Upanyasa - VNU903

ವಿಶ್ವಾಮಿತ್ರರ ಉಪದೇಶ

ಶ್ರೀಮದ್ ರಾಮಾಯಣಮ್ — 21 

ರಾಮನನ್ನು ಕಳುಹಿಸುವ ಕಷ್ಟದಿಂದ, ರಾವಣ ಮೊದಲಾದ ದೈತ್ಯರ ಭಯದಿಂದ ದಶರಥ ಮಹಾರಾಜರು ಚಿಂತಾಗ್ರಸ್ತರಾದರೆ ವಸಿಷ್ಠರು ರಾಮನ ಮಾಹಾತ್ಮ್ಯವನ್ನು ತಿಳಿಸಿ ವಿಶ್ವಾಮಿತ್ರರೊಂದಿಗೆ ಕಳುಹಿಸುತ್ತಾರೆ. ಅಯೋಧ್ಯೆಯನ್ನು ಬಿಟ್ಟ ಬಳಿಕ ಸರಯೂ ನದಿಯ ಏಕಾಂತ ತೀರದಲ್ಲಿ ರಾಮಲಕ್ಷ್ಮಣರಿಗೆ ವಿಶ್ವಾಮಿತ್ರರು ಸಮಗ್ರ ಅಸ್ತ್ರಗಳ ಉಪದೇಶವನ್ನು ಮಾಡಿದ ಪ್ರಸಂಗದ ವಿವರಣೆ ಇಲ್ಲಿದೆ. 

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠನರಶಾರ್ದೂಲ ಪೂರ್ವಾ ಸಂಧ್ಯಾ ಪ್ರವರ್ತತೇ

ಎನ್ನುವ ಸುಪ್ರಸಿದ್ಧ ಶ್ಲೋಕ ಇರುವದು ವಾಲ್ಮೀಕಿ ರಾಮಾಯಣದ ಇದೇ ಭಾಗದಲ್ಲಿ. ಆ ಶ್ಲೋಕದ ಅರ್ಥವವಿರಣೆ ಇಲ್ಲಿದೆ. 

Play Time: 32:20

Size: 1.37 MB


Download Upanyasa Share to facebook View Comments
3032 Views

Comments

(You can only view comments here. If you want to write a comment please download the app.)
 • Divya Pai,Udupi

  8:43 PM , 16/06/2022

  The way you explained Suprabatham is awesome. I actually got goosebumps while listening
 • Abburu Rajeeva,Channapattana

  8:50 PM , 28/06/2020

  🙏🙏🙏
 • prema raghavendra,coimbatore

  2:43 PM , 31/05/2020

  Anantha namaskara! Danyavada!
 • Prasanna Kumar N S,Bangalore

  9:21 PM , 10/05/2020

  ಗುರುಗಳ ಕ್ಷಮೆಯಾಚಿಸಿ ಈ ಪ್ರಶ್ನೆ.
  
  ಇಡೀ ಭೂಂಡಲವನ್ನ ದಶರಥ ಮಹಾರಾಜರಿಗೆ ಬಿಟ್ಟುಕೊಟ್ಟು ಅಷ್ಟು ಬಲಶಾಲಿಯಾದ ರಾವಣ ತಾನೇಕೆ ಅಷ್ಟು ಸಣ್ಣ ಲಂಕೆಯಲ್ಲಿದ್ದ?

  Vishnudasa Nagendracharya

  ಲಂಕೆ ಅಷ್ಟು ಪರಮಾದ್ಭುತವಾಗಿತ್ತು. 
  
  ಕಾರಣ, ಆ ಲಂಕೆಯನ್ನು ನಿರ್ಮಾಣ ಮಾಡಿದ್ದು ವಿಶ್ವಕರ್ಮರು. ಅಲ್ಲಿದ್ದ ಪರ್ವತಗಳಿಗೆ ಕುಸುರಿ ಮಾಡಿದ ಬಂಗಾರದ ಹೊದಿಕೆಯಿದ್ದವು. 
  
  ರಾವಣನ ಮಾತಾಮಹರಾದ ಮಾಲ್ಯವಂತ, ಸುಮಾಲಿ, ಮಾಲಿಯರು ಅಲ್ಲಿ ವಾಸವಾಗಿದ್ದರು. ಅವರು ದೇವರ ಭಯದಿಂದ ಆ ಲಂಕೆಯನ್ನು ಬಿಟ್ಟು ರಸಾತಲ ಸೇರುತ್ತಾರೆ. 
  
  ಆ ನಂತರ ಅಲ್ಲಿ ವಿಶ್ರವಸರ ಮೊದಲನೆಯ ಮಗ ವೈಶ್ರವಣರು (ಕುಬೇರರು) ವಾಸವಾಗಿರುತ್ತಾರೆ, ಧನಾಧಿಪತಿಯಾದ ಅವರು ಮತ್ತಷ್ಟು ವೈಭವವವನ್ನು ಲಂಕೆಗೆ ನೀಡುತ್ತಾರೆ. 
  
  ಆ ನಂತರ ರಾವಣ ಅವರಿಂದ ಅದನ್ನು ಕಸಿದುಕೊಳ್ಳುತ್ತಾನೆ. ಬ್ರಹ್ಮದೇವರ ವರವನ್ನು ಪಡೆದು ಪುಟ್ಟ ಲಂಕೆಯಲ್ಲಿ ಅಸಂಖ್ಯ ರಾಕ್ಷಸರಿಗೆ ವಾಸ ಮಾಡಲು ಅವಕಾಶ ನೀಡುತ್ತಾನೆ. ಈಗ ಇಡಿಯ ವಿಶ್ವದ ಜನಸಂಖ್ಯೆ ಏಳುನೂರು ಕೋಟಿ. ರಾವಣನ ಬಲಿ ಒಂದು ಕೋಟಿ ಕೋಟಿ ರಾಕ್ಷಸಸೇನಾಪತಿಗಳಿದ್ದರು. ರಾಕ್ಷಸರಲ್ಲ, ಸೇನಾಪತಿಗಳ ಸಂಖ್ಯೆಯೇ ಸಾವಿರ ಕೋಟಿಯಲ್ಲ, ಲಕ್ಷ ಕೋಟಿಯಲ್ಲ, ಒಂದು ಕೋಟಿ ಕೋಟಿ. ಇನ್ನು ರಾಕ್ಷಸರ ಸಂಖ್ಯೆ ಎಷ್ಟಿರಲಿಕ್ಕಿಲ್ಲ. ಮೂವತ್ತು ಸಾವಿರ ಮಹೌಘ ರಾಕ್ಷಸರಿದ್ದರು. 
  
  ಇಷ್ಟೆಲ್ಲರನ್ನೂ ಲಂಕೆಯಲ್ಲಿ ವಾಸ ಮಾಡಿಸುವಷ್ಟು ಬ್ರಹ್ಮದೇವರಿಂದ ವರ ಪಡೆದಿದ್ದ ಮತ್ತು ಜಗತ್ತಿನ ಎಲ್ಲ ತರಹದ ವೈಭವಗಳಿಂದ ಲಂಕೆಯನ್ನು ಶೃಂಗರಿಸಿದ್ದ. 
  
  ಹೀಗಾಗಿ ಅವನಿಗೆ ಇಡಿಯ ಜಗತ್ತಿಗಿಂತ ತನ್ನ ಲಂಕೆ ಅತ್ಯಂತ ಪ್ರಿಯವಾಗಿತ್ತು. 
  
  ಮುಂದೆ ಇವೆಲ್ಲ ವಿಷಯಗಳೂ ರಾಮಾಯಣದ ಉಪನ್ಯಾಸಗಳಲ್ಲಿ ವಿಸ್ತಾರವಾಗಿ ಬರುತ್ತವೆ. 
  
  ಮತ್ತು ರಾವಣನಿಗೆ ವಿಶಾಲವಾದ ಸಾಮ್ರಾಜ್ಯ ಅದರ ಪಾಲನೆ ಇದರ ಅಪೇಕ್ಷೆ ಇರಲಿಲ್ಲ. ಅವನಿಗೆ ಇದ್ದದ್ದು ಜಯಕಾರದ ಹುಚ್ಚು. ಯುದ್ಧದ ಗೀಳು. 
  
  ಎಲ್ಲ ರಾಜರ ಬಳಿಗೆ ಹೋಗಿ ಯುದ್ಧಕ್ಕೆ ಬಾ ಎಂದು ಆಹ್ವಾನಿಸುತ್ತಿದ್ದ, ಬರಲು ಸಾಧ್ಯವಿಲ್ಲದಿದ್ದರೆ ಸೋತೆ ಎಂದು ಹೇಳಿ ಎಂದು ಕಾಡಿಸುತ್ತಿದ್ದ. 
  
  ಅವರ ಬಾಯಿಂದ ತನ್ನ ಹೆಸರು ಹೇಳಿಸಿ ಜಯಕಾರವನ್ನು ಕೂಗಿಸುತ್ತಿದ್ದ. ತನಗೆ ಜಯಕಾರ ಹೇಳಲೆಂದೇ ಜನರನ್ನು ಇಟ್ಟುಕೊಂಡಿದ್ದ. ಹೀಗಾಗಿ ರಾಜರನ್ನು ಕಾಡಿಸಿ ಜಯಕಾರ ಹೇಳಿಸಿ ಅಲ್ಲಿಂದ ಹೊರಟುಬಿಡುತ್ತಿದ್ದ. 
 • Prasanna Kumar N S,Bangalore

  12:59 PM, 11/05/2020

  ಅನಂತಾನಂತ ಧನ್ಯವಾದಗಳು ಗುರುಗಳೆ
 • Abhishek,Kalaburagi

  5:03 PM , 17/04/2020

  ಆಚಾರ್ಯರಿಗೆ ಪ್ರಣಾಮಗಳು
  
  
  ಆಚಾರ್ಯರೇ
  
  
  ರಾಮ ಲಕ್ಷ್ಮಣರನ್ನ ವಿಶ್ವಾಮಿತ್ರರು ಎಬ್ಬಿಸಿದರು ಅಂತ ಹೇಳಿದ್ದೀರಿ.
  
  
  ರಾಮ ಲೋಕ ವಿಡಂಬನೆಯನ್ನ ಮಾಡುತ್ತ ಇದ್ದಾನೆ ಎಂದು ಹೇಳಬೇಕಾದರೆ ರಾಮ ಶಿಷ್ಯನಂತೆ ಗುರುಗಳಿಗಿಂತ ಮೊದಲೇ ಏಳಬೇಕು ಅಲ್ಲವೇ?
  
  
  ಬೆಳಗ್ಗೆ ಏಳಬೇಕಾದರೆ ಶಿಷ್ಯ ಗುರುಗಳಿಗಿಂತ ಮೊದಲು ಏಳಬೇಕು ಎಂದು ಲೋಕಾರೂಢಿ ಅಲ್ಲವೇ?
  
  
  
  ಉತ್ತರಿಸಬೇಕಾಗಿ ವಿನಂತಿ

  Vishnudasa Nagendracharya

  ನಿಜ. ಶಿಷ್ಯನಾದವನು ಗುರುವಿಗಿಂತ ಮುಂಚೆ ಎದ್ದು ಗುರುಗಳ ಸೇವೆಯನ್ನು ಮಾಡಬೇಕು. 
  
  ಆದರೆ, ತಾಯಿಯಂತೆ ಶ್ರೀರಾಮಚಂದ್ರನನ್ನು ಎಬ್ಬಿಸಬೇಕೆಂಬ ಅಪೇಕ್ಷೆ ವಿಶ್ವಾಮಿತ್ರರಲ್ಲಿತ್ತು. ತಂದೆಯಂತೆ ಅವನಿಗೆ ಮದುವೆ ಮಾಡಬೇಕೆಂದು.
  
  ಹೀಗೆ ತಾಯಿಯಂತೆ ಎಬ್ಬಿಸಿ, ಊಟ ಉಪಚಾರಗಳಲ್ಲಿ ಲಾಲಿಸಿ, ತಂದೆ ಮಗನಿಗೆ ವಿವಾಹ ಮಾಡುವಂತೆ ತಾವೇ ಮಿಥಿಲೆಗೆ ಕರೆದುಕೊಂಡು ಹೋಗಿ ಅವನಿಂದ ಬಿಲ್ಲನ್ನು ಮುರಿಸಿ, ಗುರುವಾಗಿ ಅಸ್ತ್ರ ಮಂತ್ರಗಳನ್ನು ಉಪದೇಶಿಸಿ ಧನ್ಯರಾದರು ವಿಶ್ವಾಮಿತ್ರರು. 
  
  ಭಕ್ತವತ್ಸಲನಾದ ಶ್ರೀಹರಿ ಅವರ ಮನಸ್ಸಿನ ಅಭಿಪ್ರಾಯವನ್ನರಿತು ಅವರಿಗೆ ಆ ಎಲ್ಲ ರೀತಿಯ ಸಂತೋಷವನ್ನೂ ನೀಡಿದ. 
  
  ಎರಡನೆಯ ಉತ್ತರ — 
  
  ಗುರುಗಳಾದವರು ಯಾವಾಗಲೂ ಸೇವೆಯನ್ನೇ ಸ್ವೀಕರಿಸಬೇಕೆಂದು ಬಯಸುವದಿಲ್ಲ. ತಮ್ಮ ವಾತ್ಸಲ್ಯ ಪ್ರೀತಿಗಳಿಂದ ಶಿಷ್ಯರಿಗೂ ಅನೇಕ ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತಾರೆ. ಶ್ರೀ ಸುಧೀಂದ್ರತೀರ್ಥಶ್ರೀಪಾದರು ತಮ್ಮ ಶಾಟಿಯನ್ನು ಚಳಿಯಲ್ಲಿ ಮಲಗಿದ್ದ ತಮ್ಮ ಶಿಷ್ಯ ವೆಂಕಟನಾಥಾಚಾರ್ಯರಿಗೆ (ಶ್ರೀ ರಾಯರು) ಹೊದಿಸಿದಂತೆ. 
  
  ಕಾಡು ವಿಶ್ವಾಮಿತ್ರರಿಗೆ ಚಿರಪರಿಚಿತ. ಹೀಗಾಗಿ ಕಾಡಿಗೆ ರಾಜಕುಮಾರರನ್ನು ಕರೆದುಕೊಂಡು ಬಂದು ತಾವೇ ಅವರಿಗಿಂತ ಮೊದಲೇ ಎದ್ದು ಅವರನ್ನು ಎಬ್ಬಿಸಿ ಅವರಿಗೆ ಸ್ನಾನಾದಿಗಳಿಗೆ ಅನುಕೂಲ ಮಾಡಿಕೊಟ್ಟರು. ತಂದೆ ತಾಯಿಗಳು ಮಕ್ಕಳನ್ನು ನೋಡಿಕೊಳ್ಳುವಂತೆ. 
 • Kamal bharadwaj,Manivala(village)

  10:59 PM, 13/04/2020

  Gurugale, rama lakshmanara jothe bharata shatrugnaru navu hogutthevendu thande dasharathanannu kelalillave??

  Vishnudasa Nagendracharya

  ದಶರಥ ಮಹಾರಾಜರಿಗೆ ತಮ್ಮ ನಾಲ್ಕೂ ಜನ ಮಕ್ಕಳು ತಮ್ಮ ಜೊತೆ ಇಲ್ಲದಾಗ ತಮಗೆ ಮರಣವಾಗುತ್ತದೆ ಎಂದು ಅರಿವಿತ್ತು. ಹೀಗಾಗಿ ಎಲ್ಲರನ್ನೂ ಒಟ್ಟಿಗೇ ಕಳುಹಿಸುತ್ತಿರಲಿಲ್ಲ. 
  
 • Padmini Acharya,Mysuru

  12:22 PM, 10/04/2020

  🙏ಶ್ರೀ ಗುರುಭ್ಯೋ ನಮಃ🙏
  
  ನಾವು ಬೆಳಿಗ್ಗೆ ಎದ್ದಾಗ ನಮ್ಮ ಮನೆಯಲ್ಲಿರುವ ದೇವರ ಚಿತ್ರ ನೋಡಿಯೇ ಮನಸ್ಸಿಗೆ ಆನಂದವಾಗುತ್ತದೆ ಇನ್ನು ಎದ್ದ ತಕ್ಷಣ ಸಾಕ್ಷಾತ್ ಅ ಭಗವಂತನನ್ನೆ ಕಂಡ ಆ ವಿಶ್ವಾಮಿತ್ರರ ಮನಸ್ಸು ಎಂಥಾ ಸುಖವನ್ನು ಅನುಭವಿಸಿರಬೇಕು 
  
  ಮತ್ತು ದೇವರನ್ನು ವಿಶ್ವಾಮಿತ್ರರು ಎಬ್ಬಿಸಿದ ರೀತಿ ಅದ್ಭುತವಾಗಿ ಮೂಡಿ ಬಂದಿದೆ.
 • Santosh Patil,Gulbarga

  10:09 PM, 11/04/2020

  Thanks Gurugale 🙏💐🙏
 • Praveen Patil,Bangalore

  7:47 PM , 11/04/2020

  A
 • DESHPANDE P N,BANGALORE

  1:46 PM , 11/04/2020

  S.Namaskargalu. Anugrahvirali
 • Ajeya Simha,Bengaluru

  11:18 PM, 09/04/2020

  ನಮಸ್ಕಾರಗಳು ಗುರುಗಳೇ,
  
  ಮುಂದಿನ versionನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಶ್ಲೋಕಗಳನ್ನು ದೊರಕಿಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ತಿಳಿದು ತುಂಬಾ ಸಂತೋಷವಾಯಿತು.
  
  ವಿಶ್ವಾಮಿತ್ರರು ಬಲ ಮತ್ತು ಅತಿಬಲವನ್ನು ರಾಮನಿಗೆ ಮಾತ್ರ ಉಪದೇಷಿಸಿದರೆ? ಅಥವ ಲಕ್ಷ್ಮಣನಿಗೆ ಸಹ ಉಪದೇಷಿಸಿದರೆ?
  
  ರಾಮನಿಗೆ ಮಾತ್ರ ಉಪದೀಶಿಸಿದರೆ, ಹೀಗೆ ಮಾಡಲು ಯೇನು ಕಾರಣ ದಾಯೇಮಾಡೆ ತಿಳಿಸಿ.
 • Jayashree Karunakar,Bangalore

  10:27 PM, 09/04/2020

  ವಿಶ್ವಾಮಿತ್ರರ ಸಿಟ್ಟೆಂಬ ಅಗ್ನಿಯಲ್ಲಿ ರಾಕ್ಷಸರ ಅಪರಾಧವೆಂಬ ಕಟ್ಟಿಗೆಗಳು ಬಿದ್ದಿದ್ದವು....!!!
  
  ಈಗ ದಶರಥಮಹಾರಾಜರ ಮಾತೆಂಬ ತುಪ್ಪವು ಆ ಅಗ್ನಿಯಲ್ಲಿ ಬೀಳುತ್ತಿದೆ!!!!!
  
  ಓಹ್ ಅದೆಂತಹ ಮಾತು!!!!!
  
  ಅದೆಂತಹಾ ಹೋಲಿಕೆಗಳು....
  
  ಇಲ್ಲಿ ಹೇಳಿದ ಒಂದೊಂದು ವಾಕ್ಯಗಳೂ ಮತ್ತೆ ಮತ್ತೆ ಕೇಳುವಂತಾಗುತ್ತಿದೆ
  
  ವಿಶ್ವಾಮಿತ್ರರ ಗುಡಗಿನಂತಹ ಮಾತಿಗೆ ದೇವತೆಗಳು ಭಯಭೀತರಾದರಂತೆ....!!!!
  
  ವಿಶ್ವಾಮಿತ್ರರ ವ್ಯಕ್ತಿತ್ವವನ್ನು , ಅವರ ಸಾಮಥ್ಯ೯ವನ್ನೂ ಅವರಾಡುವ ಮಾತಿನಿಂದಲೇ ಗ್ರಹಿಸುವಂತಿದೆ...
  
  ಆ ಮಾತುಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತಿದೆ....
  
  ಪ್ರಶಾಂತವಾದ ಸರಯೂ ತೀರ....
  
  ಜಗದೊಡೆಯನಿಗೇ ಮಂತ್ರಗಳ ಉಪದೇಶ....
  
  ಕೌಸಲ್ಯಾ ಸುಪ್ರಜಾ.....ಅಂತ ವಿಶ್ವಾಮಿತ್ರರು ನಿದ್ರೆಯೇ ಇಲ್ಲದ ರಾಮನನ್ನು ಎಬ್ಬಿಸುವ ರೀತಿ.....
  
  ಮನಸ್ಸಿಗೆ ಆನಂದ ನೀಡುವಂತಹ ಪ್ರಸಂಗಗಳು.....
  
  ರಾಮಾಯಣ ತುಂಬಾ ಚೆನ್ನಾಗಿ ಬರುತ್ತಿದೆ ಗುರುಗಳೆ....
 • Vinaykumar,Bellary

  7:22 AM , 09/04/2020

  ಭಾಗವತ ಪ್ರವಚನದ ಜೊತೆಗೆ ಪ್ರವಚನದ ಶ್ಲೋಕಗಳನ್ನು ನೀಡಿದಹಾಗೆ
  ರಾಮಾಯಣದ ಪ್ರವಚನಕ್ಕೂ ಕೊಡಿರಿ

  Vishnudasa Nagendracharya

  ಭಾಗವತದ ಒಂದು ಪ್ರವಚನದಲ್ಲಿ ವಿವರಿಸಲ್ಪಡುವ ಶ್ಲೋಕಗಳು ತುಂಬ ಕಡಿಮೆ ಇರುತ್ತವೆ. 
  
  ಆದರೆ ರಾಮಾಯಣದಲ್ಲಿ ಅತೀ ಹೆಚ್ಚಿನ ಶ್ಲೋಕಗಳಿರುತ್ತವೆ. ಹೀಗಾಗಿ ನೀಡುವದು ಕಷ್ಟ. 
  
  ವಿಶ್ವನಂದಿನಿಯ ಮುಂದಿನ Version ನಲ್ಲಿ ಆಯಾಯ ವಿವರಣೆಯ ಸಂದರ್ಭದಲ್ಲಿ ಅದೇ ಶ್ಲೋಕಗಳು ಬರುವಂತೆ ರೂಪುಗೊಳಿಸುತ್ತಿದ್ದೇವೆ. 
 • deashmukhseshagirirao,Banglore

  6:36 AM , 09/04/2020

  🙏🏻🙏🏻🙏🏻🙏🏻🙏🏻