Upanyasa - VNU906

ಸಿದ್ಧಾಶ್ರಮಕ್ಕೇಕೆ ಅಷ್ಟು ಮಹತ್ತ್ವ

ಶ್ರೀಮದ್ ರಾಮಾಯಣಮ್ — 24 

ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ಸಿದ್ಧಾಶ್ರಮಕ್ಕೆ ಕರೆದುಕೊಂಡು ಬಂದು ಆ ಆಶ್ರಮಕ್ಕೆ ಆ ಹೆಸರು ಬರಲು ಕಾರಣವೇನು ಎನ್ನುವದನ್ನು ತಿಳಿಸುತ್ತ ವಾಮನದೇವರ ಕಥೆಯನ್ನು ಅದ್ಭುತವಾಗಿ ಹೇಳುತ್ತಾರೆ. ಆ ಪ್ರಸಂಗದ ವಿವರಣೆ ಇಲ್ಲಿದೆ. 

ನಾವು ಮತ್ತೊಬ್ಬರಿಗೆ ಉಪಕಾರ ಮಾಡುವಾಗ ಅನೇಕ ಬಾರಿ ದೊಡ್ಡಸ್ತಿಕೆಯನ್ನು ತೋರುತ್ತೇವೆ, ಮತ್ತೊಬ್ಬರಿಂದ ಶ್ಲಾಘನೆಯನ್ನು ಅಪೇಕ್ಷಿಸುತ್ತೇವೆ. ಅದು ತಪ್ಪು ಎನ್ನುವದನ್ನು ಶ್ರೀರಾಮಚಂದ್ರ ತನ್ನ ಚರ್ಯೆಯಿಂದಲೇ ಪಾಠ ಹೇಳುತ್ತಾನೆ.

ಸಿದ್ಧಾಶ್ರಮಕ್ಕೆ ಆ ಹೆಸರು ಬರಲು ಭಗವಂತನ ಎರಡು ರೂಪಗಳು ಕಾರಣ. 

Play Time: 28:13

Size: 1.37 MB


Download Upanyasa Share to facebook View Comments
3244 Views

Comments

(You can only view comments here. If you want to write a comment please download the app.)
 • Laxmi Padaki,Pune

  4:35 PM , 07/09/2022

  ಶ್ರೀ ವಿಶ್ವನಾಥ ಎಮ್ ಜೊಶಿ ತಮ್ಮ ಭಕ್ತರಲ್ಲಾದ ಒಬ್ಬರು ಸರಿಯಾದ ರೀತಿಯಲ್ಲಿ ಆಗಲೇ ಹೇಳಿದ್ದಾರೆ. ಶ್ರೀ ಪರಮ ಪೂಜ್ಯ ಆಚಾರ್ಯರಿಗೆ ನಮೋ ನಮಃ. ತಮ್ಮ ಎಲ್ಲಾ ಉಪನ್ಯಾಸಗಳೂ ರಸದೂಟವೇ.ಅನಂತ ಕೋಟಿ ನಮಸ್ಕಾರಗಳು. ಹಾಗೂ ಧನ್ಯವಾದಗಳು.🙏🙏
 • Abburu Rajeeva,Channapattana

  8:32 PM , 06/07/2020

  🙏🙏🙏
 • prema raghavendra,coimbatore

  2:48 PM , 31/05/2020

  Anantha namaskara! Danyavada!
 • Vikram Shenoy,Doha

  2:51 PM , 18/04/2020

  ಆಚಾರ್ಯರಿಗೆ ಅನಂತ ಕೋಟಿ ನಮನಗಳು. ಈ ಉಪಕಾರಕ್ಕೆ ನಾವು ಚಿರ ಕಾಲ ಋಣ...🙏🙏
 • Santosh Patil,Gulbarga

  12:40 AM, 16/04/2020

  Thanks Gurugale 💐🙏💐
 • Gururaja.S,Bhadravati

  6:59 PM , 14/04/2020

  ಸಂಮಾನ್ಯ ಆಚಾರ್ಯರಿಗೆ ವಂದನೆಗಳು
  
  ಆಚಾರ್ಯರೇ ತಾವು ತಿಳಿಸಿ ಸಿದ್ಧಾಶ್ರಮ ಪ್ರದೇಶ ಇಂದಿಗೂ ಇದೆಯೇ, ಯಾವ ರಾಜ್ಯದಲ್ಲಿ ಇದೆ, ಆ ಸ್ಥಳದ ಈಗಿನ ಹೆಸರೇನು ದಯವಿಟ್ಟು ತಿಳಿಸಿ

  Vishnudasa Nagendracharya

  ಶ್ರೀಮದ್ ರಾಮಾಯಣದಲ್ಲಿ ನಾವು ಕೇಳಿದಂತೆ ಗಂಗಾ ಸರಯೂ ಸಂಗಮವನ್ನು ದಾಟಿ ವಿಶ್ವಾಮಿತ್ರರು ರಾಮಲಕ್ಷ್ಮಣರೊಂದಿಗೆ ಸಿದ್ಧಾಶ್ರಮಕ್ಕೆ ಬರುತ್ತಾರೆ. 
  
  ಇವತ್ತಿನ ಬಿಹಾರದ ರಾಜಧಾನಿ ಪಾಟ್ನಾ ಏನಿದೆ, ಅದಕ್ಕಿಂತ ಹಿಂದಿರುವ ಛಾಪ್ರಾ ಎಂಬ ಊರಿನ ಬಳಿ ಗಂಗಾ ಸರಯೂ ಸಂಗಮವಿದೆ. 
  
  ಈ ಸಂಗಮದಿಂದ ದಕ್ಷಿಣಕ್ಕೆ ಬಂದರೆ ಇವತ್ತಿನ ಆರಾ ಎಂಬ ಊರಿನ ಬಳಿಯಲ್ಲಿ ದಟ್ಟವಾದ ಕಾಡಿದೆ. 
  
  ಪ್ರಾಯಃ ಇದೇ ಭಾಗದಲ್ಲಿ ಸಿದ್ಧಾಶ್ರಮವಿರಬೇಕು. 
  
  ನಿರ್ದಿಷ್ಟವಾದ ಸ್ಥಳವನ್ನು ಅಲ್ಲಿಗೇ ಹೋಗಿ ಸಂಶೋಧನೆ ಮಾಡಿದಾಗ ದೊರೆಯಬಹುದು. 
  
  ಶ್ರೀಮದ್ ವಿಜಯೀಂದ್ರತೀರ್ಥ ಗುರುಸಾರ್ವಭೌಮರಿಂದ ಪ್ರವರ್ತಿತವಾದ ಕಾಶಿಮಠದ ಶ್ರೀ ಸುಧೀಂದ್ರತೀರ್ಥ ಶ್ರೀಪಾದರು ಇದೇ ರೀತಿ ಸಂಶೋಧನೆ ಮಾಡಿ ಶ್ರೀವೇದವ್ಯಾಸದೇವರ ಅವತಾರ ಸ್ಥಳವನ್ನು ಯಮುನಾನದಿಯ ತೀರದಲ್ಲಿ ಸ್ಪಷ್ಟವಾಗಿ ಗುರುತಿಸಿದ್ದಾರೆ. ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಗೆ ಸೇರಿಗ ಕಾಲ್ಪಿ ಎಂಬ ಊರಿನಲ್ಲಿ ಬಾಲವ್ಯಾಸಮಂದಿರದ ಪ್ರತಿಷ್ಠೆಯೂ ಆಗಿದೆ. 
  
  ಈ ರೀತಿಯಾದ ಕಾರ್ಯಗಳು ನಡೆದಾಗ ಮಾತ್ರ ನಮಗೆ ನಮ್ಮ ಪ್ರಾಚೀನ ಸ್ಥಳಗಳು ಉಳಿಯಲು ಸಾಧ್ಯ. ಸಿದ್ಧಾಶ್ರಮದ ಕುರಿತೂ ಸಹ ಈ ಕಾರ್ಯವಾಗಬೇಕಾಗಿದೆ. 
 • Jayashree Karunakar,Bangalore

  9:39 PM , 14/04/2020

  ಅಯೋಧ್ಯೆಯ ಅಂದದ ಅರಮನೆಯನ್ನು ದಾಟಿ...
  
  ತಾಟಕಾವನವನ್ನೂ ಲೆಕ್ಕಿಸದೇ... 
  
  ದೂರದ ಬೆಟ್ಟ ಗುಡ್ಡದ ದಾರಿಯನ್ನೂ ಹತ್ತಿಳಿದು ಸಾಗಿತ್ತು ಮನ ರಾಮನ ಸ್ಮರಣೆಯನ್ನು ಮಾಡುತ್ತಾ....
  
  ರಾಮಚಂದ್ರನ ಹಿಂದೆಯೇ...
  
  ಲೌಕಿಕ ಜೀವನದ ಜಂಜಾಟವನ್ನು ಅರೆಕ್ಷಣ ಮರೆತು...
  ದೂರದ ಸಿದ್ಧಾಶ್ರಮದ ಸೊಬಗು ಕಣ್ಮನವನ್ನು ಸೆಳೆದಿತ್ತು.....
  
  ಕಲಿಯುಗದ ಮಂದಮತಿಗಳು ನಾವು ಆದರೂ...
   ಅದಾವ ಜನ್ಮದ ಸುಕೃತವೊ...
  ಗುರು ಪೇಳಿದ
  ಭಗವಂತನ ಸಾಮಿಪ್ಯವನ್ನು ಆಸ್ವಾದಿಸುತ್ತಾ ಹೀಗೇ ಸಾಗುತ್ತಲಿದೆ ದಿನಗಳು....
  
  ಅಂದು ವಾಮನರೂಪದ ಭಗವಂತ ಮಾಡಿದ ತಪಸ್ಸನ್ನು ನೆನೆದು...
  ಕಶ್ಯಪ ಅದಿತಿಯರ ಸಾವಿರ ವರುಷದ ತಪವ ನೆನೆದು...
  ರೋಮಾಂಚನವಾಗುವಷ್ಟರಲ್ಲೇ ಎದುರಿಗಿತ್ತು ದಿವ್ಯಸನ್ನಿಧಾನಹೊತ್ತ ಸಿದ್ಧಾಶ್ರಮ...
  ಧರೆಗಿಳಿದ ಚಂದ್ರಮನಂತಿದ್ದ ರಾಮಚಂದ್ರನೊಡನೆ ವಿಶ್ವಾಮಿತ್ರರು ತನ್ನಾಶ್ರಮಕ್ಕೆ ಹೀಗೆ ಬಂದರಂತೆ..
  ಸಂತೋಷಪಟ್ಟರಂತೆ...
  ಋುಷಿಗಳು ಸಂಭ್ರಮಿಸಿದರಂತೆ...
  
   ಕಥೆಯ ಕೇಳಿ ಮನವು ನಲಿಯಿತು...
  ಮನದ ಮಲೀನವೆಲ್ಲ ಕಳೆಯಿತು..
  
  ಗುರುಗಳೆ ದಿನವೆಲ್ಲ ಮನಸ್ಸನ್ನು ರಾಮನ ಸ್ಮರಣೆಯಲ್ಲಿ ಇರಿಸಿದ ನಿಮಗೆ ಗೌರವದ ನಮನಗಳು
 • Vishwnath MJoshi,Bengaluru

  4:20 PM , 14/04/2020

  श्रीगुरुभ्यो नमः। अथ गुरुपादौ नमस्करोमि
  
  ಗುರುಗಳಿಗೆ ಸಪ್ರೇಮ ವಂದನೆಗಳು.
  
  ನಾವು ಮತ್ತೊಬ್ಬರಿಗೆ ಉಪಕಾರ ಮಾಡುವಾಗ ಏನನ್ನೂ ಅಪೇಕ್ಷೆ ಮಾಡಬಾರದೆಂದು, ಈ ಪಾಠ ಇಂದಿನ ಕಲಿಯುಗಕ್ಕೆ ಅತ್ಯಂತ ಎಲ್ಲಾರೂ ತಿಳಿಯಲೇ ಬೇಕು.
  
  ಸಣ್ಣ ಸಣ್ಣ ಉಪಕಾರ ಮಾಡಿ ನಾನು ಮಾಡಿದೆ ಎಂದು ಹೇಳಿಕೊಳ್ಳುವ ನಮ್ಮಂಥ ಜನರಿಗೆ ಒಳ್ಳೆಯ ಪಾಠ
  ಅತ್ಯಂತ ಅಮೂಲ್ಯವಾದ ಸಂದೇಶ
  ಧನ್ಯವಾದಗಳು ಗುರುಗಳೆ ಕಣ್ಣು ತೆರೆಸಿದ್ದಕ್ಕೆ
 • deashmukhseshagirirao,Banglore

  6:34 AM , 14/04/2020

  🙏🏻🙏🏻🙏🏻🙏🏻🙏🏻