Upanyasa - VNU895

ಯಜ್ಞ ದಾನಗಳ ವೈಭವ

ಶ್ರೀಮದ್ ರಾಮಾಯಣಮ್ — 13

ಋಷ್ಯಶೃಂಗ ವಸಿಷ್ಠರು ದಶರಥ ಮಹಾರಾಜರಿಂದ ಪರಮಾದ್ಭುತವಾದ ಕ್ರಮದಲ್ಲಿ ಮಾಡಿಸಿದ ಅಶ್ವಮೇಧ ಯಜ್ಞದ ವೈಭವದ ಕಿಂಚಿತ್ ಚಿತ್ರಣ ಇಲ್ಲಿದೆ. ಸಾಕ್ಷಾತ್ ದೇವತೆಗಳು ಬಂದು ಹವಿಸ್ಸನ್ನು ಸ್ವೀಕರಿಸಿದ್ದು, ಸಮಗ್ರ ಭೂಮಂಡಲವನ್ನು ದಶರಥ ಮಹಾರಾಜರು ಬ್ರಾಹ್ಮಣರಿಗೆ ನೀಡಿದ್ದು, ಸ್ವೀಕರಿಸಿದ ಬ್ರಾಹ್ಮಣರು ಅವನಿಗೆ ಪುಣ್ಯವನ್ನೂ ನೀಡಿದ್ದು, ಮತ್ತು ಭೂಮಿಯ ಆಧಿಪತ್ಯವನ್ನೂ ತಿರುಗಿನೀಡಿದ್ದು ಮುಂತಾದ ವಿಷಯಗಳ ನಿರೂಪಣೆ ಇಲ್ಲಿದೆ. ಗೋವುಗಳ ಮಾಹಾತ್ಮ್ಯ ಮತ್ತು ನಿಸ್ಪೃಹರಾದ ಪುರೋಹಿತರ ಸದ್ಗುಣಗಳ ಚಿಂತನೆಯೊಂದಿಗೆ. 

Play Time: 43:13

Size: 1.37 MB


Download Upanyasa Share to facebook View Comments
3302 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  9:03 PM , 29/05/2020

  🙏🙏🙏🙏
 • prema raghavendra,coimbatore

  11:24 AM, 17/05/2020

  Ananatha namaskara! Danyavada!
 • Jayashree Karunakar,Bangalore

  5:38 PM , 31/03/2020

  ಗುರುಗಳೆ 
  
  ಮಕ್ಕಳನ್ನು ಪಡೆಯುವ ಉದ್ದೇಶದಿಂದಲೇ ಯಜ್ಞವನ್ನು ಮಾಡಲು ಮುಂದಾಗಿದ್ದಾರೆ...
  
   ಆ ತನ್ನ ಮಕ್ಕಳು ಮುಂದೆ ಸಿಂಹಾಸನವೇರುವವರಿದ್ದಾರೆ ಅಂತ ಯೋಚನೆ ಇದ್ದಾಗ....ಸಮಗ್ರ ಭೂಮಂಡಲವನ್ನು ದಾನ ಮಾಡುವ ನಿಧಾ೯ರ ಹೇಗೆ ಬರಲು ಸಾಧ್ಯ ಅವರ ಮನಸ್ಸಿನಲ್ಲಿ ...?
  
  
  (ಋುಷಿಗಳು ಭೂಮಂಡಲವನ್ನು ವಾಪಾಸು ನೀಡಿದರು ಅದು ಬೇರೆ ವಿಷಯ)

  Vishnudasa Nagendracharya

  ತುಂಬ ಮೌಲಿಕವಾದ ಪ್ರಶ್ನೆ. ಅತ್ಯಂತ ಸೂಕ್ಷ್ವವಾಗಿ ಅರ್ಥ ಮಾಡಿಕೊಳ್ಳಬೇಕಾದ ಉತ್ತರವಿದೆ. ಎಲ್ಲರೂ ಎರಡು ಮೂರು ಬಾರಿ ಸಾವಧಾನವಾಗಿ ಓದಿ. ಅವಸರದಲ್ಲಿ ಓದಿ ನಿರ್ಣಯಕ್ಕೆ ಬರಬೇಡಿ. ಕೂದಲೆಳೆಗಿಂತ ಸೂಕ್ಷ್ಮವಾದ ಅಂತರವಿರುವ ವಿಷಯಗಳಿವೆ ಇಲ್ಲಿ. 
  
  ನಮ್ಮ ಪ್ರಾಚೀನ ರಾಜ ಮಹಾರಾಜರು (ದುರ್ಯೋಧನ ವೇನ ಮುಂತಾದ ದುಷ್ಟರಲ್ಲ) ಎಂದಿಗೂ ತಮ್ಮ ಪರಂಪರೆಯ ಜನರಿಗಾಗಿ ಸಿಂಹಾಸನವನ್ನು ಬಯಸುತ್ತಿದ್ದುದಲ್ಲ. ರಾಜ್ಯ ಪರಿಪಾಲನೆ ತಮ್ಮ ಕರ್ತವ್ಯ ಎಂದು ಭಾವಿಸಿ ಮುನ್ನಡೆಸುತ್ತಿದ್ದರೇ ಹೊರತು ತಮ್ಮ ವಂಶದವರಿಗೆ ಮಾತ್ರ ದೊರೆಯಬೇಕು ಎಂಬ ಆಲೋಚನೆ ಇರುತ್ತಿರಲಿಲ್ಲ. 
  
  ಹೀಗಾಗಿ ದಶರಥ ಮಹಾರಾಜರು ತಮ್ಮ ವಂಶ ಮುಂದುವರೆದು ತಾವು ಪಿತೃಋಣದಿಂದ ಮುಕ್ತರಾಗಬೇಕೆಂದು ಮಕ್ಕಳನ್ನು ಬಯಸ್ಸಿದ್ದಷ್ಟೇ ಹೊರತು, ಮಗ ಸಿಂಹಾಸನದಲ್ಲಿ ಕುಳಿತು ಮೆರೆಯಲಿ ಎಂದಲ್ಲ. 
  
  ಇಲ್ಲಿ ಎರಡು ಪ್ರಶ್ನೆಗಳು ತೋರುತ್ತವೆ — 
  
  1. ಹಾಗಾದರೆ ರಾಮನಿಗೇ ರಾಜ್ಯ ನೀಡಬೇಕು ಎಂದು ದಶರಥರು ಬಯಸಿದ್ದೇಕೆ, ರಾಮನಿಗೆ ರಾಜ್ಯ ತಪ್ಪಿದಾಗ ದುಃಖ ಪಟ್ಟು ಮರಣ ಹೊಂದಿದ್ದೇಕೆ?
  
  2. ಸಿಂಹಾಸನದಲ್ಲಿ ಕುಳಿತ ಬಳಿಕ ಸಮರ್ಥ ಉತ್ತರಾಧಿಕಾರಿಯನ್ನು ನಿಯೋಗಿಸುವದೂ ಸಹ ಅವರ ಕರ್ತವ್ಯವಲ್ಲವೇ. ದಾನ ನೀಡಿದ್ದರಿಂದ ಆ ಕರ್ತವ್ಯದಿಂದ ಚ್ಯುತರಾದಂತೆ ಅಲ್ಲವೇ?
  
  ಇವಕ್ಕೆ ಉತ್ತರ ಹೀಗಿವೆ —
  
  ನಿಜ. ಸಮರ್ಥ ಉತ್ತರಾಧಿಕಾರಿಯನ್ನು ನಿಯೋಗಿಸಬೇಕಾದ್ದೂ ಸಹ ರಾಜನ ಕರ್ತವ್ಯ. ವಸಿಷ್ಠ ಋಷ್ಯಶೃಂಗರಂತಹ ಮಹಾನುಭಾವರಿಗೆ ಅದನ್ನು ದಾನ ಮಾಡಿದಾಗಲೂ ಆ ಕರ್ತವ್ಯ ಪೂರ್ಣವಾಗುತ್ತದೆ. ಕಾರಣ, ವಸಿಷ್ಠರು ಅದನ್ನು ಪಡೆದು ಯೋಗ್ಯರನ್ನು ಅಲ್ಲಿ ನಿಯೋಗಿಸಿಯೇ ನಿಯೋಗಿಸುತ್ತಾರೆ. 
  
  ಉದಾಹರಣೆಗೆ, ಪರಶುರಾಮದೇವರು ತಾವು ಗೆದ್ದ ಸಮಸ್ತವನ್ನೂ ಕಶ್ಯಪರಿಗೆ ದಾನ ಮಾಡಿಬಿಡುತ್ತಾರೆ. ಕಶ್ಯಪರು ಅದನ್ನು ಪರಶುರಾಮರಿಗೆ ಹಿಂತಿರುಗಿಸುವದಿಲ್ಲ, ತಾವೂ ರಾಜರಾಗುವದಿಲ್ಲ. ಬದಲಾಗಿ ಯೋಗ್ಯ ಕ್ಷತ್ರಿಯರನ್ನು ರಾಜರನ್ನಾಗಿ ಮಾಡಿ ಅವರು ಯೋಗ್ಯವಾದ ಕ್ರಮದಲ್ಲಿ ರಾಜ್ಯ ನಡೆಸುವಂತೆ ಆದೇಶಿಸುತ್ತಾರೆ. 
  
  ಇಲ್ಲಿ ಕಶ್ಯಪರ ಯೋಗ್ಯತೆಗಿಂತ ದೊಡ್ಡವರಾದ ವಸಿಷ್ಠರಿಗೆ ದಾನ ಮಾಡುತ್ತಿದ್ದಾರೆ. ಅಪಾತ್ರ ದಾನ ಸರ್ವಥಾ ಆಗುತ್ತಿಲ್ಲ. ವಸಿಷ್ಠರು ದಶರಥರಿಗೆ ನೀಡದಿದ್ದರೂ ಮತ್ತೊಬ್ಬ ಯೋಗ್ಯರಿಗೆ ನೀಡಿಯೇ ನೀಡುತ್ತಿದ್ದರು. ರಾಜ್ಯ ಸಮರ್ಥವಾಗಿಯೇ ಮುಂದುವರೆಯುತ್ತಿತ್ತು. ಹೀಗಾಗಿ ಮಹಾನುಭಾವರಾದ ಋಷಿವರೇಣ್ಯರಿಗೆ ರಾಜ್ಯವನ್ನು ದಾನ ಮಾಡುವದು ಸಹಿತ ರಾಜ್ಯಕ್ಕೆ ಉತ್ತರಾಧಿಕಾರಿಯನ್ನು ನಿಯೋಗಿಸಿದಂತೆಯೇ. 
  
  ಇನ್ನು ರಾಮದೇವರಿಗೆ ರಾಜ್ಯ ತಪ್ಪಿದ ಸಂದರ್ಭದ ವಿಷಯ. ಅಷ್ಟು ಹೊತ್ತಿಗೆ ದಶರಥರು ದಾನ ಮಾಡಿಯಾಗಿದೆ. ವಸಿಷ್ಠಾದಿಗಳು ಮತ್ತೆ ದಶರಥರನ್ನೇ ರಾಜನನ್ನಾಗಿ ಮಾಡಿದ್ದಾರೆ. ಹೀಗಾಗಿ ಉತ್ತರಾಧಿಕಾರಿಯನ್ನು ದಶರಥರೇ ಈಗ ಆಯ್ಕೆ ಮಾಡಬೇಕು. 
  
  ಯೋಗ್ಯ ಋಷಿವರೇಣ್ಯರಿಗೆ ರಾಜ್ಯವನ್ನು ದಾನ ನೀಡುವದು ಹೇಗೆ ಒಂದು ರೀತಿಯ ಉತ್ತರಾಧಿಕಾರಿಯ ಆಯ್ಕೆಯ ಪದ್ಧತಿಯೋ, ಹಾಗೆ ಯೋಗ್ಯನಾದ ಮಗ, ತಮ್ಮ ಮುಂತಾದವರಿಗೆ ರಾಜ್ಯವನ್ನೂ ನೀಡುವದು ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಕ್ರಮವೇ. ಎಲ್ಲ ರಾಜರೂ ಅನುಸರಿಸಬೇಕಾದ ಧರ್ಮ. 
  
  ಮಕ್ಕಳಿಗೆ ನೀಡಬೇಕಾದರೆ ಅವರು ಅದಕ್ಕೆ ಅರ್ಹರಾಗಿರಬೇಕು. ಅನೇಕ ಮಕ್ಕಳಿದ್ದಾಗ ವಯಸ್ಸಿನಲ್ಲಿ ದೊಡ್ಡವನಾಗಿರಬೇಕು. ಪ್ರಜೆಗಳ ಪ್ರೀತಿಗೆ ಪಾತ್ರನಾಗಿರಬೇಕು. ವಯಸ್ಸು, ಗುಣ, ಯೋಗ್ಯತೆ ಎಲ್ಲ ದೃಷ್ಟಿಗಳಿಂದಲೂ ರಾಮ ಅರ್ಹನಾಗಿದ್ದಾನೆ. ಸಮಗ್ರ ರಾಷ್ಟ್ರ ಅವನು ರಾಜನಾಗಲಿ ಎಂದು ತವಕಿಸುತ್ತಿದೆ. ಅಂತಹ ರಾಮನಿಗೆ, ಯಾವ ತಪ್ಪನ್ನೂ ಮಾಡದವನಿಗೆ, ವನವಾಸವನ್ನು ನೀಡಿ ರಾಜ್ಯವನ್ನು ಕಸಿದು ಕೊಳ್ಳಬೇಕಾಯಿತಲ್ಲ ಎನ್ನುವದು ದಶರಥರ ಚಿಂತೆ. 
  
  ಹೀಗೆ, ಮಗನನ್ನು ಪಡೆದು ಅವನನ್ನು ಸಿಂಹಾಸನದಲ್ಲಿ ಮೆರೆಸಬೇಕು ಎಂಬ ಕಾರಣಕ್ಕಾಗಿ ದಶರಥರು ಮಕ್ಕಳನ್ನು ಪಡೆಯಲಿಲ್ಲ. “ನಾಸೀದ್ ವಂಶಕರಃ ಸುತಃ” ಭಗವಂತನಿಂದ ನಡೆದು ಬರುತ್ತಿರುವ ಸೂರ್ಯವಂಶ ಮುಂದುವರೆಯಬೇಕು ಎಂದು ಅಪೇಕ್ಷಿಸಿ ಅವರು ಮಕ್ಕಳನ್ನು ಪಡೆದದ್ದು. 
  
  ಒಂದು ವೇಳೆ, ದಶರಥರಿಗೆ ವಸಿಷ್ಠರು ರಾಜ್ಯವನ್ನು ಮತ್ತೆ ನೀಡದಿದ್ದರೂ, ಅಥವಾ ಅವರ ಬಳಿ ಮೊದಲಿಂದಲೂ ರಾಜ್ಯ ಇಲ್ಲದೇ ಇದ್ದಿದ್ದರೂ, ದಶರಥರು ತಪಸ್ಸು ಮಾಡಿ ಮಕ್ಕಳನ್ನು ಪಡೆಯುತ್ತಿದ್ದರು. ವಂಶ ಮುಂದುವರೆಸುವದಕ್ಕಾಗಿ ಮಕ್ಕಳು, ಹೊರತು “ಕೇವಲ” ನಾವು ಮಾಡಿಟ್ಟ ಆಸ್ತಿಯನ್ನು ಅನುಭವಿಸಲಿಕ್ಕಾಗಿ ಅಲ್ಲ ಎನ್ನುವದು ಮಹಾನುಭಾವರ ಮಾರ್ಗ. ಆಸ್ತಿ ಇದ್ದಾಗ, ಅದನ್ನು ಅವಶ್ಯವಾಗಿ ಮಕ್ಕಳಿಗೆ ನೀಡುತ್ತಾರೆ, ಅದು ಧರ್ಮ. ಅಷ್ಟೆ. ಅತ್ಯಂತ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾದ ತತ್ವ. 
  
  ಇದೆಲ್ಲ ಸರಿ, ರಾಮನನ್ನು ರಾಜನನ್ನಾಗಿ ಮಾಡಿದರೆ ಪ್ರಜೆಗಳಿಗೆ ಸಂತೋಷವಾಗುತ್ತಿತ್ತಲ್ಲವೇ, ಹೀಗಾಗಿ ದಾನ ಮಾಡಬಾರದಿತ್ತಲ್ಲವೇ ಎಂದು ಪ್ರಶ್ನೆ ಬರಬಹುದು. 
  
  ಪ್ರಜೆಗಳ ಸಂತೋಷ ವಸಿಷ್ಠಾದಿ ಮಹಾನುಭಾವರಿಗೆ ರಾಜ್ಯವನ್ನು ಅರ್ಪಿಸಿದಾಗಲೂ ಸಹ ಇದ್ದೇ ಇದೆ. ವಸಿಷ್ಠರು ಎಂದೂ ಅಧರ್ಮ ನಡೆಯಲು ಬಿಡುವದೇ ಇಲ್ಲ. ಪ್ರಜೆಗಳಿಗೆ ಅಸುಖವಾಗಲು ಬಿಡುವದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಇನ್ನೂ ರಾಮಾದಿಗಳು ಹುಟ್ಟಿಯೇ ಇಲ್ಲ. ಹೀಗಾಗಿ, ವಂಶೋದ್ಧಾರಕ್ಕಾಗಿ ಮಕ್ಕಳು ಹುಟ್ಟಲಿ, ದೇವರು ಕೊಟ್ಟ ಸಮಗ್ರ ಭೂಮಂಡಲವನ್ನು ದಾನ ಮಾಡುತ್ತೇನೆ ಎಂದು ನಮ್ಮ ದಶರಥ ಮಹಾರಾಜರು ದಾನ ಮಾಡಿಬಿಟ್ಟರು. 
  
  ಮೊದಲಿಗೆ ಇಡಿಯ ಭೂಮಂಡಲ ದಾನ ಮಾಡಲು ದೊರೆಯುವದು ಕಷ್ಟ. ದಾನ ಮಾಡಲು ಆಧಿಪತ್ಯ ಅನೇಕರಿಗೆ ದೊರೆತಿದೆ, ಆದರೆ ದಾನ ಸ್ವೀಕರಿಸುವಂತಹ ಪಾತ್ರರು ದೊರೆಯುವದು ಕಷ್ಟ. ಆಧಿಪತ್ಯ, ಪಾತ್ರರು ಇಬ್ಬರೂ ಇದ್ದಾಗ ದಾನ ಮಾಡುವ ಬುದ್ಧಿ ಬರುವದು ಅತ್ಯಂತ ಅತ್ಯಂತ ದುರ್ಲಭ. ದಶರಥರಿಗೆ ಎಲ್ಲವೂ ದೊರೆತವರು. ದಾನ ಮಾಡಿಯೇ ಬಿಟ್ಟರು. 
  
  ಇವರಿಗಿಂತ ಅದ್ಭತವಾಗಿ ಇಡಿಯ ಭೂಮಂಡಲ ದಾನ ಮಾಡಿದ ಮತ್ತೊಬ್ಬ ಚಕ್ರವರ್ತಿಗಳು ಎಂದರೆ ನಮ್ಮ ಯುಧಿಷ್ಠಿರ ಮಹಾರಾಜರು. ಅವರ ಕಥೆಯನ್ನು ಮಹಾಭಾರತದಲ್ಲಿ ಕೇಳೋಣ. 
  
  
 • DESHPANDE P N,BANGALORE

  2:21 PM , 01/04/2020

  S.Namaskargalu. Anugrahvirali
 • Mrudula,Hospet

  10:53 PM, 30/03/2020

  ಆಚಾರ್ಯರೇ, ಹಾಗೇ ಇನ್ನೊಂದು ಪ್ರಶ್ನೆ ಇದೆ, ದಶರಥ ಮಹಾರಾಜರು ಸಮಗ್ರ ಭೂಮಂಡಲವನ್ನು ದಾನ ಮಾಡಿದರು ಅಂತ ಅಂದಮೇಲೆ ಅವರಲ್ಲಿರುವ ಗೋ ಸಂಪತ್ತು ಕೂಡಾ ದಾನವಾಗಿದೆ ಅಂತಾಗುವುದಿಲ್ಲವೇ?? ಮತ್ತೇ ಭೂಮಿಯನ್ನು ಪಡೆಯುವಾಗ ಗೋವುಗಳನ್ನ ದಾನ ಮಾಡಿದ್ದು ಹೇಗಂತ ಅರ್ಥಮಾಡಿಕೊಳ್ಳೋದು ಆಚಾರ್ಯರೇ?

  Vishnudasa Nagendracharya

  ಉಪನ್ಯಾಸದಲ್ಲಿ ತಿಳಿಸಿದಂತೆ ದಶರಥ ಮಹಾರಾಜರ ಮೈಮೇಲೆ ಮತ್ತು ಅವರ ಪತ್ನಿಯರ ಬಳಿಯಲ್ಲಿ ಆಭರಣಗಳಿದ್ದವೇ ಇದ್ದವು. ಆ ಆಭರಣದಿಂದ ವೈಶ್ಯರಿಂದ ಕೆಲವು ಹಸುಗಳನ್ನು ಕೊಂಡುಕೊಂಡು ದಶರಥ ಮಹಾರಾಜರು ಬ್ರಾಹ್ಮಣರಿಗೆ ನೀಡಿದರು. ಬ್ರಾಹ್ಮಣರು ಭೂಮಿಯನ್ನು ಹಿಂತಿರುಗಿಸಿ ಬಿಟ್ಟ ಬಳಿಕ ಲಕ್ಷ ಲಕ್ಷ ಸಂಖ್ಯೆಯಲ್ಲಿ ಗೋವುಗಳ ದಾನವನ್ನು ಮಾಡುತ್ತಾರೆ. 
  
  
 • Mrudula,Hospet

  7:02 PM , 30/03/2020

  ಆಚಾರ್ಯರೇ, ದಶರಥ ಮಹಾರಾಜರು ಸಮಗ್ರ ಭೂಮಂಡಲವನ್ನು ಆಳಿದ್ದಾರೆ ಅಂತ ಕೇಳಿದೆ, ಹಾಗಾದ್ರೇ ಉಳಿದ ಎಲ್ಲಾ ರಾಜರುಗಳು ಅವರ ಸಾಮಂತ ರಾಜರು ಅಂತ ತಿಳೀಬಹುದಾ? 
  ಜನಕ ರಾಜರು ಕೂಡ ಅವರ ಸಾಮಂತರು ಅಂತ ತಿಳಿಯಬಹುದಾ? 
  ಹಾಗೇ, ರಾವಣನ ಪರಿಸ್ಥಿತಿ ಏನಾಗಿತ್ತು ಅಂತ ನನಿಗೆ ತಿಳೀಲಿಲ್ಲ, ಆಚಾರ್ಯರೇ.

  Vishnudasa Nagendracharya

  ಇದೇ ಉಪನ್ಯಾಸದಲ್ಲಿ ಸಂದೀಪ್ ಕಟ್ಟಿಯವರ ಪ್ರಶ್ನೆಯೂ ಇದೇ ಆಗಿದೆ. ಅಲ್ಲಿ ಉತ್ತರ ನೀಡಿದ್ದೇನೆ. ಗಮನಿಸಿ. 
 • Sandeep katti,Yalahanka, bengalooru

  12:51 PM, 30/03/2020

  ಪೂಜ್ಯ ಗುರುಗಳೇ,
  ಸಕಲ ಭೂಮಂಡಲ ವಿಜೇತ ಮಾತ್ರ ಅಶ್ವಮೇಧ ಮಾಡಲು ಅರ್ಹ ಎನ್ನುವುದನ್ನು ತಿಳಿದೆವು.. ನನ್ಮ ಪ್ರಶ್ನೆಗಳಿಗೆ ದಯವಿಟ್ಟು ಉತ್ತರ ನೀಡಿ..
  1. ಸಮಗ್ರ ಭೂಮಿ ಎಂದರೆ ಈಗಿನ ಪ್ರಪಂಚದ ಸಮಗ್ರ ದೇಶಗಳು (ಅಮೆರಿಕಾ, ಯುರೋಪ್,ಆಫ್ರಿಕಾ,ಏಷ್ಯಾ,ಅಂಟರ್ಕ್ಟಿಕ ಇತ್ಯಾದಿ) ಎಂದೇ?
  2. ತಾವೇ ತಿಳಿಸಿದ್ದಿರ ರಾವಣನ ಭಯ ಸ್ವಯಂ ದಶರಥ ಮಹಾರಾಜರಿಗೂ ಇತ್ತು ಎಂದು. ಹಾಗಿದಲ್ಲಿ ಲಂಕೆಯನ್ನು ಗೆಲ್ಲುವುದು ಅಸಂಭವ. ಅಂದರೆ ಸಮಗ್ರ ಭೂಮಂಡಲ ಹೇಗೆ ಗೆದ್ದ ಹಾಗಾಯಿತು?
  3. ಅಶ್ವದ ಕುದುರೆಯನ್ನು ಖಂಡಿತವಾಗಿ ಲಂಕೆಯಲ್ಲಿ ತಡೆಯಲು ಸಾಧ್ಯತೆ ಇತಲ್ಲವೇ..? ರಾವಣ ಸಕಲ ಲೋಕಗಳನ್ನೂ ತನ್ನ ವರ ಹಾಗೂ ಬಲದಿಂದ ಜಯಿಸಿದವನು

  Vishnudasa Nagendracharya

  ರಾವಣ ಆರಂಭದಲ್ಲಿ ಕೆಲವು ಮನುಷ್ಯ ರಾಜರ ಮೇಲೆ ಆಕ್ರಮಣ ಮಾಡುತ್ತಾನೆ. ಆ ನಂತರದಲ್ಲಿ ನಾರದರ ಮಾತಿನಂತೆ ಮತ್ತೆ ರಾಜರ ಮೇಲೆ ಯುದ್ಧಕ್ಕೆ ಹೋಗುವದಿಲ್ಲ. ಹೀಗಾಗಿ ರಾಜರು ತಮ್ಮ ರಾಜ್ಯಗಳನ್ನು ನಡೆಸುತ್ತಿರುತ್ತಾರೆ, 
  
  ರಾವಣನ ಭಯ ದಶರಥಾದಿಗಳಿಗೆ ಪೂರ್ಣವಾಗಿ ಇತ್ತು. 
  
  ರಾವಣ ಅವರನ್ನು ಉಪೇಕ್ಷಿಸಿದ್ದ. ದಶರಥಾದಿಗಳು ರಾವಣನ ತಂಟೆಗೆ ಹೋಗುತ್ತಿರಲಿಲ್ಲ. 
  
  ಲಂಕೆಯನ್ನು ಹೊರತು ಪಡಿಸಿ ಉಳಿದವುಗಳಿಂದ ಕಪ್ಪ ಕಾಣಿಕೆಗಳು ಬರುತ್ತಿದ್ದವು. 
  
  ಇನ್ನು ಅಮೇರಿಕಾ ಇತ್ಯಾದಿಗಳು ಕಳೆದ ಎರಡು ಸಾವಿರ ವರ್ಷಗಳಲ್ಲಿ ಸಮುದ್ರದಿಂದ ಮೇಲೆ ಬಂದ ಭಾಗ ಎಂದು ಈಗಿನ ವಿಜ್ಞಾನಿಗಳೇ ಹೇಳುತ್ತಾರೆ. ಚೀನಾ ಮುಂತಾದವುಗಳಿದ್ದವು. ಅಲ್ಲಿನ ರಾಜರೂ ಕಪ್ಪ ಕಾಣಿಕೆಗಳನ್ನು ನೀಡುತ್ತಿದ್ದರು. 
 • Narayanaswamy,Mysore

  9:14 AM , 31/03/2020

  ಗುರುಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 
  ಗುರುಗಳೇ ನಾವು ದಕ್ಷಿಣೆ ಕೊಡಲು ಹಣವನ್ನು ಬಳಸುತ್ತೇವೆ ಹಿಂದೆ ದಶರಥ ಮಹಾರಾಜರು ದಕ್ಷಿಣೆ ಕೊಡಲು ಯಾವುದನ್ನೂ ಬಳಸುತ್ತಿದ್ದರು ದಯವಿಟ್ಟು ತಿಳಿಸಿ 🙏🙏🙏

  Vishnudasa Nagendracharya

  ನಾವು ಈಗಿನ ಕಾಲದಲ್ಲಿ ಪೇಪರಿನ ಹಣವನ್ನು ಬಳಸುತ್ತೇವೆ. ಹಿಂದಿನ ಶತಮಾನಗಳಲ್ಲಿ ಬೆಳ್ಳಿಯ ಬಂಗಾರದ ನಾಣ್ಯಗಳಿದ್ದವು. 
  
  ದಶರಥ ಮಹಾರಾಜರ ಕಾಲದಲ್ಲಂತೂ ಪರಿಶುದ್ಧವಾದ ಬೆಳ್ಳಿಯ ಬಂಗಾರದ ನಾಣ್ಯಗಳನ್ನು ಟಂಕಿಸಿ ವ್ಯವಹಾರ, ದಾನ, ಧರ್ಮಗಳನ್ನು ಮಾಡುತ್ತಿದ್ದರು. 
 • Vidhya,Gobichettipalayam

  1:51 PM , 30/03/2020

  ಪರಮ ಸುಂದರವಾದ ವಿವರಣೆ ಅಚಾರ್ಯರೇ. ವಶಿಷ್ಟರ ಶ್ರುಷ್ಯಶೃಂಗಾರ ಮಹಿಮೆ ದಶರಥನ ಉಧಾರ ಗುಣ ಎಲ್ಲವೂ ಮೈರೋಮಾಂಚನ ಕೊಳ್ಳುವಂತೆ ವಿವರಣೆ ನೀಡಿದೀರಿ. ಅನಂತ ಧನ್ಯವಾದಗಳು.
 • Nagendra,Bengaluru

  1:00 PM , 30/03/2020

  Namaskara Acharyare 
  Dasharatha maharajara yagnyavannu naavu noditheddeveno annohaage varnisiddira. Aa sambramada anubhava aagthaiyede Acharyare 🙏🙏
 • Santosh Patil,Gulbarga

  9:04 AM , 30/03/2020

  Thanks Gurugale 🙏🙏💐
 • deashmukhseshagirirao,Banglore

  6:52 AM , 30/03/2020

  🙏🏻🙏🏻🙏🏻🙏🏻🙏🏻