Upanyasa - VNU913

ಅಹಲ್ಯಾದೇವಿಯರು ನಿಜವಾಗಿಯೂ ಶಿಲೆಯಾಗಿದ್ದರೆ?

ಶ್ರೀಮದ್ ರಾಮಾಯಣಮ್ — 31

ಅಹಲ್ಯಾದೇವಿಯರು ಗೌತಮರ ಶಾಪದಿಂದ ಕಲ್ಲಾಗಿದ್ದರು ಎಂಬ ಮಾತನ್ನು ನಾವು ದಾಸಸಾಹಿತ್ಯದಲ್ಲಿ ಮೇಲಿಂದ ಮೇಲೆ ಕೇಳುತ್ತೇವೆ. ಸ್ವಯಂ ಆಚಾರ್ಯರೂ ಸಹ ಶಿಲೀಕೃತಾಮ್ ಎಂದು, ಅಹಲ್ಯೆ ಶಿಲೆಯಾಗಿದ್ದರು ಎಂದು ಹೇಳಿದ್ದಾರೆ. 

ಆದರೆ ಚೇತನ ಜಡವಾಗಲು ಸಾಧ್ಯವಿಲ್ಲ, ಜಡ ಚೇತನವಾಗಲು ಸಾಧ್ಯವಿಲ್ಲ ಎನ್ನುವದನ್ನು ಭಗವತ್ಪಾದರು ನ್ಯಾಯವಿವರಣದಲ್ಲಿ ಪ್ರತಿಪಾದಿಸುತ್ತಾರೆ. 

ಕಲ್ಲಾಗಿದದ್ದರು ಎಂದರೆ ನ್ಯಾಯವಿವರಣದ ವಿರೋಧ, ಕಲ್ಲಾಗಿರಲಿಲ್ಲ ಎಂದರೆ ತಾತ್ಪರ್ಯನಿರ್ಣಯದ ಮತ್ತು ದಾಸಸಾಹಿತ್ಯದ ವಿರೋಧ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರ ಸಿದ್ಧಾಂತ ನೀಡಿದ ಉತ್ತರಗಳ ಸಂಗ್ರಹ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶಾಸ್ತ್ರ ವಚನಗಳು — 

“ನ ಹಿ ಕಶ್ಚಿತ್ ಸುಶಕ್ತೋಪಿ ಚಕಾರಾಚೇತನಂ ಚಿತಿಮ್” ನ್ಯಾಯವಿವರಣದ ವಾಕ್ಯ

ಮಹಾಭಾರತ ತಾತ್ಪರ್ಯನಿರ್ಣಯದ

“ಶಿಲೀಕೃತಾಮ್”

“ಜಡಿಕೃತಸ್ತೇನ ಸ ರಾವಣೋಪಿ”

“ಶಿವೇಂದ್ರಪೂರ್ವಾ ಅಪಿ ಕಾಷ್ಠವತ್ ಕೃತಾಃ”

“ಕಾಷ್ಠಾದಿವತ್ ತ್ವದ್ವಶಗಂ ಸಮಸ್ತಮ್” 

ಎಂಬ ವಾಕ್ಯಗಳು. 

ಸಂಗ್ರಹ ರಾಮಾಯಣದ ವಾಕ್ಯ — 

ಪ್ರೈಕ್ಷತ ಪ್ರೇಕ್ಷಣೀಯೇನ ತಾಮಪಾಂಗೇನ ಶಾರ್ಙ್ಗಭೃತ್ ।
ಸಾ ತದ್ದರ್ಶನಮಾತ್ರೇಣ ಕಾಂತಾ ಕಾಂತಪ್ರಿಯಾ ಬಭೌ ।

Play Time: 48:52

Size: 1.37 MB


Download Upanyasa Share to facebook View Comments
2545 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  10:25 PM, 08/08/2020

  🙏🙏🙏
 • Varuni Jayanth,Bangalore

  12:56 PM, 15/07/2020

  Gurugalige bhaktipoorvaka vandanegalu.Ahalya prasangadalli elle prashnegaligu manassige oppuvante Uttara needidderi.Truptiyagide Gurugale.Ananta dhanyavadagalu
 • Santosh Patil,Gulbarga

  8:01 PM , 27/04/2020

  Tnx Gurugale
 • Kamal bharadwaj,Manivala(village)

  9:58 PM , 24/04/2020

  ಗುರುಗಳೇ, ಇಂದ್ರರಿಗೆ ಗೌತಮರು ಶಾಪ ಕೊಟ್ಟಿದ್ದರಿಂದ ಅವರ ಪುಣ್ಯ ಇಂದ್ರದೇವರಿಗೆ ಹೋಯಿತಲ್ಲವೇ. ಹಾಗಾದರೆ ಅಹಲ್ಯಾದೇವಿಯರಿಗೂ ಶಾಪ ಕೊಟ್ಟಿದ್ದಾರಲ್ಲವೇ, ಅವರಿಗೆ ಗೌತಮರ ಪುಣ್ಯ ಹೋಗಲಿಲ್ಲವೇ. 

  Vishnudasa Nagendracharya

  ಶಾಪದಿಂದ ಅಹಲ್ಯಾದೇವಿಯರಿಗೆ ಗೌತಮರ ಪುಣ್ಯ ಹೋಗಲಿಲ್ಲ. ಆದರೆ ಶಾಪ ಸಂಪನ್ನವಾಗಲು ಪುಣ್ಯ ಖರ್ಚಾಯಿತು. ವಿವರಿಸುತ್ತೇನೆ. 
  
  ಶಾಪಗಳು ಮೂರು ರೀತಿ. 
  
  1. ಅಧಿಕಾರದಲ್ಲಿರುವ ದೇವತೆಗಳು ತಮಗಿಂತ ಕಿರಿಯರಿಗೆ ಶಾಪ ನೀಡುವದು. ಇಲ್ಲಿ ಪುಣ್ಯಹ್ರಾಸವೇನೂ ಆಗುವದಿಲ್ಲ. ಕಾರಣ ಅವರಿಗೆ ಶಾಸನ ಮಾಡುವ ಅಧಿಕಾರವಿರುತ್ತದೆ. ಉದಾಹರಣೆಗೆ ಬ್ರಹ್ಮದೇವರು ಪಾರ್ವತ್ಯಾದಿ ಸ್ತ್ರೀಯರಿಗೆ ಶಾಪ ನೀಡಿದ್ದು. ತಪ್ಪು ಮಾಡಿದ ಮಕ್ಕಳಿಗೆ ಶಿಕ್ಷೆ ನೀಡುವ ತಂದೆ ತಾಯಿಯರಂತೆ ಶಾಪ ನೀಡಿ ಶಾಸನ ಮಾಡುತ್ತಾರೆ ದೇವತೆಗಳು. 
  
  2. ಸಣ್ಣ ಯೋಗ್ಯತೆಯವರು ದೊಡ್ಡ ಯೋಗ್ಯತೆಯವರಿಗೆ ನೀಡುವದು. ಆಗ ಸಣ್ಣವರ ಪುಣ್ಯ ದೊಡ್ಡವರಿಗೆ ಹೋಗುತ್ತದೆ. ಕಾರಣ, ದೊಡ್ಡ ಯೋಗ್ಯತೆಯವರಿಗೆ ಶಾಪ ನೀಡುವ ಶಕ್ತಿ ಸಾಮರ್ಥ್ಯಗಳು ಇರುವದಿಲ್ಲ. ದೊಡ್ಡವರು ತಾವಾಗಿ ಅಪೇಕ್ಷೆ ಪಟ್ಟಲ್ಲಿ ಆ ಶಾಪವನ್ನು ಅನುಸರಿಸಬಹುದು. ಆಗ ಶಾಪ ಕೊಟ್ಟವರ ಪುಣ್ಯ ದೊಡ್ಡವರಿಗೆ ಸೇರುತ್ತದೆ. 
  
  3. ದೊಡ್ಡ ಯೋಗ್ಯತೆಯವರು ತಮಗಿಂತ ಸಣ್ಣವರಿಗೆ ನೀಡುವ ಶಾಪ. ನೀಡಿದ ಶಾಪ ನಡೆಯಬೇಕಾದರೆ ಅವರ ಪುಣ್ಯ ಖರ್ಚಾಗಬೇಕು. ಉದಾಹರಣೆಗೆ ಅಗಸ್ತ್ಯರು ಇಂದ್ರದ್ಯುಮ್ನರಾಜರಿಗೆ ಆನೆಯಾಗಿ ಹುಟ್ಟು ಎಂದು ನೀಡಿದ ಶಾಪ. ಅವರ ಮಾತು ನಡೆಯುವಷ್ಟು ತಪಸ್ಸಿನ ಶಕ್ತಿ ಅವರಲ್ಲಿರಬೇಕು. ಅವರ ತಪಸ್ಸು ಶಾಪವು ಸಾಕಾರಗೊಳ್ಳುವ ರೂಪದಲ್ಲಿ ವ್ಯಯವಾಗಿಬಿಡುತ್ತದೆ. ಹೊರತು ಅಗಸ್ತ್ಯರ ಪುಣ್ಯ ಇಂದ್ರದ್ಯುಮ್ನರಿಗೆ ಬರುವದಿಲ್ಲ. ಗೌತಮರು ಅಹಲ್ಯೆಗೆ ನೀಡಿದಾಗಲೂ ಇದೇ ಕ್ರಮ. ಗೌತಮರ ಪುಣ್ಯ ಅಹಲ್ಯೆಗೆ ಬರಲಿಲ್ಲ. ಆದರೆ, ಗೌತಮರ ತಪಸ್ಸಿನ ಸಾಮರ್ಥ್ಯದಿಂದ ಅವರ ಮಾತು ಸತ್ಯವಾಯಿತು. 
  
  
 • Suraj Sudheendra,Bengaluru

  8:20 PM , 24/04/2020

  Gurugale Pramaadakke kshame irali. Aadare nanna prashne heegide, upanyaasadalli 12.00 min inda 14.29 minutes varagu adbutavaada tatva tilisuvaaga "ahalya deviyaru kallinante iddaru aadare kallaagiralilla, gautamara shaapadante tapane gaagi kalli nolage iddaru" yemba vishayavannu tilisideeri. . Illi kallinolage iddaru yendare kallina kelage, guhe yalli iruvante, iddara yembuvudu nanna sanna samshaya. . Uddata tana vendu bhaavisade. . Dayamadi tilisabekagi vinanti.

  Vishnudasa Nagendracharya

  ಒಂದು ಪ್ರತಿಮೆಯಲ್ಲಿ ದೇವರು, ದೇವತೆಗಳು ಇರುವಂತೆ, ಅಹಲ್ಯಾದೇವಿಯರು ಒಂದು ಕಲ್ಲಿನಲ್ಲಿದ್ದರು. ಕಲ್ಲಿನ ಕೆಳಗೂ ಅಲ್ಲ, ಕಲ್ಲಿನ ಮೇಲೂ ಅಲ್ಲ. ಕಲ್ಲಿನ ಒಳಗೆ. ಕಲ್ಲಿಗೆ ಬಿಸಿಲು, ಮಳೆ, ಗಾಳಿಗಳಿಂದ ಉಂಟಾಗುವ ತಾಪಾದಿಗಳನ್ನು ಅನುಭವಿಸುತ್ತ. 
 • Niranjan Kamath,Koteshwar

  8:05 AM , 24/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ. ಗುರುಗಳ ಚರಣಗಳಿಗೆ ನಮೋ ನಮಃ. ಮಾತೇ ಬರದಂತಾಗಿದೆ. ಪರಮ ಪಾವನ ಮಾತಾ ಅಹಲ್ಯೆಯರ ಪರಮ ಪರಮ ವಿಚಾರಗಳಲ್ಲಿ ಮುಳುಗಿ ಬಿಟ್ಟಿವೆ...ಧನ್ಯೋಸ್ಮಿ.
 • Suraj Sudheendra,Bengaluru

  9:53 PM , 23/04/2020

  Gurugale ahalya deviyaru kallinalli iddaru yendare ondu bandegallina kelage iddaro athawa kallinolage tamma tapashakti inda sookshma roopadallidaro

  Vishnudasa Nagendracharya

   ನೀವು ಪ್ರವಚನ ಕೇಳಿದ್ದರೆ ಈ ಪ್ರಶ್ನೆ ಮಾಡುತ್ತಿರಲಿಲ್ಲ. 😊
  
  ಪ್ರವಚನ ಕೇಳಿ.
 • Vishwnath MJoshi,Bengaluru

  9:42 PM , 23/04/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ
  ಇವತ್ತೀನ ಪ್ರವಚನದಿಂದ ನಾವು ಅರ್ಥ ಮಾಡಿಕೊಂಡದ್ದು 
  ಗೌತಮರ ಮಹಾತ್ಮೆ ,ಅವರು ಜಗತ್ತಿಗೆ ಹೆಳಿಕೊಟ್ಟ ಪಾಠ
  ಗಂಡ ಹೆಂಡತಿಯರು ಯಾರೇ ತಪ್ಪು ಮಾಡಿದರೂ
  ಅದನ್ನ ಒಪ್ಪಿಕೊಂಡು, ಪ್ರಾಯಶ್ಚಿತ ಪಟ್ಟು ,ಕೊಟ್ಟ ಶಿಕ್ಷೆಯನ್ನು ಮನಪೂರ್ವಕವಾಗಿ ಅನುಭವಿಸಿ.
  ಮುಖ್ಯ ವಾಗಿ ದೇವರಲ್ಲಿ ಪ್ರಾರ್ಥಸಿ ಮಾಡಿದ ತಪ್ತಿಗೆ ಕ್ಷೇಮೆ ಯಾಚಿಸಬೇಕು.
  
  ಈ ಕಲಿಯುಗದಲ್ಲಿ ಅತ್ಯಂತ ಪ್ರಷಸ್ತವಾದ ಪಾಠ.ಜನರು ತಮ್ಮ ಸ್ವೇಛ್ಘೆ ಇಂದ ಬದುಕುವರು ಮತ್ತು ಪ್ರತಿಒಂದಕ್ಕು divorce ಅಂಥ ಹೇಳುವವರಿಗೆ ಗೌತಮ ಅಹಲ್ಯಾ ಪ್ರಸಂಗ ವಂದು ಪಾಠ
  ಅತ್ಯುತ್ತಮವಾಗಿ ಸೋಕ್ಷಮ್ತೆಗಳ್ಳನ್ನು ತಿಳಿಸಿದ್ದಿರಿ.
  ಧನ್ಯವಾದಗಳು ಗುರುಗಳೆ
 • DESHPANDE P N,BANGALORE

  2:07 PM , 23/04/2020

  S.Namaskargalu. Anugrahvirali
 • Jayashree Karunakar,Bangalore

  1:19 PM , 23/04/2020

  ಕಥೆ ಇಷ್ಟೆ ನಡೆದದ್ದು "ರಾಮಚಂದ್ರ ವಿಶ್ವಾಮಿತ್ರರ ಜೊತೆಯಲ್ಲಿ ಬಂದು ಅಹಲ್ಯೆಯನ್ನು ಉದ್ಧಾರ ಮಾಡಿದ" ಅಂತ...
  
  ಆದರೆ ಈ ಒಂದು ಸಣ್ಣ ಘಟನೆಯಲ್ಲಿ ನಾವು ತಿಳಿದ ತತ್ವಗಳಿಗೆ ಲೆಕ್ಕವಿಲ್ಲ...
  ಮನಸ್ಸಿನಲ್ಲಿ ಮೂಡಿದ ಹತ್ತಾರು ಪ್ರಶ್ನೆಗಳಿಗೂ ಉತ್ತರ ದೊರಕಿದೆ...
  ಬಂದ ಸಂಶಯಗಳಿಗೂ ಅಪಾಥ೯ಬಾರದ ರೀತಿಯಲ್ಲಿ ಪರಿಹಾರ ಸಿಕ್ಕಿದೆ...
  ದೃಷ್ಟಾಂತಗಳ ಮೂಲಕ ಅಥ೯ಮಾಡಿಸಿದ ತತ್ವಗಳೆ ಪರಮಾದ್ಭುತ....
  ಜೊತೆಗೆ ದಾಸಸಾಹಿತ್ಯದಲ್ಲಿ ಬಂದಿರುವ ಇದೇ ಘಟನೆಗೆ ವಿವರಣೆಯನ್ನು ತಿಳಿಸಿದ ರೀತಿ....ಎಲ್ಲವನ್ನೂ ಪರಿಶುದ್ಧ ಕ್ರಮದಲ್ಲಿ ತಿಳಿಸಿದ ಗುರುಗಳಿಗೆ ಭಕ್ತಿಯ ನಮನಗಳು...
 • deashmukhseshagirirao,Banglore

  6:21 AM , 23/04/2020

  🙏🏻🙏🏻🙏🏻🙏🏻🙏🏻