Upanyasa - VNU901

ರಾಮ-ಕೃಷ್ಣಾವತಾರಗಳ ಬಾಲ್ಯ

ಶ್ರೀಮದ್ ರಾಮಾಯಣಮ್ — 19

ರಾಮನ ಬಾಲ್ಯ ಕೃಷ್ಣನಂತೇಕೆ ಇಲ್ಲ ಎಂದು ಅನೇಕರನ್ನು ಕಾಡುವ ಪ್ರಶ್ನೆ. ಬಾಲ್ಯವಷ್ಟೇ ಅಲ್ಲ, ರಾಮ ಏಕಪತ್ನೀವ್ರತಸ್ಥ. ಶ್ರೀಕೃಷ್ಣ ಹದಿನಾರು ಸಾವಿರ ಪತ್ನಿಯರ ನಲ್ಲನಾದ. ಈ ಕುರಿತ ಚರ್ಚೆ ಇಲ್ಲಿದೆ. 

ನಮಗೆ ಶ್ರೀಮಂತಿಕೆ ಬಂದಾಗ ಹೇಗಿರಬೇಕು, ಬಡತನ ಬಂದಾಗ ಹೇಗೆ ವರ್ತಿಸಬೇಕು ಎಂದು ಎರಡೂ ರೂಪಗಳಲ್ಲಿ ಶ್ರೀಮನ್ನಾರಾಯಣ ಕಲಿಸುತ್ತಾನೆ. 

Play Time: 28:24

Size: 1.37 MB


Download Upanyasa Share to facebook View Comments
2958 Views

Comments

(You can only view comments here. If you want to write a comment please download the app.)
 • Abhi,Banglore

  7:39 PM , 13/06/2020

  🙏 ಗುರುಗಳೇ , 
  ಇತ್ತಿಚೀಗೆ ನಾವು ಕೃಷ್ಣ ರಾಧಾ ಕಥೆಗಳನ್ನ ಧಾರಾವಾಹಿ ಮತ್ತು ಇನ್ನಿತರ ಮಾದ್ಯಮದಲ್ಲಿ ಹೆಚ್ಚಾಗಿದೆ .
  ಮತ್ತು ರಾಧಾ ಕೃಷ್ಣರ ISKON temples ಕೂಡ ನಾವು ಬಹಳಷ್ಟು ಕಡೆ ನೋಡಿದ್ದೇವೆ 
  (ರಾಧಾ ಕೃಷ್ಣರ ಈ ಕಥೆಗಳು 12 ಶತಮಾನದ jaidev4 ಅನ್ನೋ ಕವಿ ಬರೆದಿದ್ದಾರೆ ಅನ್ನೋದು ತಿಳಿದಿದೆ ) ಆದ್ರೆ ಇದು ಎಷ್ಟು ಸತ್ಯ ? ರಾಧಾ ಕೃಷ್ಣ ಮದುವೆ ಆಗಿಲ್ಲ, ಪ್ರೀತಿಸುತ್ತಿದ್ದರು , ಮತ್ತು 
  ರಾಧಾ ಕೃಷ್ಣರ ISKON temples ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ 🙏
  | ಶ್ರೀ ಹರಿ |

  Vishnudasa Nagendracharya

  ದಯವಿಟ್ಟು ಒಂದು ಪ್ರಶ್ನೆಯನ್ನು ಒಂದೇ ಕಡೆಯಲ್ಲಿ ಕೇಳಿ. ಎಲ್ಲ ಕಡೆಯಲ್ಲಿಯೂ Post ಮಾಡಬೇಡಿ. 
  
  ಈಗಾಗಲೇ ಅಧಿಕಮಾಸದ ಉಪನ್ಯಾಸಗಳಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿಯಾಗಿದೆ. 
  
  ಸಮಯ ದೊರೆತ ತಕ್ಷಣ ಪ್ರತ್ಯೇಕವಾಗಿಯೂ ಇದಕ್ಕೆ ಉತ್ತರವನ್ನು ಆಡಿಯೋ ರೂಪದಲ್ಲಿ ಪ್ರಕಟಿಸುತ್ತೇನೆ. 
  
  
 • Abburu Rajeeva,Channapattana

  9:41 PM , 10/06/2020

  🙏🙏🙏
 • prema raghavendra,coimbatore

  1:53 PM , 31/05/2020

  Anantha namaskara! Danyavada!
 • Santosh Patil,Gulbarga

  10:04 PM, 07/04/2020

  Thanks Gurugale 💐🙏💐
 • Jayashree Karunakar,Bangalore

  6:40 PM , 07/04/2020

  ಗುರುಗಳೆ 
  
  ರಾಮನ ಬಾಲ್ಯಾವಸ್ಥೆಯನ್ನು 
  ದಶರಥ ಮಗನೆಂಬ ಮೋಹಯುಕ್ತವಾದ ಪ್ರೀತಿಯಿಂದಲೇ ನೋಡುವದೇ ಇದೆ...
  
  ಒಬ್ಬ ಸಾಮಾನ್ಯ ತಂದೆ ಹೇಗೆ ಇರುತ್ತಾನೊ ಹಾಗೆಯೇ ತೋರುತ್ತಿದೆಯಲ್ಲಾ ?
  
  ಎಲ್ಲೂ ಕೂಡ ಭಗವಂತನೆಂಬ ಭಕ್ತಿಯ ಪ್ರೀತಿಯಿಂದ ನೋಡುವ ಸಂಧಭ೯ಗಳೇ ಇಲ್ಲ....
  
  ಕಥೆಯು ಆಗಲೇ ಬಾಲ್ಯಾವಸ್ಥೆ ಮುಗಿದು ಮದುವೆಯ ಸಂಧಭ೯ಕ್ಕೆ ಹತ್ತಿರವಾಗುತ್ತಲಿದೆ ...

  Vishnudasa Nagendracharya

  ಮೊದಲಿಗೆ ಮೋಹ ಎನ್ನುವ ಶಬ್ದ ದಶರಥರ ವಿಷಯದಲ್ಲಿ ಸಲ್ಲುವದಿಲ್ಲ. ಕಾರಣ, ಮೋಹ ಎನ್ನುವ ಶಬ್ದದ ಅರ್ಥವಿಸ್ತಾರವನ್ನು ಈಗಾಗಲೇ ನಾವು ಭಾಗವತದಲ್ಲಿ ಅನೇಕ ಬಾರಿ ತಿಳಿದಿದ್ದೇವೆ. ನಮ್ಮ ವ್ಯಕ್ತಿಗಳು ಪಾಪ ಮಾಡಿದರೂ, ನಮ್ಮವರು ಎಂಬ ಕಾರಣಕ್ಕೆ ಆ ಪಾಪವನ್ನು ಒಪ್ಪಿಕೊಂಡು ಅವರನ್ನು ಪ್ರೀತಿಸುವದು ಮೋಹ. ಧೃತರಾಷ್ಟ್ರ ದುರ್ಯೋಧನನಲ್ಲಿ ಮಾಡಿದ್ದು ಮೋಹ. ದಶರಥರು ರಾಮನಲ್ಲಿ ಮಾಡಿದ್ದು ಮೋಹವಲ್ಲ. ಹೀಗಾಗಿ ಪ್ರಶ್ನೆಯನ್ನು ಸ್ವಲ್ಪ ಬದಲಿಸಬೇಕು. 
  
  ಪ್ರಾಕೃತ ತಂದೆತಾಯಿಗಳಂತೆ ದಶರಥರು ರಾಮನನ್ನು ಕೇವಲ ಮಗನನ್ನಾಗಿ ಕಂಡರೇ? ಭಗವಂತನನ್ನಾಗಿ ಕಾಣಲಿಲ್ಲವೇ ಎಂದು. 
  
  ಈ ಪ್ರಶ್ನೆಗೆ ಕೃಷ್ಣಾವತಾರದ ದೃಷ್ಟಾಂತದ ಮುಖಾಂತರ ಉತ್ತರ ಪಡೆಯೋಣ. ಸುಲಭವಾಗಿ ಅರ್ಥವಾಗುತ್ತದೆ. 
  
  16000 ಜನ ಅಗ್ನಿಯ ‘ಪುತ್ರ’ರು ಪರಮಾತ್ಮನ ಮಡದಿಯರಾಗಬೇಕೆಂದು ಬಯಸಿ, ವಾಯುದೇವರನ್ನು ಕುರಿತು ತಪಸ್ಸು ಮಾಡಿ ಹೆಣ್ಣಾಗಿ ಹುಟ್ಟಿಸುವಂತೆ ಪ್ರಾರ್ಥಿಸುತ್ತಾರೆ. ಕನ್ಯೆಯರಾಗಿ ಹುಟ್ಟಿ ಬಂದು ಶ್ರೀಕೃಷ್ಣನನ್ನು ಮದುವೆಯೂ ಆಗುತ್ತಾರೆ. ಅವರು ಭಗವಂತನ ಕುರಿತಾಗಿ ಅಪಾರ ಭಕ್ತಿಯಿದೆ. ಭಕ್ತರಾಗಿ ಕೇವಲ ಭಕ್ತಿಯನ್ನು ಮಾಡಬೇಕೋ, ಅಥವಾ ಪತ್ಯರಾಗಿ ಪತ್ನಿಯ ಸುಖವನ್ನೂ ಪಡೆಯಬೇಕೋ? ಭಕ್ತಿಯನ್ನು ಮಾಡುತ್ತಲೇ ಪತ್ನಿಯರಾಗಿ ಸುಖವನ್ನೂ ಪಡೆಯುತ್ತಾರೆ. 
  
  ಹಾಗೆ, ಸತ್ಯವತೀ ಪರಾಶರರು, ಯಶೋದೆ ನಂದರು, ದೇವಕೀ ವಸುದೇವ, ರೇಣುಕಾ ಜಮದಗ್ನಿ, ಕೌಸಲ್ಯಾ ದಶರಥರು ಮುಂತಾದ ಮಹಾನುಭಾವರು ದೇವರನ್ನು ದೇವರು ಎಂದೂ ಮಗ ಎಂದೂ ಉಪಾಸನೆ ಮಾಡುವ ಸೌಭಾಗ್ಯವನ್ನು ಪಡೆದವರು. 
  
  ಇವರು ತಪಸ್ಸು ಮಾಡಿ ಭಗವಂತನನ್ನು ಮಗ, ಗಂಡ, ಅಣ್ಣ, ತಮ್ಮ, ಮಿತ್ರನನ್ನಾಗಿ ಪಡೆಯುವದೇ ಭಗವಂತನಿಂದ ಆ ಪುತ್ರಾದಿರೀತಿಯಲ್ಲಿಯ ಸುಖವನ್ನೂ ಅನುಭವಿಸಲು. ಹೀಗಾಗಿ ಅವರು ಅದನ್ನು ಅನುಭವಿಸಲೇಬೇಕು. ನಮ್ಮ ಹಾಗೆ ಕೇವಲ ಭಕ್ತಿ ಮಾಡಿದರೆ ಸಾಲದು. 
  
  
  ಶ್ರೀಮದಾಚಾರ್ಯರು ಭಾಗವತತಾತ್ಪರ್ಯದಲ್ಲಿ ಹೇಳುತ್ತಾರೆ — 
  
  ಗೋಪಿಕೆಯರು ದೇವರಲ್ಲಿ ಕಾಮಯುಕ್ತವಾದ ಭಕ್ತಿಯನ್ನು ಮಾಡಿದರು. ಪಾಂಡವರು ಸ್ನೇಹಯುಕ್ತವಾದ ಭಕ್ತಿಯನ್ನು ಮಾಡಿದರು. ಯಾದವರು ಬಾಂಧವ್ಯಯುಕ್ತವಾದ ಭಕ್ತಿಯನ್ನು ಮಾಡಿದರು. 
  
  ಕಾಮಯುಕ್ತವಾದ ಭಕ್ತಿಯನ್ನು ಮಾಡಲು ಇತರ ಸ್ತ್ರೀಯರಿಗೆ, ಭಾರತೀದೇವಿಗೂ, ಅಧಿಕಾರವಿಲ್ಲ. ಲಕ್ಷ್ಮೀದೇವಿಯ ಸನ್ನಿಧಾನಯುಕ್ತವಾದ ಕೆಲವು ಚೇತನರನ್ನು ಹೊರತುಪಡಿಸಿ. ಹೇಗೆ ಆ ಗೋಪಿಕೆಯರು ಕಾಮಯುಕ್ತವಾದ ಭಕ್ತಿಯನ್ನು ಮಾಡಿದರೋ ಹಾಗೆ ದಶರಥರು ಪುತ್ರಪ್ರೇಮ, ವಿಷ್ಣುಭಕ್ತಿ ಎರಡನ್ನೂ ಹೊಂದಿದ್ದರು. 
  
  ಇನ್ನು ದಶರಥರೂ ಸಹ ಋಜುಗಳಲ್ಲವಾದ್ದರಿಂದ ಆಗಾಗ ಅವರಿಗೆ ನನ್ನ ಮಗ ದೇವರು ಎನ್ನುವದು ಮರೆಯುತ್ತಿತ್ತು. ಉದಾಹರಣೆಗೆ ಪರಶುರಾಮರ ಪ್ರಸಂಗ. ಪರಶುರಾಮರ ಬಳಿ ಮಂಡಿಯೂರಿ ನನ್ನ ಮಗನನ್ನು ಬಿಟ್ಟುಬಿಡು ಎಂದು ಬೇಡಿಕೊಳ್ಳುತ್ತಾರೆ. ಹೀಗೆ, ಇಂತಹ ಕೆಲವು ಸಂದರ್ಭ ಹೊರತು ಪಡಿಸಿ ದಶರಥರಿಗೆ ರಾಮ ಸಾಕ್ಷಾತ್ ನಾರಾಯಣ ಎಂಬ ತಿಳುವಳಿಕೆಯಿತ್ತು. ಮುಂದೆ ಇದು ಸ್ಪಷ್ಟವಾಗುತ್ತದೆ. 
  
  ಅವರ ಭಕ್ತಿ ಪುತ್ರಪ್ರೇಮಯುಕ್ತವಾದ ಭಕ್ತಿಯಾಗಿತ್ತು. ಕೇವಲ ನಮ್ಮ ಭಕ್ತಿಯಂತಲ್ಲ. 
  
  
  
  
 • Poornima Sowda,Bangalore

  2:33 PM , 07/04/2020

  ನಮಸ್ಕಾರ ಗುರುಗಳೇ... ನೀವು ರಾಮ ಮತ್ತು ಕೃಷ್ಣನ ಬಾಲ್ಯವನ್ನು ತುಂಬಾ ಅದ್ಭುತವಾಗಿ ವಿವರಿಸಿದ್ದೀರಿ.
  ನನ್ನ ಪ್ರಶ್ನೆ, ದಶರಥ ಮಹಾರಾಜರಿಗೆ ರಾಮನ ಕಡೆಯಿಂದ ಸೇವೆಯನ್ನು ಮಾಡಿಸಿಕೊಳ್ಳುವಾಗ ಅವರಿಗೆ ಸಾಕ್ಷಾತ್ ನಾರಾಯಣ ನಿಂದ ಸೇವೆಯನ್ನು ಮಾಡಿಕೊಳ್ಳುತ್ತಿದ್ದೇನೆಂದು ಅರಿವು ದಶರಥ ಮಹಾರಾಜರಿಗೆ ಇತ್ತಾ? ಅಥವಾ ಅವರಿಗೆ ಆ ಸಮಯದಲ್ಲಿ ಮರೆವು ಭಗವಂತನು ಕೊಟ್ಟಿದ್ದನೇ

  Vishnudasa Nagendracharya

  ಮುಖ್ಯಪ್ರಾಣದೇವರು ಮತ್ತು ಭಾರತೀದೇವಿಯನ್ನು ( ಋಜುದೇವತೆಗಳು ಮತ್ತು ಋಜಪತ್ನಿಯರನ್ನು ) ಹೊರತು ಪಡಿಸಿ ಉಳಿದ ಎಲ್ಲ ಜೀವರಾಶಿಗಳಿಗೂ ಭಗವಂತನ ಕುರಿತ ಜ್ಞಾನ ಸದಾ ಇರುವದಿಲ್ಲ. ಆಗಾಗ ಮರೆವು ಉಂಟಾಗುತ್ತದೆ. ಕೆಲವು ಬಾರಿ ಬೇಕೆಂದೇ ಭಗವಂತ ತನ್ನ ಕುರಿತ ಮರೆವನ್ನು ನೀಡುತ್ತಾನೆ. 
  
  ದಶರಥ ಮಹಾರಾಜರಿಗೆ ಅನೇಕ ಸಂದರ್ಭಗಳಲ್ಲಿ ತನ್ನ ಮಗ ನಾರಾಯಣ ಎಂಬ ಜ್ಞಾನವಿದ್ದರೂ ಕೆಲವು ಬಾರಿ ತಿರೋಹಿತವಾಗುತ್ತಿತ್ತು.