Upanyasa - VNU911

ಅಹಲ್ಯಾದೇವಿಯರ ಉದ್ಧಾರ

ಶ್ರೀಮದ್ ರಾಮಾಯಣಮ್ — 29 — ಅಹಲ್ಯಾದೇವಿಯರ ಉದ್ಧಾರ

ಅಹಲ್ಯಾದೇವಿಯರು ಮಾಡಿದ ಅತ್ಯಂತ ಕಠಿಣವಾದ ತಪಸ್ಸು, ಅವರ ಮೇಲೆ ಶ್ರೀರಾಮಚಂದ್ರದೇವರು ಮಾಡಿದ ಪರಮಾನುಗ್ರಹದ ನಿರೂಪಣೆ ಇಲ್ಲಿದೆ. 

Play Time: 37:28

Size: 1.37 MB


Download Upanyasa Share to facebook View Comments
2619 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  9:07 PM , 26/07/2020

  🙏🙏🙏
 • Shilpa,London

  1:30 PM , 26/04/2020

  ಆಚಾರ್ಯರಿಗೆ ಆದರ ಪೂರ್ವಕ ನಮಸ್ಕಾರಗಳು🙏🙏
  
  ಅಹಲ್ಯಾ ದೇವಿಯರಿಗೆ ಕಲ್ಲಿನ ಹಾಗೆ ಇರುವ ಶಾಪ ಕೊಟ್ಟರು. ಕಲ್ಲಿನ ಹಾಗೆ ಇದ್ದರೆ ಅವರು ಎಲ್ಲೂ ಓಡಾಡುವ ಹಾಗೆ ಇಲ್ಲ. ಮತ್ತೆ ಅವರು ಹೇಗೆ ಆಶ್ರಮ ಸ್ವಚ್ಛವಾಗಿ ಇಟ್ಟು ಹಣ್ಣು ಹಂಪಲಗಳನ್ನು ನಿತ್ಯ ತಂದರು? ದಯವಿಟ್ಟು ತಿಳಿಸಿ 🙏🙏
  ನಿಮ್ಮ ಪ್ರವಚನ ದಿನ ನಿತ್ಯ ಕೇಳಿದ ನಾವು ಧನ್ಯರು

  Vishnudasa Nagendracharya

  ಅಹಲ್ಯಾದೇವಿಯರು ಕಲ್ಲಾಗಿರಲಿಲ್ಲ. 
  
  ಗೌತಮರ ಶಾಪದಂತೆ ಯಾರ ಕಣ್ಣಿಗೂ ಕಾಣದೆ ಆಶ್ರಮವನ್ನು ಪ್ರತಿನಿತ್ಯವೂ ಸ್ವಚ್ಛ ಮಾಡುತ್ತ, ಶ್ರೀರಾಮನ ಪ್ರತೀಕ್ಷೆ ಮಾಡುತ್ತಿದ್ದರು. 
  
  ಅದೃಶ್ಯರಾಗಿದ್ದರೂ ಆಶ್ರಮದಲ್ಲಿದ್ದ ಅವರ ಕುಟೀರದಲ್ಲಿ ಅವರು ವಾಸವಿರಲಿಲ್ಲ. 
  
  ಒಂದು ಪ್ರತಿಮೆಯಲ್ಲಿ ದೇವರ ಸನ್ನಿಧಾನವಿರುವಂತೆ, ಒಂದು ಕಲ್ಲಿನಲ್ಲಿ ಅವರಿದ್ದರು. ಅವರು ಕಲ್ಲಾಗಿರಲಿಲ್ಲ. 
 • Santosh Patil,Gulbarga

  10:39 PM, 25/04/2020

  Thanks Gurugale 💐🙏💐
 • Vijay Kulkarni,Bengaluru

  3:15 PM , 24/04/2020

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು.
  ತಮ್ಮ ಶಾಸ್ತ್ರಾಧ್ಯಯನದ ಕ್ರಮ ಮತ್ತು ಶಾಸ್ತ್ರಗಳನ್ನು ಅರ್ಥಮಾಡಿಕೊಂಡು ನಮಗೆ ಹೇಳುವ ರೀತಿ ಅನನ್ಯ. ನಮ್ಮ ಪುಣ್ಯ ಇಂತಹ ಭಾಗ್ಯ ದೊರಕಿರುವುದು.
  ತಮ್ಮ ಧ್ವನಿ ಕೇಳುತಿದ್ದರೆ ಕಳೆದು ಹೋಗುವ ಅನುಭವ ಆಗುತ್ತದೆ.
  ನಮ್ಮ ಋಷಿ ಮುನಿಗಳು,ಗುರುಹಿರಿಯರು ಬರೆದಿಟ್ಟಂತಹ ಗ್ರಂಥಗಳು , ತಾವು ಅದನ್ನು ಓದಿ ನಮಗೂ ಅರ್ಥವಾಗುವಂತೆ ಅದರ ಸರಿಯಾದ ಕ್ರಮದಲ್ಲಿ ತಿಳಿಯುವ ಸೌಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ.
  ಅಹಲ್ಯಾ ದೇವಿಯರು ಶಾಪದಿಂದ ಕಲ್ಲಾಗಿದ್ದರು. ಶ್ರೀ ರಾಮ ದೇವರಿಂದ ಮತ್ತೆ ಶಾಪವಿಮೋಚನೆ ಆಯಿತ. ನನಗೆ ತಿಳಿದಿದ್ದು ಇಷ್ಟೇ .. ತಮ್ಮ ಪ್ರವಚನ ಕೇಳಿ ಅದರ ಆಳ , ವ್ಯಾಪ್ತಿ ಮತ್ತು ನಾವು ಕಲಿಯ ಬೇಕಾದ ಪಾಠ ಇವೆಲ್ಲ ತಿಳಿದು ಒಂದು ರೀತಿಯ ಆದ ಅನುಭವ ಹೇಳಲು ಅಸಾಧ್ಯ.
 • Vijay Kulkarni,Bengaluru

  10:00 AM, 24/04/2020

  ಆಚಾರ್ಯರಿಗೆ ಸಾಷ್ಟಾಂಗ  ನಮಸ್ಕಾರಗಳು. 
  
  ಈ ಪ್ರಶ್ನೆ ಕೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಅಹಲ್ಯಾ ಪ್ರವಚನ ಕೇಳುವಾಗ ಮನಸ್ಸಿಗೆ ಬಂತು. 
  
  ವಿಶ್ವಾಮಿತ್ರರಿಗೆ ಅಹಲ್ಯಾ ದೇವಿಯರ ಶಾಪ ಮತ್ತು ಅದರ ವಿಮೋಚನೆ ಮೊದಲೇ ತಿಳಿದಿತ್ತು. ವಿಶ್ವಾಮಿತ್ರರು ಶ್ರೀ ರಾಮ ಲಕ್ಷ್ಮಣರನ್ನು ಮೊದಲು ತಮ್ಮ ಯಜ್ಞ ರಕ್ಷಣೆಗಾಗಿ ಕರೆತಂದರು , ಅದಾದ ಬಳಿಕ ಅಹಲ್ಯಾ ದೇವಿಯರ ಶಾಪ ವಿಮೋಚನೆ ಆಯಿತು. ಅದೂ ಮಿಥಿಲೆಗೆ ಬರುವಾಗ. 
  
  ನನ್ನ ಪ್ರಶ್ನೆ ವಿಶ್ವಾಮಿತ್ರರು ಮೊದಲು ಅಹಲ್ಯಾ ದೇವಿಯರ ಶಾಪ ವಿಮೋಚನೆ ಗೊಳಿಸಿ ನಂತರ ತಮ್ಮ ಯಜ್ಞ ರಕ್ಷಣೆ ಮಾಡಬಹುದಾಗಿತ್ತು. ವಿಶ್ವಾಮಿತ್ರರು ಯಾಕೆ ಹೀಗೆ ಮಾಡಲಿಲ್ಲ ಎಂಬುದು ನನ್ನ ಪ್ರಶ್ನೆ.

  Vishnudasa Nagendracharya

  ಮೂರು ಉತ್ತರಗಳಿವೆ. 
  
  
  ಮೊದಲನೆಯದು — ಸಿದ್ಧಾಶ್ರಮವಿರುವದು ಅಯೋಧ್ಯೆಯ ಪೂರ್ವಾಗ್ನೇಯಕ್ಕೆ. (ಇವತ್ತಿನ ಬಿಹಾರದ ಪಾಟ್ನಾದ ಬಳಿಯಲ್ಲಿ) ಅಯೋಧ್ಯೆಯಿಂದ ಕೆಳಗೆ ಬರಬೇಕು. ಗೌತಮ ಅಹಲ್ಯೆಯರ ಆಶ್ರಮವಿರುವದು ಮಿಥಿಲಾನಗರದಲ್ಲಿ. ಅಯೋಧ್ಯೆಯ ಉತ್ತರಕ್ಕೆ ಹಿಮಾಲಯದ ತಪ್ಪಲಿನಲ್ಲಿ. (ಇವತ್ತಿನ ನೇಪಾಳ) ಹೀಗಾಗಿ ಮೊದಲು ಸಿದ್ಧಾಶ್ರಮದಲ್ಲಿ ಯಜ್ಞವನ್ನು ಮುಗಿಸಿ ಆ ನಂತರ ಮಿಥಿಲೆಗೆ ಹೋಗುವ ಮಾರ್ಗದಲ್ಲಿ ಅಹಲ್ಯೆಯ ಉದ್ಧಾರವನ್ನು ವಿಶ್ವಾಮಿತ್ರರು ಮಾಡಿಸಿದರು. 
  
  ಎರಡನೆಯ ಉತ್ತರ — ರಾಮನನ್ನು ಕರೆದುಕೊಂಡು ಹೋದದ್ದೇ ಯಜ್ಞರಕ್ಷಣೆಗಾಗಿ. ಯಜ್ಞ ನಿರ್ವಿಘ್ನವಾಗಿ ಮುಗಿಯಬೇಕು ಎನ್ನುವದು ವಿಶ್ವಾಮಿತ್ರರ ಬಯಕೆ. ಆ ಯಜ್ಞ ಮುಗಿಸಿದ ನಂತರವೇ, ಋಷಿಗಳೆಲ್ಲರೂ ಹೇಳುತ್ತಾರೆ, ಯಜ್ಞ ರಕ್ಷಿಸಿದ ರಾಮನಿಗೆ ಸೀತೆಯೊಂದಿಗೆ ಮದುವೆ ಮಾಡಿಸಿ ಕೃತಾರ್ಥರಾಗೋಣ ಎಂದು. ಸೀತೆಯ ಊರನ್ನು ಸೇರುವ ಮುನ್ನ ಅಹಲ್ಯಾದೇವಿಯರ ಉದ್ಧಾರ ನಡೆಯುತ್ತದೆ. 
  
  ಮೂರನೆಯ ಉತ್ತರ — ದೇವತೆಗಳಿಗೆ ಋಷಿಗಳಿಗೆ ಮುಂದಾಗುವದು ತಿಳಿದಿದ್ದರೂ ಭಗವಂತನ ಸಂಕಲ್ಪದ ಅನುಸಾರವಾಗಿಯೇ ನಡೆಯುತ್ತಾರೆ. ತಮ್ಮ ಇಚ್ಛೆಯಂತೆ ಘಟನೆಯನ್ನು ಹಿಂದು ಮುಂದು ಮಾಡುವದಿಲ್ಲ. ಮಾಡಲೂ ಸಾಧ್ಯವಿಲ್ಲ. ಯಾವ ಕ್ರಮದಲ್ಲಿ ಘಟನೆಗಳು ನಡೆಯಬೇಕು ಎಂದು ಭಗವಂತನ ಸಂಕಲ್ಪವಿದೆಯೋ ಅದೇ ಕ್ರಮದಲ್ಲಿ ನಡೆಯುತ್ತದೆ. 
  
  ಹಿಂದುಮುಂದಾಗಿದ್ದರೆ ಯಾವ ರೀತಿ ಘಟನೆ ನಡೆಯುತ್ತಿತ್ತು ಒಮ್ಮೆ ಆಲೋಚಿಸಿ. ಮೊದಲಿಗೆ ಅಯೋಧ್ಯೆಯಿಂದ ಉತ್ತರಕ್ಕೆ ಮಿಥಿಲಾನಗರದ ಕಡೆಗೆ ಹೊರಡಬೇಕಾಗಿತ್ತು. ಅಲ್ಲಿ ಅಹಲ್ಯೆಯ ಉದ್ದಾರ ಮಾಡಿಸಿ ಮತ್ತೆ ಗಂಗಾಸರಯೂ ಸಂಗಮ ದಾಟಿ ಸಿದ್ಧಾಶ್ರಮಕ್ಕೆ ಬರಬೇಕಿತ್ತು. ಮತ್ತೆ ಮಿಥಿಲೆಗೆ ಸೀತಾಸ್ವಯಂವರಕ್ಕಾಗಿ ಹೋಗಬೇಕಾಗಿತ್ತು. 
  
  ಅಥವಾ ಅಹಲ್ಯಾದೇವಿಯರ ಉದ್ಧಾರ, ಸೀತಾಪರಿಣಯವಾದ ನಂತರ ಯಜ್ಞರಕ್ಷಣೆ ಎಂದಿದ್ದರೆ ಇನ್ನೂ ವಿಚಿತ್ರವಾಗಿರುತ್ತಿತ್ತು. ದಶರಥರು ಮೊದಲೇ ರಾಮನನ್ನು ಕಳುಹಿಸಲು ಕಷ್ಟಪಟ್ಟಿದ್ದರು. “ಕೃಚ್ಛ್ರಾದ್ ವಿಸೃಷ್ಟಃ”. ಇನ್ನು ಆಗತಾನೇ ಮದುವೆಯಾದ ಮಗನನ್ನು ಕಳುಹಿಸಲು ಮತ್ತಷ್ಟು ಕಷ್ಟ ಪಡುತ್ತಿದ್ದರು. 
  
  ಈಗ ಹಾಗಲ್ಲ. ಮೊದಲಿಗೆ ಮಂತ್ರಪ್ರಾಪ್ತಿ, ದಾರಿಯಲ್ಲಿ ಅನಂಗಾಶ್ರಮದ ಮುನಿಗಳಿಗೆ ಅನುಗ್ರಹ, ಆ ನಂತರ ತಾಟಕಾಸಂಹಾರ, ಅಸ್ತ್ರಪ್ರಾಪ್ತಿ. ಯಜ್ಞರಕ್ಷಣೆ. ಯಜ್ಞರಕ್ಷಣೆಯಿಂದ ಸಂತುಷ್ಟರಾದ ಋಷಿಗಳು ಮದುವೆ ಮಾಡಿಸಿ ಕೃತಜ್ಞತೆ ಸಲ್ಲಿಸಲು ಮುಂದಾದರು. ಆ ಮದುವೆಯ ಕಾರ್ಯಕ್ಕಾಗಿ ಹೊರಟಾಗ ದಾರಿಯಲ್ಲಿ ಅಹಲ್ಯಾದೇವಿಯ ಉದ್ಧಾರ. 
  
  ಶಾಸ್ತ್ರಗಳನ್ನು ಕಲಿತು, ಕಾಮಕ್ರೋಧಾದಿ ರೂಪರಾದ ತಾಟಕಾ ಸುಬಾಹು ಮಾರೀಚರನ್ನು ನಿಗ್ರಹಿಸಿ, ಗೌತಮ ಅಹಲ್ಯೆಯಂತಹ ಮಹಾನುಭಾವರಿಗೆ ಪ್ರಿಯವಾದದ್ದನ್ನು ಮಾಡಿದಾಗ ಮಹಾಲಕ್ಷ್ಮಿಯಿಂದ ನಿಯಮಿತವಾದ ಪರಮಾನಂದದ ಮುಕ್ತಿ ದೊರೆಯುತ್ತದೆ ಎಂದು ಸ್ವಾಮಿ ಈ ಘಟನೆಯ ಮುಖಾಂತರ ಸಾರಿದ. 
  
  
 • Jayashree Karunakar,Bangalore

  2:37 PM , 21/04/2020

  ಎಂತಹ ಪರಮಾದ್ಭುತ ಹೋಲಿಕೆ.....
  ಬೆಳಕನ್ನು ಕಂಡ 
  ಭಾವ ಮನಸ್ಸಿಗೆ....
  
  "ಕವಿದ ಮೋಡಗಳ ಮಧ್ಯದಿಂದ ನಿಧಾನವಾಗಿ ಕಾಣಿಸಲು ಪ್ರಾರಂಭಗೊಳ್ಳುವ ಚಂದ್ರಮನಂತೆ....."!!! ಧೂಮದ ಮಧ್ಯೆ ಕಾಣುವ ಬೆಂಕಿಯಂತೆ...!!!!
  
  ಅಹಲ್ಯಾದೇವಿಯರು ಸಾವಿರ ವರುಷದ ತಪಸ್ಸಿನ ಫಲವಾಗಿ ರಾಮಚಂದ್ರನ ಆಗಮದ ವೇಳೆ ಕಂಡರು.....ಅನ್ನುವ ವಿವರಣೆ ತುಂಬಾ ತುಂಬಾ ಇಷ್ಟವಾಯಿತು....
  
  ಯಾರನ್ನು ದೇವರು ಅಂತ ಪೂಜಿಸುತ್ತಾರೊ ಅಂತಹವನು ಬ್ರಾಹ್ಮಣರನ್ನು ದೇವರು ಅಂತ ಪೂಜಿಸುವ ಪರಿ....ಪರಮಾದ್ಭುತ...
  
  "ಬ್ರಹ್ಮರೂಪಿಣಿ " ಅಂತ ವಿಶ್ವಾಮಿತ್ರರು ಅಹಲ್ಯೆಯನ್ನು ರಾಮಚಂದ್ರನಿಗೆ ಪರಿಚಯಿಸುವ ಭಾಗ ಮನ ಮುಟ್ಟಿತು...ಬ್ರಹ್ಮದೇವರು ಅಹಲ್ಯೆಯನ್ನು ಸೃಷ್ಟಿ ಮಾಡಿದ ಸಂಧಭ೯ ಮತ್ತೊಮ್ಮೆ ಮನದಲ್ಲಿ ಮೂಡಿತು.....
  
  ಅಹಲ್ಯಾದೇವಿಯರನ್ನು ಉದ್ಧಾರ ಮಾಡಲೆಂದೇ ಬಂದ ರಾಮಚಂದ್ರ , ಆ ಋುಷಿ ಪತ್ನಿಗೆ ನಮಸ್ಕಾರ ಮಾಡುವ ಸಂಧಭ೯...!!!
  ಎಲ್ಲ ಘಟನೆಗಳೂ ನಮ್ಮನ್ನು ಆ 
  ಸುಂದರವಾದ ಕಲ್ಪನಾ ಲೋಕದಲ್ಲಿರಿಸುತ್ತಿದೆ....
  ನೀವು ಉಪನ್ಯಾಸದ ಕೊನೆಯಲ್ಲಿ
  "ಅಹಲ್ಯಾ ಗೌತಮರನ್ನು ಒಂದುಗೂಡಿಸಿದಂತೆ...
  ಜೀವ ಸ್ವರೂಪದಲ್ಲಿರುವ ಜ್ಞಾನ ಭಕ್ತಿಯೊಂದಿಗೆ ನಮ್ಮನ್ನು ಒಂದುಗೂಡಿಸು"
  ಅನ್ನುವ ಪ್ರಾಥ೯ನೆ ತುಂಬಾ ಚೆನ್ನಾಗಿತ್ತು...
  ಮತ್ತೆ ಮತ್ತೆ ಕೇಳಿ ಆನಂದಿಸುವಂತಹ ಉಪನ್ಯಾಸ...🙏

  Vishnudasa Nagendracharya

  ಈ ದೃಷ್ಟಾಂತಗಳು, ನಿರೂಪಣೆ ಎಲ್ಲವೂ ಮಹಾಭಾಗವತೋತ್ತಮರಾದ ಶ್ರೀ ವಾಲ್ಮೀಕಿ ಮಹರ್ಷಿಗಳದು. 
  
  ಶ್ರೀಹರಿ ವಾಯು ದೇವತಾ ಗುರುಗಳು ಕಾರುಣ್ಯದಿಂದ ನನ್ನಲ್ಲಿ ನಿಂತು ರಾಮನ ಕಥೆಯ ನುಡಿದು ನುಡಿಸಿ ಉದ್ಧರಿಸುತ್ತಿದ್ದಾರೆ. 
 • Prabhanjan Joshi,Ankola

  9:18 PM , 21/04/2020

  ಗುರುಗಳಿಗೆ ನಮಸ್ಕಾರಗಳು, 
  ಗುರುಗಳೇ ನೀವು ನಮಗೆ ಪ್ರೀತಿಯಿಂದ ಬಡಿಸುತ್ತಿರುವ ರಾಮಾಯಣದ ಉಪನ್ಯಾಸ ಎಂಬ ಪಾಯಸ ನಮ್ಮ ಜೀವನವನ್ನು ಬದಲಿಸುತ್ತದೆ. ರಾಮಾಯಣವನ್ನು ಕೇಳುತ್ತಿದ್ದರೆ ಆ ವಾಲ್ಮೀಕಿ ಮಹರ್ಷಿಗಳ ಋಣ ತೀರಿಸಲಿಕ್ಕೇ ಸಾಧ್ಯವೇ ಇಲ್ಲ..... ಆ ರಾಮಾಯಣವನ್ನು ನಮ್ಮಂಥ ಅಲ್ಪರಿಗೂ ತಿಳಿಯುವಂತೆ ಹೇಳುತ್ತಿರುವ ನಿಮಗೆ ನನ್ನ ಕೃತಜ್ಞತೆ ತಿಳಿಸುತ್ತಾ...
  
  ನಿಮ್ಮಲ್ಲಿ ಒಂದು ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ, ಸರಿಯೋ ತಪ್ಪೊ ಗೊತ್ತಿಲ್ಲ, ತಪ್ಪಿದ್ದರೆ ಕ್ಷಮಿಸಿ.🙏🏻
  
  ಗುರುಗಳೇ ನಾನು ರಾಮಾಯಣವನ್ನು ಒಂದು ಪಾಠದಂತೆ ಕೇಳುತ್ತೇನೆ, ನನಗೆ ಈಗಂತೂ ಶಾಸ್ತ್ರಾಧ್ಯಯನ ಮಾಡಲು ತುಂಬಾ ಮನಸ್ಸಿದ್ದರೂ ಸಾಧ್ಯವಿಲ್ಲ ನನಗೆ ನಿಮ್ಮ ಉಪನ್ಯಾಸಗಳೇ ಪಾಠ, ಅಧ್ಯಯನ ತಾವು ಕರುಣೆ ಮಾಡಿ ದಯವಿಟ್ಟು ದಯವಿಟ್ಟು ರಾಮಾಯಣದ ಉಪನ್ಯಾಸದ ಜೊತೆಗೆ ಅವುಗಳ ಲೇಖನವನ್ನು ಪ್ರಕಟ ಮಾಡಿದರೆ ಅತ್ಯಂತ ಅತ್ಯಂತ ಉಪಯೋಗವಾಗುತ್ತದೆ.🙏🏻 ಮತ್ತು ಉಪನ್ಯಾಸದ ಜೊತೆಯೇ ರಾಮಾಯಣದ ಮೂಲ ಶ್ಲೋಕಗಳನ್ನು ಪ್ರಕಟ ಮಾಡಿ.... 
  🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  Vishnudasa Nagendracharya

  ಮೊದಲಿಗೆ ಪ್ರವಚನಗಳನ್ನೆಲ್ಲ ಮುಗಿಸುತ್ತೇನೆ. ಆ ನಂತರ ಮಧ್ವವಿಜಯದಿಂದಾರಂಭಿಸಿ ಎಲ್ಲ ಗ್ರಂಥಗಳನ್ನೂ ಮತ್ತೆ ಲೇಖನದಲ್ಲಿ ನೀಡಲಿಕ್ಕಾರಂಭಿಸುತ್ತೇನೆ. 
 • Manukumara A,Anthanahalli

  7:20 AM , 22/04/2020

  🙏 ಗುರುಗಳಿಗೆ ನಮಸ್ಕಾರಗಳು ಗುರುಗಳೇ ಗೌತಮ ಋಷಿ ಮುನಿಗಳಿಗೆ ತಿಳಿಯಿತೇ ನಾನು ಮಾಡಿದ ಅಧಿಕವಾದ ತಪಸ್ಸಿನಿಂದ ಇಷ್ಟೆಲ್ಲಾ ಘಟನೆ ನಡೆಯಿತು ಮತ್ತು ನನ್ನ ಅಹಲ್ಯಾ ದೇವಿಯರಿಂದ ದೂರವಿರಬೇಕಾಯಿತು ಎಂದು ಅವರಿಗೆ ಅನ್ನಿಸಿತೆ ಗುರುಗಳೇ ದಯವಿಟ್ಟು ತಿಳಿಸಿ ಕೊಡಿ ಗುರುಗಳೇ🙏

  Vishnudasa Nagendracharya

  ತಿಳಿಯಿತು. 
 • Vishwnath MJoshi,Bengaluru

  5:02 PM , 21/04/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ
  ಗೌತಮ್ ಋಷಿಗಳು ಅಹಲ್ಯಾ ದೆವಿಯರಿಗೆ
  ಕಲ್ಲಿನಂತೆ ಆಗು ಎಂದು ಶಾಪ ಕೊಟ್ಟರು.
  ಅಹಲ್ಯಾ ದೆವಿಯರಿಗೆ ತಮ್ಮ ಶಾಪ ವಿಮೋಚನೆ ಆಗುವಾಗ ಬರಿ ಶ್ರೀರಾಮಚಂದ್ರನಿಗೆ ಮಾತ್ರ ಕಾಣುತ್ತಾರೆ, ಲಕ್ಷ್ಮಣ ಮತ್ತು ವಿಶ್ವಾಮಿತ್ರ ಋಷಿಗಳಿಗೆ ಹಾಗು ಅನ್ಯ ದೇವತೆಗಳಿಗೆ ಕಾಣುವುದಿಲ್ಲ ಎಂದು. ತಪೋ ಶಕ್ತಿ ಇರುವ ಲಕ್ಷ್ಮಣ , ವಿಶ್ವಾಮಿತ್ರ ಋಷಿಗಳಿಗೆ ಹಾಗು ಅನ್ಯ ದೇವತೆಗಳಿಗೆ ತಮ್ಮ ತಪೋ ಶಕ್ತಿ ಇದ್ದರು ಅವರಿಗೆ ಅಹಲ್ಯಾ ದೆವಿಯರು ಏಕೆ ಗೋಚರಿಸಲಿಲ್ಲ
  
  2. ಅಹಲ್ಯಾ ದೆವಿಯರನ್ನ ಪಂಚ ಕನ್ಯಾ ಸ್ತೋತ್ರ ದಲ್ಲಿ ಹೇಳುತ್ತೆ ವೆ. ಅವರು ಗೌತಮ್ ಋಷಿಗಳ ಪತ್ನಿ ಹೆಗೆ ಕನ್ಯ ಆಗುತ್ತಾರೆ. ದಯವಿಟ್ಟು ತಿಳಿಸಿ ಕೊಡಿ ಗುರುಗಳೆ
  ಧನ್ಯವಾದಗಳು ಗುರುಗಳ

  Vishnudasa Nagendracharya

  ಗೌತಮರು ಯಾರ ಕಣ್ಣಿಗೂ ಕಾಣಬೇಡ ಎಂದು ಶಾಪ ಕೊಟ್ಟಿದ್ದಾರೆ. 
  
  ಗೌತಮರ ಯೋಗ್ಯತೆಗಿಂತ ಸಣ್ಣವರಾದವರಿಗೆ ಅದನ್ನು ಮೀರುವ ಸಾಮರ್ಥ್ಯವಿಲ್ಲ. ಗೌತಮರ ಯೋಗ್ಯತೆಗಿಂತ ಹಿರಿಯರಾದವರು ಗೌತಮರ ಮಾತನ್ನು ಮನ್ನಿಸಿದರು. ಅದನ್ನು ಮೀರಲು ಪ್ರಯತ್ನ ಪಡಲಿಲ್ಲ. 
  
  ಪಂಚಕನ್ಯಾ ಎನ್ನುವ ಶಬ್ದದ ಅರ್ಥ ತುಂಬ ಹಿರಿದಾದದ್ದು. ಕಾಮೆಂಟುಗಳಲ್ಲಿ ಹೇಳಲು ಸಾಧ್ಯವಿಲ್ಲ. ಸಮಯವಾದಾಗ ಅದರ ಕುರಿತು ಲೇಖನ ಉಪನ್ಯಾಸಗಳನ್ನು ಮಾಡಿ ಪ್ರಕಟಿಸುತ್ತೇನೆ. (ಸದಾಚಾರಸ್ಮೃತಿಯ ಉಪನ್ಯಾಸಗಳ ಸಂದರ್ಭದಲ್ಲಿ ಬರುವ ವಿಷಯವದು)
 • DESHPANDE P N,BANGALORE

  2:10 PM , 21/04/2020

  S.Namaskargalu. Aa saddviya shresthsa tapassu mattu nambida bhakktarigea phalwu sadaa siddha eandu ShreeRamachandra toarisiddanea.JaiShreeRam