Upanyasa - VNU905

ಅಸ್ತ್ರಗಳ ಪ್ರಾಪ್ತಿ

ಶ್ರೀಮದ್ ರಾಮಾಯಣಮ್ — 23 

ಅನೇಕ ಸಾವಿರ ವರ್ಷಗಳ ತಪಸ್ಸಿನಿಂದ ಪಡೆದಿದ್ದ ಸಕಲ ಅಸ್ತ್ರಗಳನ್ನೂ ವಿಶ್ವಾಮಿತ್ರರು ಜಗದೊಡೆಯನಿಗೆ ಒಪ್ಪಿಸಿಕೊಂಡ ಪರಿಯನ್ನು, ಆ ಎಲ್ಲ ಅಸ್ತ್ರಗಳಿಗೆ ಅಭಿಮಾನಿಗಳಾದ ದೇವತೆಗಳು ಸಾಕ್ಷಾತ್ತಾಗಿ ಬಂದು ಶ್ರೀರಾಮನ ಚರಣಕ್ಕೆರಗಿದ ರೋಮಾಂಚಕಾರಿ ಘಟನೆಯನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ. 

ಇಲ್ಲಿನ ವಿಶೇಷ ವಿಷಯಗಳು — 

ಸಂಸ್ಕೃತದಲ್ಲಿ ಮಾತನಾಡುವಾಗ “ಭದ್ರಂ ತೇ” ಎಂಬ ಮಾತು ಮೇಲಿಂದ ಮೇಲೆ ಬರುತ್ತಿರುತ್ತದೆ, ಅದರ ಅರ್ಥ ಮತ್ತು ಅಭಿಪ್ರಾಯದ ವಿವರಣೆ ಇಲ್ಲಿದೆ. 

ಅಸ್ತ್ರ ಮತ್ತು ಶಸ್ತ್ರಕ್ಕೂ ಇರುವ ವ್ಯತ್ಯಾಸ. 

Play Time: 29:48

Size: 1.37 MB


Download Upanyasa Share to facebook View Comments
2617 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  8:30 PM , 30/06/2020

  🙏🙏🙏
 • prema raghavendra,coimbatore

  2:47 PM , 31/05/2020

  Anantha namaskara! Danyavads!
 • Santosh Patil,Gulbarga

  12:40 AM, 16/04/2020

  Thanks Gurugale 💐🙏💐
 • Santosh Patil,Gulbarga

  12:40 AM, 16/04/2020

  Thanks Gurugale 💐🙏💐
 • Vishwnath MJoshi,Bengaluru

  4:04 PM , 14/04/2020

  श्रीगुरुभ्यो नमः। अथ गुरुपादौ नमस्करोमि
  
  ಗುರುಗಳಿಗೆ ಸಪ್ರೇಮ ವಂದನೆಗಳು.
  
  ಅಸ್ತ್ರ ಮತ್ತು ಶಸ್ತ್ರಗಳ ಬಗ್ಗೆ ಇರುವ ವ್ಯತ್ಯಾಸವನ್ನು ಚೆನ್ನಾಗಿ ತಿಳಿಸಿದ್ದೀರಿ.
  ರಾಮಾಯಣದಲ್ಲಿ ಅಸ್ತ್ರಗಳು ನಿಷ್ಫಲ ವಾದ ಸಂಗತಿ ಯಾವುದಾದರು ಇದಿಯಾ. (ಮಹಾಭಾರತದಲ್ಲಿ ಕರ್ಣ ಹಾಗು ಅಶ್ವತ್ಥಾಮರ ಸಂಧರ್ಭದಲ್ಲಿ.)
  ಈ ರೀತಿ ಸಂಗತಿ ರಾಮಾಯಣದಲ್ಲಿ ಇದಿಯಾ.
  
  ಮತ್ತು ನಿಮ್ಮ ರಾಮಾಯಣದ ಪ್ರವಚನದಲ್ಲಿ, ಶ್ರೀಮದ್ ಆಚಾರ್ಯರ ನಿರ್ಣಯದ ಬಗ್ಗೆ ಹೇಳಿದ್ದೀರಿ. ಶ್ರೀಮದ್ ಆಚಾರ್ಯರು ರಾಮಾಯಣಕ್ಕು ತಾತ್ಪರ್ಯ ಬರೆದಿದ್ದಾರ?. ಗ್ರಂಥದ ಹೆಸರನ್ನು ತಿಳಿಸುವಿರಾ. 
  ದಯವಿಟ್ಟು ತಿಳಿಸಿಕೊಡಿ ಎಂದು ಕೋರುತ್ತೇನೆ
  
  ಧನ್ಯವಾದಗಳು ಗುರುಗಳೆ

  Vishnudasa Nagendracharya

  ಶ್ರೀರಾಮದೇವರು ಪ್ರಯೋಗ ಮಾಡಿದ ಯಾವ ಅಸ್ತ್ರವೂ, ಬಾಣವೂ ಸಹ ವ್ಯರ್ಥವಾಗಲಿಲ್ಲ, ಆಗುವದೂ ಇಲ್ಲ. 
  
  ಮುಂದೆ ಲಂಕಾಯುದ್ಧದಲ್ಲಿ ಇಂದ್ರಜಿತ್ ರಾವಣ ಮುಂತಾದವರು ಹನುಮಂತದೇವರ ಮೇಲೆ ಅನೇಕ ಅಸ್ತ್ರಗಳ ಪ್ರಯೋಗ ಮಾಡುತ್ತಾರೆ. ಆದರೆ ಆ ಬಲದೇವತೆಯ ಅವತಾರರಾದ ಹನುಮಂತದೇವರೆ ಅವು ಯಾವ ಪರಿಣಾಮವನ್ನೂ ಬೀರುವದಿಲ್ಲ. “ಸ್ಪೃಶಂತಿ ನಾಸ್ತ್ರಾಣಿ ಸಮೀರಣಸ್ಯ” ಆ ರಾಕ್ಷಸರ ಅಸ್ತ್ರಗಳು ಹೀಗೆ ವ್ಯರ್ಥವಾದದ್ದುಂಟು. 
  
  ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯ ಗ್ರಂಥದಲ್ಲಿಯೇ ರಾಮಾಯಣವನ್ನೂ ನಿರ್ಣಯಿಸಿದ್ದಾರೆ. ತಾತ್ಪರ್ಯನಿರ್ಣಯದಲ್ಲಿ ಒಟ್ಟು ಮೂವತ್ತೆರಡು ಅಧ್ಯಾಯಗಳಿವೆ. 
  
  ಮೊದಲ ಮೂರು ಅಧ್ಯಾಯಗಳಲ್ಲಿ ಸರ್ವ ಶಾಸ್ತ್ರಗಳ ಅರ್ಥ ನಿರ್ಣಯ ಮತ್ತು ರಾಮಾಯಣ ಮಹಾಭಾರತ ಪುರಾಣಗಳನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು ಆಚಾರ್ಯರು ವಿವರಿಸಿದ್ದಾರೆ. 
  
  ಮೂರನೆಯ ಅಧ್ಯಾಯದ ಉತ್ತರಾರ್ಧದಿಂದ ಒಂಭತ್ತನೆಯ ಅಧ್ಯಾಯದ ವರೆಗೆ ರಾಮಾಯಣವನ್ನು ನಿರ್ಣಯಿಸಿದ್ದಾರೆ. 
  
  ಹತ್ತನೆಯ ಅಧ್ಯಾಯದಲ್ಲಿ ಸಮುದ್ರಮಥನ ಮತ್ತು ವೇದವ್ಯಾಸಾವತಾರದ ನಿರೂಪಣೆಯಿದೆ. 
  
  ಹನ್ನೊಂದನೆಯ ಅಧ್ಯಾಯದಿಂದ ಮೂವತ್ತೆರಡನೆಯ ಅಧ್ಯಾಯದ ವರೆಗೆ ಸಮಗ್ರ ಶ್ರೀಮನ್ ಮಹಾಭಾರತದ ನಿರ್ಣಯವಿದೆ. 
  
  ಮಹಾಭಾರತದ ನಿರ್ಣಯದ ಭಾಗ ಅಧಿಕವಾಗಿರುವದರಿಂದ ಇದನ್ನು ಮಹಾಭಾರತತಾತ್ಪರ್ಯನಿರ್ಣಯ ಎಂದು ಹೆಸರಿಸಿದ್ದಾರೆ. 
  
  ಶ್ರೀಮಧ್ವವಿಜಯದ ಹದಿನೈದನೆಯ ಸರ್ಗದಲ್ಲಿ [ VNU326 VNU327] ಸರ್ವಮೂಲಗ್ರಂಥಗಳಲ್ಲಿನ ವಿಷಯಗಳ ನಿರೂಪಣೆ ಇದೆ, ಕೇಳಿ. 
 • Jayashree Karunakar,Bangalore

  8:51 PM , 13/04/2020

  ರಾಮಾಯಣದ ಪ್ರಧಾನವಾದ ಕಥೆ ಮತ್ತು ಸನ್ನಿವೇಶಗಳ ಜೊತೆಗೆ .....
  
  ಕೆಲವು ದೇಶಗಳ ಬಗ್ಗೆ..... ಅದಕ್ಕೆ ಆ ಹೆಸರು ಬರಲು ಕಾರಣ..... 
  
  ನದಿಗಳ ಮಹಾತ್ಮ್ಯೆ....
  
  ಅಸ್ತ್ರ ಶಸ್ತ್ರಗಳ ವೆತ್ಯಾಸ...
  
  ಅಲ್ಲಿ ಬರುವ ಚಿಕ್ಕ ಚಿಕ್ಕ ವಿವಿಧಪ್ರಾಣಿಗಳ ಆಕ್ರಂದನವನ್ನೂ ಸಹ...
  
  ನಾವು ಮೊದಲು ಯಾವುದನ್ನು ಸಣ್ಣ ವಿಷಯ ಅಂತ ಉಪೇಕ್ಷೆ ಮಾಡಿರುತ್ತೇವೆಯೋ ಅದರಲ್ಲಿರುವ ವಿಶೇಷತೆಯನ್ನೂ ಸಹ ತೆಗೆದು ತೋರಿಸಿ ರಸಾ ಸ್ವಾದವನ್ನು ಅನುಭವಿಸುವಂತೆ ಮಾಡುತ್ತಿದ್ದೀರಿ .
  
  ವಿಶ್ವಾಮಿತ್ರರು ತಮ್ಮಲ್ಲಿರುವ ಎಲ್ಲಾ ಅಸ್ತ್ರ ಶಸ್ತ್ರ ವಿದ್ಯೆಗಳನ್ನೂ ರಾಮಚಂದ್ರನಿಗೆ ಉಪದೇಶಿಸಿದರು....
  
  "ಅಲ್ಲ ಸಮಪಿ೯ಸಿದರು"
  
  ಅಂತ ಹೇಳಿ ನಾವು ಗಮನಿಸಬೇಕಾದ ವಿಶೇಷವಾದ ಸಮಪ೯ಣಾ ಭಾವದ ಭಕ್ತಿಯನ್ನು ತೋರಿಸಿದ ರೀತಿಗೇ ಮನಸ್ಸು ಭಕ್ತಿಯಿಂದ ಭಾವುಕವಾಯಿತು....
  
  (ಅಲ್ಲ ಅಂತ ಹೇಳಿದ ಶಬ್ದ ತಂಬಾ ಪರಿಣಾಮ ಬೀರಿತು)  ಇಂತಹ ಸಣ್ಣ ಸಣ್ಣ ಶಬ್ದವೇ ಇರಬಹುದು 
  
  ನಿಮ್ಮ ಭಕ್ತಿ ಭರಿತ ಉಚ್ಚಾರಣೆಯ ಭಾವವು ನಮ್ಮ ಶ್ರವಣಕ್ಕೆ ಬಹಳ ಪರಿಣಾಮ ಬೀರುತ್ತದೆ...
  
  ಇಂತಹ ಭಾವಗಳು ಗ್ರಂಥಗಳನ್ನು ಅಧ್ಯಯನ ಮಾಡುವಾಗ ಸಿಗಲು ಸಾಧ್ಯವೇ ಇಲ್ಲ ನಮ್ಮಂತಹ ಮಂದಮತಿಗಳಿಗೆ...
  
  ಈ ದಿನ ಭಗವಂತನ ವಿಶೇಷವಾದ ಸನ್ನಿಧಾನದ ಜೊತೆಗೆ ಸಕಲ ದೇವತೆಯರ ಸನ್ನಿಧಾನವನ್ನೂ ಆಸ್ವಾದಿಸುವಂತಾಯಿತು.....
 • Niranjan Kamath,Koteshwar

  12:59 PM, 13/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. 
  
  ಗುರುಗಳ ಚರಣಗಳಿಗೆ ನಮೋ ನಮಃ. ಎಷ್ಟೊಂದು ಅಸ್ತ್ರ ಶಸ್ತ್ರ ಗಳು. ಅಸ್ತ್ರ ಶಸ್ತ್ರದ ಮಧ್ಯ ಇರುವ ವ್ಯತ್ಯಾಸ ತಿಳಿಯಿತು. 
  
  ಭದ್ರಂ ತೆ ಎನ್ನುವ ವಿಚಾರ ಬಹಳ ಪ್ರಸನ್ನವಾಗಿತ್ತು . 
  
  ಕೊನೆಯಲ್ಲಿ ...ಭಕ್ತರಾಡುವ 
  ತೊದಲು ನುಡಿಯನ್ನು ಪ್ರೀತಿಯಿಂದ ಎನ್ನುವಾಗ ನಿಮ್ಮ ಭಾವ ಅತ್ಯಂತ ಭಾವಪೂರ್ಣವಾಗಿ ಸಮರ್ಪಣಾ ಭಾವ ತೋರುತ್ತಿತ್ತು. ಧನ್ಯೋಸ್ಮಿ.
 • DESHPANDE P N,BANGALORE

  12:46 PM, 13/04/2020

  S.Namaskargalu. Anugrahvirali
 • deashmukhseshagirirao,Banglore

  6:48 AM , 13/04/2020

  🙏🏻🙏🏻🙏🏻🙏🏻🙏🏻