05/04/2020
ಶ್ರೀಮದ್ ರಾಮಾಯಣಮ್ — 22 ಗಿರಿಜಾಕಲ್ಯಾಣದ ಸಂದರ್ಭದಲ್ಲಿ ಮನ್ಮಥನ ದೇಹವನ್ನು ರುದ್ರದೇವರು ಸುಟ್ಟು ಹಾಕಿರುತ್ತಾರೆ. ಅಸುರಾವೇಶಕ್ಕೊಳಗಾಗುವ ಮನ್ಮಥ ತನ್ನ ಯೋಗಶಕ್ತಿಯಿಂದ ದೇಹವೊಂದನ್ನು ಸೃಷ್ಟಿ ಮಾಡಿ ಗಂಗಾ ಸರಯೂ ಸಂಗಮದಲ್ಲಿರುತ್ತಾನೆ. ಮದುವೆ ಮುಗಿಸಿಕೊಂಡು ರುದ್ರದೇವರು ಪತ್ನಿಯೊಡಗೂಡಿ ಇಲ್ಲಿಗೆ ಬಂದಾಗ ಅವರ ಮೇಲೆ ಯುದ್ಧಕ್ಕೆ ಸಾರಿ ಮತ್ತೆ ದೇಹ ಕಳೆದುಕೊಳ್ಳುತ್ತಾನೆ. ಅನಂಗನ ಅಂಗ ಮತ್ತೆ ನಾಶವಾದ ಕಾರಣ ಈ ಪ್ರದೇಶಕ್ಕೆ ಅಂಗದೇಶ ಎಂದು ಹೆಸರಾಗುತ್ತದೆ. ರುದ್ರದೇವರ ಅನುಗ್ರಹದಿಂದ ಅನಂಗನಾಗಿಯೇ ತಪಸ್ಸು ಮಾಡುತ್ತ ಮನ್ಮಥ ಇಲ್ಲಿರುತ್ತಾನೆ, ಆ ಅನಂಗನ ಶಿಷ್ಯರಾದ ಋಷಿಗಳೆಲ್ಲರೂ ಸಹ ಪರಮಭಕ್ತಿಯಿಂದ ರಾಮ-ಲಕ್ಷ್ಮಣ-ವಿಶ್ವಾಮಿತ್ರರನ್ನು ಉಪಚರಿಸಿದ ಅಪೂರ್ವ ಕಥೆಯನ್ನು ನಾವಿಲ್ಲಿ ಕೇಳುತ್ತೇವೆ. ಮಾರೀಚನ ತಾಯಿಯಾದ ತಾಟಕೆಯಿದ್ದ ಭಯಂಕರವಾದ ಕಾಡು, ಅದರ ಪೂರ್ವವೃತ್ತಾಂತ, ತಾಟಕೆ ಮಾರೀಚರು ಅಗಸ್ತ್ಯರ ಶಾಪದಿಂದ ರಾಕ್ಷಸರಾದ ಆ ಘೋರ ತಾಟಕೆಯನ್ನು ಶ್ರೀರಾಮ ಕೊಂದು ಹಾಕಿದ ಘಟನೆಗಳ ವಿವರ ಇಲ್ಲಿದೆ. ಅರಿಷ್ಟ ಎಂಬ ಶಬ್ದದ ಅರ್ಥ ಚಿಂತನೆ ಮಾನಸಸರೋವರದ ನಿರ್ಮಾಣವಾದ ಬಗೆ, ಗಂಗಾ ಸರಯೂ ಸಂಗಮದ ವೈಶಿಷ್ಟ್ಯ ಮಲದ ಮತ್ತು ಕರೂಷ ಎಂಬ ಪ್ರಾಂತಗಳ ಕುರಿತ ವಿವರ.
Play Time: 40:50
Size: 1.37 MB