯುದ್ಧಕ್ಕಾಗಿ ಹೋಗುವಾಗ ತನ್ನ ಸೈನಿಕರಿಗಾಗಿ ವೇಶ್ಯೆಯರನ್ನೂ ಕರೆದೊಯ್ಯುತ್ತಿದ್ದ. ಅನೇಕ ತಿಂಗಳುಗಳ ವರೆಗೆ ಸೈನಿಕರು ಲೈಂಗಿಕ ಸುಖ ಪಡೆಯದೇ ಇದ್ದಲ್ಲಿ, ಮಾರ್ಗದಲ್ಲಿನ ಗ್ರಾಮದಲ್ಲಿನ ಹೆಣ್ಣುಮಕ್ಕಳಿಗೆ ಅವರು ತೊಂದರೆ ಮಾಡಬಹುದು ಎಂಬ ಉದ್ದೇಶದಿಂದ. ಹೀಗಾಗಿ ಅಂತಹ ಸೈನಿಕರಿಗೆ ವೇಶ್ಯಾಸಂಪರ್ಕ ದೋಷವಲ್ಲ. 
  
  ಆದರೆ, ಅದೇ ಸೈನಿಕರು ತಮ್ಮ ಊರಿನಲ್ಲಿ ತಮ್ಮ ಪತ್ನಿಯೊಡನೆ ಇದ್ದಾಗಲೂ, ವೇಶ್ಯಾಸಂಪರ್ಕ ಮಾಡಿದಲ್ಲಿ ಅವರಿಗೆ ರಾಜ ದಂಡವನ್ನು ಹಾಕುತ್ತಿದ್ದ. ಶಾಸ್ತ್ರದಲ್ಲಿ ಹೇಳಿದ ಪ್ರಾಯಶ್ಚಿತ್ತವನ್ನು ಮಾಡಿಸುತ್ತಿದ್ದ. 
  
  ಸೈನಿಕವರ್ಗ ಒಂದು ಉದಾಹರಣೆಯಷ್ಟೆ. ಒಟ್ಟಾರೆ ಸಮಾಜದಲ್ಲಿ ವ್ಯಭಿಚಾರವಿಲ್ಲದಂತೆ ನೋಡಿಕೊಳ್ಳಲು ವೇಶ್ಯಾವರ್ಗ ಉಪಯೋಗವಾಗುತ್ತಿತ್ತು. ಅವರೂ ಸಹ ಧಾರ್ಮಿಕರಾಗಿ ಗೌರವದಿಂದಲೇ ಬಾಳುತ್ತಿದ್ದರು. ಕೆರೆ ಕಟ್ಟೆಗಳನ್ನು ಕಟ್ಟಿಸಿ ಸಮಾಜಕ್ಕೆ ಉಪಕಾರ ಮಾಡಿದ ಅನೇಕ ವೇಶ್ಯಾಸ್ತ್ರೀಯರ ಕಥೆಗಳು ಇತಿಹಾಸದಲ್ಲಿ ದೊರೆಯುತ್ತವೆ, ಇಂದಿಗೂ ಜನಜನಿತವಾಗಿವೆ. ಸಾಧನೆ ಮಾಡಿ ಮುಕ್ತಿಯನ್ನು ಪಡೆದ ವೇಶ್ಯೆಯರ ಚರಿತ್ರೆಗಳನ್ನು ಪುರಾಣಗಳಲ್ಲಿ ಕೇಳುತ್ತೇವೆ. 
  
  ಇದೇ ಉಪನ್ಯಾಸದಲ್ಲಿ ಬರುವ ವೇಶ್ಯೆಯರನ್ನು ಗಮನಿಸಿ. ಇಡಿಯ ರಾಜ್ಯ ಮಳೆಯಿಲ್ಲದೆ ಕಂಗೆಟ್ಟಾಗ, ಮಳೆ ತರಿಸುವ ಋಷ್ಯಶೃಂಗರನ್ನು ಬುದ್ಧಿವಂತಿಕೆ ಸಾಹಸಗಳಿಂದ ತಮ್ಮ ರಾಜ್ಯಕ್ಕೆ ಕರೆತಂದವರವರು. 
 • Karthik S. V,Bengaluru

  11:07 PM, 02/05/2020

  ಗುರುಗಳಿಗೆ ನಮಸ್ಕಾರಗಳು......
  
  ನಾವು ಮಹಾಭಾರತದಲ್ಲಿ ಕೇಳಿದ್ದೇವೆ, ದುರ್ಯೋಧನ ಸಾಯುವ ಸಂದರ್ಭದಲ್ಲಿ ಅಶ್ವತ್ಥಾಮರಿಗೆ ನೀನು ಪಾಂಡವರನ್ನು ಸಾಯಿಸಿ, ನನ್ನ ಹೆಂಡತಿಯಿಂದ ಮಕ್ಕಳ್ಳನ್ನು ಪಡೆದು ಅವರಿಂದ ರಾಜ್ಯವನ್ನು ಆಳಿಸಬೇಕು.
   ಇದಕ್ಕೆ ಅಶ್ವತ್ಥಾಮಚಾರ್ಯರು ಮನಸ್ಸಿನಲ್ಲಿ ಯಾವುದೇ ವಿಕಾರಕ್ಕೂ ಒಳಗಾಗದೆಯಿದ್ದರೂ ಕೇವಲ ಗೆಳೆಯನ ಮಾತಿಗೆ ಸಮ್ಮತಿ ಸೂಚಿಸಿದ ಕಾರಣಕ್ಕೆ ಅವರ ಬ್ರಹ್ಮಚರ್ಯವೇ ಭಂಗವಾಗಿ ತಮ್ಮ ಬ್ರಹ್ಮಾಸ್ತ್ರವನ್ನೇ ಹಿಂಪಡೆಯಲು ಅಸಮರ್ಥರಾದರು ಎಂದು ಕೇಳಿದ್ದೀವಿ.
  
  ಹೀಗಿರುವಾಗ ಋಷ್ಯಶೃಂಗರು ವಿಭಾಂಡಕರಿಗೆ ಆ ವೇಶ್ಯಾ ಸ್ತ್ರೀಯರನ್ನು ಕರೆಸೋಣ ಎಂದಾಗ ಅವರ ಬ್ರಹ್ಮಚರ್ಯ ಆಚರಣೆ ಭಂಗವಾಗುವುದಿಲ್ಲವೆ?
  ಇದನ್ನ ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು? ದಯಮಾಡಿ ತಿಳಿಸಿ.....
  
  ಪ್ರಶ್ನೆಯಲ್ಲಿ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ🙏

  Vishnudasa Nagendracharya

  ಮೊದಲಿಗೆ ಋಷ್ಯಶೃಂಗರಿಗೆ ಅವರು ವೇಶ್ಯಾಸ್ತ್ರೀಯರು ಎಂಬ ಜ್ಞಾನವಿಲ್ಲ. 
  ಎರಡನೆಯದು ಅವರನ್ನು ಭೇಟಿಯಾಗಬೇಕೆಂಬ ಅಪೇಕ್ಷೆಯಿದೆಯೇ ಹೊರತು ಮೈಥುನದ ಅಪೇಕ್ಷೆಯಿಲ್ಲ. 
  
  ಅಶ್ವತ್ಥಾಮರ ವಿಷಯ ಭಿನ್ನ. ಅಲ್ಲಿ ಪಾಂಡವರಿಗೆ ರಾಜ್ಯ ಹೋಗಬಾರದು ಎನ್ನುವ ದುರ್ಬುದ್ಧಿ ದುರ್ಯೋಧನನಿಗಿದೆ. ಹೀಗಾಗಿ ನನ್ನ ಹೆಂಡತಿಯಲ್ಲಿ ಮಕ್ಕಳನ್ನು ಪಡೆ ಎಂಬ ಅವನ ಮಾತನ್ನು ಒಪ್ಪಿದ್ದಕ್ಕಾಗಿ ಅಶ್ವತ್ಥಾಮರ ಬ್ರಹ್ಮಚರ್ಯ ನಷ್ಟವಾಯಿತು. 
 • Poornima Venkatesh,Mysore

  10:53 AM, 29/04/2020

  ಈ ಸಂಚಿಕೆಯ ನಿರೂಪಣೆ ಅದ್ಭುತವಾಗಿತ್ತು.  ಧನ್ಯವಾದಗಳು.
 • Vikram Shenoy,Doha

  5:53 PM , 04/04/2020

  ಅತೀ ಉತ್ತಮ 🙏🙏🙏
 • Shilpa,London

  8:25 PM , 28/03/2020

  ಅದ್ಭುತವಾದ ನಿರುಪಣೆ 🙏🙏
  ಆಚಾರ್ಯರೆ, ಒಂದು ಸಣ್ಣ ಪ್ರಶ್ನೆ. ವೇಶ್ಯಯರು ಕರಿದ ಪದಾರ್ಥಗಳನ್ನು ಬ್ರಾಹ್ಮಣನಿಗೆ ನೀಡುವುದು ಶಾಸ್ತ್ರ ವಿಹಿತ ಆಗುವುದಿಲ್ಲ ಅಲ್ಲವೇ? ದಯವಿಟ್ಟು ತಿಳಿಸಿ 🙏🙏

  Vishnudasa Nagendracharya

  ಈ ಪ್ರಶ್ನೆಗೆ ಅನೇಕ ಉತ್ತರಗಳಿವೆ. 
  
  1. ಋಷ್ಯಶೃಂಗರನ್ನು ಕರೆತರುವ ಅನಿವಾರ್ಯವಿತ್ತು, ಹೀಗಾಗಿ ಈ ಕ್ರಮವನ್ನು ವೇಶ್ಯೆಯರು ಅನುಸರಿಸುವದೂ ಅನಿವಾರ್ಯವಿತ್ತು. 
  
  2. ವೇಶ್ಯೆಯರು ಅಸ್ಪೃಶ್ಯರಲ್ಲ. ಅವರೂ ಸಹ ಸಮಾಜದ ಒಂದು ಅಂಗ. ಬ್ರಾಹ್ಮಣನಿಗೆ ವಿಶೇಷ ನಿಯಮಗಳಿರುವದು ಸತ್ಯ. ಆದರೆ ವೇಶ್ಯೆಯರು ಮಾಡಿದ ಪದಾರ್ಥಗಳನ್ನು ಉಳಿದವರು ತಿನ್ನಬಾರದು ಎಂದಿರಲಿಲ್ಲ. ಹಿಂದಿನ ಕಾಲದಲ್ಲಿ ವೇಶ್ಯೆಯರ ಮನೆಯಲ್ಲಿಯೇ ಜನರು ಅನೇಕ ವರ್ಷ ಉಳಿದುಕೊಳ್ಳುತ್ತಿದ್ದರು. ಹೀಗಾಗಿ ಅವರ ಕೈಯಲ್ಲಿ ಭೋಜನ ಮಾಡಬಾರದು ಎಂಬ ನಿಯಮವಿಲ್ಲ. 
  
  ವೇಶ್ಯಾವೃತ್ತಿ ಎನ್ನುವದು “ವೇಶ್ಯೆಯಾಗಬೇಕು ಎಂದು ಬಯಸುವ” ನಿರ್ದಿಷ್ಟ ಗುಂಪಿನ ಸ್ತ್ರೀಯರಿಗೆ ಧರ್ಮವೇ ಆಗಿದೆ. ಮನುಷ್ಯರು ಅನುಸರಿಸಬೇಕಾದ ವೃತ್ತಿಗಳ ಕುರಿತು ಮಾಡುವ ಉಪನ್ಯಾಸಗಳಲ್ಲಿ ಈ ವಿಷಯದ ಕುರಿತು ವಿವರವಾಗಿ ತಿಳಿಸುತ್ತೇನೆ. 
  
  3. ಪ್ರಾಚೀನ ಕಾಲದ ವೇಶ್ಯೆಯರೂ ಸಹ ಧರ್ಮಾಚರಣೆಯನ್ನು ಮಾಡುತ್ತಿದ್ದರು. ಭಗವಂತನಿಗೆ ನಿವೇದಿತವಾದದ್ದನ್ನೇ ಉಂಡು ಬದುಕುತ್ತಿದ್ದರು. ಹೀಗಾಗಿ ಅವರು ನಿಷಿದ್ಧ ಪದಾರ್ಥಗಳನ್ನು ತಂದು ಋಷ್ಯಶೃಂಗರಿಗೆ ನೀಡಲಿಲ್ಲ. 
  
  ಎಲ್ಲದಕ್ಕಿಂತ ಮುಖ್ಯವಾದ ಮತ್ತು ಪ್ರಧಾನವಾದ ಉತ್ತರಗಳು ಹೀಗಿವೆ — 
  
  4. ಮಳೆ ಸುರಿಸದ ಪ್ರದೇಶದಲ್ಲಿ ಕಾಲಿಟ್ಟರೆ ಮಳೆ ತರಿಸುವ ಸಾಮರ್ಥ್ಯವಿದ್ದ ಋಷ್ಯಶೃಂಗರಿಗೆ, ಯಾರು ಯಜ್ಞ ಮಾಡಿದರೆ ದೇವತೆಗಳೇ ಸಾಕ್ಷಾತ್ತಾಗಿ ಬಂದು ಹವಿಸ್ಸನ್ನು ಸ್ವೀಕರಿಸುತ್ತಾರೆಯೋ ಅಂತಹ ಋಷ್ಯಶೃಂಗರಿಗೆ, ತಾವು ತಿನ್ನುವ ಪದಾರ್ಥವನ್ನು ಶುದ್ಧಿ ಮಾಡಿಕೊಳ್ಳುವ ಪೂರ್ಣ ಸಾಮರ್ಥ್ಯವಿದೆ. ರಾಯರು ಮಾಂಸವನ್ನು ಹಣ್ಣು ಮಾಡಿದಂತೆ. ಹೀಗಾಗಿ ಅಶುದ್ಧವಾದ ಪದಾರ್ಥವನ್ನು ಋಷ್ಯಶೃಂಗರು ಸ್ಪರ್ಶ ಮಾಡಿದ ಮಾತ್ರಕ್ಕೆ ಅದು ಶುದ್ದವಾಗುತ್ತದೆ. 
  
  5. ಋಷ್ಯಶೃಂಗರ ದೃಷ್ಟಿಯಿಂದ ತಪ್ಪಲ್ಲದಿದ್ದರೂ, ವೇಶ್ಯೆಯರ ದೃಷ್ಟಿಯಿಂದ ತಪ್ಪಲ್ಲವೇ ಎಂದರೆ, ಖಂಡಿತ ತಪ್ಪಲ್ಲ. ಕಾರಣ, ಈ ಕಾರ್ಯ ಸಕಲ ಜಗತ್ತಿಗೆ ಹಿತಕಾರಿಯಾದದ್ದರಿಂದ ಭಗವಂತನಿಗೆ ಪ್ರಿಯವಾದದ್ದು. “ಸತಾಂ ಚ ಧಾರಕೋ ಧರ್ಮಃ” ಸಜ್ಜನರಿಗೆ ಯಾವುದು ಹಿತಕಾರಿಯೋ ಯಾವುದು ಸಜ್ಜನರನ್ನು ಉಳಿಸುತ್ತದೆಯೋ ಅದು ಧರ್ಮ. ಹೀಗಾಗಿ ವೇಶ್ಯೆಯರ ಈ ಸಾಹಸವೂ ಅಧರ್ಮವಲ್ಲ. ಮತ್ತು ಆ ಮುದಿವೇಶ್ಯೆ ಎಲ್ಲಿಯೂ ತಾನಾಗಲೀ ತನ್ನವರಾಗಲೀ ಧರ್ಮದ ಎಲ್ಲೆ ಮೀರದಂತೆ ನಡೆದುಕೊಳ್ಳುತ್ತಾಳೆ. 
  
  
 • Anirudhha r,Bangalore

  11:00 PM, 27/03/2020

  Adhutavagittu🙏
 • Bheemesha vaidya,Harapanahalli

  10:53 AM, 24/03/2020

  ಗುರುಗಳಿಗೆ ಪ್ರಣಾಮಗಳು
  
  ಹಾಗಾದರೆ ಋಷ್ಯಶೃಂಗರು ಶಾಸ್ತ್ರಾಧ್ಯಯನ ಮಾಡುತ್ತಿರಲಿಲ್ಲವೇ, ಶಾಸ್ತ್ರದ ಜ್ಞಾನವಿದೆ ಎಂದರೆ ಹೆಣ್ಣು ಎಂಬ ವಸ್ತು ಇದೆ ಎಂಬ ಜ್ಞಾನ ಸಹಜ ಅಲ್ಲವೇ, ವಿಭಾಂಡಕರಿಗೆ ಬಂದವರು ಯಾರು ಎಂದು ತಿಳಿಯಲು ಮೂರುದಿನ ತಮ್ಮ ತಪಸ್ಸನ್ನು ತ್ಯಜಿಸಿ ಆಶ್ರಮ ಕಾಯಬೇಕಿತ್ತೆ, ಅಂದರೆ ಅವರಿನ್ನು ಅಪರೋಕ್ಷಜ್ಞಾನವನ್ನು ಪಡೆದಿರಲಿಲ್ಲವೇ, ಬೇರೆಯ ರೂಪವನ್ನೆ ಪಡೆಯುವ ಶಕ್ತಿಯಿದ್ದ ವಿಭಾಂಡಕರಿಗೆ ಅಲ್ಲಗೆ ಬಂದವರ ಬಗ್ಗೆ ತಿಳಿಯಲು ಏಕೆ ಸಾಧ್ಯವಾಗಿರಲಿಲ್ಲ ?
  
  ದಯಮಾಡಿ ತಿಳಿಸಿ 🙏🙏🙏

  Vishnudasa Nagendracharya

  ಋಷ್ಯಶೃಂಗರ ಕುರಿತು ಪ್ರಶ್ನೆಗೆ “ಮಳೆ ತರಿಸಿದ ಋಷ್ಯಶೃಂಗರು” ಎಂಬ ಉಪನ್ಯಾಸದಲ್ಲಿ (ಹತ್ತನೆಯದು, ಇದರ ಮುಂದಿನದು) ಪೂರ್ಣವಾಗಿ ಉತ್ತರ ನೀಡಿದ್ದೇನೆ. 
  
  ವಿಭಾಂಡಕರ ಕುರಿತ ಪ್ರಶ್ನೆಗೆ ಉತ್ತರ — “ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ” ಎಂದು ಗೀತೆಯಲ್ಲಿ ಪ್ರತಿಯೊಬ್ಬರ ಜ್ಞಾನವೂ ದೇವರ ಅಧೀನ ಎಂದು ತಿಳಿಸುತ್ತಾನೆ. ಋಷ್ಯಶೃಂಗರನ್ನು ಕರೆತರಲು ಬಂದ ವೇಶ್ಯೆಯರಿಗೆ, ಕರೆಸಿದ ರೋಮಪಾದಾದಿಗಳಿಗೆ ಶಾಪ ನೀಡಬಾರದು ಎಂದು ವಿಭಾಂಡಕರಿಗೆ ಆ ರೀತಿಯ ಜ್ಞಾನವನ್ನು ದೇವರು ಆ ಸಂದರ್ಭದಲ್ಲಿ ನೀಡುವದಿಲ್ಲ. 
  
  ಎರಡನೆಯದು, ಉಪನ್ಯಾಸದಲ್ಲಿ ತಿಳಿಸಿದ ಹಾಗೆ, ಮನುಷ್ಯರ್ಯಾರೋ ಈ ಕಾರ್ಯ ಮಾಡುತ್ತಿದ್ದಾರೆ ಎಂದು ವಿಭಾಂಡಕರಿಗೆ ಸಂಶಯವೂ ಬರುವದಿಲ್ಲ. ರಾಕ್ಷಸರ ಕೃತ್ಯವಿರಬಹುದು ಎಂದು ಆಲೋಚಿಸುತ್ತಾರೆ. ಹೀಗಾಗಿ ಯಾರಿವರು ಎಂದು ಆಲೋಚಿಸುವ ಪ್ರಯತ್ನವನ್ನೇ ವಿಭಾಂಡಕರು ಮಾಡುವದಿಲ್ಲ. 
 • Rakshit,Banglore

  7:26 PM , 24/03/2020

  ಧನ್ಯವಾದಗಳು ಗುರುಗಳೇ
 • Santosh Patil,Gulbarga

  10:50 AM, 24/03/2020

  Thanks Gurugale 🙏🙏🙏
 • deashmukhseshagirirao,Banglore

  6:30 AM , 24/03/2020

  🙏🏻🙏🏻🙏🏻🙏🏻🙏🏻