Upanyasa - VNU907

ಯಜ್ಞರಕ್ಷಣೆ

ಶ್ರೀಮದ್ ರಾಮಾಯಣಮ್ — 25 

ಯಜ್ಞ ನಡೆಯುವ ಸಂದರ್ಭದಲ್ಲಿ ಮಾರೀಚ ಸುಬಾಹುಗಳು ರಾಕ್ಷಸರೊಡನೆ ಬಂದು ಕಪಾಲಗಳಿಂದ ರಕ್ತವನ್ನು ಸುರಿದೇ ಬಿಡುತ್ತಾರೆ. ಒಂದು ಹನಿಯೂ ಯಜ್ಞವೇದಿಯನ್ನು ಮುಟ್ಟದಂತೆ ಕ್ಷಣಕಾಲದಲ್ಲಿ ಆ ರಾಕ್ಷಸರನ್ನು ನಿಗ್ರಹಿಸಿದ ರೋಮಾಂಚಕಾರಿಯ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ. ವಿಶ್ವಾಮಿತ್ರರ ಧನ್ಯತೆಯ ಚಿತ್ರಣದೊಂದಿಗೆ. 

ಅಣ್ಣನ ಸೇವೆಯನ್ನು ಲಕ್ಷ್ಮಣದೇವರು ಅದ್ಭುತವಾಗಿ ಮಾಡುತ್ತಾರೆ ಎಂದು ಮುಂದೆ ಕೇಳುತ್ತೇವೆ. ಗುರುಸೇವೆಯನ್ನು ಹೇಗೆ ಮಾಡಬೇಕು ಎನ್ನುವದನ್ನು ಅವರು ಅಣ್ಣ ರಾಮಚಂದ್ರನಿಂದಲೇ ಕಲಿತದ್ದು ಎಂಬ ಅಪೂರ್ವ ವಿಷಯವನ್ನಿಲ್ಲಿ ಕೇಳುತ್ತೇವೆ. 

ನಾವು ಮಾಡುವ ಧರ್ಮಾಚರಣೆಯನ್ನು ಎಂದಿಗೂ ಹೇಳಿಕೊಳ್ಳಬಾರದು ಎನ್ನುವ ಪಾಠವನ್ನು ವಿಶ್ವಾಮಿತ್ರರ ಅದ್ಭುತ ಚರ್ಯೆಯೊಂದು ಕಲಿಸುತ್ತದೆ. 

ವಿಶ್ವಾಮಿತ್ರರ ಯಜ್ಞದಲ್ಲಿ ಸಪ್ತರ್ಷಿಗಳೂ ಪಾಲ್ಗೊಳ್ಳುತ್ತಾರೆ. ಸಪ್ತರ್ಷಿಗಳಲ್ಲಿ ವಸಿಷ್ಠರೂ ಒಬ್ಬರು. ಈ ಎಲ್ಲ ಋಷಿಗಳೂ ಸಾಂಶರು, ಅಂದರೆ ಒಂದೇ ಸಮಯದಲ್ಲಿ ಅನೇಕ ಕಡೆ ಇರಬಲ್ಲ ಸಾಮರ್ಥ್ಯವುಳ್ಳವರು. ಹೀಗಾಗಿ ವಸಿಷ್ಠರು ಅಯೋಧ್ಯೆಯಲ್ಲಿದ್ದರು, ಇಲ್ಲಿ ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆ ಸಲ್ಲದು ಎಂಬ ವಿವರಣೆ ಇಲ್ಲಿದೆ. 

Play Time: 38:57

Size: 1.37 MB


Download Upanyasa Share to facebook View Comments
2640 Views

Comments

(You can only view comments here. If you want to write a comment please download the app.)
 • Prahllada A M,Belupalli

  9:40 PM , 25/04/2022

  ಆಚಾರ್ಯರಿಗೆ ನಮಸ್ಕಾರಗಳು..
  ನರಶಾರ್ಧೂಲ ಎಂಬ ಪದ ಬಹುತೇಕ ಶ್ಲೋಕಗಳಲ್ಲಿ ಕೇಳಿದ್ದೇನೆ. ಅದರ ಅರ್ಥ ದಯವಿಟ್ಟು ತಿಳಿಸಿಕೊಡಿ.

  Vishnudasa Nagendracharya

  ಶಾರ್ದೂಲ ಎಂದರೆ ಹುಲಿಯ ಒಂದು ಪ್ರಬೇಧ. 
  
  ನರಶಾರ್ದೂಲ ಎಂದರೆ ಹುಲಿಯಂತೆ ಭಾರೀ ಪರಾಕ್ರಮಿಯಾದ ಮನುಷ್ಯ ಎಂದರ್ಥ. 
  
  ಸಿಂಹ, ವ್ಯಾಘ್ರ, ಶಾರ್ದೂಲ, ವೃಷಭ ಮುಂತಾದ ಶಬ್ದಗಳು ಒಂದು ಶಬ್ದದ ಉತ್ತರಪದವಾಗಿ ಪ್ರಯೋಗಗೊಂಡಾಗ ಶ್ರೇಷ್ಠ ಎಂಬ ಅರ್ಥವನ್ನು ನೀಡುತ್ತವೆ. ರಾಜಸಿಂಹ, ನರವ್ಯಾಘ್ರ, ಪುರುಷಶಾರ್ದೂಲ, ಜ್ಞಾನಿವೃಷಭ, ಮುಂತಾದವು ಶ್ರೇಷ್ಠ ಎಂಬ ಅರ್ಥದಲ್ಲಿಯೇ ಬಳಕೆಯಿರುವದು. 
  
 • Prahllada A M,Belupalli

  9:31 PM , 25/04/2022

  Sri gurubhyo namaha! Ramayana athyanta ramaneeya vagidhe.. bhagavantha nimma moolaka vagi athyanta samanyaraadha namagu ramayana thalapuvanthe anugraha madiddane🙏🙏🙏

  Vishnudasa Nagendracharya

  ನನ್ನ ಕರ್ತವ್ಯ. ನೀವೆಲ್ಲರೂ ಶ್ರೀಮದ್ ರಾಮಾಯಣವನ್ನು ಆಸ್ವಾದಿಸುತ್ತಿರುವದು ಸಂತೋಷವನ್ನು ನೀಡಿದೆ. ಪ್ರತಿಯೊಬ್ಬರಿಗೂ ರಾಮಾಯಣ ತಲುಪಿಸಿ. 
   
 • Abburu Rajeeva,Channapattana

  9:38 PM , 06/07/2020

  🙏🙏🙏
 • prema raghavendra,coimbatore

  2:50 PM , 31/05/2020

  Danyavada! Anantha namaskara
 • Rajesh,Bhubaneswar

  7:42 PM , 28/04/2020

  Acharyarige namaskara, Janaka rajaru Yajna madtaiddate anta ullekhavide...andare illi swayamvarave yajnava? Dayavittu telisi 🙏

  Vishnudasa Nagendracharya

  ಸ್ವಯಂವರವನ್ನೇ ಯಜ್ಞ ಎಂದು ಕರೆಯುತ್ತಿಲ್ಲ. ಶ್ರೇಷ್ಠವಾದ ಯಜ್ಞವೊಂದನ್ನು ಜನಕಮಹಾರಾಜರು ಮಾಡುತ್ತಿದ್ದರು. ಯಾವ ಯಜ್ಞ ಎಂಬ ಉಲ್ಲೇಖ ದೊರೆತಿಲ್ಲ. 
 • Tirumalesh,Gulbarga

  7:52 AM , 20/04/2020

  Shri Gurugalige Sirisatanga Namskargalu, Nann Sandeh vendre egnadeyuttiru Vaivatas Manvantar aagle Dashavatarda 9 Avatar galu aagi hogive. Andre mundin yella mahayugagalli onde kalki avatar ulidiruv avatar adu e Kaliyugada antedalli aguvadillave. Mundin Manvantar dalli matte Shriman Narayana avatar aguvadillave.🙏

  Vishnudasa Nagendracharya

  ವೈವಸ್ವತ ಮನ್ನಂತರದ ಆದಿಯಲ್ಲಿ ಮತ್ಸ್ಯಾವತಾರ. ಕೂರ್ಮಾವತಾರದಿಂದ ಕಲ್ಕಿಯ ಅವತಾರದವರೆಗೆ 28ನೆಯ ಮಹಾಯುಗದಲ್ಲಿ ಆಗುತ್ತದೆ. 
  
  ಬೇರೆ ಮಹಾಯುಗಗಳಲ್ಲಿ ಬೇರೆ ಬೇರೆಯ ಅವತಾರಗಳು ಆಗುತ್ತವೆ. ಉದಾಹರಣೆ, ಕೇಶವ, ನಾರಾಯಣ, ಮಾಧವ ಇತ್ಯಾದಿ 24 ರೂಪಗಳೇನಿವೆ, ಅವೂ ಸಹ ಒಂದೊಂದು ಅವತಾರಗಳು. ನಮ್ಮ ಮಹಾಯುಗದಲ್ಲಿ ಹೇಗೆ ನಾವು ರಾಮ-ಕೃಷ್ಣಾವತಾರಗಳನ್ನು ವಿಸ್ತಾರವಾಗಿ ಕೇಳುತ್ತೇವೆಯೋ ಹಾಗೆ ಬೇರೆಯ ಯುಗಗಳವರು ಕೇಶವ-ಅಜ ಮುಂತಾದ ಅವತಾರಗಳನ್ನು ಕೇಳುತ್ತಾರೆ. 
 • Padmini Acharya,Mysuru

  9:42 PM , 16/04/2020

  🙏ಶ್ರೀ ಗುರುಭ್ಯೋ ನಮಃ🙏
  
  ದೇವರು ಮಾರೀಚ ಮತ್ತು ಸುಬಾಹುವಿನ ಜೊತೆಗೆ ಯುದ್ಧ ಮಾಡಿದ ರೀತಿಯ ವಿವರಣೆ ಚೆನ್ನಾಗಿದೆ 
  
  ಮತ್ತು ಗುರುಗಳ ಸೇವೆಯನ್ನು ಯಾವ ರೀತಿಯಾಗಿ ಮಾಡಬೇಕು ಎಂದು ಲಕ್ಷ್ಮಣನಿಗೆ ತನ್ನ ಚರ್ಯೆಯಿಂದಲೆ ತಿಳಿಸಿದ ರೀತಿ ನಮಗೂ ಪಾಠ ಕಲಿಸಿತು.
  
  ಮತ್ತು ಯಜ್ಞ ಮುಗಿಸಿ ಹೊರಟ ವಿಶ್ವಾಮಿತ್ರರು ಆ ಸಿದ್ಧಾಶ್ರಮದಲ್ಲಿರುವ ಮರ ಗಿಡಗಳ ಜೊತೆಯಲ್ಲಿ ಮಾತನಾಡಿ ಹೊರಟ ಪರಿ ಮನ ಮುಟ್ಟಿತು. ಗಿಡ ಮರಗಳನ್ನೂ ಬಾಂಧವರಂತೆ ಕಾಣಬೇಕೆಂಬ ಪಾಠ ಕಲಿಸಿದ ವಿಶ್ವಾಮಿತ್ರ ಬ್ರಹ್ಮರ್ಷಿಗಳಿಗೆ ನಮೋ ನಮಃ🙏
 • Jayashree Karunakar,Bangalore

  1:51 PM , 15/04/2020

  ಗುರುಗಳೆ
  
  ಅಗ್ನಿ ಯಾಕೆ ಋುಷಿಗಳಿಗೆ ರಾಕ್ಷಸರ ಆಗಮನದ ಸೂಚನೆ ಕೊಟ್ಟದ್ದು ? ರಕ್ಷಣೆ ನೀಡಲೆಂದೇ ರಾಮ ಲಕ್ಷ್ಮಣರೇ ಬಂದಿದ್ದಾರಲ್ಲ ?
  
  ಯಜ್ಞ, ಯಾಗ, ಹೋಮ ಮತ್ತು ಹವನಗಳಿಗಿರುವ ವೆತ್ಯಾಸವೇನು ?

  Vishnudasa Nagendracharya

  ರಾಮದೇವರು ಬಂದಿರುವದು ಯಜ್ಞರಕ್ಷಣೆಗೆ. ಅವರು ಯಜ್ಞರಕ್ಷಣೆ ಮಾಡುತ್ತಾರೆ ಎಂದು ಉಳಿದವರು ತಮ್ಮ ಕರ್ತವ್ಯವನ್ನು ಮಾಡದೇ ಇರುವದಿಲ್ಲ. 
  
  ತಮ್ಮ ಮುಖಾಂತರ ದೇವತೆಗಳನ್ನು ಆರಾಧಿಸುವ ಋಷಿಗಳಿಗೆ, ಮುಂದಾಗುವ ಘಟನೆಗಳ ಸೂಚನೆಯನ್ನು ನೀಡುವದು ಅಗ್ನಿದೇವರ ಕರ್ತವ್ಯ. ಹೀಗಾಗಿ ಅವರು ತಮ್ಮ ಕರ್ತವ್ಯನ್ನು ನಿಭಾಯಿಸಿದರು. 
  
  ಮೊದಲಾದರೆ ಆ ರೀತಿ ಸೂಚನೆ ನೀಡಿದರೆ, ಋಷಿಗಳು ಚಿಂತಾಕ್ರಾಂತರಾಗುತ್ತಿದ್ದರು, ಅಥವಾ ಭೀತರಾಗುತ್ತಿದ್ದರು, ನಿಗ್ರಹಿಸಲು ಸಾಧ್ಯವಿದ್ದರೆ ಅದಕ್ಕೆ ಮುಂದಾಗುತ್ತಿದ್ದರು. 
  
  ಆದರೆ, ಈ ರಾಮದೇವರಿರುವ ಕಾರಣ, ಶ್ರೀರಾಮ ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾನೆ ಎಂಬ ವಿಶ್ವಾಸದಿಂದ ಯಜ್ಞವನ್ನು ಮುಂದುವರೆಸಿದರು. ಹೀಗೆ, ಋಷಿಗಳಲ್ಲಿರುವ ವಿಶ್ವಾಸವನ್ನು ಪ್ರಕಟಮಾಡಲು ಅಗ್ನಿಯ ಸೂಚನೆ ಕಾರಣವಾಯಿತು. 
 • Santosh Patil,Gulbarga

  12:40 AM, 16/04/2020

  Thanks Gurugale 💐🙏💐
 • Vidhya,Gobichettipalayam

  5:28 PM , 15/04/2020

  ರಾಮನ ಯಜ್ಞ ರಕ್ಷಣೆ ಕಣ್ಣ ಮುಂದೆ ನಡೆದಂತೆ ಇದೆ.. ಅನಂತ ಧನ್ಯವಾದಗಳು ಅಚಾರ್ಯರೇ
 • M V Lakshminarayana,Bengaluru

  3:39 PM , 15/04/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  
  VNU 550ರಲ್ಲಿ ತಿಳಿಸಿರುವ ಶಾರೀರಿಕಾಭ್ಯಾಸಕ್ಕೆ ಉದಾಹರಣೆಯಂತಿರುವ ಶ್ರೀ ರಾಮಲಕ್ಷ್ಮಣರ ಯಜ್ಞಸಂರಕ್ಷಣೆಯ ಸಾಹಸ ಕಾರ್ಯವನ್ನು ಇಷ್ಟು ವಿವರವಾಗಿ ಎಲ್ಲಿಯೂ ಕೇಳಿರಲಿಲ್ಲ. 
  
  ಕತೆಯ ಜೊತೆಗೆ ನಮಗೆ ದೊರಕುವ ಜೀವನ ಪಾಠಗಳನ್ನು ಎತ್ತಿ ತೋರಿಸುವ ತಮ್ಮ ಪ್ರವಚನ ಕೌಶಲ್ಯಕ್ಕೆ ಅನಂತಾನಂತ ಧನ್ಯವಾದಗಳು.
 • Poornima Sowda,Bangalore

  2:13 PM , 15/04/2020

  ಗುರುಗಳಿಗೆ ಭಕ್ತಿಪೂರ್ವಕವಾದ .ನಮಸ್ಕಾರಗಳು🙏
  
  ವಾಲ್ಮೀಕಿ ಋಷಿಗಳಿಗೂ ನೀವು ಸಾಂಶರು ಎಂದು ಹೇಳಿದ್ದೀರಿ, ಇದರ ಅರ್ಥವೇನು?

  Vishnudasa Nagendracharya

  ಸಾಂಶರು ಎಂದರೆ ಒಂದೇ ಕಾಲದಲ್ಲಿ ಅನೇಕ ಪ್ರದೇಶಗಳಲ್ಲಿ ಅನೇಕ ರೂಪಗಳಿಂದ ಇರುವ ಸಾಮರ್ಥ್ಯವುಳ್ಳ ಜೀವರಾಶಿಗಳು. 
  
  ಈ ಸಾಂಶ ಜೀವರ ಕುರಿತು ಶ್ರೀಮದ್ ಭಾಗವತದ ಪ್ರಥಮಸ್ಕಂಧದಲ್ಲಿ SB110, {VNU624} ರಲ್ಲಿ ವಿಸ್ತಾರವಾಗಿ ತಿಳಿಸಿದ್ದೇನೆ. 44ನೆಯ ನಿಮಿಷದಿಂದ. 
  
  ಕೇಳಿ. 
 • DESHPANDE P N,BANGALORE

  2:04 PM , 15/04/2020

  S.Namaskaragalu. Anugrahvirali
 • Niranjan Kamath,Koteshwar

  11:31 AM, 15/04/2020

  Shri Narayana akhila Guro Bhagavan Namasthe.Gurugalige Vandanegalu. Nimma vaak chaturya...vishayagalannu namage tilisi heluva pari apratimavadaddu. 
  
  Adarallu neevu bhakthara prashengalige takkudaad mathu spashta vaada uttara needuva pari bahala khushiyaaguttade. 
  
  Ivatttina upanyasavoo bahala sundaravagi manassige muda needittu. Dhanyosmi.
 • Vishwnath MJoshi,Bengaluru

  5:39 AM , 15/04/2020

  श्रीगुरुभ्यो नमः। अथ गुरुपादौ नमस्करोमि
  
  ಸಪ್ರೇಮ ವಂದನೆಗಳು ಗುರುಗಳೆ
  
  ಸಪ್ತರ್ಷಿಗಳು ಯಾರು. ಅವರ ಹೆಸರನ್ನು ದಯವಿಟ್ಟು ತಿಳಿಸಿ.
  
  
  ಗಾಯಿತ್ರಿ ಅಂಥ ಶ್ರೇಷ್ಠ ಮಂತ್ರವನ್ನು ಕೊಟ್ಟ ಶ್ರೀ ವಿಶ್ವಾಮಿತ್ರ ಋಷಿಗಳು ಏಕೆ ಸಪ್ತರ್ಷಿಗಳ ಗಣನೆಯಲ್ಲಿ ಬರುವುದಿಲ್ಲ?
  
  ಸಪ್ತರ್ಷಿಗಳು ಒಂದು ಮನ್ವಂತರ ಅಥವಾ ಒಂದು ಯುಗದಿಂದ ಯುಗಕ್ಕೆ ಬದಲಾಗುತ್ತಾರ?
  
  ದಯವಿಟ್ಟು ತಿಳಿಸಿಕೊಡಿ ಎಂದು ಕೊರುತ್ತೇನೆ 
  
  ಧನ್ಯವಾದಗಳು ಗುರುಗಳೆ
  

  Vishnudasa Nagendracharya

  ಸಪ್ತರ್ಷಿಗಳಲ್ಲಿ ಎರಡು ವಿಧ — ಸಪ್ತರ್ಷಿಮಂಡಲದಲ್ಲಿದ್ದು ಇಡಿಯ ಬ್ರಹ್ಮದೇವರ ಒಂದು ದಿವಸದಲ್ಲಿ ಲೋಕಪಾಲನೆ ಮಾಡುವವರು. ಇವರು ಗಣಪತಿಗಿಂತ ಶ್ರೇಷ್ಠ ಯೋಗ್ಯತೆಯವರು, ಅಗ್ನಿ-ಭೃಗುಗಗಳಿಗಿಂತ ಕಡಿಮೆ ಯೋಗ್ಯತೆವರು. 
  
  ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ ಇವರು ಆ ಸಪ್ತರ್ಷಿಗಳು. 
  
  ವಿಶ್ವಾಮಿತ್ರರು ಸಹ ಇವರಿಗೆ ಸಮಾನರಾದವರು. 
  
  ವಿಶ್ವಾಮಿತ್ರರೇಕೆ ಸಪ್ತರ್ಷಿಗಳಲ್ಲಿ ಸೇರುವದಿಲ್ಲ ಎಂಬ ಪ್ರಶ್ನೆಯೇ ತಪ್ಪು. ಕಾರಣ, ಒಬ್ಬೊಬ್ಬರ ಸಾಧನೆಯೂ ವಿಭಿನ್ನ. ಹಾಗೆ ನೋಡಿದರೆ ಸೂರ್ಯ ಚಂದ್ರ ಇಬ್ಬರೂ ಸಮಾನ ಯೋಗ್ಯತೆಯವರು. ಆದರೆ ಸೂರ್ಯನ ಕಾರ್ಯ ಬೇರೆ, ಚಂದ್ರನ ಕಾರ್ಯ ಬೇರೆ. ಇಬ್ಬರೂ ನೀಡುವ ಪ್ರಕಾಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. 
  
  ಹಾಗೆ, ಸಪ್ತರ್ಷಿಮಂಡಲದಲ್ಲಿದ್ದು ಪ್ರಜಾಪಾಲನೆ ಮಾಡುವದು ಸಪ್ತರ್ಷಿಗಳ ಕಾರ್ಯವಾದರೆ, ವರದಿಂದ ಬ್ರಾಹ್ಮಣತ್ವವನ್ನು ಪಡೆದು ಗಾಯತ್ರಿಯನ್ನು ನೀಡಿ ಸಮಗ್ರ ಸಜ್ಜನರನ್ನು ಉದ್ಧರಿಸುವದು ವಿಶ್ವಾಮಿತ್ರರ ಕಾರ್ಯ. 
  
  ಭಗವಂತ ಯಾವ ಕಾರ್ಯವನ್ನು ಆದೇಶಿಸುತ್ತಾನೆಯೋ ಆ ಕಾರ್ಯವನ್ನು ಮಾಡುವದರಲ್ಲಿ ಸಾರ್ಥಕ್ಯವಿದೆಯೇ ಹೊರತು ಎಲ್ಲರೂ ಒಂದೇ ರೀತಿಯ ಪದವಿಯಲ್ಲಿರಬೇಕು ಎಂಬ ನಿಯಮವಿಲ್ಲ. 
  
  ಹಾಗೇ ಮತ್ತೊಬ್ಬರೂ ಪ್ರಶ್ನೆ ಮಾಡಬಹುದಲ್ಲವೇ? ಸಪ್ತರ್ಷಿಗಳಲ್ಲಿ ಒಬ್ಬರಾಗಲೀ ಅಥವಾ ಸಪ್ತರ್ಷಿಗಳಿಗಿಂತ ಯೋಗ್ಯತೆಯಲ್ಲಿ ದೊಡ್ಡವರಾದ ಭೃಗು ನಾರದ ಮಹರ್ಷಿಗಳಾಗಲೀ ಏಕೆ ಗಾಯತ್ರಿಯನ್ನು ಕಂಡಕೊಳ್ಳಲಿಲ್ಲ ಎಂದು. ಅವರವರ ಕಾರ್ಯವನ್ನು ಮಾಡುವದೇ ಅವರ ಸಾಧನೆ ಎನ್ನುವದೇ ಎಲ್ಲದಕ್ಕೂ ಉತ್ತರ. 
  
  ಎರಡನೆಯ ವಿಧ — ಒಂದೊಂದು ಮನ್ವಂತರದಲ್ಲಿ ಸಪ್ತರ್ಷಿಗಳಾಗುವರು. ಇವರು ಪ್ರತೀ ಮನ್ವಂತರದಲ್ಲಿ ಬದಲಾಗುತ್ತಾರೆ. ಇವರ ಕುರಿತು ಭಾಗವತದ ನವಮಸ್ಕಂಧದಲ್ಲಿ ಕೇಳುತ್ತೇವೆ. 
  
  
  
  
 • Vishwnath MJoshi,Bengaluru

  5:14 AM , 15/04/2020

  श्रीगुरुभ्यो नमः। अथ गुरुपादौ नमस्करोमि
  
  ಗುರುಗಳಿಗೆ ಸುಪ್ರಭಾತ
  
  ಸಪ್ರೇಮ ವಂದನೆಗಳು ಗುರುಗಳೆ
  
  ಮಾರೀಚ ಮತ್ತು ಸುಬಾಹು ,ಈ ಎರಡು ರಾಕ್ಷಸರನ್ನ
  ಸಂಹಾರ ಮಾಡಬೇಕೆಂದು ಶ್ರೀ ವಿಶ್ವಾಮಿತ್ರ ಋಷಿಗಳು
  ಶ್ರೀರಾಮ ಮತ್ತು ಲಕ್ಷ್ಮಣರನ್ನು ಕರೆತಂದಿದ್ದರು.
  ಆದರೆ ಯಾವ ಕಾರಣದಿಂದ ಮಾರೀಚನನ್ನು ಶ್ರೀರಾಮ ಕೊಲ್ಲಲಿಲ್ಲ. ಸಮುದ್ರದ ಒಳಗೆ ತಳ್ಳಲು ಕಾರಣವೇನು.
  
  ದಯವಿಟ್ಟು ತಿಳಿಸಿಕೊಡಿ ಗುರುಗಳೆ 
  
  ಧನ್ಯವಾದಗಳು ಗುರುಗಳೆ

  Vishnudasa Nagendracharya

  ಮಾರಿಚ ಸುಬಾಹುಗಳನ್ನು ಕೊಲ್ಲು ಎಂದು ವಿಶ್ವಾಮಿತ್ರರು ಕೇಳುವದಿಲ್ಲ. ಅವರಿಂದ ಯಜ್ಞವನ್ನು ರಕ್ಷಿಸು ಎಂದು ಕೇಳಿರುತ್ತಾರೆ. 
  
  ಸುಬಾಹುವಿನ ತಮಸ್ಸಾಧನೆ ಮುಗಿದಿದೆ ಅದಕ್ಕಾಗಿ ದೇವರು ಅವನನ್ನು ಕೊಂದ. 
  
  ಮಾರೀಚನ ಆಯುಷ್ಯ ಮತ್ತು ದುಷ್ಟಕಾರ್ಯಗಳು ಇನ್ನೂ ಮುಗಿದಿಲ್ಲ. ಮುಂದೆ ಮಾಯಾಜಿಂಕೆಯ ರೂಪದಲ್ಲಿ ಬಂದು ರಾಮಸೀತೆಯರಿಗೆ ದ್ರೋಹ ಮಾಡಬೇಕಾಗಿದೆ. ಅದಕ್ಕಾಗಿ ದೇವರು ಅವನನ್ನು ಉಳಿಸಿದ.