Upanyasa - VNU899

ಲಕ್ಷ್ಮಣ ದೊಡ್ಡವನೋ, ಭರತ ದೊಡ್ಡವನೋ?

ಶ್ರೀಮದ್ ರಾಮಾಯಣಮ್ — 17 — ರಾಮನ ತಮ್ಮಂದಿರು

ರಾಮನ ತಮ್ಮಂದಿರಲ್ಲಿ ಲಕ್ಷ್ಮಣನೇ ದೊಡ್ಡವನು, ಭರತನಲ್ಲ, ಲಕ್ಷ್ಮಣ ಶತ್ರುಘ್ನರು ಅವಳಿ ಮಕ್ಕಳಲ್ಲ, ನಾಲ್ಕು ಜನರು ಒಂದೂವರೆ ವರ್ಷದ ಅವಧಿಯಲ್ಲಿ ಜನಿಸಿದ್ದು, ಮೂರು ದಿವಸಗಳಲ್ಲಿ ಅಲ್ಲ ಎಂಬೆಲ್ಲ ವಿಷಯಗಳ ನಿರೂಪಣೆ ಇಲ್ಲಿದೆ. ಶ್ರೀಮಧೋಕ್ಷಜ ತೀರ್ಥ ಪರಂಪರೆಯ ಭೂಷಾಮಣಿಗಳಾದ ಶ್ರೀ ವಿಶ್ವಪತಿ ತೀರ್ಥ ಶ್ರೀಪಾದಂಗಳವರು ಮಾಡಿರುವ ವಿಸ್ತೃತ ಚರ್ಚೆಯ ಅನುವಾದದೊಂದಿಗೆ. 

ರಾಮ ಎಂಬ ಶಬ್ದದ ಅಪೂರ್ವ ಅರ್ಥಗಳು

Play Time: 32:11

Size: 7.45 MB


Download Upanyasa Share to facebook View Comments
2980 Views

Comments

(You can only view comments here. If you want to write a comment please download the app.)
 • Divya Pai,Udupi

  6:46 PM , 24/05/2022

  Wow... E tara yaaru explain madlilla. "Laxmana Shatrugna twins" Hige namageshto tappu tappu tilluvalikegallive. Thank you for the clarification.
 • Jyothi Gayathri,Harihar

  12:49 PM, 18/04/2021

  🙏🙏🙏🙏🙏
 • Abburu Rajeeva,Channapattana

  8:32 PM , 07/06/2020

  🙏🙏🙏🙏
 • prema raghavendra,coimbatore

  12:58 PM, 27/05/2020

  Anantha namaskara! Danyavada!
 • DESHPANDE P N,BANGALORE

  1:48 PM , 08/04/2020

  S.Namaskargaku. Anugrahvirali
 • Santosh Patil,Gulbarga

  10:03 PM, 07/04/2020

  Thanks Gurugale 💐🙏💐
 • M V Lakshminarayana,Bengaluru

  11:59 AM, 04/04/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ತಿಣುಕಿದನು ಪಣಿರಾಯ ರಾಮಾಯಣದ ಕವಿಗಳ ಭಾರದಲಿ ಎಂಬಂತೆ, ಅನೇಕ ಕವಿಗಳು ಹಲವಾರು ರೀತಿಯ ಕತೆಗಳನ್ನು ಬರೆದಿದ್ದರೂ, ಆಧಾರ ಸಹಿತ ಸತ್ಯವನ್ನು ನಿರೂಪಿಸುತ್ತಿರುವದಕ್ಕೆ ಅನಂತಾನಂತ ಧನ್ಯವಾದಗಳು. ಇಂತಿ ನಮಸ್ಕಾರಗಳು

  Vishnudasa Nagendracharya

  ಶ್ರೀಹರಿ ವಾಯು ದೇವತಾ ಗುರುಗಳು ನಿಂತು ಮಾಡಿಸುತ್ತಿರುವ ಕಾರ್ಯ🙏🙏🙏
 • Vinaykumar,Bellary

  9:18 AM , 04/04/2020

  ಅಕಾರಾದಭವದ್ಬ್ರಹ್ಮಾ ಜಾಮ್ಬವಾನಿತಿಸಂಜ್ಞಕಃ ।
  ಉಕಾರಾಕ್ಷರಸಂಭೂತ ಉಪೇನ್ದ್ರೋ ಹರಿನಾಯಕಃ ॥ ೨॥
  
  ಮಕಾರಾಕ್ಷರಸಂಭೂತಃ ಶಿವಸ್ತು ಹನುಮಾನ್ಸ್ಮೃತಃ ।
  ಬಿಂದುರೀಶ್ವರಸಂಜ್ಞಸ್ತು ಶತ್ರುಘ್ನಶ್ಚಕ್ರರಾಟ್ ಸ್ವಯಮ್ ॥ ೩॥
  
  ನಾದೋ ಮಹಾಪ್ರಭುರ್ಜ್ಞೇಯೋ ಭರತಃ ಶಂಖನಾಮಕಃ ।
  ಕಲಾಯಾಃ ಪುರುಷಃ ಸಾಕ್ಷಾಲ್ಲಕ್ಷ್ಮಣೋ ಧರಣೀಧರಃ ॥ ೪॥
  
  ಕಲಾತೀತಾ ಭಗವತೀ ಸ್ವಯಂ ಸೀತೇತಿ ಸಂಜ್ಞಿತಾ ।
  ತತ್ಪರಃ ಪರಮಾತ್ಮಾ ಚ ಶ್ರೀರಾಮಃ ಪುರುಷೋತ್ತಮಃ ॥ ೫॥
  
  ಓಮಿತ್ಯೇತದಕ್ಷರಮಿದಂ ಸರ್ವಮ್ । ತಸ್ಯೋಪವ್ಯಾಖ್ಯಾನಂ ಭೂತಂ
  ಭವ್ಯಂ ಭವಿಷ್ಯದ್ಯಚ್ಚಾನ್ಯತ್ತತ್ತ್ವಮನ್ತ್ರವರ್ಣದೇವತಾಛನ್ದೋ
  ಋಕ್ಕಲಾಶಕ್ತಿಸೃಷ್ಟ್ಯಾತ್ಮಕಮಿತಿ |ಯ ಏವಂ ವೇದ ||೬||
  ಯಜುರ್ವೇದೋ ದ್ವಿತೀಯಃ ಪಾದಃ ॥ ೭॥

  Vishnudasa Nagendracharya

  ಈ ಕೃತಿಯನ್ನು ಪೂರ್ಣ ಅವಲೋಕಿಸಿದೆ. ಇದು ಉಪನಿಷತ್ತಿನಂತೆ ಸರ್ವಥಾ ಇಲ್ಲ. ಯಾರದೋ ಸ್ವಕಪೋಲಕಲ್ಪಿತ ಕೃತಿ ಎಂದು ಸ್ಪಷ್ಟವಾಗಿ ತೋರುತ್ತದೆ. ಇದರಲ್ಲಿ ಶಾಸ್ತ್ರಕ್ಕೆ ವಿರುದ್ಧವಾದ ಅನೇಕ ಅಂಶಗಳಿವೆ. 
  
  ಮುಖ್ಯವಾಗಿ ಇದನ್ನು ಪಠಣ ಮಾಡಿದರೆ ಗಾಯತ್ರಿಯನ್ನು ಪ್ರಣವವನ್ನು ಜಪಿಸಿದ್ದರ ನೂರು ಪಟ್ಟು ಪುಣ್ಯ ಬರುತ್ತದಂತೆ. 
  
  ಪ್ರಣವ ಗಾಯತ್ರಿಗಳು ಶಾಸ್ತ್ರಪ್ರಪಂಚದ ಸರ್ವೋತ್ತಮ ಮಂತ್ರಗಳು. ಅವು ನೀಡುವ ಫಲವೇ ಅತ್ಯಧಿಕ. ಬೇರೆಯ ಮಂತ್ರಗಳೆಲ್ಲ ಅವುಗಳ ಹಿಂದೆ. ನಾರಾಯಣಾಷ್ಟಾಕ್ಷರ, ದ್ವಾದಶಾಕ್ಷರ ಪುರುಷಸೂಕ್ತ ಸಹಿತ. 
  
  ಹಾಗೆಯೇ ಇದರಲ್ಲಿ ಹನುಮಂತ ಶಿವನ ಅವತಾರ, ಜಾಂಬವಂತ ಸಾಕ್ಷಾದ್ ಬ್ರಹ್ಮದೇವರು ಇತ್ಯಾದಿ ವಚನಗಳಿವೆ. ಶಾಸ್ತ್ರಸಿದ್ಧಾಂತಕ್ಕೆ ವಿರುದ್ಧವಾದ ಕೃತಿ ಪ್ರಮಾಣವಾಗುವದಿಲ್ಲ. 
 • Vinaykumar,Bellary

  7:33 AM , 04/04/2020

  ಗುರುಗಳೆ   ಭರತ ಶಂಖಾಂಶ ವೆಂದು. ಶತ್ರುಜ್ಞ ಚಕ್ರಾಂಶ ವೆಂದು.   ಈರೀತಿಯಾಗಿ  ಯಾಜ್ಞವಲ್ಕ್ಯ ಮತ್ತು ಭಾರದ್ವಾಜರ ಸಂವಾದ ರೂಪವಾಗಿರುವ ತಾರಸಾರೋಪನಿಷತ್ ನಲ್ಲಿ ಇದೆ ಆದರೇ ಅವತಾರಗಳ ಮೂಲರೂಪ ವ್ಯತ್ಯಾಸ ವಾಯಿತು ಅದು ಹೇಗೆತಿಳಿಯೋದು

  Vishnudasa Nagendracharya

  ವಾಕ್ಯವನ್ನು ತಿಳಿಸಿ 
 • Jayashree Karunakar,Bangalore

  1:58 PM , 03/04/2020

  ಗುರುಗಳೆ ನೀವು ಬೇಗನೆ ಮುಗಿಸುವ ಸಲುವಾಗಿ ಸುಮ್ಮನೆ ಕಥೆಯನ್ನು ಮಾತ್ರ ಹೇಳುತ್ತಾ ಹೋಗೋದಿಲ್ಲ...
  
  ಅಲ್ಲಿರುವ ತತ್ವಗಳನ್ನು ಮನದಟ್ಟು ಮಾಡಿಸುತ್ತಾ...
  
  ಅವಶ್ಯಕತೆಯಿದ್ದಾಗ ಅದನ್ನು ಚಚೆ೯ಯ ರೂಪದಲ್ಲಿ ವಿವರಿಸುತ್ತಾ...
  
  ತತ್ವಗಳನ್ನು ಇನ್ನಷ್ಟು ಮನದಲ್ಲಿ ಪ್ರತಿಷ್ಟಾಪಿಸುವ ಸಲುವಾಗಿ ...
  ಬರಬಹುದಾದಂತಹ ಪ್ರಶ್ನೆಗಳನ್ನು ಉತ್ತರಿಸುತ್ತಾ...
  
  .ಕೆಲವು ಪ್ರಶ್ನೆಗಳನ್ನು ನಾವು ಕೇಳಲೆಂದೇ ಬಿಡುತ್ತಾ...
  
  ಶಾಲೆಗಳಲ್ಲಿ ಒಬ್ಬ ಆದಶ೯ ಶಿಕ್ಷಕರಾದವರು ಪರೀಕ್ಷೆಯನ್ನು ಎದುರಿಸುವ ಸಲುವಾಗಿ ಪಾಠವನ್ನು ಮಾಡದೇ...
  ತನ್ನ ಶಿಷ್ಯನಿಗೆ ಉತ್ತಮವಾದ ಜ್ಞಾನವನ್ನು ನೀಡಲೆಂದೇ ಪಾಠ ಮಾಡಿದಂತಿದೆ....
  
  ತುಂಬಾ ಇಷ್ಟವಾಯಿತು ನೀವು ಅನುಸರಿಸುತ್ತಿರುವ ಕ್ರಮ...
 • Sathya,Mysuru

  7:54 AM , 03/04/2020

  ಸಮುದ್ರಕ್ಕೆ ಸಾವಿರಾರು ನದಿಗಳು ಬಂದು ಸೇರುವಂತೆ, ರಾಮಾಯಣದ ಒಂದೊಂದು ವಿಷಯವನ್ನೂ ಸಹ ಒಬ್ಬೊಬ್ಬ ಮಾಹಾತ್ಮರು ತಿಳಿಸಿರುವ ರೀತಿ ಅದನ್ನೆಲ್ಲ ನೀವು ಹುಡುಕಿ ನಮಗೆ ತಲುಪಿಸಿದ್ದೀರಿ, ಅದು ನಮಗೆ ದೇವರು ನೀಡಿದ ವಿಶೇಷ ಅನುಗ್ರಹ ಎಂದು ತಿಳಿಯಬಹುದು ಧನ್ಯವಾದಗಳು.
 • deashmukhseshagirirao,Banglore

  5:58 AM , 03/04/2020

  🙏🏻🙏🏻🙏🏻🙏🏻🙏🏻