Upanyasa - VNU914

ಶತಾನಂದರ ಸಂಭ್ರಮ

ಶ್ರೀಮದ್ ರಾಮಾಯಣಮ್ — 32 — ಶತಾನಂದರ ಸಂಭ್ರಮ

ತಮ್ಮ ರಾಜ್ಯದ ಪ್ರಾಂತಕ್ಕೆ ರಾಮಲಕ್ಷ್ಮಣರೊಂದಿಗೆ ಆಗಮಿಸಿದ ವಿಶ್ವಾಮಿತ್ರರನ್ನು ಭಕ್ತಿ ಗೌರವಗಳಿಂದ ಜನಕಮಹಾರಾಜರು ಸ್ವಾಗತಿಸಿ ರಾಮಲಕ್ಷ್ಮಣರ ಕುರಿತು ಪ್ರಶ್ನೆ ಮಾಡಿ ತಿಳಿದುಕೊಳ್ಳುತ್ತಾರೆ. ಅಹಲ್ಯಾದೇವಿಯರ ಶಾಪವಿಮೋಚನೆಯ ಮಾತನ್ನು ಕೇಳುತ್ತಲೇ ಭಕ್ತಿ-ಉತ್ಸಾಹ-ಪ್ರೇಮ-ತವಕಗಳಿಂದ ಗೌತಮ-ಅಹಲ್ಯೆಯರ ಪುತ್ರ ಶತಾನಂದರು — ಜನಕರಾಜರ ಪುರೋಹಿತರು — ಮಾಡುವ ಪ್ರಶ್ನೆಗಳನ್ನು ಕೇಳುತ್ತೇವೆ. ನಮ್ಮ ಬದುಕನ್ನು ಬಂಗಾರಗೊಳಿಸುವ ಅದ್ಭುತ ಪಾಠಗಳೊಂದಿಗೆ. 

ಯಾಜ್ಞವಲ್ಕ್ಯರ ಶಿಷ್ಯರಾದ ಜನಕಮಹಾರಾಜರಿಗೆ ಶ್ರೀರಾಮ ಶ್ರೀಮನ್ನಾರಾಯಣನೇ ಎಂದು ತಿಳಿದಿದೆ, ಆದರೂ ಸಹ ವಿಶ್ವಾಮಿತ್ರರ ಶಿಷ್ಯನನ್ನಾಗಿಯೇ ಕಾಣುವದೇಕೆ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರವಿದೆ. 

ಪ್ರಾಚೀನ ಭಾರತದ ರಸ್ತೆಗಳ ಕುರಿತ ಅಪೂರ್ವವಿಷಯವನ್ನು ನಾವಿಲ್ಲಿ ಕೇಳುತ್ತೇವೆ. 

Play Time: 48:12

Size: 1.37 MB


Download Upanyasa Share to facebook View Comments
2989 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  10:18 PM, 23/08/2020

  🙏🙏🙏
 • Varuni Jayanth,Bangalore

  1:32 PM , 15/07/2020

  Pavanavada chariteyannu keli manassu thumbi bandide.Namma bhavya paramparege hrudaya higgide.Gurugala katha niroopana koushalyakke Ananta namanagalu.
 • Narahari Kambaluru,Bengaluru

  6:31 PM , 30/04/2020

  ಆಚಾರ್ಯಾಯ ನಮೋ ನಮಃ. ಆಚಾರ್ಯರೆ, ರಾಮಾಯಣದ ಉಪನ್ಯಾಸಗಳು ಬಹಳ ಅದ್ಭುತವಾಗಿ ಸಾಗಿ ಬರುತ್ತಿದೆ.
  
  ಶ್ರೀ ವಿಶ್ವಾಮಿತ್ರ ಮಹರ್ಷಿಗಳ ಕುರಿತಾಗಿ ನನ್ನದೊಂದು ಪ್ರಶ್ನೆ ಹೀಗಿದೆ: ಶ್ರೀ ವಿಶ್ವಾಮಿತ್ರ ಮಹರ್ಷಿಗಳು ಗಾಯತ್ರೀ ಮಂತ್ರದ ದ್ರಷ್ಟಾರರು ಹಾಗು ಅವರೇ ಅದನ್ನ ಇಡಿಯ ಮನು ಕುಲಕ್ಕೆ ಕೊಟ್ಟಿದ್ದು ಎಂದು ತಾವು ಹಿಂದೊಮ್ಮೆ ತಿಳಿಸಿದ್ದೀರಿ. ಈ "ದ್ರಷ್ಟಾರರು" ಎನ್ನುವ ಪದದ ಅರ್ಥವೇನು? ಅವರಿಗೆ ಆ ವೇದ-ಮಂತ್ರ ಪ್ರತಿಪಾದ್ಯ ರೂಪದ (ಅಂದರೆ ಈ ಸಂದರ್ಭದಲ್ಲಿ, ಶ್ರೀ ಸೂರ್ಯನಾರಾಯಣ ದೇವರ) ಸಾಕ್ಷಾತ್ಕಾರವಾಯಿತು ಎಂದು ಅರ್ಥವೋ? ಅಥವಾ, ಬೇರೆ ಇನ್ನೇನಾದರು ಅಭಿಪ್ರಾಯವೋ? ಹಾಗೆಯೆ, ಶ್ರೀ ವಿಶ್ವಾಮಿತ್ರರೇ ಈ ಮಂತ್ರವನ್ನ ಮನು ಕುಲಕ್ಕೆ ನೀಡಿದ್ದು ಅಂದರೆ, ಅದಕ್ಕಿಂತ ಮೊದಲು ಗಾಯತ್ರೀ ಮಂತ್ರ ಯಾರಿಗೂ ಗೊತ್ತಿರಲಿಲ್ಲವೇ? ಒಂದು ವೇಳೆ ಗೊತ್ತಿದ್ದರೂ ಸಹಿತ, ಆ ಮಂತ್ರಕ್ಕೆ ಅವಾಗ ಋಷಿ ಯಾರಾಗಿದ್ದರು?

  Vishnudasa Nagendracharya

  ಒಂದು ಮಂತ್ರದ ದ್ರಷ್ಟಾರರು ಎಂದರೆ ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಆ ಮಂತ್ರವನ್ನು ಪಡೆದವರು, ತಿಳಿದವರು, ಎಂದರ್ಥ. 
  
  ವೇದಗಳು ಅನಂತವಾಗಿವೆ. ಅನಂತ ವೇದಗಳನ್ನೂ ತಿಳಿದವರು ಋಜುದೇವತೆಗಳು ಮತ್ತು ಗರುಡ ಶೇಷ ರುದ್ರರು ಮಾತ್ರ. 
  
  ಉಳಿದ ದೇವತೆಗಳೂ ಸಹ ಅನಂತ ವೇದಗಳನ್ನು ತಿಳಿಯಲು ಸಾಧ್ಯವಿಲ್ಲ. 
  
  ಈ ಅನಂತ ವೇದಗಳೂ ಎಲ್ಲರಿಗೂ ಒಟ್ಟಿಗೇ ದೊರೆಯುವದಿಲ್ಲ. 
  
  ಶ್ರೇಷ್ಠರಾದ ದೇವತೆಗಳು ಮತ್ತು ಋಷಿಗಳು ಧ್ಯಾನಾಸಕ್ತರಾಗಿದ್ದಾಗ ಅವರಿಗೆ ವೇದಗಳು ಗೋಚರವಾಗುತ್ತವೆ. ಯಾರಿಗೆ ಯಾವ ವೇದ ಗೋಚರವಾಗುತ್ತವೆಯೋ ಅವರು ಆ ವೇದದ ದ್ರಷ್ಟಾರರು ಎಂದರ್ಥ. ಒಂದೇ ವೇದ ಮಂತ್ರ ಅನೇಕರಿಗೆ ಗೋಚರವಾಗಬಹುದು. ಎಷ್ಟು ಜನರಿಗೆ ಗೋಚರವಾಗುತ್ತದೆಯೋ ಅಷ್ಟೂ ಜನರು ಅದಕ್ಕೆ ಋಷಿಗಳು. 
  
  ಅನಂತ ವೇದಕ್ಕೂ ಬ್ರಹ್ಮದೇವರು ಋಷಿಗಳು. ಅವರು ನಾರದ, ಭೃಗು, ಸನಕಾದಿಗಳಿಗೆ ಅವರವರ ಯೋಗ್ಯತಾನುಸಾರ ಉಪದೇಶಿಸುತ್ತಾರೆ. ಭೃಗು ಮೊದಲಾದವರು ಋಷಿಗಳಿಗೆ. ಹೀಗೆ ವೇದ ಪರಂಪರಾಗತವಾಗಿ ಋಷಿಗಳಿಗೆ ಮುಟ್ಟುತ್ತದೆ. ಇದು ಒಂದು ಕ್ರಮ. 
  
  ಯಾವ ವೇದಮಂತ್ರವನ್ನು ಯಾವ ಋಷಿ ತಾನು ಧ್ಯಾನಕಾಲದಲ್ಲಿ ಕಂಡುಕೊಳ್ಳುತ್ತಾರೆಯೋ ಆ ಮಂತ್ರವನ್ನು ಅವರ ಗುರುಗಳು ತಿಳಿದಿರುತ್ತಾರೆ. ಆದರೆ, ಉಪದೇಶ ಮಾಡಿರುವದಿಲ್ಲ. ಗುರುಗಳ ಅನುಗ್ರಹದಿಂದ ಆ ಋಷಿಯೇ ಕಂಡುಕೊಳ್ಳುತ್ತಾರೆ ಮತ್ತು ಆ ಮಂತ್ರಕ್ಕೆ ಅವರು ದ್ರಷ್ಟಾರರಾಗುತ್ತಾರೆ. 
  
  ಮಂತ್ರದರ್ಶನವಾಗುವ ವೇಳೆ ಆ ಮಂತ್ರದಿಂದ ಪ್ರತಿಪಾದ್ಯವಾದ ರೂಪಗಳ ಸಾಕ್ಷಾತ್ಕಾರವೂ ಆಗುತ್ತದೆ. 
  
  ಗಾಯತ್ರೀಮಂತ್ರದ ವಿಷಯದಲ್ಲಿ ಇನ್ನೂ ತಿಳಿಯಬೇಕಾದ ವಿಷಯವುಂಟು. 
  
  ಗಾಯತ್ರಿಯಲ್ಲಿ ಎರಡು ವಿಧ — ಬ್ರಹ್ಮಗಾಯತ್ರಿ ಮತ್ತು ವಿಶ್ವಾಮಿತ್ರ ಗಾಯತ್ರಿ ಎಂದು. ವ್ಯಾಹೃತಿಸಮೇತವಾದದ್ದು ವಿಶ್ವಾಮಿತ್ರ ಗಾಯತ್ರಿ. ವ್ಯಾಹೃತಿ ಇಲ್ಲದ್ದು ಬ್ರಹ್ಮಗಾಯತ್ರಿ. ಬ್ರಹ್ಮಗಾಯತ್ರಿ ಮೊದಲಿಂದಲೂ ಪ್ರಸಿದ್ಧಿಯಲ್ಲಿತ್ತು, ಪಾಠಪ್ರವಚನ ಪರಂಪರೆಯಲ್ಲಿತ್ತು. (ವ್ಯಾಹೃತಿಯ ವಿವರ ಕೇಳಬೇಡಿ. ನಾನು ಸೋಷಿಯಲ್ ಮೀಡಿಯಾದಲ್ಲಿ ಆ ವಿವರಗಳನ್ನು ತಿಳಿಸುವದಿಲ್ಲ) 
  
  ವಿಶ್ವಾಮಿತ್ರರು ಕಂಡುಕೊಂಡ ನಂತರ ವಿಶ್ವಾಮಿತ್ರಗಾಯತ್ರಿಯನ್ನೇ ಸಂಧ್ಯೆಯಲ್ಲಿ ಬಳಸಬೇಕು ಎಂದು ಬ್ರಹ್ಮದೇವರು ಆದೇಶ ಮಾಡಿದರು. ಹೀಗಾಗಿ ವಿಶ್ವಾಮಿತ್ರಗಾಯತ್ರಿಯನ್ನೇ ನಾವು ಸಂಧ್ಯೆಯಲ್ಲಿ ಬಳಸುತ್ತೇವೆ. 
  
  ಈ ವಿಶ್ವಾಮಿತ್ರ ಗಾಯತ್ರಿ ಭೃಗುಋಷಿಗಳಿಂದ ಆರಂಭಿಸಿ ಅವರ ಮೇಲಿನ ಎಲ್ಲರಿಗೂ ತಿಳಿದಿತ್ತು. ವಿಶ್ವಾಮಿತ್ರರಿಂದ ಪ್ರಸಿದ್ಧಿ ಪಡೆಯಲಿ ಎಂದು ಅವರು ಶಿಷ್ಯರಿಗೆ ಉಪದೇಶಿಸಿರುವದಿಲ್ಲ. 
 • Santosh Patil,Gulbarga

  8:02 PM , 27/04/2020

  Tnx Gurugale
 • Dilip acharya belagal,Bellary

  10:15 PM, 25/04/2020

  ಗುರುಗಳಿಗೆ ಸಾಂಷ್ಟಾಂಗ ನಮಸ್ಕಾರಗಳು, ಗುರುಗಳೆ ತಮ್ಮಲ್ಲಿ ಒಂದು ಪ್ರಾರ್ಥನೆ ರಾಮಾಯಣದಲ್ಲಿ ಬರುವ ಆದರ್ಶಗಳನ್ನ ಅಳವಡಿಸಿಕೊಂಡು ಆದರ್ಶ ಪ್ರಾಯರಾದ ಮಾಧ್ವ ಮಹನೀಯರ ಚರಿತ್ರೆಯನ್ನೂ ತಿಳಿಸಿದರೆ ನಾವುಗಳು ಕೂಡ ಕೃತಾರ್ಥರಾಗುವೆವು

  Vishnudasa Nagendracharya

  ಶ್ರೀಮದಾಚಾರ್ಯರ ಪರಿಶುದ್ಧ ಪರಂಪರೆಗಳಲ್ಲಿ ಬಂದ ಸಕಲ ಮಹಾನುಭಾವರ ಚರಿತ್ರೆಗಳ ಪ್ರವಚನ ಮಾಡುವ ಸಂದರ್ಭದಲ್ಲಿ ಖಂಡಿತ ತಿಳಿಸುತ್ತೇನೆ. 
 • Jayashree Karunakar,Bangalore

  10:27 AM, 25/04/2020

  ಗುರುಗಳೆ 
  
  ೧.ಜನಕ ಮಹಾರಾಜರಿಗೆ ವಿಶ್ವಾಮಿತ್ರರಲ್ಲಿ ಅಪಾರವಾದ ಭಕ್ತಿ ಗೌರವಗಳಿದ್ದರೂ, ತಾವು ಮಾಡುತ್ತಿರುವ ಯಜ್ಞ ಕಾಯ೯ಕ್ಕೆ ಅವರಿಗೆ ಯಾಕೆ ಆಮಂತ್ರಣ ನೀಡಲಿಲ್ಲ ?
  
  ೨. ಶತಾನಂದರಿಗೆ ತಮ್ಮ ತಂದೆ ತಾಯಿಯರು ಒಂದಾಗುತ್ತಿದ್ದಾರೆ ಅನ್ನುವ ಯಾವ ಮುನ್ಸೂಚನೆಯೂ ಇರಲಿಲ್ಲವೇ ?
  ವಿಶ್ವಾಮಿತ್ರರು ರಾಮಚಂದ್ರರೊಡನೆ ಮಿಥಿಲಾಪಟ್ಟಣಕ್ಕೆ ಇದೀಗ ಬಂದಾಗಲೇ ಗೊತ್ತಾಗಿದ್ದೆ ?

  Vishnudasa Nagendracharya

  1. ಒಬ್ಬರು ಮಹಾಜ್ಞಾನಿಗಳಿದ್ದಾರೆ ಎಂದ ಮಾತ್ರಕ್ಕೆ ಅವರಿಂದಲೇ ಎಲ್ಲ ಕಾರ್ಯಗಳನ್ನು ಮಾಡಿಸಬೇಕು ಎಂದು ಸರ್ವಥಾ ನಿಯಮವಿಲ್ಲ. ಹಾಗಿದ್ದಾಗ ಅವರಿಗಿಂತ ಸಣ್ಣವರು ಯಾವ ಕಾರ್ಯಗಳನ್ನು ಮಾಡಲೇಬಾರದು ಎಂದಾಗಿಬಿಡುತ್ತದೆ. ವಿಶ್ವಾಮಿತ್ರರಷ್ಟೇ ಅಲ್ಲ ಅವರಿಗಿಂತ ಹಿರಿಯರಾದ ಭೃಗುಋಷಿಗಳಿಂದ ಆರಂಭಿಸಿ, ಅವರಿಗೆ ಸಮಾನರಾದ ಸಪ್ತರ್ಷಿಗಳಿಂದ ಆರಂಭಿಸಿ ಸಕಲ ಋಷಿಗಳೂ ಸಹ ಭೂಲೋಕದಲ್ಲಿದ್ದಾರೆ. ಹೀಗಾಗಿ ಎಲ್ಲ ಕಾರ್ಯವನ್ನೂ ಒಬ್ಬರೇ ಮಾಡಬೇಕೆಂಬ ನಿಯಮವಿಲ್ಲ. ಪ್ರತಿಯೊಬ್ಬರೂ ಸಾಧನೆ ಮಾಡಬೇಕು. 
  
  ಇನ್ನು ಆಮಂತ್ರಣದ ವಿಷಯ. ಋಷಿಗಳು ತಪಸ್ಸಿನಲ್ಲಿ ತಲ್ಲೀನರಾಗಿರುತ್ತಾರೆ. ತಪಸ್ಸಿನಲ್ಲಿರುವವರಿಗೆ ವಿಘ್ನ ಮಾಡುವ ಧೈರ್ಯ ಯಾವ ರಾಜರಿಗೂ ಇಲ್ಲ. ಆ ಋಷಿಗಳು ತಾವಾಗಿ ಬಂದು ಅನುಗ್ರಹಿಸಲಿ ಎಂದು ರಾಜ ಮಹಾರಾಜರು ಕಾಯುತ್ತಿದ್ದರೆ ಹೊರತು ತಾವೇ ಹೋಗಿ ಅವರ ತಪಸ್ಸಿಗೆ ವಿಘ್ನ ಮಾಡುತ್ತಿರಲಿಲ್ಲ. 
  
  2. ಸ್ವಪ್ನಸೂಚನೆಗಳು ಶುಭಶಕುನಗಳು ಉಂಟಾಗಿರುತ್ತವೆ. ಆದರೆ ಇಂದೇ ಹೀಗೇ ನಡೆಯುತ್ತದೆ ಎಂದು ನಡೆಯುವವರೆಗೆ ತಿಳಿದಿರುವದಿಲ್ಲ. ಮಹಾಜ್ಞಾನಿಗಳಿಗೂ ಸಹ ಆ ತಿಳುವಳಿಕೆಯನ್ನು ಭಗವಂತ ಎಷ್ಟೋ ಬಾರಿ ಮರೆಮಾಚಿರುತ್ತಾನೆ. ಬೆಳಿಗ್ಗೆ ಅಹಲ್ಯೆಯ ಉದ್ಧಾರ ಮಾಡಿ ಸಂಜೆಯ ವೇಳೆಗೆ ಅರಮನೆಯ ಬಳಿಗೆ ಬಂದಿದ್ದಾರೆ, ರಾಮದೇವರು. ಇನ್ನೆಷ್ಟು ವೇಗವಾಗಿ ತಿಳಿಯಬೇಕು?
  
  
 • Ritthy G.Vasudevachar,Bengaluru

  6:43 PM , 24/04/2020

  ಆಚಾರ್ಯರಿಗೆ ಶಿರಸಾಷ್ಟಾಮಗ ನಮಸ್ಕಾರಗಳು,ಸ್ವಾಮಿ! ಶತಾನಂದರು ಬೇರೆ ವಾಮದೇವ ಋಷಿಗಳು ಬೇರೇನಾ? ಇಬ್ಬರೂ ಗೌತಮ ಋಷಿಗಳ ಮಕ್ಕಳೇ? ಹಾಗೂ ಶ್ರಾದ್ಧದ ಸಂದರ್ಭದಲ್ಲಿ ವಸಿಷ್ಠ-ವಾಮದೇವರಂತೆ ಎಂದು ಹೇಳುವ ವಾಮದೇವರು ಇವರೇನಾ ಅಂತ ತಿಳಿಯಬೇಕಿತ್ತು, ನಮಸ್ಕಾರ

  Vishnudasa Nagendracharya

  ವಾಮದೇವರು ಬೇರೆ, ಶತಾನಂದರು ಬೇರೆ. 
  
  ವಾಮದೇವ ಎಂಬ ಹೆಸರು ಇಬ್ಬರಿಗಿದೆ. ಒಬ್ಬರು ಮಹಾರುದ್ರದೇವರು. ಎರಡನೆಯದು ಗೌತಮ ಪುತ್ರರಾದ ಋಷಿಗಳು. ಈ ಋಷಿಗಳನ್ನೇ ಶ್ರಾದ್ಧದಲ್ಲಿ ನಾವು ಸ್ಮರಿಸುವದು — “ವಸಿಷ್ಠ ವಾಮದೇವಸದೃಶಾ ವಿಪ್ರಾಃ” ಎಂದು. 
  
  ಮಹಾಭಾರತದಲ್ಲಿನ ಕೃಪಾಚಾರ್ಯರು ಮತ್ತು ಕೃಪೀದೇವಿಯ (ದ್ರೋಣಾಚಾರ್ಯರ ಪತ್ನಿ) ತಂದೆ ಶರದ್ವಾನ್ ಋಷಿಗಳು ಸಹಿತ ಗೌತಮರ ಪುತ್ರರು. ಇದಲ್ಲದೇ ಮಹಾಮೇಧಾವಿಗಳಾದ “ಚಿರಕಾರೀ” ಎನ್ನುವವರೂ ಸಹ ಗೌತಮರ ಪುತ್ರರೇ. 
 • Shamala R,Bangalore

  7:28 PM , 24/04/2020

  ಪ್ರಮೇಯಗಳನ್ನು ಗೊಂಚಲು ಗೊಂಚಲುಗಳನ್ನಾಗಿ ಮಾಡಿ ರಾಮಾಯಣವೆಂಬ‌ ಸಿಹಿಯ ದ್ರಾಕ್ಷಿಯ ತೋಟಕ್ಕೆ ಕೃಪೆ ಮಾಡಿ ಕರೆದು ಕೊಂಡು ಹೋದ ನಿಮಗೆ ನಮ್ಮ ಅನಂತ ವಂದನೆಗಳು...
 • Vinaykumar,Bellary

  8:28 AM , 24/04/2020

  ಈ ಪ್ರವಚನದಲ್ಲಿ ವಿಪ್ರ. ಬ್ರಾಹ್ಮಣ ಎಂದು ಹೇಳಿದಿರಿ ಅದರ್ಥಗಳೇನು  ಮತ್ತೂ ದ್ವಿಜ. ಶ್ರೋತ್ರಿಯ ವಟು  ಇವುಗಳ ವಿಶೇಷ ಅರ್ಥವನ್ನು ತಿಳಿಸಿ ಕೋಡಿ

  Vishnudasa Nagendracharya

  ದ್ವಿಜ ಎಂದರೆ ಎರಡು ಬಾರಿ ಹುಟ್ಟಿದವನು. ತಾಯಿಯ ಹೊಟ್ಟಿಯಿಂದ ಒಂದು ಬಾರಿ, ಉಪನಯನವಾದಾಗ ಎರಡನೆಯ ಬಾರಿ. ಉಪನಯನ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗೆ ಇದೆ. ಹೀಗಾಗಿ ಈ ಮೂರು ವರ್ಗದಲ್ಲಿ ಉಪನೀತರಾದವರು ದ್ವಿಜ ಎಂದು ಕರೆಸಿಕೊಳ್ಳುತ್ತಾರೆ. ದ್ವಿಜೋತ್ತಮ ಎಂದರೆ ಬ್ರಾಹ್ಮಣ. 
  
  ಬ್ರಾಹ್ಮಣ, ವಟು, ವಿಪ್ರ, ಮತ್ತು ಶ್ರೋತ್ರಿಯ ಎನ್ನುವ ಶಬ್ದಗಳು ಕೇವಲ ಬ್ರಾಹ್ಮಣರಿಗೆ ಸಂಬಂಧಿಸಿದ್ದು. 
  
  ಬ್ರಾಹ್ಮಣ ಎಂದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವನು. ಬ್ರಹ್ಮ ಎಂದರೆ ವೇದ, ಬ್ರಹ್ಮ ಎಂದರೆ ದೇವರು. ವೇದ ಮತ್ತು ದೇವರನ್ನು ತಿಳಿದವನು ಬ್ರಾಹ್ಮಣ ಎನ್ನುವದು ಮುಖ್ಯಾರ್ಥ. 
  
  ವಟು ಎಂದರೆ ಉಪನಯನವಾಗಿರುವ ಆದರೆ ಮದುವೆಯಾಗದಿರುವ ಬ್ರಾಹ್ಮಣ. (ಸಾಮಾನ್ಯವಾಗಿ ಹದಿನಾರು ವರ್ಷದ ಒಳಗಿನವರನ್ನು ಈ ಶಬ್ದದಿಂದ ಕರೆಯಲಾಗುತ್ತದೆ)
  
  ವಿಪ್ರ ಎಂದರೆ ವೇದಗಳನ್ನು ಅಧ್ಯಯನ ಮಾಡಿ ಮತ್ತೊಬ್ಬರಿಗೆ ವೇದದ ಪಾಠವನ್ನು ಹೇಳುತ್ತಿರುವವನು. 
  
  ಶ್ರೋತ್ರಿಯ ಎಂದರೆ ಸದಾಚಾರಿಯಾದ ಬ್ರಾಹ್ಮಣ ಎಂದು ಲೋಕದಲ್ಲಿ ಬಳಕೆಯಲ್ಲಿರುವ ಅರ್ಥ. ವೇದಾಧ್ಯಯನದ ಫಲವಾಗಿ ಜ್ಞಾನ ಭಕ್ತಿ ವೈರಾಗ್ಯಗಳನ್ನು ಪಡೆದ ಬ್ರಾಹ್ಮಣೋತ್ತಮ ಎಂದರ್ಥ. ಶಾಸ್ತ್ರಾಧ್ಯಯನದ ಫಲವಾಗಿ ಮುಕ್ತಿಯನ್ನು ಪಡೆದವನು ಎಂಬ ಅಪೂರ್ವ ಅರ್ಥವನ್ನು ಶ್ರೀಮದಾಚಾರ್ಯರು ತಿಳಿಸಿದ್ದಾರೆ. 
  
  
  
  
 • Sandhya L,Bengaluru

  5:34 PM , 24/04/2020

  ಆಚಾರ್ಯರಿಗೆ ನಮಸ್ಕಾರಗಳು,ಜನಕ ಮಹಾರಾಜರು ಮಾಡಿದ ರಾಮ ಲಕ್ಷ್ಮಣರ ವರ್ಣನೆಯನ್ನು ಕೇಳೀ ಕಣ್ಣಮುಂದೆ ರಾಮ ಲಕ್ಷ್ಮಣರನ್ನು ಕಂಡಂತೇ ಆಯಿತು, ಹಾಗೂ ನಾವು ಕಲಿಯ ಬೇಕಾದ ಪಾಠಗಳನ್ನು ತಿಳಿಸಿದುದ್ದಕ್ಕಾಗಿ ಧನ್ಯವಾದಗಳು
 • Jayashree Karunakar,Bangalore

  3:47 PM , 24/04/2020

  ಗುರುಗಳೆ 
  
  ನಾವು ಸಮಯ ಮಾಡಿಕೊಂಡು ಶ್ರವಣ ಮಾಡುವದಲ್ಲ .........ಅದರಲ್ಲಿರುವ ವಿಷಯಗಳು, ತತ್ವಗಳೇ ನಮ್ಮನ್ನು ಅದರತ್ತ ಸೆಳೆಯುತ್ತಿದೆ....ನಮ್ಮ ಸೌಭಾಗ್ಯ ಪ್ರಾಪಂಚಿಕ ವಿಷಯಗಳತ್ತ ಹೋಗದಂತೆ ನಮ್ಮನ್ನು ಕಾಪಾಡುತ್ತಿದೆ....
  
  ಹಾಗಾಗಿ ಯಾವಾಗ ಬೆಳ್ಳಿಗ್ಗೆಯಾಗುತ್ತದೊ.....ಯಾವಾಗ ಮುಂದಿನ ಭಾಗ ಕೇಳುತ್ತೇವೆಯೊ ಅಂತ ಅನ್ನಿಸುತ್ತಿದೆ 🙏🙏...
  
  ಇಂತಹ ಉಪನ್ಯಾಸಗಳನ್ನು ಕೇಳುತ್ತಾ ಕೇಳುತ್ತಾ ಮನಸ್ಸು ಭಗವದ್ವಿಷಯಗಳಲ್ಲಿ ತಲ್ಲೀನವಾಗಿಬಿಡುತ್ತಿದೆ....ನಾವು ಕಳೆದು ಹೋಗುತ್ತಿದ್ದೇವೆ......
  
  ನಿಮ್ಮ ಧ್ವನಿಯಲ್ಲಿ ಯಾವುದೇ ದ್ವಂದಗಳಿಗೆ ಅವಕಾಶವಿಲ್ಲದೆ ನಿಣ೯ಯ ಮಾಡಿಕೊಂಡು ಹೇಳುವದು, ನಮಗೆ ಅದರಲ್ಲಿ ವಿಶ್ವಾಸ ಭಕ್ತಿ ಮೂಡಲು ತುಂಬಾ ಸಹಾಯಕಾರಿಯಾಗಿದೆ...
  ಲೌಕಿಕ ವಿಷಯಾಸಕ್ತಿಯು ತಗ್ಗುವಂತೆ ಮಾಡಿದೆ....ಅದಕ್ಕಾಗಿ ನಿಮಗೆ ಹೆಮ್ಮೆಯ ಭಕ್ತಿಯ ನಮಸ್ಕಾರಗಳು....ಗುರುಗಳೆ🙏
 • Vidhya,Gobichettipalayam

  9:38 AM , 24/04/2020

  ಚಿಕ್ಕ ಚಿಕ್ಕ ಅಂಶಗಳನ್ನು ಬಿಡದೆ ಹೇಳಿ ಅದರಲ್ಲಿ ನಾವು ಕಲಿಯ ಬೇಕಾದ ಪಾಠವನ್ನು ತಿಳಿಸಿ ರಾಮನ ಕಥೆ ಮತ್ತು ರಾಮನ ಭಕ್ತರಾದ ವಿಶ್ವಾವಮಿತ್ರರು ಶತಾನಂದರು , ಜನಕ ಮಹಾರಾಜರು ಹೇಗೆ ಎಲ್ಲರ ಮಹಿಮೆಯನ್ನು ಹೇಳಿ ನಮ್ಮ ಕಿವಿಯನ್ನು ಪವಿತ್ರ ಮಾಡಿದಿರಿ. ಅನಂತ ನಮಸ್ಕಾರಗಳು🙏🏻🙇🏻‍♀️
 • Siddharth M,Bangalore

  2:19 PM , 24/04/2020

  🙏ಆಚಾರ್ಯರೆ... ಇವತ್ತಿನ ಪ್ರವಚನ ಪ್ರತಿಯೊಬ್ಬನೂ ಅನುಭವಿಸಲೇಬೇಕು.... ವರ್ಣನೆಗೆ ಶಬ್ದಗಳು ಸಿಲುಕದು...
  
  ಶತಾನಂದರ ಆನಂದದ ವರ್ಣನೆಯ ಸಂದರ್ಭದಲ್ಲಂತೂ ನನ್ನ ಕಣ್ಣಮುಂದೆ ಕಟ್ಟಿದಂತೆ ಇತ್ತು... ಮೈ ನವಿರೇಳಿತು...
  
  ವಿಷ್ವಾಮಿತ್ರರ ತಪಸ್ಸಿನ ವರ್ಣನೆಯಲ್ಲಿಯೂ ಸಹ ಮೈಮೇಲಿನ ಕೂದಲು ನಿಂತವು....🙏🙏🙏🙏🙏🙏
 • DESHPANDE P N,BANGALORE

  2:27 PM , 24/04/2020

  S.Namaskargalu. Anugrahvirali
 • Niranjan Kamath,Koteshwar

  8:00 AM , 24/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೆ . ಗುರುಗಳ ಚರಣಗಳಿಗೆ ನಮೋ ನಮಃ. ಧನ್ಯ ಧನ್ಯ್ನ ಧನ್ಯ ನಾದೆ , ಏನೊಂದು ಕಾರುಣ್ಯ ಭರಿತವಾಗಿ ವರ್ಣಿಸಿದ್ದೀರಿ. ವಿಶ್ವಾಮಿತ್ರರಲ್ಲಿ ರಾಜಾ ಜನಕರು , ಇತರರು ಮಾತನಾಡುವಾಗ ಕಣ್ಣು ಮಾತ್ರ ಶ್ರೀ ರಾಮ ಲಷ್ಮಣರ ಮೇಲೆಯೇ ಇತ್ತೇನೋ!! ಆಹಾ ಏನೊಂದು ಮಧುರ ಘಟನೆ ಇರಬಹುದು...ನಂತರ ಮಿಥಿಲೆಗೆ ಹೋಗಿ ಶತಾನಂದರ ಜೊತೆ ತಮ್ಮ ಮಾತೆಯ ವಿಷಯ ನೀವು ಹೇಳುವಾಗ ಕಣ್ಣಿರು ಧಾರಾಕಾರವಾಗಿ ಬರುತ್ತಿವೆ. ಪವಿತ್ರವಾಗಿ ಮಾಡಿದಿರಿ. ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ. ನಿಮ್ಮ ಜೊತೆ ನಮ್ಮನ್ನು , ಇನ್ನಿತರ ಎಲ್ಲ ಶ್ರೋತೃಗಳಿಗೆ ಭಕ್ತಿ ಹಾಗೂ ಶ್ರೀ ರಾಮಾಯಣದ ಪರಮ ಪಾವನ ಅಮೃತಪಾನ ಮಾಡಿಸಿದ್ದೀರಿ. ನಿಮ್ಮನ್ನು ಬಿಟ್ಟು ಒಂದು ಘಳಿಗೆ ಇರದೇ ಇರುವಂತೆ ಆ ಭಗವಂತನು ದಾಯಪಾಲಿಸಲಿ. ಮುಂದಿನ ಕಥಾಭಾಗ ಯಾವಾಗ ಬರುತ್ತದೆಯೋ...ಒಂದೊಂದು ದಿನವೂ ತುಂಬಾ ಹೊತ್ತಾಗಿ ಬರುವಂತೆ ಭಾಸವಾಗುತ್ತಿದೆ. ಧನ್ಯೋಸ್ಮಿ.🚩🙏
 • deashmukhseshagirirao,Banglore

  5:18 AM , 24/04/2020

  🙏🏻🙏🏻🙏🏻🙏🏻🙏🏻