Upanyasa - VNU912

ಗೌತಮರ ತಪ್ಪಿಗೆ ಅಹಲ್ಯೆ ಏಕೆ ಬಲಿಪಶು?

ಶ್ರೀಮದ್ ರಾಮಾಯಣಮ್ — 30

ಗೌತಮ ಮಹರ್ಷಿಗಳು ತಮ್ಮ ಯೋಗ್ಯತೆ ಮೀರಿ ತಪಸ್ಸು ಮಾಡಿದ್ದು ಅವರ ತಪ್ಪು. ಅವರು ಮಾಡಿದ್ದಾರೆ. ಆ ಅಧಿಕ ತಪಸ್ಸಿನ ಪುಣ್ಯವನ್ನು ಅವರಿಂದ ಪಡೆಯುವದು ದೇವತೆಗಳ ಕರ್ತವ್ಯ. ಇದರ ಮಧ್ಯದಲ್ಲಿ ಅಹಲ್ಯೆ ಏಕೆ ಬಲಿಪಶು ಆಗಬೇಕು. 

ಅಹಲ್ಯೆಯೊಂದೇ ಅಲ್ಲ, ದ್ರೌಪದಿ, ಸೀತಾ, ತಾರಾ ಮುಂತಾದ ಎಲ್ಲ ಸ್ತ್ರೀಯರ ಪ್ರಸಂಗದಲ್ಲಿಯೂ ಹೀಗೇ ಆಗಿದೆ. ದುರ್ಯೋಧನನಿಗೆ ದ್ವೇಷ ಇದ್ದದ್ದು ಭೀಮನ ಮೇಲೆ, ಮಾತ್ಸರ್ಯ ಇದ್ದದ್ದು ಧರ್ಮರಾಜನ ಸಂಪತ್ತಿನ ಮೇಲೆ. ಆದರೆ ಅದಕ್ಕೆ ಬಲಿಪಶು ಆದದ್ದು ದ್ರೌಪದಿ. 

ರಾವಣನಿಗೆ ದ್ವೇಷ ಇದ್ದದ್ದು ರಾಮನ ಮೇಲೆ. ತಮ್ಮಂದಿರಾದ ಖರ ದೂಷಣರನ್ನು ಹಾಗೂ ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮದೇವರು ಕೊಂದರು ಎನ್ನುವ ಕಾರಣಕ್ಕೆ ಬಲಿಪಶು ಆದದ್ದು ಸೀತೆ. 

ಈ ರೀತಿಯ ಆಧುನಿಕರ ಪ್ರಶ್ನೆಗಳಿಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಸಿದ್ಧಾಂತ ನೀಡಿರುವ ಉತ್ತರಗಳ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ. 

ಇದು ಬಲಾತ್ಕಾರವೋ ವ್ಯಭಿಚಾರವೋ?

ಗಂಡ ಹೆಂಡತಿಯರ ಮಧ್ಯದಲ್ಲಿ ಪರಸ್ಪರ ಸಂತೋಷದಿಂದ ಯೋಗ್ಯವಾದ ಪ್ರದೇಶ, ಯೋಗ್ಯವಾದ ಕಾಲದಲ್ಲಿ ನಡೆಯುವ ಮೈಥುನಕ್ಕೆ ವಾಮದೇವ ಯಜ್ಞ ಎಂದು ಹೆಸರು. ಭಗವಂತನ ಪೂಜಾರೂಪವಾದ ಸತ್ಕರ್ಮ. 

ಹೆಣ್ಣು ತಾನಾಗಿ ಅಪೇಕ್ಷೆಪಟ್ಟು ಪರಪುರುಷನೊಡನೆ ಸಂಭೋಗ ನಡೆಸಿದರೆ ಅದು ವ್ಯಭಿಚಾರ. 

ಹೆಣ್ಣಿಗೆ ಅಪೇಕ್ಷೆ ಇಲ್ಲದೇ ಸಂಭೋಗ ನಡೆದಲ್ಲಿ ಅದು ಬಲಾತ್ಕಾರ ಅಥವಾ ಅತ್ಯಾಚಾರ. 

ಆಹಲ್ಯಾದೇವಿಯರ ಪ್ರಸಂಗದಲ್ಲಿ ನಡೆದದ್ದು ಬಲಾತ್ಕಾರ ಎಂದು ಶ್ರೀಮದಾಚಾರ್ಯರೂ ನಿರ್ಣಯಿಸುತ್ತಾರೆ, ಮತ್ತು ರಾಮಾಯಣದಲ್ಲಿ ಅಹಲ್ಯೆಯ ವಚನವೂ ಇದೆ — ಅಜ್ಞಾನಾದ್ ಧರ್ಷಿತಾ ನಾಥ ತ್ವದ್ರೂಪೇಣ ದಿವೌಕಸಾ ಎಂದು. 

ಆದರೆ ಗೌತಮರ ರೂಪದಲ್ಲಿ ಬಂದಿರುವದು ಇಂದ್ರ ಎಂದು ತಿಳಿದೂ ಅಹಲ್ಯಾದೇವಿಯರು ಸಂಭೋಗಕ್ಕೆ ಒಪ್ಪಿಗೆ ನೀಡಿದ್ದಾರೆ. ಅಹಲ್ಯಾದೇವಿಯರ ಒಪ್ಪಿಗೆಯಿಂದಲೇ ನಡೆದಿರುವ ಮೈಥುನ ಬಲಾತ್ಕಾರ ಹೇಗಾಗಲು ಸಾಧ್ಯ?

ಹಾಗಾದರೆ ಅಹಲ್ಯಾದೇವಿಯರು ಸುಳ್ಳು ಹೇಳುತ್ತಿದ್ದಾರೇನು? ಸರ್ವಥಾ ಇಲ್ಲ. ಸ್ವಯಂ ಆಚಾರ್ಯರೇ ಇದನ್ನು ಬಲಾತ್ಕಾರ ಎಂದು ನಿರ್ಣಯಿಸಿದ್ದಾರೆ. ಪ್ರಧರ್ಷಣಾದಿಂದ್ರಕೃತಾತ್ ಎಂದು. 

ಹಾಗಾದರೆ ಈ ತತ್ವವನ್ನು ಅರ್ಥವನ್ನು ಮಾಡಿಕೊಳ್ಳುವದು ಹೇಗೆ ಎಂಬ ಪ್ರಶ್ನೆಗೆ ಈ ಉಪನ್ಯಾಸದಲ್ಲಿ ಉತ್ತರವಿದೆ. ಭಗವಂತನ ಸಾಮ್ರಾಜ್ಯದಲ್ಲಿ ಯಾರಿಗೂ ಅನ್ಯಾಯ ನಡೆಯುವದಿಲ್ಲ ಎಂದು ಮನವರಿಕೆ ಮಾಡಿಕೊಡುವ ಭಾಗ. ತಪ್ಪದೇ ಕೇಳಿ. 

Play Time: 34:48

Size: 1.37 MB


Download Upanyasa Share to facebook View Comments
2667 Views

Comments

(You can only view comments here. If you want to write a comment please download the app.)
 • Mythreyi Rao,Bengaluru

  9:47 AM , 15/07/2022

  ಗುರುಗಳೇ ಬ್ರಾಹ್ಮಣನಾದವನು ಕ್ಷತ್ರಿಯ, ವೈಷ್ಯ ಇನ್ನಿತರೇ ಬ್ರಾಹ್ಮಣನಲ್ಲದ ಸ್ತ್ರೀ ಸೇರಿದರೆ ಇರುವ ನರಕದ ಬಗ್ಗೆ ನನ್ನ ಪ್ರಶ್ನೆ. (ಆದರೆ ಇದು ಜಾತಿ ಬಗ್ಗೆ, ವರ್ಣದ ಬಗ್ಗೆ ಕೇಳೋದಕ್ಕೆ ತಿಳಿದಿಲ್ಲ) ಈಗೆಲ್ಲ ಹುಡುಗಿ ಸಿಗದೇ ಬೇರೆ ಜಾತಿ ಹೆಣ್ಣು ಮಕ್ಕಳನ್ನ ಮದುವೆಯಾಗುತ್ತಿದ್ದಾರಲ್ಲ ಅವರಿಗೆ ದೋಷವಿದೆಯೆ 🙏

  Vishnudasa Nagendracharya

  ಮೊದಲಿಗೆ ಜಾತಿ ಬೇರೆ, ವರ್ಣ ಬೇರೆ ಎನ್ನುವ ಮಾತೇ ಶಾಸ್ತ್ರವಿರುದ್ಧವಾದದ್ದು. (ಆಧುನಿಕರ ಭ್ರಮೆಯಿದು). ಅವೆರಡೂ ಒಂದೇ. ತಂದೆ ತಾಯಿಗಳಿಂದ ದೊರೆಯುವ ಜಾತಿಯೇ ನಾವು ಪರಿಗಣಿಸಬೇಕಾದ್ದು. ಜೀವಸ್ವರೂಪದ ವರ್ಣ ಮುಕ್ತಿಯಲ್ಲಿ ಮಾತ್ರ ಬಳಕೆಯಾಗುವದು. 
  
  ಕಲಿಯುಗದಲ್ಲಿ ಭಿನ್ನ ವರ್ಣಗಳ ಮದುವೆ ನಿಷಿದ್ಧ. ಸಮಾನವರ್ಣದವರು ಮಾತ್ರ ಮದುವೆಯಾಗಬೇಕು. 
  
  ಇನ್ನು ಉಳಿದ ಮೂರು ಯುಗಗಳಲ್ಲಿ ಭಿನ್ನಜಾತಿಯ ಮದುವೆಗಳನ್ನು ಅನುಲೋಮ ವಿವಾಹ, ಪ್ರತಿಲೋಮ ವಿವಾಹ ಎಂದು ಪರಿಗಣಿಸಿ, ಅವರು ನಾಲ್ಕೂ ವರ್ಣಗಳಿಂದ ಕಡಿಮೆಯವರಾಗುತ್ತಿದ್ದರು. 
  
  ಮದುವೆ ಹೊರತು ಪಡಿಸಿ ಅನೈತಿಕಸಂಬಂಧವಾದರೆ ಅದು ಮಹತ್ತರ ಪಾಪ. 
 • Abburu Rajeeva,Channapattana

  9:47 PM , 26/07/2020

  🙏🙏🙏
 • Santosh Patil,Gulbarga

  8:01 PM , 27/04/2020

  Tnx Gurugale
 • Kamal bharadwaj,Manivala(village)

  9:44 PM , 22/04/2020

  Gurugale, Ahalyadeviyarannu Brahma devaru srustisuttharallave hagadare avarigr hindina janma hegirutthade

  Vishnudasa Nagendracharya

  ಬ್ರಹ್ಮದೇವರಿಂದ ಸೃಷ್ಟಿಯಾಗಿದ್ದಾರೆ ಎಂದ ಮಾತ್ರಕ್ಕೆ ಹಿಂದಿನ ಜನ್ಮ ಏಕೆ ಇರಬಾರದು. 
  
  ನೀವು ಭಾಗವತದ ಪ್ರವಚನಗಳನ್ನು ಕೇಳುತ್ತಿಲ್ಲ ಎನಿಸುತ್ತದೆ. 
  
  ನಾರದರು ಬ್ರಹ್ಮದೇವರ ಮಗನಾಗಿ ಹುಟ್ಟಿ ಬಂದರು. ಹಿಂದಿನ ಜನ್ಮದಲ್ಲಿ ಶೂದ್ರಪುತ್ರರಾಗಿದ್ದ ಕಥೆಯನ್ನು ಕೇಳಿದ್ದೇವಲ್ಲವೇ? 
 • Vidhya,Gobichettipalayam

  8:55 AM , 23/04/2020

  ಮತ್ತೆ ಮತ್ತೆ ಕೇಳ ಬೇಕು ಎನ್ನುವ ಆಸೆಯನ್ನು ಹುಟ್ಟಿಸುವ ಉಪನ್ಯಾಸ. ಅನಂತ ನಮಸ್ಕಾರಗಳು.
 • Sathya,Mysuru

  7:21 PM , 22/04/2020

  ನಡೆಯಬೇಕಾದ್ದು ನಡೆದೇ ತೀರುತ್ತದೆ ಎಂದು ಮೇಲೆ ಒಳ್ಳೆಯವರಿಗೇ ಏಕೆ ಇಷ್ಟೊಂದು ತೊಂದರೆಗಳು, ನಮ್ಮ ರಾಜರುಗಳನ್ನು ಮೋಸದಿಂದ ಕೊಂದರು, ನಿರಪರಾಧಿಗಳಾದ ಸಾಧುಗಳನ್ನು ಧಯೆ ಇಲ್ಲದೆ ಕೊಂದರು ನಾವು ಏನೆಂದು ತಿಳಿಯುವುದು, ನನಗೆ ಎಲ್ಲವೂ ಗೊಂದಲ, ಮೃತ ಪಟ್ಟ ಸಾಧುಗಳು ಒಳ್ಳೆಯ ಭಾಗವತರು ಎಂದು ನೋಡಿದೆ.

  Vishnudasa Nagendracharya

   ರಾಜರುಗಳನ್ನು ಮೋಸಗಳಿಂದ ಕೊಂದರು, ಎಂದರೆ ಮೋಸಕ್ಕೊಳಗಾಗಿದ್ದು ರಾಜರ ತಪ್ಪು. 
  
  ಅತಿಯಾದ ನಂಬಿಕೆ ಎಲ್ಲಿಯೂ ಸಲ್ಲದು. 
  
  ಇನ್ನು ಸಾಧುಗಳ ವಿಷಯ. 
  
  ಸಜ್ಜನರ ಮೇಲೆ ಆಕ್ರಮಣ ಹಿಂದಿನ ಕಾಲದಿಂದ ಇದೆ. 
  
  ಬ್ರಹ್ಮದೇವರ ವೇದಗಳನ್ನು ಕದ್ದರು. ರಾವಣ ಕುಂಭಕರ್ಣರು ತಪಸ್ವಿಗಳನ್ನು ಕೊಂದು ತಿನ್ನುತ್ತಿದ್ದರು. 
  
  ಬ್ರಹ್ಮದೇವರು ದೇವರನ್ನು ಪ್ರಾರ್ಥಿಸಿದರು, ವೇದಗಳು ದೊರೆಯಿತು. 
  
  ತಪಸ್ವಿಗಳನ್ನು ಕೊಲ್ಲುತ್ತಿದ್ದವರನ್ನು ಕೊಲ್ಲು ಎಂದು ದೇವರನ್ನು ಪ್ರಾರ್ಥಿಸಿದರು. ದೇವರು ರಾವಣ ಕುಂಭಕರ್ಣರನ್ನು ಕೊಂದ. 
  
  ಒಳ್ಳೆಯದು ಕೆಟ್ಟದ್ದರ ಮಧ್ಯದಲ್ಲಿನ ಘರ್ಷಣೆಯೇ ಸಂಸಾರ. ಇದು ನಿಲ್ಲುವದಿಲ್ಲ. 
  
  ಸತ್ತ ಸಾಧುಗಳು ಅವರ ಯಾವುದೋ ಜನ್ಮದ ಪಾಪದ ಫಲವನ್ನು ಕೊಲೆಯ ರೂಪದಲ್ಲಿ ಪಡೆದು ಪಾಪನಿರ್ಮುಕ್ತರಾದರು. ಅವರ ಸಾವು, ನಮಗೆ ಎಚ್ಚರಿಕೆಯ ಘಂಟೆಯನ್ನು ಬಾರಿಸಿದೆ. ನಮ್ಮನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನುವದನ್ನು ಮರೆಯಬಾರದು. 
  
  ದೇವರನ್ನು ನಂಬಲೇ ಬೇಕು. ಪ್ರಾರ್ಥಿಸಲೇ ಬೇಕು. ಆದರೆ ಕರ್ತವ್ಯವನ್ನು ಬಿಟ್ಟಲ್ಲ. ಸಾಮಾಜಿಕ, ಕೌಟುಂಬಿಕ, ವೈಯಕ್ತಿಕ ಕರ್ತವ್ಯಗಳನ್ನು ಬಿಟ್ಟಾಗ ದೈವ ನಮಗೆ ಶಿಕ್ಷೆ ನೀಡುತ್ತಲೇ ಇರುತ್ತದೆ. 
  
  
 • Vishwnath MJoshi,Bengaluru

  2:19 PM , 22/04/2020

  श्रीगुरुभ्यो नमः। अथ गुरुपादौ नमस्करोमि
  
  इ प्रसङ्ग अद्भुत वागी मूडीबन्दिदे
  इ आळक्कीळिदु तत्त्व वन्नु ‌‌ अत्यंत सुलभवागि हेळुवदु
  निम्न अद्धबुत कौशल गुरुगले
  धन्यवादः
 • DESHPANDE P N,BANGALORE

  2:05 PM , 22/04/2020

  S.Namaskargalu.Anugrahvirli
 • Poornima Sowda,Bangalore

  1:06 PM , 22/04/2020

  ಅದ್ಭುತವಾದ ಪ್ರವಚನ, ಅತೀ ಸೂಕ್ಷ್ಮ ವಾದ ತತ್ವವನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೀರಿ. ಧನ್ಯವಾದಗಳು ಗುರುಗಳೇ🙏
 • Sampada,Belgavi

  6:22 AM , 22/04/2020

  Gurugalige namaskaragalu 🙏🙏..mokshadalliya sukhada unnaha kaledu kolluva kuritu Indra devarige tilidiralillave . ...

  Vishnudasa Nagendracharya

  ಶಿಕ್ಷೆಯಾಗುತ್ತದೆ ಎಂದು ಗೊತ್ತಿದ್ದರೂ ಮನುಷ್ಯ ತಪ್ಪು ಮಾಡುವದು ಬಿಡುವದಿಲ್ಲ. 
  
  ದೇವತೆಗಳಿಗೂ ಸಹ ಇದು ಅನ್ವಯ. 
  
  ಯಾವ ತಪ್ಪು ನಡೆಯಬೇಕಾಗಿದೆಯೋ ಆ ತಪ್ಪು ನಡೆದೇ ನಡೆಯುತ್ತದೆ. 
 • deashmukhseshagirirao,Banglore

  5:38 AM , 22/04/2020

  🙏🏻🙏🏻🙏🏻🙏🏻🙏🏻