Upanyasa - VNU897

ದೇವತೆಗಳ ಅವತಾರ

ಶ್ರೀಮದ್ ರಾಮಾಯಣಮ್ — 15

ಭಗವಂತನ ಸೇವೆಗೆ ಸಕಲ ದೇವತೆಗಳೂ ಕಪಿಗಳಾಗಿ ಹುಟ್ಟಿಬರುವ ಘಟನೆಯನ್ನಿಲ್ಲಿ ಕೇಳುತ್ತೇವೆ. 

ದೇವತೆಗಳು ತಮಗೆ ತಾವೇ ಮಕ್ಕಳಾಗಿ ಹುಟ್ಟಿಬಂದರು ಎಂದು ರಾಮಾಯಣ ತಿಳಿಸುತ್ತದೆ. ಹಾಗಾದರೆ, ಎಲ್ಲ ದೇವತೆಗಳಿಗೂ ತಂದೆ ರೂಪವೊಂದು, ಮಗನ ರೂಪವೊಂದು ಹೀಗೆ ಎರಡು ರೂಪಗಳಿತ್ತೆ? 

ಲಕ್ಷಣಭರಿತವಾದ, ಮಹಾಬಲಿಷ್ಠವಾದ, ಪರಮಸೌಂದರ್ಯದ ದೇವತೆಗಳು, ಮನುಷ್ಯರೂ ಯಾವ ಪ್ರಾಣಿಗಳನ್ನು ಕಂಡು ನಗಾಡುತ್ತಾರೆಯೋ, ಅಂತಹ ಕಪಿಯ ರೂಪದಲ್ಲೇಕೆ ಹುಟ್ಟಿ ಬಂದರು?

ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. 

Play Time: 38:16

Size: 1.37 MB


Download Upanyasa Share to facebook View Comments
3599 Views

Comments

(You can only view comments here. If you want to write a comment please download the app.)
 • prema raghavendra,coimbatore

  2:53 PM , 24/05/2020

  Anantha namaskara! Danyavaada!
 • prema raghavendra,coimbatore

  2:53 PM , 24/05/2020

  Anantha namaskara! Danyavaada!
 • prema raghavendra,coimbatore

  2:53 PM , 24/05/2020

  Anantha namaskara! Danyavaada!
 • prema raghavendra,coimbatore

  2:53 PM , 24/05/2020

  Anantha namaskara! Danyavaada!
 • prema raghavendra,coimbatore

  1:05 PM , 23/05/2020

  Anantha namaskara! Danyavada!
 • Narayanaswamy,Mysore

  6:48 PM , 10/05/2020

  ಗುರುಗಳಿಗೆ ನಮಸ್ಕಾರಗಳು 
  ಗುರುಗಳೇ ಎಲ್ಲಾ ದೇವತೆಗಳು ಅವತಾರ ಮಾಡಿ ಭಗವಂತ ನ ಸೇವೆ ಮಾಡತಾರೆ ಹಾಗೆ ಗರುಡ ದೇವರು ಭಗವಂತ ನ ಸೇವೆ ಮಾಡಲಿಕ್ಕೆ ಅವತಾರ ಮಾಡಿ ಬರುವುದಿಲ್ಲವೇ 🙏🙏🙏🙏🙏🙏

  Vishnudasa Nagendracharya

  ಗರುಡದೇವರು ಅವತಾರ ಮಾಡುವದಿಲ್ಲ. ಮೂಲರೂಪದಿಂದಲೇ ಸೇವೆ ಸಲ್ಲಿಸುತ್ತಾರೆ. 
  
  ಶ್ರೀರಾಮಾವತಾರದಲ್ಲಿ ನಾಗಾಸ್ತ್ರದಿಂದ ರಾಮದೇವರ ಸೈನ್ಯವನ್ನು ಕಾಪಾಡುತ್ತಾರೆ. 
  
  ಶ್ರೀಕೃಷ್ಣಾವತಾರದಲ್ಲಿ ಭಗವಂತನಿಗೆ ಕಿರೀಟ ಸಮರ್ಪಣೆ ಮಾಡಿ, ಮತ್ತು ಅನೇಕ ಸಂದರ್ಭಗಳಲ್ಲಿ ಅವನ ವಾಹನವಾಗಿಯೂ ಸೇವೆ ಸಲ್ಲಿಸುತ್ತಾರೆ. 
 • Madhu Simha,Bangalore

  10:00 PM, 17/04/2020

  ನಮಸ್ಕಾರ ಆಚಾರ್ಯರೆ, 
  
  ೧. ರುದ್ರ ದೇವರು ಅವತಾರ ಮಾಡದ ಕಾರಣವೇನು?
  
  ೨. ಅವತಾರ ಮಾಡಿಲ್ಲ ದಿದ್ದರೂ ಸೇವೆ ಮಾಡಿದ ಪ್ರಸಂಗ ರಾಮಾಯಣದಲ್ಲಿ ಇದೆಯೇ?

  Vishnudasa Nagendracharya

  ರುದ್ರದೇವರು ದೂರ್ವಾಸರ ರೂಪದಿಂದ ರಾಮದೇವರ ಸೇವೆಯನ್ನು ಮಾಡುತ್ತಾರೆ. 
  
  ರುದ್ರದೇವರ ಕಾರ್ಯ ಸಂಹಾರ ಮಾಡುವದು, ಮುಗಿಸುವದು. ಶ್ರೀರಾಮಾವತಾರದ ಕಾಲದಲ್ಲಿ ಲಕ್ಷ್ಣಣ ಮೊದಲಾದವರು ಅವತಾರ ಕಾರ್ಯವನ್ನು ಮುಗಿಸಲು ದೂರ್ವಾಸರೂಪದಿಂದ ಕಾರಣರಾಗುತ್ತಾರೆ. ಮುಂದೆ ಈ ವಿಷಯ ಬರುತ್ತದೆ. 
  
  ರಾವಣನ ಸಂಹಾರವಾದ ಬಳಿಕ ಬ್ರಹ್ಮದೇವರ ಜೊತೆಯಲ್ಲಿ ರುದ್ರದೇವರ ಬಂದು ಸ್ತೋತ್ರವನ್ನೂ ಮಾಡುತ್ತಾರೆ, ರಾಮದೇವರ ಸರ್ವೋತ್ತಮತ್ವವನ್ನು ಸ್ಥಾಪಿಸುವ ಘಟನೆಗೆ ಕಾರಣರಾಗುತ್ತಾರೆ. 
  
  ಶಿವಧನುಷ್ಯವನ್ನು ಜನಕಮಹಾರಾಜರಿಗೆ ನೀಡುವ ಮುಖಾಂತರ ಸೀತಾ-ರಾಮಕಲ್ಯಾಣಕ್ಕೆ ಸೇವೆ ಮಾಡುತ್ತಾರೆ. ರಾಮನ ಪರಾಕ್ರಮ ಅತುಲವಾದದ್ದು ಎಂದು ಸ್ಥಾಪಿಸುತ್ತಾರೆ. 
 • Padmini Acharya,Mysuru

  12:03 PM, 08/04/2020

  🙏ಶ್ರೀ ಗುರುಭ್ಯೋ ನಮಃ🙏
  
  ದೇವರ ಸೇವೆಯನ್ನು ಮಾಡಬೇಕೆಂದು ಸಂಕಲ್ಪ ಮಾಡಿ ದೇವತೆಗಳು ಕಪಿಗಳ ರೂಪದಲ್ಲಿ ಅವತರಿಸಿ ಬಂದರೆ ಅವರಿರುವಲ್ಲಿಗೆ ಸ್ವಾಮಿ ಬಂದು ಸೇವೆಯನ್ನು ಸ್ವೀಕರಿಸಿದ ಎಂಬ ಭಾಗ ತುಂಬಾ ಅದ್ಭುತವಾಗಿದೆ.
 • DESHPANDE P N,BANGALORE

  2:02 PM , 03/04/2020

  S.Namskargalu . Anugrahvirali
 • Jayashree Karunakar,Bangalore

  11:21 AM, 02/04/2020

  ಗುರುಗಳೆ ನಾವಾಗಿಯೇ ಇಂತಹ ಶ್ರೇಷ್ಟವಾದ ಗ್ರಂಥಗಳನ್ನು ಓದಿದರೆ ಕೇವಲ ಕಥೆಯಷ್ಟೆ ದೊರೆಯಬಹುದು.....
  
  ತತ್ವಗಳನ್ನು ಅಥೖೆ೯ಸಿಕೊಳ್ಳಲು ಸಾಧ್ಯವೇ ಇಲ್ಲ....
  
  ರಸಾಸ್ವಾದ ಸಿಗೋದೆ ಇಲ್ಲ....
  
  ಮನಸ್ಸಿನ ಪ್ರಶ್ನೆಗಳಿಗೆ ಉತ್ತರವಂತೂ ದೊರವೇ ಉಳಿಯಿತು.....
  
  ಶ್ರೀಮದ್ಭಾಗವತದಿಂದ ನಮ್ಮ ಜೀವ ಚೈತನ್ಯದಲ್ಲಿದ್ದ ಭಕ್ತಿಯನ್ನು ನಮಗೆ ಪರಿಚಯಿಸಿದ, ಮತ್ತು ಇದೀಗ ರಾಮಾಯಣದ ಪ್ರವಚನಗಳಿಂದ ನಮ್ಮ ಮನಸ್ಸನ್ನು ಆನಂದತುಂದಿಲದಿಂದ ಸಂಭ್ರಮಿಸುವಂತೆ ಮಾಡುತ್ತಿರುವ...
  ನಿಮಗೆ ಭಕ್ತಿಯ ನಮಸ್ಕಾರಗಳನ್ನು ನಮ್ಮಗರಿವಿಲ್ಲದೆಯೇ ನಮ್ಮ ಮನಸ್ಸು ಮಾಡುತ್ತಿದೆ...🙏🙏
  
  ಇವೆಲ್ಲವನ್ನೂ ನಿಮ್ಮಿಂದ ಪಡೆಯುತ್ತಿರುವ ನಮ್ಮದೆಂತಹ ಭಾಗ್ಯವಿದು ಗುರುಗಳೆ....
  
  ನಿಮಗೆ ಮತ್ತೊಮ್ಮೆ ಭಕ್ತಿಯ ನಮಸ್ಕಾರಗಳು...
 • Santosh Patil,Gulbarga

  12:46 PM, 01/04/2020

  Thanks Gurugale 🙏💐🙏
 • deashmukhseshagirirao,Banglore

  7:51 AM , 01/04/2020

  🙏🏻🙏🏻🙏🏻🙏🏻🙏🏻