Upanyasa - VNU908

ಅಹಲ್ಯಾದೇವಿಯರ ಜನ್ಮ

ಶ್ರೀಮದ್ ರಾಮಾಯಣಮ್ — 26 

ಬ್ರಹ್ಮದೇವರ ಪುತ್ರಿಯಾಗಿ ಅಹಲ್ಯಾದೇವಿಯರ ಜನ್ಮ, ಅವರ ಅದ್ಭುತ ರೂಪ, ಅವರ ಹೆಸರಿನ ಅರ್ಥ, ಇಂದ್ರದೇವರಿಗೆ ಅವರನ್ನು ಮದುವೆಯಾಗಲು ಉಂಟಾದ ಬಯಕೆ, ಆದರೆ ಗೌತಮರ ಆಶ್ರಮದಲ್ಲಿ ಅಹಲ್ಯೆಯನ್ನು ಬಹುಕಾಲದವರೆಗೆ ಇರಿಸಿ ಗೌತಮರ ತಪಃಸಿದ್ಧಿಯನ್ನು ಕಂಡು ಬ್ರಹ್ಮದೇವರು ಅವರಿಗೆ ಮದುವೆಮಾಡಿಕೊಟ್ಟ ವಿವರ ಈ ಪ್ರವಚನದಲ್ಲಿದೆ, ಅಹಲ್ಯಾದೇವಿಯರ ವೃತ್ತಾಂತವನ್ನು ಕೇಳುವ ಮುನ್ನ ಯಾವ ಎಚ್ಚರವಿರಬೇಕು ಎಂಬ ವಾಲ್ಮೀಕಿಯ ವಚನದ ಅರ್ಥಾನುಸಂಧಾನದೊಂದಿಗೆ. 

Play Time: 31:27

Size: 7.28 MB


Download Upanyasa Share to facebook View Comments
2549 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  9:12 PM , 12/07/2020

  🙏🙏🙏
 • prema raghavendra,coimbatore

  2:54 PM , 31/05/2020

  Anantha namadkara! Danyavada!
 • Santosh Patil,Gulbarga

  10:37 PM, 25/04/2020

  Thanks Gurugale 💐🙏💐
 • Sampada,Belgavi

  9:27 AM , 16/04/2020

  Bramhadevaru vandetarahada striyarannu srushti madalu mattu vilakshana striyannu yeke srushti madbekemba aalochanege yenu karana .. Dayavittu tilisi 🙏🙏

  Vishnudasa Nagendracharya

  ಒಂದೇ ರೀತಿಯ ಬಣ್ಣ, ಆಕಾರ, ರೂಪ, ಮಾತುಗಳುಳ್ಳ ರೀತಿ ಜೀವರನ್ನು ಸೃಷ್ಟಿ ಮಾಡಿದರೆ ಸೃಷ್ಟಿಯಲ್ಲಿ ಸ್ವಾರಸ್ಯವಿರುವದಿಲ್ಲ ಎನ್ನುವದು ತತ್ವ. ಹೀಗಾಗಿ ವಿಭಿನ್ನ ಬಣ್ಣ, ಅಕಾರ, ರೂಪಗಳಲ್ಲಿ ಬ್ರಹ್ಮದೇವರು ಜೀವರನ್ನು ಸೃಷ್ಟಿ ಮಾಡುತ್ತಾರೆ. 
  
  ಜಗತ್ತಿನಲ್ಲಿ ಎಲ್ಲ ತತ್ವಗಳಿಗೂ ದೃಷ್ಟಾಂತವಿದೆ. ಉದಾಹರಣೆಗೆ ಬ್ರಾಹ್ಮಣನಾದವನು ಸುರಾಪಾನ (ಹೆಂಡ ಕುಡಿಯುವದು) ಮಾಡಿದರೆ ಅವನಿಗೆ ಬ್ರಹ್ಮಹತ್ಯೆಯ ದೋಷ ಬರುತ್ತದೆ ಎಂದು. ಹೀಗೆ ಹೇಳಿದರೆ ಸುಮ್ಮನೆ ಹೆದರಿಸಲು ಹೇಳುತ್ತಿದ್ದಾರೆ ಎಂದು ಜನ ತಿಳಿಯುತ್ತಾರೆ. ಇದು ಕೇವಲ ಮಾತಲ್ಲ, ನಿಶ್ಚಿತವಾಗಿ ಬ್ರಹ್ಮಹತ್ಯೆಯ ದೋಷ ಬರುತ್ತದೆ ಎನ್ನುವದಕ್ಕೆ ಒಂದು ಘಟನೆಯೇ ನಡೆಯುತ್ತದೆ. ಬೃಹಸ್ಪತ್ಯಾಚಾರ್ಯರ ಮಗ ಕಚನನ್ನು ದೈತ್ಯರು ಕೊಂದು, ಸುಟ್ಟು ಬೂದಿ ಮಾಡಿ ಹೆಂಡದಲ್ಲಿ ಸೇರಿಸಿ ಶುಕ್ರಾಚಾರ್ಯರಿಗೆ ಕುಡಿಸಿಬಿಡುತ್ತಾರೆ. ನಂತರ ಇದನ್ನು ತಿಳಿದ ಶುಕ್ರಾಚಾರ್ಯರು ಕಚನನ್ನು ಬದುಕಿಸಿ ಶಾಸನ ಮಾಡುತ್ತಾರೆ, ಇನ್ನು ಮುಂದೆ ಯಾವುದೇ ಬ್ರಾಹ್ಮಣ ಸುರಾಪಾನ ಮಾಡಿದರೂ ಅವನಿಗೆ ಬ್ರಹ್ಮಹತ್ಯೆಯ ದೋಷ ಬರಲಿ ಎಂದು. 
  
  ಹೀಗೆ, ಒಂದೇ ರೀತಿಯ ಜೀವರನ್ನು ಸೃಷ್ಟಿ ಮಾಡಿದರೆ ಏನು ಸಮಸ್ಯೆ ಉಂಟಾಗುತ್ತದೆ ಎನ್ನುವದಕ್ಕೂ ಸಹ ಆದಿಕಾಲದಲ್ಲಿ ಬ್ರಹ್ಮದೇವರು ಒಮ್ಮೆ ಆ ರೀತಿ ಸೃಷ್ಟಿ ಮಾಡಿಯೇ ತೋರಿಸುತ್ತಾರೆ. ಒಂದೇ ರೀತಿಯಾಗಿದ್ದಾಗ ವ್ಯತ್ಯಾಸ ತಿಳಿಯುವದಿಲ್ಲ ಮತ್ತು ಅನೇಕ ಸಮಸ್ಯೆಗಳುಂಟಾಗುತ್ತವೆ ಎನ್ನುವದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ವಿಭಿನ್ನ ರೀತಿಯ ಸೃಷ್ಟಿಯನ್ನು ಮಾಡುತ್ತಾರೆ. ಇದು ಇಡಿಯ ಪೃಥ್ವಿಯಲ್ಲಿ ನಡೆದ ಘಟನೆಯಲ್ಲ. ಪೃಥ್ವಿಯ ಒಂದು ಭಾಗದಲ್ಲಿ ಮಾತ್ರ ನಡೆದ ಘಟನೆ. 
  
  ವಿವರಗಳನ್ನು ಪುರಾಣಗಳನ್ನು ಸಂಶೋಧಿಸಿ ನೋಡಬೇಕು. 
 • M V Lakshminarayana,Bengaluru

  1:45 PM , 16/04/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  ಪೀಠಿಕಾ ಲೇಖನ ಮುಂದಿನ ಉಪನ್ಯಾಸಕ್ಕೆ ಸಂಬಂಧಿಸಿದಂತೆ ತೋರುತ್ತದೆ. ಆದರೂ VNU774ರಲ್ಲಿ ಇದರ ವಿಸ್ತೃತವಾದ ವಿವರಣೆ ಕೇಳಿದ್ದೇವೆ.
  ಇಂತಿ ನಮಸ್ಕಾರಗಳು

  Vishnudasa Nagendracharya

  ಉಪನ್ಯಾಸಗಳ ಹೆಸರು, ಮತ್ತು ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಸರಿ ಪಡಿಸಿದ್ದೇನೆ. 
 • Vidhya,Gobichettipalayam

  12:18 PM, 16/04/2020

  ವಾಲ್ಮೀಕಿ ರಾಮಾಯಣ, ಆಚಾರ್ಯರ ತಾತ್ಪರ್ಯ , ಸಂಗ್ರಹ ರಾಮಾಯಣ ಮೊದಲಾದ ಗ್ರಂಥ ಸಮೂಹಗಳಿಂದ ಮುತ್ತುಗಳನ್ನು ಹೆಕ್ಕಿ ತೆಗೆದು ನಮ್ಮ ಮುಂದೆ ಕೊಟ್ಟಿದೀರಿ. ಅಮೃತವನ್ನು ಸವಿಯುವಂತೆ ಇದೆ ರಾಮನ ಕಥೆ. ಅನಂತ ನಮಸ್ಕಾರಗಳು.

  Vishnudasa Nagendracharya

  ಶ್ರೀಹರಿ ವಾಯು ದೇವತಾ ಗುರುಗಳು ಕಾರುಣ್ಯದಿಂದ ಮಾಡಿಸುತ್ತಿರುವ ಸತ್ಕರ್ಮ. 
 • Megha Kulkarni,Bengaluru

  12:35 PM, 16/04/2020

  Namaskara Gurugale. Shatananda rishigalu Janaka maharajarige Srinivasa Kalyana niroopisuttare anta helidira. So Srinivasa devara avatara Ramavatara munche aita?

  Vishnudasa Nagendracharya

  ಶ್ರೀನಿವಾಸ ಕಲ್ಯಾಣ , ರಾಮಾವತಾರ, ಕೃಷ್ಣಾವತಾರ ಮುಂತಾದವು ಬ್ರಹ್ಮದೇವರ ಪ್ರತೀದಿವಸದಲ್ಲಿ ನಡೆಯುವ ಘಟನೆಗಳು. ಹೀಗಾಗಿ, ಹಿಂದೆ ನಡೆಯುವ ಘಟನೆಗಳನ್ನು ತಿಳಿದು, ಮುಂದೆ ಹೀಗಾಗುತ್ತದೆ ಎಂದು ಋಷಿಗಳು ಉಪದೇಶಿಸುತ್ತಾರೆ. 
 • DESHPANDE P N,BANGALORE

  2:13 PM , 16/04/2020

  S.Namaskargalu Anugrahvirali
 • Niranjan Kamath,Koteshwar

  7:18 AM , 16/04/2020

  ಯಾವಾಗ ಮುಂದಿನ ಬರುತ್ತದೆ , ಮುಂದಿನ ಉಪನ್ಯಾಸ ಯಾವಾಗ ಕೇಳುವುದು ಎನ್ನುವ ಒಂದೇ ಭಾವನೆ ಬರುತ್ತದೆ. ಧನ್ಯೋಸ್ಮಿ.
 • Niranjan Kamath,Koteshwar

  7:17 AM , 16/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. ಗುರುಗಳ ಚರಣಗಳಿಗೆ ನಮೋ ನಮಃ. ನಾವು ಮಾಡಬೇಕಾದ ಮಹತ್ವದ ವಿಚಾರವಾದ ಮಹಿಳೆಯರ ಬಗ್ಗೆ ಯೋಚಿಸುವ, ಅವರಿಗೆ ಗೌರವ ನೀಡುವ ಬಗ್ಗೆ ಬಹಳ ಮಹತ್ವದ ವಿಚಾರ ತಿಳಿಸಿದ್ದೀರಿ.
 • Sampada,Belgavi

  5:39 AM , 16/04/2020

  🙏🙏🙏🙏🙏