ಹಿಂದಿನ ಮಹಾಯುಗಗಳಲ್ಲಿ ರಚನೆಯಾದ ಪುರಾಣಗಳನ್ನು ಅಧ್ಯಯನ ಮಾಡುತ್ತಿದ್ದರು. ಸಾಮಾನ್ಯರಿಗೆ ಅವುಗಳು ದೊರೆಯದಿದ್ದರೂ ಸನಕಾದಿಗಳಿಗೆ ತಿಳಿದಿತ್ತು.
ಇನ್ನು ಎಲ್ಲ ಗ್ರಂಥಗಳು ಪೂರ್ಣವಾಗಿ ಮರೆಯಾದದ್ದು ದ್ವಾಪರದ ಅಂತ್ಯದಲ್ಲಿ, ಗೌತಮರ ಶಾಪದಿಂದ. ಆ ನಂತರ ವೇದವ್ಯಾಸದೇವರು ಅವತರಿಸಿ ಅವನ್ನು ರಚನೆ ಮಾಡುತ್ತಾರೆ.
ಈಗ ರಚನೆ ಮಾಡಿದ ಈ ಪುರಾಣಗಳು ಮುಂದೆಯೂ ಉಳಿಯುತ್ತವೆ.
DESHPANDE P N,BANGALORE
2:00 PM , 31/03/2020
S.Namaskargalu. Anugrahvirali
Abhishek,Kalaburagi
5:32 PM , 29/03/2020
ಧನ್ಯವಾದಗಳು ಆಚಾರ್ಯರೆ🙏
Abhishek,Kalaburagi
7:55 PM , 26/03/2020
ಆಚಾರ್ಯರೇ
ಇನ್ನೂ ಒಂದು ಪ್ರಶ್ನೆ.
ವಿಭಾಂಡಕರು ರೋಮಪಾದ ರಾಜ್ಯಕ್ಕೆ/ ರಾಜನ ಆಸ್ಥಾನಕ್ಕೆ ಬರುವುದಕ್ಕಿಂತ ಮೊದಲೇ ವಿವಾಹ ಸಂಪನ್ನ ಆಗಿ ಹೋಯಿತು ಎಂದು ಹೇಳಿದ್ದೀರಿ.
ತಂದೆ ಇರಬೇಕಾದರೆ ಅವರ ಅನುಮತಿಯನ್ನು ಕೇಳದೆ/ ಕನಿಷ್ಠ ಪಕ್ಷ ಇಂತಹ ವಿವಾಹ ನಡೆಯುತ್ತಿದೆ ಅಂತ ಗೋತ್ತೂ ಕೂಡ ಇಲ್ಲದೆ ಹೇಗೆ ಸಂಪನ್ನ ಮಾಡಲು ಸಾಧ್ಯ?
ಉತ್ತರಿಸಬೇಕಾಗಿ ವಿನಂತಿ
Vishnudasa Nagendracharya
ಹೆಣ್ಣಿನ ಕುರಿತ ಅಪೇಕ್ಷೆ ಋಷ್ಯಶೃಂಗರಿಗೆ ಮೂಡಿದೆ. ಆ ಅಪೇಕ್ಷೆಯನ್ನು ಮೂಡಿಸಿಯೇ ರೋಮಪಾದ ಮಹಾರಾಜರು ಕರೆಸಿಕೊಂಡಿದ್ದಾರೆ. ಹೀಗಾಗಿ ಮಗಳನ್ನು ಕೊಟ್ಟು ಮದುವೆ ಮಾಡಿಬಿಡುತ್ತಾರೆ.
ವಿಭಾಂಡಕರನ್ನು ಪ್ರಶಾಂತಗೊಳಿಸಿ, ಕ್ಷಮೆ ಕೇಳಿದರೆ ಕ್ಷಮಿಸುತ್ತಾರೆ ಎನ್ನುವ ನಿರ್ಣಯ ರೋಮಪಾದರಿಗಿದೆ.
ಹನ್ನೆರಡು ವರ್ಷಗಳ ಕಾಲದ ದೀರ್ಘ ಅವಧಿಯಲ್ಲಿ ಒಂದು ಹನಿ ಮಳೆಯೂ ಆಗದಿರುವ ಪರಿಸ್ಥಿತಿಯ ಘೋರರೂಪವನ್ನು ಅರ್ಥ ಮಾಡಿಕೊಳ್ಳಿ. ಹೀಗಾಗಿ ತಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳುವ ಆವಶ್ಯಕತೆಯಿದೆ, ಋಷ್ಯಶೃಂಗರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಹೀಗಾಗಿ ರೋಮಪಾದರು ನಿರ್ಧಾರ ತೆಗೆದುಕೊಳ್ಳುತ್ತಾರೆ.
Abhishek,Kalaburagi
7:42 PM , 26/03/2020
ಆಚಾರ್ಯರೇ.
ಒಂದು ಪ್ರಶ್ನೆ
ಋಷ್ಯಶೃಂಗ ಋಷಿಗಳು ಬ್ರಾಹ್ಮಣೋತ್ತಮರು ಅಂತ ಹೇಳಿದ್ದೀರಿ.
ಆದರೆ ರೋಮಪಾದ ರಾಜನ ಮಗಳೊಂದಿಗೆ ವಿವಾಹ ಹೇಗೆ ಸಾಧ್ಯವಿದೆ? ಅವರು ಕ್ಷತ್ರಿಯರು ಆಗುತ್ತಾರಲ್ಲವೇ?
ಋಷಿಗಳಿಗೆ ಅಂತರ-ವರ್ಣಿಯ ವಿವಾಹ ಮಾಡಿಕೊಳ್ಳಬಹುದು ಅಂತ exemption ಇದೇ?
ಉತ್ತರಿಸಬೇಕಾಗಿ ವಿನಂತಿ
Vishnudasa Nagendracharya
ಕಲಿಯುಗದಲ್ಲಿ ಎರಡು ವರ್ಣಗಳ ಮಧ್ಯದಲ್ಲಿ ವಿವಾಹ ನಿಷಿದ್ಧ.
ಆದರೆ ಹಿಂದಿನ ಯುಗಗಗಳಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ರೀತಿಯ ವಿವಾಹ ಸಾಧ್ಯವಿರುತ್ತಿತ್ತು. ಅನುಲೋಮ ವಿವಾಹ ಪ್ರತಿಲೋಮ ವಿವಾಹ ಎಂಬ ಪದ್ಧತಿಗಳಿದ್ದವು.
ಚ್ಯವನ, ಋಷ್ಯಶೃಂಗ, ಅಗಸ್ತ್ಯ ಮುಂತಾದ ಮಹಾನುಭಾವರು ಕ್ಷತ್ರಿಯ ಕನ್ಯೆಯರನ್ನು ಮದುವೆಯಾಗುತ್ತಾರೆ. ವಸಿಷ್ಠರ ಪತ್ನಿ ಅರುಂಧತಿದೇವಿಯರು ಶೂದ್ರಸ್ತ್ರೀ.
ಆದರೆ ಇದಕ್ಕೂ ಸಹ ಮಹತ್ತ್ವದ ನಿಯಮಗಳಿವೆ. ಆಗಲೂ ಸಹ ಕಂಡಕಂಡವರು ಮದುವೆಯಾಗುವಂತಿರಲಿಲ್ಲ. ವಿಸ್ತಾರವಾದ ವಿಷಯ. ಜಾತಿವಾದದ ಉಪನ್ಯಾಸಗಳಲ್ಲಿ ಪರಿಪೂರ್ಣವಾಗಿ ಚರ್ಚಿಸುತ್ತೇನೆ.
Geetha v rao,Bangaluru
4:09 PM , 28/03/2020
Namaskaragalu I am facing a problem in down loading and after downloading lot of breaks in listening.any one facing the same problem?only in Ramayana pravachanas.