Upanyasa - VNU896

ಪುತ್ರಕಾಮೇಷ್ಟಿ

ಶ್ರೀಮದ್ ರಾಮಾಯಣಮ್ — 15 — ದೇವತೆಗಳ ಪ್ರಾರ್ಥನೆ ಮತ್ತು ಪುತ್ರಕಾಮೇಷ್ಟಿ

ದೇವತೆಗಳೆಲ್ಲರೂ ಬಂದು ಬ್ರಹ್ಮದೇವರ ಬಳಿಯಲ್ಲಿ ರಾವಣ ಉಂಟು ಮಾಡುತ್ತಿರುವ ತೊಂದರೆಗಳನ್ನು ಉಲ್ಲೇಖ ಮಾಡುತ್ತಾರೆ. ಬ್ರಹ್ಮದೇವರು ಅವರೆಲ್ಲರನ್ನೂ ಕರೆದುಕೊಂಡು ಕ್ಷೀರಸಾಗರದ ಬಳಿಗೆ ಬಂದು ಶ್ರೀಹರಿಯ ಪ್ರಾರ್ಥನೆಯ ಮಾಡಿದ ದಿವ್ಯಘಟನೆಯ ಚಿತ್ರಣ ಇಲ್ಲಿದೆ. 

ಪುತ್ರಕಾಮೇಷ್ಟಿ ಸಮಾಪ್ತವಾಗುತ್ತಿದ್ದಂತೆ ಬ್ರಹ್ಮದೇವರ ದೂತ ಅಗ್ನಿಕುಂಡದಲ್ಲಿ ಪ್ರಾದುರ್ಭೂತನಾಗಿ ಬೆಳ್ಳಿಯ ಮುಚ್ಚಳವಿದ್ದ ಬಂಗಾರದ ಪಾತ್ರೆಯಲ್ಲಿ ಪಾಯಸವನ್ನು ದಶರಥಮಹಾರಾಜರಿಗೆ ನೀಡಿದ, ಅದನ್ನು ಮಹಾರಾಜರು ತಮ್ಮ ಪತ್ನಿಯರಿಗೆ ಹಂಚಿದ ಘಟನಗೆಳ ವಿವರ ಇಲ್ಲಿದೆ. 

Play Time: 37:55

Size: 1.37 MB


Download Upanyasa Share to facebook View Comments
3012 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  9:29 PM , 31/05/2020

  🙏🙏🙏
 • prema raghavendra,coimbatore

  7:15 PM , 22/05/2020

  Anantha namaskara! Danyavada
 • Roopa,Bengaluru

  10:13 PM, 13/04/2020

  ಶ್ರೀ ಗುರುಭ್ಯೋ ನಮಃ 
  ಗುರುಗಳೇ, ದಶರಥ ಮಹಾರಾಜರಿಗೆ ಅನೇಕ ಪತ್ನಿಯರು ಇದ್ದಾಗ ಕೇವಲ 3 ಜನ ಹೆಂಡತಿಯರಿಗೆ ಮಾತ್ರ ಪಾಯಸವನ್ನು ಯಾಕೆ ಕೊಟ್ಟರು ?
  
  ಧರ್ಮ ಪತ್ನಿಯರಿಗೂ , ಬೇರೆ ಪತ್ನಿಯರಿಗೂ ವ್ಯತ್ಯಾಸವೇನು ? 
  
  ಮತ್ತೊಂದು ಪ್ರಶ್ನೆ - ಒಬ್ಬ ವ್ಯಕ್ತಿಗೆ ಅನೇಕ ಪತ್ನಿಯರು ಇರಬಹುದು ಅನ್ನೋದು ಕೃತ, ತ್ರೇತಾ, ದ್ವಾಪರ ಯುಗಗಳಲ್ಲಿ ಮಾತ್ರವೇ ? 
  ಇಲ್ಲವಾದರೆ ಈಗಿನಕಾಲದಲ್ಲಿ ಒಂದಕ್ಕಿಂತ ಹೆಚ್ಚು ಮದುವೆ ಗಳಾಗಬಾರದು ಅಂತ ಏಕೆ ನಿಯಮಗಳು ? 
  
  ಒಬ್ಬ ಹೆಂಗಸಿಗೆ ಅನೇಕ ಪತಿಯರು ಅನ್ನುವುದು ಶಾಸ್ತ್ರಸಮ್ಮತವೇ ? 
  
  ಸಂದೇಹಗಳನ್ನು ಪರಿಹರಿಸಬೇಕಾಗಿ ವಿನಂತಿ 🙏🏼

  Vishnudasa Nagendracharya

  ದಶರಥ ಮಹಾರಾಜರಿಗೆ 350 ಕ್ಕೂ ಹೆಚ್ಚು ಮಡದಿಯರಿದ್ದರು. ಅವರೆಲ್ಲರೂ ಧರ್ಮಪತ್ನಿಯರೇ. ರಾಜರ ಪತ್ನಿಯರಲ್ಲಿ ಮತ್ತೊಂದು ವಿಶೇಷವಿರುತ್ತದೆ. ಪಟ್ಟದ ರಾಣಿ ಎಂಬ ಪಟ್ಟ. 
  
  ಕೌಸಲ್ಯಾ, ಸುಮಿತ್ರಾ, ಕೈಕಯೀ ದೇವಿಯರು ಪಟ್ಟದರಾಣಿಯರು. ಪಟ್ಟದ ರಾಣಿಯರಿಗೆ ರಾಜ್ಯದಲ್ಲಿ ಅಧಿಕಾರವಿರುತ್ತದೆ, ಇವರಲ್ಲಿ ಹುಟ್ಟುವ ಮಕ್ಕಳು ಮಾತ್ರ ಸಿಂಹಾಸನಕ್ಕೆ ಅಧಿಕಾರಿಗಳಾಗಿರುತ್ತಾರೆ. ತಮ್ಮ ವಂಶವನ್ನು ಮುಂದುವರೆಸುವ ಮತ್ತು ಸಿಂಹಾಸನವನ್ನು ಅಲಂಕರಿಸುವ ಮಕ್ಕಳನ್ನು ಅಪೇಕ್ಷೆ ಪಟ್ಟ ಕಾರಣ ದಶರಥ ಮಹಾರಾಜರು ಈ ಮೂವರಿಗೆ ಮಾತ್ರ ಪಾಯಸ ನೀಡಿದರು. ಮತ್ತು, ಮಹಾನುಭಾವರನ್ನು ಮಕ್ಕಳನ್ನಾಗಿ ಪಡೆಯುವ ತಪಸ್ಸು ಮಾಡಿದ್ದವರು ಈ ಮೂವರು ಮಾತ್ರವೇ. 
  
  ದಶರಥ ಮಹಾರಾಜರಿಗೆ ಉಳಿದ ಧರ್ಮಪತ್ನಿಯರಲ್ಲಿ ಮಕ್ಕಳಾಗಿದ್ದರು. ಆದರೆ ಈ ಮೂವರಲ್ಲಿ ಮಾತ್ರ ಮಕ್ಕಳಾಗಿರಲಿಲ್ಲ. 
  
  ಶಾಸ್ತ್ರದ ದೃಷ್ಟಿಯಿಂದ ಕಲಿಯುಗದಲ್ಲಿಯೂ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮದುವೆಯಾಗಬಹುದು. ಆದರೆ, ಭಾರತದ ಕಾನೂನು ಅದನ್ನು ನಿಷೇಧಿಸಿದೆಯಷ್ಟೆ. 
  
  ಹೆಂಗಸಿನ ಬಹುಪತಿತ್ವವಿಚಾರ. ಸಾಮಾನ್ಯ ನೆಲೆಗಟ್ಟಿನಲ್ಲಿ ಹೆಣ್ಣಿಗೆ ಅನೇಕ ಮದುವೆಯಿಲ್ಲ. ಆದರೆ, ಎಲ್ಲ ನಿಯಮಗಳಿಗೂ ಅಪವಾದವಿರುತ್ತವೆ. 
  
  ಸಣ್ಣ ವಯಸ್ಸಿನಲ್ಲಿಯೇ ಗಂಡ ತೀರಿಹೋದಾಗ, ದೇಶಾಂತರ ಹೋಗಿಬಿಟ್ಟಾಗ, ಅಥವಾ ಅತ್ಯಂತ ನೀಚಕರ್ಮವನ್ನು ಮಾಡಿದಾಗ ಮತ್ತೊಂದು ಮದುವೆಯಾಗುವ ಅಧಿಕಾರ ಸ್ತ್ರೀಯರಿಗೂ ಇದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಮತ್ತು ಅದನ್ನು ಕಲಿಯುಗದಲ್ಲಿಯೂ ಆಚರಿಸಬಹುದು ಎಂದು ಪರಾಶರರು ಆದೇಶಿಸುತ್ತಾರೆ. ಈ ಕುರಿತು ವಿಸ್ತೃತವಾದ ಚರ್ಚೆಯ ಆವಶ್ಯಕತೆಯಿದೆ. ಇದರ ವಿರೋಧಿ-ಸಂವಾದಿ ಪ್ರಮಾಣಗಳನ್ನೆಲ್ಲ ಸಂಗ್ರಹಿಸಿದ್ದೇನೆ. ಬರೆಯಲೂ ಸಹ ಆರಂಭಿಸಿದ್ದೇನೆ. ಲೇಖನ ಉಪನ್ಯಾಸಗಳು ಮುಗಿದ ನಂತರ ಅವನ್ನು ಪ್ರಕಟಿಸುತ್ತೇನೆ. 
  
  
 • Jayashree Karunakar,Bangalore

  8:13 AM , 14/04/2020

  ಗುರುಗಳೆ
  
  
  ದಶರಥ ಮಹಾರಾಜರಿಗೆ ಕೈಕೇಯಿ ಅತ್ಯಂತ ಪ್ರೀತಿ ಪಾತ್ರಳಾದ ಹೆಂಡತಿ ಅನ್ನುವದು ಲೋಕದಲ್ಲಿ ಪ್ರಚಲಿತವಾದ ಮಾತು...
  
  ಹಾಗಿದ್ದರೂ ದಶರಥ ಮಹಾರಾಜರು ಮೊದಲು ಪಾಯಸ ನೀಡಿದ್ದು ಕೌಸಲ್ಯಾ ದೇವಿಗೆ ಯಾಕೆ ? ಅದೂ ಕೂಡ ದೊಡ್ಡ ಭಾಗ...
  
  ಹಾಗಾದರೆ ದಶರಥ ಮಹಾರಾಜರಿಗೆ ಮೊದಲೇ ಗೊತ್ತಿತ್ತ ಯಾರಲ್ಲಿ ಯಾರು ಹುಟ್ಟಿ ಬರುತ್ತಾರೆ ಅಂತ ?
  
  ಅದೇ ರೀತಿಯಲ್ಲಿ ಭಾಗ ಮಾಡಲು ಯಾರು ಆಜ್ಞೆ ಮಾಡಿದರು ?

  Vishnudasa Nagendracharya

  ದಶರಥ ಮಹಾರಾಜರಿಗೆ ಕೈಕಯಿಯ ಬಗ್ಗೆ ಇದ್ದದ್ದು ಹೆಚ್ಚು ಪ್ರೀತಿಯಲ್ಲ. ಮೋಹ. ಇದು ಮುಂದೆ ಕೌಸಲ್ಯಾ ದಶರಥ ಸಂವಾದದಲ್ಲಿ ಸ್ಪಷ್ಟವಾಗುತ್ತದೆ. 
  
  ಕೌಸಲ್ಯಾದೇವಿಯರು ಪ್ರಥಮ ಧರ್ಮಪತ್ನಿ. ಹೀಗಾಗಿ ಅವರಿಗೆ ಪ್ರಥಮ ಭಾಗವನ್ನು ನೀಡಿದ್ದರು. 
  
  ಪುರಾಣಗಳ ಪ್ರಕಾರ ದಶರಥ ಮಹಾರಾಜರಿಗೆ ಯಾವ ಮಡದಿಯಲ್ಲಿ ಯಾವ ಮಕ್ಕಳು ಹುಟ್ಟುತ್ತಾರೆ ಎನ್ನುವದು ತಿಳಿದಿತ್ತು. ಹೀಗಾಗಿ ಅವರು ಆ ರೀತಿಯಲ್ಲಿ ವಿಭಾಗ ಮಾಡಿದರು. 
  
  ಹೀಗೇ ವಿಭಾಗ ಮಾಡು ಎಂದು ಅವರಿಗೆ ಯಾರೂ ಆಜ್ಞೆ ಮಾಡಿರಲಿಲ್ಲ. 
 • Padmini Acharya,Mysuru

  12:13 PM, 01/04/2020

  🙏ಶ್ರೀ ಗುರುಭ್ಯೋ ನಮಃ🙏
  
  ಒಂದು ಪ್ರಶ್ನೆ..
  
  ದೇವತೆಗಳಿಗೆ ತೊಂದರೆ ಉಂಟಾಗುವ ರೀತಿ ಬ್ರಹ್ಮದೇವರು ಅಸುರರಿಗೆ ಯಾಕಾಗಿ ವರನನ್ನು ನೀಡುತ್ತಾರೆ?
  ಅದರಿಂದ ಉಂಟಾಗುವ ಅನರ್ಥ ಏನು ಎಂದು 
  ಬ್ರಹ್ಮದೇವರಿಗೆ ತಿಳಿದಿರುತ್ತದಲ್ಲವೆ ಮತ್ತು ಸಜ್ಜನರಿಗೆ ತೊಂದರೆ ಉಂಟು ಮಾಡುವದು ಮಹಾ ಪಾಪ ಅಲ್ಲವೇ ಅಂತಹ ಕೆಲಸವನ್ನು ಯಾಕಾಗಿ ಬ್ರಹ್ಮದೇವರು ಮಾಡುತ್ತಾರೆ?

  Vishnudasa Nagendracharya

  ಈ ಪ್ರಶ್ನೆಗೆ ತ್ರಿಪುರಾಸುರ ಸಂಹಾರದ ಉಪನ್ಯಾಸದಲ್ಲಿ ಈಗಾಗಲೇ ಉತ್ತರ ನೀಡಲಾಗಿದೆ. VNU395
  
  ಹಾಗೆಯೇ ತತ್ವಸುರಭಿಯ ಪ್ರಶ್ನೋತ್ತರದಲ್ಲಿ ಸಹ ಪ್ರಕಟಿಸಲಾಗಿದೆ. VNP018
 • Vidhya,Gobichettipalayam

  5:59 PM , 01/04/2020

  Ghatanegalu kanna mind nadeyuvanthe vivarisideeri.👌
 • Santosh Patil,Gulbarga

  11:17 PM, 31/03/2020

  Thanks Gurugale 🙏🙏💐
 • Jayashree Karunakar,Bangalore

  8:15 AM , 31/03/2020

  ಮಕ್ಕಳನ್ನು ಪಡೆಯಲು ಪುತ್ರಕಾಮೇಷ್ಟಿ ಮಾತ್ರ ಸಾಕಾಗಿತ್ತಲ್ಲ... 
  
  ದಶರಥ ಮಹಾರಾಜರು
  ಅಶ್ವಮೇಧ ಯಜ್ಞವನ್ನು ಯಾವ ಫಲದ ಅಪೇಕ್ಷೆಯನ್ನಿಟ್ಟುಕೊಂಡು ಮಾಡಿದರು ಗುರುಗಳೆ ?

  Vishnudasa Nagendracharya

  चिन्तयानस्य तस्यैवं बुद्धिरासीन्महात्मनः। 
सुतार्थं वाजिमेधेन किमर्थं न यजाम्यहम्	॥ २ ॥
  
  मम लालप्यमानस्य पुत्रार्थं नास्ति वै सुखम्। 
  तदर्थं हयमेधेन यक्ष्यामीति मतिर्मम॥ ८ ॥
  
  VNU888 "ಯಜ್ಞ ಮಾಡುವ ನಿರ್ಧಾರ" ಎಂಬ ಉಪನ್ಯಾಸದ 23 ಮತ್ತು 24 ನೆಯ ನಿಮಿಷದಲ್ಲಿ ಈ ಶ್ಲೋಕಗಳನ್ನು ವಿವರಿಸಿದ್ದೇನೆ. 
  
  ಮಕ್ಕಳಾಗಬೇಕಾದರೆ ದೇವರ ಅನುಗ್ರಹ ಬೇಕು, ಆ ಅನುಗ್ರಹಕ್ಕಾಗಿ ನಾನು ಅಶ್ವಮೇಧವನ್ನು ಮಾಡುತ್ತೇನೆ ಎಂದು ದಶರಥ ಮಹಾರಾಜರು ಸಂಕಲ್ಪಿಸಿದರು. ಆ ಸಂಕಲ್ಪದ ನಂತರ ಸುಮಂತ್ರರು ಋಷ್ಯಶೃಂಗರ ವೃತ್ತಾಂತವನ್ನು ಹೇಳಿದರು. ಋಷ್ಯಶೃಂಗರು ಪುತ್ರಕಾಮೇಷ್ಟಿಯನ್ನು ಮಾಡಿಸಿದರು. 
  
  ಹೀಗಾಗಿ ಮೊದಲು ಸಂಕಲ್ಪಿಸಿದ ಅಶ್ವಮೇಧವನ್ನು ಮುಗಿಸಿ ಆ ನಂತರ ಪುತ್ರಕಾಮೇಷ್ಟಿಯನ್ನು ಮಾಡಿದರು. 
  
  ಅಶ್ವಮೇಧ ಮಾಡಿದ ಪುಣ್ಯದಿಂದ ಪುತ್ರಕಾಮೇಷ್ಟಿಯಿಂದ ಪೂರ್ಣ ಫಲವನ್ನು ಪಡೆಯುವ ಅರ್ಹತೆ ದೊರೆಯಿತು. 
  
 • Gururaj,Mysuru

  6:47 AM , 31/03/2020

  Pujya Gurugale, In previous Upanyasa it was mentioned that the next upanyasa will be about Violence in Yajna. 🙏🙏

  Vishnudasa Nagendracharya

  ಮಾಂಸಾಹಾರ ಮತ್ತು ಯಜ್ಞದಲ್ಲಿನ ಪ್ರಾಣಿಬಲಿಯ ಕುರಿತು ವಿಸ್ತಾರವಾಗಿ ಬರೆಯುತ್ತಿದ್ದೇನೆ, ಮತ್ತು ಉಪನ್ಯಾಸಗಳನ್ನು ಸಿದ್ಧ ಪಡಿಸುತ್ತಿದ್ದೇನೆ. ಪ್ರತ್ಯೇಕವಾಗಿ ಪ್ರಕಟಿಸುತ್ತೇನೆ. ಇನ್ನೂ ಸ್ವಲ್ಪ ಸಮಯ ಆಗಬಹುದು. 
 • deashmukhseshagirirao,Banglore

  6:51 AM , 31/03/2020

  🙏🏻🙏🏻🙏🏻🙏🏻🙏🏻