Upanyasa - VNU910

ಇಂದ್ರದೇವರ ದೃಷ್ಟಿಯಿಂದ

ಶ್ರೀಮದ್ ರಾಮಾಯಣಮ್ — 28

ಇಂದ್ರದೇವರು ತಾವಾಗಿ ಅಪೇಕ್ಷೆ ಪಟ್ಟು, ಗೌತಮರ ಅಧಿಕ ಪುಣ್ಯವನ್ನು ಪಡೆಯಲು, ಶಾಪವನ್ನು ಸ್ವೀಕರಿಸಿದ್ದೇ ಹೊರತು, ಅವರನ್ನು ಶಾಸಿಸುವ ಅಧಿಕಾರ ಗೌತಮರಿಗಿಲ್ಲ ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. 

ಶಾಪದಿಂದ ವೃಷಣಗಳನ್ನು ಕಳೆದುಕೊಂಡ ಇಂದ್ರದೇವರಿಗೆ ಮೇಕೆಯ ವೃಷಣಗಳನ್ನು ಪಿತೃಗಳು ಜೋಡಿಸುತ್ತಾರೆ. ಮೇಕೆಯನ್ನೇ ಏಕೆ ಆರಿಸಿಕೊಂಡರು, ಅಶ್ವಿನೀ, ವರುಣ, ಧನ್ವಂತರಿಗಳು ಈ ಕಾರ್ಯವನ್ನು ಮಾಡದೇ, ಪಿತೃದೇವತೆಗಳೇ ಏಕೆ ಮಾಡಿದರು, ಆ ಮೇಕೆಯ ಗತಿಯೇನು ಇತ್ಯಾದಿ ವಿಷಯಗಳ ನಿರೂಪಣೆ ಇಲ್ಲಿದೆ.

ಒಟ್ಟಾರೆ ಅಹಲ್ಯೆಯ ಪ್ರಸಂಗದಿಂದ ಇಂದ್ರದೇವರಿಗೆ ಕಿಂಚಿತ್ತೂ ಕುಂದುಂಟಾಗಲಿಲ್ಲ, “ತಸ್ಯ ಲೋಮಾಪಿ ನ ಕ್ಷೀಯತೇ” ಎಂಬ ತತ್ವದ ಪ್ರತಿಪಾದನೆ ಈ ಭಾಗದಲ್ಲಿದೆ. 

Play Time: 39:56

Size: 1.37 MB


Download Upanyasa Share to facebook View Comments
2902 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  8:32 PM , 20/07/2020

  🙏🙏🙏
 • prema raghavendra,coimbatore

  2:15 PM , 27/06/2020

  Anantha namaskara! Danyavada!
 • Santosh Patil,Gulbarga

  10:38 PM, 25/04/2020

  Thanks Gurugale 💐🙏💐
 • Jayashree Karunakar,Bangalore

  9:38 PM , 21/04/2020

  ಈ ಕಲಿಯುಗದಲ್ಲಿ ಮನಸ್ಸಿಗೆ ಆನಂದವನ್ನು ಪಡೆಯುವದು ತುಂಬಾ ಕಷ್ಟ...ಅಲೌಕಿಕ ಆನಂದ ಪಡೆದುಕೊಳ್ಳಲು ತುಂಬಾನೇ ಪುಣ್ಯವಂತರಾಗಿರಬೇಕು....ಅದನ್ನು 
   ನಿರಂತರವಾಗಿ ನೀಡುವವರು ಒಬ್ಬರು ಬೇಕು....
  
  ನೀವು ಅಲ್ಲಿ ನಿಂತು ಇಂತಹ ಪರಮಾದ್ಭುತವಾದ ಉಪನ್ಯಾಸಗಳನ್ನು ಹೃದಯಕ್ಕೆ ಮನಸ್ಸಿಗೆ ಹಿತವಾಗವಂತೆ ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೇ, ನಿರಂತರವಾಗಿ ನೀಡುತ್ತಿರುವದು, ನಿಜವಾಗಿಯೂ ನಮ್ಮ ಸೌಭಾಗ್ಯ ಗುರುಗಳೆ🙏
 • Vidhya,Gobichettipalayam

  8:37 AM , 21/04/2020

  ಪರಮ ಸುಂದರವಾದ ನಿರ್ಣಯ. ದೇವತೆಗಳ ಬಗ್ಗೆ ತಪ್ಪು ಕಲ್ಪನೆ ನಮ್ಮಗೆ ಒಳಿತಲ್ಲ ಎಂಬುದನ್ನು ಮನಸಿಗೆ ನಾಟುವಂತೆ ಹೇಳಿದಿರಿ. ಗೌತಮರ ಪುಣ್ಯವನ್ನು ತೆಗೆಯಲು ಬಂದರು ಇಂದ್ರನಿಗೆ ಮೋಕ್ಷದಲ್ಲಿ ಅನಂದ ಕಡಿಮೆ ಆಗುವುದು ಎಂದು ಕೇಳಿದ್ದೇನೆ. ಹಾಗಾದರೆ ಈ ಪರ ಸ್ತ್ರಿ ಸಂಪರ್ಕ ತಪ್ಪು ಅಂತ ಆಗುವುದಲ್ಲ. ಇದನ್ನು ಹೇಗೆ ಅರ್ಥ ಮಾಡೋದು ಅಂತ ದಯವಿಟ್ಟು ತಿಳಿಸಿ.

  Vishnudasa Nagendracharya

  ಗೌತಮರ ಪುಣ್ಯವನ್ನು ತೆಗೆದುಕೊಳ್ಳುವದ ಕ್ರಿಯೆ ಸರ್ವಥಾ ಪಾಪವಲ್ಲ, ಅಪರಾಧವಲ್ಲ. ಅದರಿಂದ ಇಂದ್ರದೇವರಿಗೆ ಆನಂದ ಕಡಿಮೆ ಆಗುವದೇ ಇಲ್ಲ. 
  
  ಪರಸ್ತ್ರೀಸಂಪರ್ಕದ ಕುರಿತು ಹಿಂದಿನ ಉಪನ್ಯಾಸದಲ್ಲಿಯೇ (ಇಂದ್ರದೇವರ ದೃಷ್ಟಿಯಿಂದ ಕುರಿತು) ಉತ್ತರ ನೀಡಿಯಾಗಿದೆ. 
 • Vishwnath MJoshi,Bengaluru

  7:28 PM , 20/04/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ 
  ಗೌತಮ್ ಋಷೀಗಳು ಯಷ್ಟು ವರ್ಷ ತಪಸ್ಸು ಮಾಡಿದ್ದರು
  ಮತ್ತು ಅಹಲ್ಯಾದೇವಿಯರು ಯಷ್ಟು ವರ್ಷ ಕಲ್ಲಿನಂತೆ ಇದ್ದರು
  ದಯವಿಟ್ಟು ತಿಳಿಸಿಕೊಡಿ ಗುರುಗಳೆ
  ಧನ್ಯವಾದಗಳು

  Vishnudasa Nagendracharya

  ಇಬ್ಬರ ತಪಸ್ಸೂ ಹತ್ತಾರು ಸಾವಿರ ವರ್ಷಗಳನ್ನು ಮೀರುತ್ತದೆ ಎಂದಷ್ಟೇ ಈಗ ತಿಳಿದಿರುವದು. ಪುರಾಣಾಂತರಗಳನ್ನು ಅಧ್ಯಯನ ಮಾಡುವಾಗ ವಿಶೇಷ ತಿಳಿದರೆ ತಿಳಿಸುತ್ತೇನೆ. 
 • Poornima Sowda,Bangalore

  1:18 PM , 20/04/2020

  ಗುರುಗಳಿಗೆ ಭಕ್ತಿಪೂರ್ವಕವಾದ ನಮಸ್ಕಾರಗಳು. 
  
  ಮೇಕೆಯ ಕಥೆಯನ್ನು ಕೇಳಿದ ಮೇಲೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಅಹಲ್ಯೆಯ ಪ್ರಸಂಗ ಪೂರ್ವ ನಿರ್ಧಾರಿತ, ಯಾಕೆಂದರೆ ಎಷ್ಟೋ ವರ್ಷಗಳ ನಂತರ ರಾಮಚಂದ್ರನ ಆಗಮನ ಗೌತಮ ಋಷಿಗಳಿಗೆ ಗೊತ್ತಿತ್ತು. ಆದರೆ ಇಂದ್ರದೇವರ ಪ್ರವೇಶ ಮಾತ್ರ ಅದು ಹೇಗೆ ಗೊತ್ತಾಗಲಿಲ್ಲ?
  
  ತನ್ನಿಂದ ಅಹಲ್ಯೆಗೆ ಶಾಪಕ್ಕೀಡಾದಳು ಎಂದು ಇಂದ್ರದೇವರಿಗೆ ದುಃಖವಾಯಿತೆ?
  
  ಹಾಗೂ ಕಲ್ಲಾಗಿದ್ದಾಗ ಅಹಲ್ಯೆ ದುಃಖ ಅನುಭವಿಸಿದಳೇ? 
  
  ನಿಮ್ಮ ಪ್ರವಚನ ಪರಮಾದ್ಭುತ, ಕೇಳಿದ ಪ್ರತಿಯೊಬ್ಬರೂ ಧನ್ಯರು🙏

  Vishnudasa Nagendracharya

  ಪೂರ್ವನಿರ್ಧಾರಿತ ಎಂದ ಮಾತ್ರಕ್ಕೆ, ಅದು ಹಲವರಿಗೆ ತಿಳಿದ ಮಾತ್ರಕ್ಕೆ ಎಲ್ಲರಿಗೂ ತಿಳಿಯಬೇಕು ಎಂಬ ನಿಯಮವಿಲ್ಲ. ಮತ್ತು ಗೌತಮರಿಗೂ ಸಹ ಎಲ್ಲವೂ ತಿಳಿದಿರಲೇ ಬೇಕು ಎಂಬ ನಿಯಮವಿಲ್ಲ. 
  
  ಅಹಲ್ಯೆಗೆ ಶಾಪ ಬಂದದ್ದು ಇಂದ್ರದೇವರಿಗೆ ದುಃಖವಾಯಿತು. ಅವರೂ ಸಹ ದೇವರನ್ನು ಪ್ರಾರ್ಥಿಸಿ ಶಾಪವಿಮೋಚನೆಗೆ ಕಾರಣರಾದರು. ಮುಂದಿನ ಉಪನ್ಯಾಸದಲ್ಲಿ ಇದು ಸ್ಪಷ್ಟವಾಗುತ್ತದೆ. 
  
  ಕಲ್ಲಾಗುವದರ ಕುರಿತ ಸ್ಪಷ್ಟ ನಿರ್ಣಯ ಮುಂದೆ ಬರುತ್ತದೆ. ಹೌದು ಅಹಲ್ಯೆ ದುಃಖದಲ್ಲಿದ್ದರು. 
 • DESHPANDE P N,BANGALORE

  2:14 PM , 20/04/2020

  S.Namaskargalu. Anugrahvirali
 • Niranjan Kamath,Koteshwar

  8:52 AM , 20/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. ಗುರುಗಳ ಚರಣಗಳಿಗೆ ನಮೋ ನಮಃ. ಮನಸ್ಸಿಗೆ ಧೃಢವಾಗಿ ಮುಟ್ಟುವಂತೆ ದೇವತೆಗಳ , ಹಾಗೂ ಗೌತಮ ಮಹರ್ಷಿ- ಅಹಲ್ಯಾ ದೇವಿಯರ ಬಗ್ಗೆ ಅವರ ಪಾವಿತ್ರ್ಯತೆಯ ಬಗ್ಗೆ ಅತ್ಯಂತ ಗೌರವಪೂರ್ವಕ ವಿಚಾರ ತಿಳಿ ಹೇಳಿದ್ದೀರಿ.
 • Madhusudhan Kandukur,Bebgaluru

  8:29 AM , 17/04/2020

  Acharyare! Namaskaragalu!🙏 Tumba adhbutavaagi nimma upanyasa Moodi bandide. Ee nimma upanyasa dinda devathe gala bagge,rushigala bagge kevalavaagi maathanaaduvavara,manassinalli sariyada Jnaana village Martha chintane maaduvavarige ,kattalinalliddavanige Swachha Spatika Prakashadanthe ee nimma upanyasa moodi bandide. Now because of YOU we are here to understand somewhat Jnana. Nimminda gondalamayavaada tarkabaddavada vishayagalu arthapoornavaagi belakige barali yendu Aa Hari Vayu Gurugalanu bhakti yinda Prarthisive..🙏🙏🙏
 • Vishwnath MJoshi,Bengaluru

  5:03 AM , 17/04/2020

  श्रीगुरुभ्यो नमः। अथ गुरुपादौ नमस्करोमि
  ತುಂಬಾ ಚೆನ್ನಾಗಿ ವಿಶಯಗಳಬಗ್ಗೆ ತಿಳಿಸಿದ್ದಿರಿ.ಅನೇಕ ತತ್ವಗಳನ್ನು ನಾವು ತಿಳಿದೆವು. ನಾವು ಕೇಳಿದ ಕಥೆಗಳಿಗು ಪುರಾಣಗಳ ನೈಜತೆಗು ಭಿನ್ನವಾಗಿದೆ.
  ಸುಪ್ರಭಾತ ಗುರುಗಳೆ