Upanyasa - VNU909

ಇಂದ್ರ ಅಹಲ್ಯೆಯರಿಗೆ ಶಾಪ

ಶ್ರೀಮದ್ ರಾಮಾಯಣಮ್ — 27

ಗೌತಮರು ನದಿಯ ಸ್ನಾನಕ್ಕಾಗಿ ತೆರಳಿದ್ದಾಗ ಗೌತಮರ ವೇಷದಲ್ಲಿಯೇ ಇಂದ್ರದೇವರು ಬರುತ್ತಾರೆ. ಬಂದಿರುವದು ಗಂಡನಲ್ಲ, ಇಂದ್ರ ಎಂದು ತಿಳಿದಿದ್ದರೂ, ಆ ಕ್ಷಣದ ದೌರ್ಬಲ್ಯದಿಂದ, ದುಷ್ಟಬುದ್ಧಿಯಿಂದ ಅಹಲ್ಯೆಯೂ ತಪ್ಪನ್ನೆಸಗುತ್ತಾರೆ. ಆ ನಂತರ ಇಂದ್ರದೇವರು ಆಶ್ರಮದಿಂದ ಸರಸರನೇ ನಡೆದು ಹೋಗುವಾಗ, ಗೌತಮರು ಬಂದು, ತಮ್ಮ ಜ್ಞಾನದೃಷ್ಟಿಯಿಂದ ಎಲ್ಲವನ್ನೂ ಕಂಡು ಇಂದ್ರ-ಅಹಲ್ಯೆ ಇಬ್ಬರಿಗೂ ಶಾಪವನ್ನು ನೀಡುತ್ತಾರೆ. ತಮ್ಮ ತಪ್ಪನ್ನರಿತು ಕಾಲಿಗೆ ಬಿದ್ದು ಕ್ಷಮೆ ಕೇಳಿದ ಅಹಲ್ಯೆಗೆ ಶಾಪವಿಮೋಚನೆಯನ್ನೂ ಅನುಗ್ರಹಿಸುತ್ತಾರೆ, ಪಾಪಪ್ರಕ್ಷಾಲನೆಯ ನಂತರ ಸ್ವೀಕರಿಸುತ್ತೇನೆ ಎಂಬ ಅಭಯವನ್ನೂ ನೀಡುತ್ತಾರೆ.

ಕುಳಿತಿದ್ದಕ್ಕೆ ನಿಂತದ್ದಕ್ಕೆ ವಿಚ್ಛೇದನವನ್ನು ತೆಗೆದುಕೊಳ್ಳುವ, ಅಗ್ನಿಸಾಕ್ಷಿಯಾಗಿ ಆದ ಮದುವೆಯನ್ನು ಮುರಿಯುವ ಇಂದಿನ ಜನರಿಗೆ ಗೌತಮರು ಕಲಿಸುವ ಅದ್ಬುತ ಪಾಠ ಇಲ್ಲಿದೆ. 

ಗಂಡ ಹೆಂಡತಿಯರಲ್ಲೊಬ್ಬರು ಲೈಂಗಿಕ ಅಪರಾಧ ಮಾಡಿದಾಗ, ತಪ್ಪಿನ ಎಚ್ಚರ ಇದ್ದಾಗ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಶ್ರೀಮದಾಚಾರ್ಯರ ನಿರ್ಣಯದ ವಿವರಣೆ ಇಲ್ಲಿದೆ. 

ತಪ್ಪನ್ನು ಒಪ್ಪಿಕೊಳ್ಳುವ ಸಜ್ಜನಿಕೆ, ಶಿಕ್ಷೆಯನ್ನು ಅನುಭವಿಸಿ ಪಾಪವನ್ನು ಕಳೆದುಕೊಳ್ಳು ಧರ್ಮಪ್ರಜ್ಞೆ, ಶಿಕ್ಷೆ ಅನುಭವಿಸಿದ ನಂತರ ಅವರನ್ನು ಸ್ವೀಕರಿಸುವ ಹೃದಯಶ್ರೀಮಂತಿಕೆಯೇ ನಮ್ಮ ಭಾರತೀಯ ಸಂಸ್ಕೃತಿ, ವಿಚ್ಛೇದನ ನಮ್ಮ ಸಂಸ್ಕೃತಿ ಅಲ್ಲ ಎನ್ನುವದರ ಪ್ರತಿಪಾದನೆ ಇಲ್ಲಿದೆ. 

ಏಧಮಾನದ್ವಿಟ್ ಎಂಬ ಭಗವಂತನ ಹೆಸರಿನ ಅರ್ಥದ ವಿವರಣೆಯೊಂದಿಗೆ ಅತಿರಿಕ್ತವಾದ ತಪಸ್ಸು ಎಂದರೇನು, ಅದರಿಂದ ಬರುವ ಪುಣ್ಯ ಯಾವ ರೀತಿಯಲ್ಲಿ ಕಳೆಯುತ್ತದೆ ಎಂಬ ತತ್ವದ ವಿವರಣೆ ಇಲ್ಲಿದೆ. 
Play Time: 44:14

Size: 1.37 MB


Download Upanyasa Share to facebook View Comments
3191 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  10:00 PM, 12/07/2020

  🙏🙏🙏
 • Varuni Jayanth,Bangalore

  12:52 PM, 10/07/2020

  Gurugalige bhaktipoorvak namanagalu.Ahalyadevi Goutamara pavana charithamrutavannu unabadisida nimage hrutpoorvaka vandanegalu.Katha nirupane hrudayangama.
 • prema raghavendra,coimbatore

  2:58 PM , 31/05/2020

  Danyavada! Anantha namaskara
 • Santosh Patil,Gulbarga

  10:38 PM, 25/04/2020

  Thanks Gurugale 💐🙏💐
 • Karthik N,Bangalore

  10:03 PM, 19/04/2020

  Gurugalige Anantha namaskaragalu🙏. Gurugale Ramayana daly nivu maduva magala charana sholka thumba channagi ide. Aa sholka da artha vanu dayavitu tilasi gurugale.

  Vishnudasa Nagendracharya

  ರಾಮಂ ಸೀತಾಸಮೇತಂ 
  ಪವನಸುತನುತಂ 
  ಜ್ಞಾನಮುದ್ರಾಸುಭದ್ರಂ
  
  ವ್ಯಾಸಂ ಮಧ್ವಂ ಚ ವಾಣೀಂ 
  ಗಿರಿಶಮುಖಸುರಾನ್ 
  ಸಹ್ಯಜಾಂ ಜ್ಞಾನದಾತ್ರೀಮ್।
  
  ವಾಲ್ಮೀಕಿಂ ವಿಷ್ಣುತೀರ್ಥಂ 
  ಜಯಮುನಿಮಥ 
  ವ್ಯಾಸರಾಜಾದಿಪೂಜ್ಯಾನ್ ।
  
  ನತ್ವಾ ದಾಸಾನ್ ಸುಭಕ್ತ್ಯಾ 
  ರಘುವರಚರಿತಂ 
  ವಚ್ಮಿ ಬಂಧಾದ್ ವಿಮುಕ್ತ್ಯೈ।
  
  ರಾಮತೀರ್ಥಗುರುಂ ವಂದೇ
  ರಾಮಪಾದಾಬ್ಜಭಾಸಕಮ್ ।
  ಸಮಜ್ಯಾಸು ಧರೇಶಾನಾಂ 
  ರಾಮಪಾರಮ್ಯಸಾಧಕಮ್।
  
  ಯತ್ಪಾದೋದಕಸಚ್ಛಕ್ತ್ಯಾ
  ವಚ್ಮಿ ರಾಮಸ್ಯ ಸತ್ಕಥಾಮ್।
  ನಮೋ ಭಗವತೇ ತಸ್ಮೈ 
  ವಿದ್ಯಾವಾರಿಧಿಯೋಗಿನೇ।
 • Srinidhi,Bengaluru

  10:00 PM, 19/04/2020

  ಆಚಾರ್ಯರಿಗೆ ನಮಸ್ಕಾರಗಳು..
  
  ಬ್ರಹ್ಮದೇವರ ದಿನದಲ್ಲಿ ನಡೆಯುವ ಘಟನೆಗಳು ಸ್ವಲ್ಪ ವಿಭಿನ್ನವಾಗಿದ್ದು ಭಾಗಶಃ ಒಂದೇ ರೀತಿಯ ಘಟನೆ ಎಂದಾದರೆ, ಮುಕ್ತ ರಾಗಲು ನಡೆಯಬೇಕಾದ ದಾರಿ ಪೂರ್ವ ನಿರ್ಧಾರಿತ ಅಂಥ ಅರ್ಥ ಮಾಡಿಕೊಳ್ಳಬೇಕಾ?
  
  ಉದಾ: ಬ್ರಹ್ಮ ದೇವರ ಇವತಿನ ರಾಮಾಯಣಕ್ಕೂ ನಾಳೆಯ ರಾಮಾಯಣಕ್ಕೂ ಒಬ್ಬ ಅಹಲ್ಯೆಯ ಯೋಗ್ಯತೆಯ ಜೀವ ಇದ್ದೆ ಇರುತ್ತಾರೆ ಎಂದು ಅರ್ಥೈಸಿಕೊಳ್ಳಬೇಕ?..
  
   ಏಕೆಂದರೆ ಸಮನಾದ ಯೋಗ್ಯತೆ ಯಾರಲ್ಲೂ ಇಲ್ಲ ಎಂದಾಗ ಅವತ್ತಿನ ರಾಮಾಯಣದಲ್ಲಿ ಅಹಲ್ಯೆಯ ಪ್ರಸಂಗವೇ ಇರೋದಿಲ್ಲ, ಗೌತಮ ಇಂದ್ರರ ಪ್ರಸಂಗ ಇರೋದಿಲ್ಲ ಹೀಗೆ ತಿಳಿದುಕೊಳ್ಳಬೇಕಾ? (ಅನಂತ ಜೀವರಾಶಿಯಲ್ಲಿ ಅಂತಹ ಯೋಗ್ಯತೆ ಯಾರಲ್ಲಿಯಾದರು ಇದ್ದೆ ಇರುತ್ತೆ ಅಂತ ಅರ್ಥೈಸಿಕೊಳ್ಳಬೇಕ?)

  Vishnudasa Nagendracharya

  ಈಗಾಗಲೇ ಭಾಗವತದ ಉಪನ್ಯಾಸಗಳಲ್ಲಿ ವಿವರಣೆಗೊಂಡ ವಿಷಯವಿದು. 
  
  ಜೀವ ಸೃಷ್ಟಿಗೆ ಪ್ರವೇಶಿಸಿ ಮುಕ್ತಿಗೆ ಹೋಗುವವರೆಗೂ ಅವನ ಪೂರ್ಣ ‘ಯಾತ್ರೆ’ ನಿರ್ಧಾರಿತವಾಗಿರುತ್ತದೆ. 
  
  ಗೌತಮ ಅಹಲ್ಯಾ ಜೀವರು ಅನಂತ ಸಂಖ್ಯೆಯಲ್ಲಿದ್ದಾರೆ. 
 • Vishwnath MJoshi,Bengaluru

  11:19 AM, 19/04/2020

  ಗುರುಗಳಿಗೆ ನಮಸ್ಕಾರ
  श्रीगुरुभ्यो नमः। अथ गुरुपादौ नमस्करोमि
  
  ಗೌತಮ ಋಷಿಗಳು ಅಗ್ನಿಕ ಮಾಡಿಕೊಂಡು ಬಂದಿದ್ದರು ಅಂತ ಹೆಳಿದಿರಿ. ನನ್ನದು ಸಣ್ಣ ಪ್ರಶ್ನೆ ಅಗ್ನಿಕ ಎಂಬ ಶಬ್ದದ ಹೆಸರಿನ ಅರ್ಥವೇನು

  Vishnudasa Nagendracharya

  ಆಗ್ನಿಕ ಅಲ್ಲ, ಆಹ್ನೀಕ. ಪ್ರತೀದಿವಸದಲ್ಲಿ ಮಾಡುವ ಸಂಧ್ಯಾವಂದನೆ, ಜಪ ಮುಂತಾದ ಸತ್ಕರ್ಮಗಳಿಗೆ ಆಹ್ನೀಕ ಎಂದು ಹೆಸರು. 
 • Srikar K,Bengaluru

  2:08 PM , 19/04/2020

  Gurugale,
  
  Ramayana, Mahabhatha, etc. Brahmma devara prati dina dalliyu nade yuvantha ghatanegalu. Prati yondu bariyu avugalli nadeyuva sequencing, patra galu, etc. onde reeti iruvudakke karana venu ? Devaru swatantra nallave ? Ivugalannu badalavane maduva samarthya iruvavanu. Haage badalavane agade iralikke enu karana gurugale ? Prashne tappiddalli kshamisi

  Vishnudasa Nagendracharya

  ರಾಮಾಯಣ ಮಹಾಭಾರತಗಳು ಬ್ರಹ್ಮದೇವರ ಪ್ರತೀದಿವಸದಲ್ಲಿ ನಡೆಯುತ್ತವೆ. ಆದರೆ ಎಲ್ಲ ಪ್ರಸಂಗಗಳೂ ಒಂದೇ ರೀತಿ ನಡೆಯುತ್ತವೆ ಎಂದಿಲ್ಲ. ಸ್ವಲ್ಪ ವಿಭಿನ್ನ ರೀತಿಯಲ್ಲಿ ನಡೆಯುತ್ತವೆ. 
  
  ಇನ್ನು ಒಂದೇ ರೀತಿಯಲ್ಲಿ ಏಕೆ ನಡೆಯುತ್ತವೆ ಎಂದರೆ, ಆಯಾಯ ಜೀವರಾಶಿಗಳು ಅದೇ ರೀತಿಯಲ್ಲಿ ಸಾಧನೆಮಾಡಿಕೊಳ್ಳಬೇಕು. ಉದಾಹರಣಗೆ ಪ್ರತೀ ದಿನಕಲ್ಪದಲ್ಲಿ ಬೇರೆ ಬೇರೆ ಜಟಾಯುಗಳು ಬರುತ್ತಾರೆ. ಅವರೆಲ್ಲರೂ ಸೀತೆಗಾಗಿ ರಾವಣನೊಡನೆ ಹೋರಾಡಿ, ರಾಮನಿಂದ ಮುಕ್ತಿಯನ್ನು ಪಡೆಯುತ್ತಾರೆ. ಹಾಗೆಯೇ ರಾಮನೊಂದಿಗೆ ಮುಕ್ತಿಗೆ ಹೋಗುವ ಸಜ್ಜನರು. ಅವರು ರಾಮರಾಜ್ಯದ ಸುಖವನ್ನನುಭವಿಸಿಯೇ ಮುಕ್ತಿಯನ್ನು ಪಡೆಯಬೇಕು. ಹೀಗೆ ಒಂದೇ ರೀತಿಯಲ್ಲಿ ನಡೆಯುತ್ತವೆ.
  
  ಈ ರಾಮಾಯಣ ಮಹಾಭಾರತಗಳಲ್ಲಿ ಇಡಿಯ ಬ್ರಹ್ಮಕಲ್ಪದಲ್ಲಿ ಸಾಧನೆ ಮಾಡಿ ಮುಕ್ತಿ ಗಳಿಸುವ ಜೀವರಾಶಿಗಳು ಮಾತ್ರ ಅವರೇ ಇರುತ್ತಾರೆ, ಉದಾಹರಣೆಗೆ ಹನುಮಂತ, ಲಕ್ಷ್ಮಣ, ಭರತ, ಶತ್ರುಘ್ನ ಮುಂತಾದವರು. 
  
  ದಿನಕಲ್ಪಗಳಲ್ಲಿ ಸಾಧನೆ ಮಾಡಿ ಮುಕ್ತಿ ಪಡೆಯುವವರು ಬದಲಾಗುತ್ತಲೇ ಇರುತ್ತಾರೆ. ಉದಾಹರಣೆಗೆ ಜಟಾಯು, ಶಬರಿ, ರಾಮರಾಜ್ಯದ ಪ್ರಜೆಗಳು ಮುಂತಾದವರು. 
 • DESHPANDE P N,BANGALORE

  10:16 AM, 19/04/2020

  S.Namaskargalu. Shreasthahawaada upanyasa. Ella vivaraneagalinda kudeed amoghawaadaddu. Anugrahvirali
 • Sandeep katti,Yalahanka, bengalooru

  1:21 PM , 18/04/2020

  ಪೂಜ್ಯ ಗುರುಗಳೇ
  ಶ್ರೀ ರಾಮನಿಗೆ ರಾಮಚಂದ್ರ ಎಂಬ ಹೆಸರು ಹೇಗೆ ಬಂತು?

  Vishnudasa Nagendracharya

  ವಿಶ್ವನಂದಿನಿಯ ರಾಮಾವತಾರ ಎಂಬ Folder ನ ಪ್ರಶ್ನೋತ್ತರ ವಿಭಾಗದಲ್ಲಿ ಈಗಾಗಲೇ ಉತ್ತರ ನೀಡಲಾದ ಪ್ರಶ್ನಯಿದು. VNP070
  
 • Prabhanjan Joshi,Ankola

  8:27 PM , 17/04/2020

  ಗುರುಗಳಿಗೆ ನಮಸ್ಕಾರಗಳು...
  
  ಗುರುಗಳೇ ನೀವು ನಮ್ಮ ಮೇಲೆ ಕರುಣೆ ಮಾಡಿ ನೀಡುತ್ತಿರುವ ಶ್ರೀ ಮದ್ ರಾಮಾಯಣದ ಶ್ರವಣ ಅದ್ಭುತವಾಗಿ ನಡೆಯುತ್ತಿದೆ...
  ಮೊದಲಿಗೆ ನಾನು ರಾಮಾಯಣ ಕೇವಲ ಒಂದು ಭಗವಂತನ ಕಥೆ ಎಂದು ತಿಳಿದಿದ್ದೆ. ಆದರೆ ಈಗ ನಿಮ್ಮ ಉಪನ್ಯಾಸದಿಂದ ತಿಳಿಯಿತು, ಅದು ಕೇವಲ ಭಗವಂತನ ಕಥೆ ಅಲ್ಲ, ನಾವು ಜೀವನದಲ್ಲಿ ಹೇಗಿರಬೇಕೆಂದು ಸಾಕ್ಷಾತ್ ಭಗವಂತನೇ ನಮ್ಮ ಸಲುವಾಗಿ ಬಂದಿದ್ದಾನೆ ಎಂದು. ಮತ್ತೂ ಅದರಲ್ಲಿರುವ ಸೂಕ್ಷ್ಮ ವಿಚಾರಗಳನ್ನು ನೀವು ಎಷ್ಟು ಚೆನ್ನಾಗಿ ಹೇಳುತ್ತೀರಿ... ದೇವತೆಗಳು ತಪ್ಪು ಮಾಡಿದರೆ ಅದನ್ನು ಮುಚ್ಚಲು ಕಥೆ ಹೇಳುವುದಿಲ್ಲ, ಅದರ ಹಿಂದೆ ತತ್ವ ಇರುತ್ತದೆ ಎಂದು ಮನದಟ್ಟು ಮಾಡಿಸಿದ ನಿಮಗೆ ನನ್ನ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತಾ... 
  
  ೧. ಗುರುಗಳೇ, ವಿಶ್ವಾಮಿತ್ರರು ಮಾರೀಚ ಮತ್ತು ಸುಬಾಹುವಿಗೆ ಶಾಪ ಕೊಡದೆ ಇರಲು ೨-೩ ಕಾರಣಗಳಲ್ಲಿ, ಬ್ರಹ್ಮ ಮತ್ತು ರುದ್ರ ದೇವರ ವರ ಇದ್ದ ಕಾರಣ ಶಾಪ ಕೊಡಲಿಲ್ಲ ಎಂದೂ ಕಾರಣ ನೀಡಿದ್ದೀರಿ, ಆದರೆ ಬ್ರಹ್ಮ ದೇವರ ವರವಿದ್ದ ಕಾರಣ ಅಗಸ್ತ್ಯರು ತಾಟಕೆಗೆ ನಿಗ್ರಹ ಮಾಡಲಿಕ್ಕೆ ಆಗಲಿಲ್ಲ, ಆದರೆ ಶಾಪ ನೀಡಿದರು ಎಂದು ಹೇಳಿದ್ದೀರಿ ಹೇಗೆ ಅರ್ಥ ಮಾಡಿಕೊಳ್ಳಬೇಕು.???
  
  ೨. ವೇದಾಧ್ಯಯನ ಮಾಡಲಿಕ್ಕೆ ಬ್ರಾಹ್ಮಣರು ಮಾತ್ರ ಅರ್ಹರಲ್ಲವೆ??? ಆದರೆ ರಾಮ ಲಕ್ಷ್ಮಣರು ಗಾಯತ್ರಿ ಜಪ ಹೇಗೆ ಮಾಡಿದರು ಅಥವಾ ಅದು ಯುಗಗಳ ಮೇಲೆ ಆಧರವಾಗುತ್ತವೆಯೆ?

  Vishnudasa Nagendracharya

  1. ಅಗಸ್ತ್ಯರು ನೀಡಿದ ಶಾಪಕ್ಕೂ, ವಿಶ್ವಾಮಿತ್ರರು ಈ ಪ್ರಸಂಗದಲ್ಲಿ ನೀಡಬೇಕಾದ ಶಾಪಕ್ಕೂ ವ್ಯತ್ಯಾಸವಿದೆ. ದೊಡ್ಡ ದೇವತೆಗಳು ನೀಡಿದ ವರಕ್ಕೆ ವಿರುದ್ಧವಾದ ಶಾಪವನ್ನು ಸಣ್ಣ ಋಷಿಗಳಿಗೆ ನೀಡಲು ಸಾಧ್ಯವಿಲ್ಲ. ಅಗಸ್ತ್ಯರು ತಾಟಕೆ ಮಾರೀಚರಿಗೆ ರಾಕ್ಷಸರಾಗಿ “ನೀವು ಸಾಯಿರಿ” ಎಂದು ಶಾಪ ನೀಡಲಿಲ್ಲ. ನೀವು ರಾಕ್ಷಸರಾಗಿ ಎಂದು ಶಾಪ ನೀಡಿದರು. ಅದು ಹಿಂದೆ ಬಂದಿರುವ ವರಕ್ಕೆ ವಿರೋಧಿಯಲ್ಲ. 
  
  ಆದರೆ, ಯಜ್ಞಕ್ಕೆ ತೊಂದರೆ ಮಾಡುತ್ತಿರುವ ರಾಕ್ಷಸರಿಗೆ ವಿಶ್ವಾಮಿತ್ರರು ಶಾಪ ನೀಡಿದರೆ, “ನೀವು ಸಾಯಿರಿ, ಅಥವಾ ನಿಮ್ಮ ದೇಹದಲ್ಲಿ ಯಜ್ಞಕ್ಕೆ ವಿರೋಧ ಮಾಡುವ ಶಕ್ತಿ ಹೋಗಲಿ” ಇತ್ಯಾದಿಯಾಗಿ ಶಾಪ ನೀಡಬೇಕು, ಅದು ಬ್ರಹ್ಮ-ರುದ್ರರು ನೀಡಿರುವ ವರಗಳಿಗೆ ವಿರೋಧಿ. ಹೀಗಾಗಿ ನೀಡುವ ಸಾಮರ್ಥ್ಯ ವಿಶ್ವಾಮಿತ್ರರಿಗಿಲ್ಲ. 
  
  2. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂರೂ ವರ್ಗದವರು “ದ್ವಿಜರು”. ಈ ಮೂರೂ ವರ್ಣದವರಿಗೆ ಉಪನಯನವಿದೆ, ಮತ್ತು ವೇದಾಧ್ಯಯನವಿದೆ. ಇಷ್ಟೇ ವ್ಯತ್ಯಾಸ, ಕ್ಷತ್ರಿಯ ವೈಶ್ಯರಿಗೆ ವೇದಗಳನ್ನು ಕಲಿಯಲಿಕ್ಕಷ್ಟೇ ಅರ್ಹತೆ, ಮತ್ತೊಬ್ಬರಿಹೆ ಪಾಠ ಹೇಳುವಂತಿಲ್ಲ. ಆ ಅಧಿಕಾರ ಬ್ರಾಹ್ಮಣನಿಗೆ ಮಾತ್ರ. 
  
 • M V Lakshminarayana,Bengaluru

  1:54 PM , 17/04/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  
  ಗೌತಮರು ಯಾವ ಪದವಿಗೆ ಅಪೇಕ್ಷೆಪಟ್ಟು ತಪಸ್ಸು ಮಾಡಿದ್ದು ಎಂದು ಗೊತ್ತಾಗಲಿಲ್ಲ. 
  
  ಅಗ್ನಿಸಾಕ್ಷಿಯಾಗಿ ವಿವಾಹವಾದರೂ, ಯಾಂತ್ರಿಕವಾಗಿ ಮಂತ್ರ ಹೇಳಿ ಮುಗಿಸುವುದರಿಂದ, ಯಾರಿಗೂ ಅದರ ಮಹತ್ವ ಗೊತ್ತಾಗುವುದಿಲ್ಲ. ಇನ್ನೂ ಹಲವಾರು ಕಾರಣಗಳು ವಿಚ್ಛೇದನಕ್ಕೆ ಕಾರಣವಾಗುತ್ತಿವೆ. 
  ಬಾಳಿಗೆ ಅತ್ಯಮೂಲ್ಯ ಪಾಠ ತಿಳಿಸಿಕೊಟ್ಟ ತಮಗೆ ಅನಂತಾನಂತ ನಮಸ್ಕಾರಗಳು

  Vishnudasa Nagendracharya

  ಗೌತಮರು ಇಂತಹುದೇ ಪದವಿಗಾಗಿ ಅಥವಾ ಫಲಕ್ಕಾಗಿ ಪ್ರಯತ್ನಪಟ್ಟರು ಎಂದು ಉಲ್ಲೇಖ ನಮಗೆ ದೊರಕಿಲ್ಲ. ಅತಿರಿಕ್ತ ತಪಸ್ಸು ಮಾಡಿದ್ದರು ಎಂದಷ್ಟೇ ಶ್ರೀನಾರಾಯಣಪಂಡಿತಾಚಾರ್ಯರು ತಿಳಿಸಿರುವದು. 
 • Jayashree Karunakar,Bangalore

  3:22 PM , 17/04/2020

  ಗುರುಗಳೆ 
  ಒಂದು ಉಪನ್ಯಾಸವನ್ನು ತಯಾರು ಮಾಡಲು ಎಷ್ಟು ಕಷ್ಟವಿದೆ ಎಷ್ಟು ಪರಿಶ್ರಮವಿದೆ ಅಂತ ( ಇವತ್ತಿನ ಉಪನ್ಯಾಸದಿಂದ ಪೂಣ೯ವಾಗಿ ಅಥ೯ವಾಯಿತು) ಅಥ೯ವಾಗುತ್ತದೆ....
  
  ಇಂದಿನ ಉಪನ್ಯಾಸದಲ್ಲಿ ಎಷ್ಟು ಸೂಕ್ಷ್ಮವಾದ ವಿಷಯಗಳನ್ನು ತಿಳಿಸಿದ್ದೀರಿ, ದೇವತೆಗಳು ತಪ್ಪು ಮಾಡಿದರೂ  ಅಲ್ಲಿರುವ ತತ್ವಗಳನ್ನು ಹೇಗೆ ಅಥ೯ ಮಾಡಿಕೊಳ್ಳಬೇಕೆಂಬುದನ್ನು ತುಂಬಾ ಚೆನ್ನಾಗಿ ತಿಳಿಸಿ, ಬಹುದಾದಂತಹ ಪ್ರಶ್ನೆಗಳನ್ನು ಹಾಕಿಕೊಂಡು , ಅದನ್ನು ಪರಿಹರಿಸಿ....ಅಲ್ಲಿರುವ ತತ್ವಗಳನ್ನು ದೃಷ್ಟಾಂತಗಳ ಮೂಲಕ ಅಥ೯ಮಾಡಿಸಿ.....ನಾವು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಸಿದ್ಧಪಡಿಸುತ್ತಾ....
  ನೀವು ನೀಡಬೇಕಾಗಿರುವ ಮುಂದಿನ ಉಪನ್ಯಾಸಗಳಿಗಾಗಿ ಸಮಯ ನೀಡುತ್ತಾ....ಅಬ್ಬಾ ಯೋಚನೆ ಮಾಡಿದರೆ....ನಿಮ್ಮ ವೈಯುಕ್ತಿಕ ಕೆಲಸಗಳಿಗೆ ಅತ್ಯಂತ ಅತ್ಯಂತ ಕನಿಷ್ಟ ಸಮಯವೇ ಉಳಿಯುವದು ಅಂತ ಕಾಣುತ್ತದೆ....
  ಈ ಕಲಿಯುಗದಲ್ಲಿಯೂ ಸಹ ಮೋಕ್ಷೋಪಯೋಗಿಯಾದ ಅಧ್ಯಾತ್ಮವಿದ್ಯೆಯನ್ನು ಬಹಳ ಭಾವಪೂಣ೯ವಾಗಿ, ಭಕ್ತಿಯನ್ನು ಅನುಭವಿಸುತ್ತಾ...ಕೇಳುಗರಿಗೆ ಭಕ್ತಿಯನ್ನು ನೀಡುತ್ತಾ ಪಾಠಮಾಡುವ ಗುರುಗಳಿಗೆ ವಿನಯಪೂವ೯ಕವಾದ ನಮಸ್ಕಾರಗಳು....
  
  ಇಂತಹ ಅವಕಾಶ ನಮಗೆ ಬೇರಾರಿಂದಲೂ ದೊರಕದು 
  ನಮ್ಮನ್ನು ಹೀಗೆಯೇ ಸಾಧನೆಯ ಮಾಗ೯ದಲ್ಲಿರಿಸಿ ಗುರುಗಳೆ...
  
  ತಪ್ಪು ಹೇಳಿದ್ದರೆ ಕ್ಷಮಿಸಿ🙏🙏
 • Niranjan Kamath,Koteshwar

  10:38 AM, 17/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. ಗುರುಗಳ ಚರಣಗಳಿಗೆ ನಮೋ ನಮಃ. ಶಾಪ ಕೊಡುವದು ಮತ್ತು ಸ್ವೀಕರಿಸುವ ವಿಷಯ ಕೇಳಿದೆವು. ಎಲ್ಲವೂ ತುಂಬಾ ಜ್ಞಾನ ಪ್ರದವಾಗಿದೆ. ಹೊಸ ಹೊಸ ವಿಷಗಳನ್ನು ನಮ್ಮ ಮನಸ್ಸಿಗೆ ತಲುಪುವಂತೆ ನಿರ್ಣಯಿಸಿ ತಿಳಿಸಿ ಹೇಳುತ್ತಿದ್ದೀರಿ. ಮಹಾ ಯೋಗವೇ ಸರಿ. ಈ ಜ್ಞಾನಾಮೃತದ ಯಜ್ಞ ದಲ್ಲಿ ನಮ್ಮನ್ನು ಸೇರಿಸಿಕೊಂಡ ಆ ಭಗವಂತನಿಗೂ ನಿಮಗೂ ಸಾಷ್ಟಾಂಗ ನಮನಗಳು. ಧಂಯೋಸ್ಮಿ