Upanyasa - VNU915

ಸೀತಾದೇವಿಯ ಪ್ರಾದುರ್ಭಾವ

ಶ್ರೀಮದ್ ರಾಮಾಯಣಮ್ — 33

ಜನಕಮಹಾರಾಜರ ಪೂರ್ವಜರೂ ಸಹ ಸೀತೆಯನ್ನು ರಾಮದೇವರಿಗೆ ನೀಡಬೇಕೆಂದು ಅದಕ್ಕಾಗಿ ಧನುಷ್ಯವನ್ನು ಪಡೆಯಬೇಕೆಂದು ತಪಸ್ಸು ಮಾಡಿದ್ದರು ಎಂಬ ಅಪೂರ್ವವಿಷಯವದೊಂದಿಗೆ ಸೀತಾದೇವಿಯ ಪ್ರಾದುರ್ಭಾವದ ಅದ್ಭುತ ಚಿತ್ರಣ ಇಲ್ಲಿದೆ. 

ಶ್ರೀರಾಮನಿಗೇ ಸೀತೆಯನ್ನು ನೀಡಬೇಕು ಎಂದು ಜನಕ ಮಹಾರಾಜರು ನಿಶ್ಚಯಿಸಿದ್ದರೆ, ಧನುರ್ಭಂಗದ ಪಣವನ್ನು, ಸ್ವಯಂವರವನ್ನು ಏಕೆ ಏರ್ಪಡಿಸಿದರು?

ರುದ್ರದೇವರಿಂದ ಧನುಷ್ಯವನ್ನು ಪಡೆದದ್ದು ಜನಕ ಮಹಾರಾಜರೋ ಅಥವಾ ಜನಕರ ಪೂರ್ವಜರೋ? ನಿರ್ಣಯವೇನು?

ಮಗುವೊಂದು ಭೂಮಿಯಲ್ಲಿ ಹೇಗಿರಲು ಸಾಧ್ಯ, ಇದ್ದರೂ ಉಸಿರಾಟ ಹೇಗೆ ಸಾಧ್ಯ?

ಲೋಕವಿಚಿತ್ರವಾದ ಕ್ರಮದಲ್ಲಿ ಲಕ್ಷ್ಮೀದೇವಿಯರು ಅವತರಿಸಲು ಕಾರಣವೇನು?

ಅಗ್ನಿ, ಜಲಗಳಲ್ಲಿ ಅವತರಿಸದೇ ಭೂಮಿಯಲ್ಲೇ ಅವತರಿಸಲು ವಿಶೇಷ ಕಾರಣವಿದೆಯೇ?

ಎಂಬ ಪ್ರಶ್ನೆಗಳಿಗೆ ಉತ್ತರದೊಂದಿಗೆ

ಶಿವಧನುಷ್ಯ ಎಂದರೆ ರುದ್ರದೇವರ ಕೈಯಲ್ಲಿನ ಪಿನಾಕವಲ್ಲ, ದಕ್ಷಯಜ್ಞದ ಸಂದರ್ಭದಲ್ಲಿ ದೇವತೆಗಳ ಶರೀರವನ್ನು ಕತ್ತರಿಸಿದ ಧನುಷ್ಯ ಎಂಬ ವಿವರ ಇಲ್ಲಿದೆ. 

ಆಧುನಿಕತೆಯ ನೆಪದಲ್ಲಿ ಟ್ರಾಕ್ಟರ್ ಗಳನ್ನು ಉಪಯೋಗಿಸುತ್ತಿರುವದು ಎಂತಹ ಅನರ್ಥ ಉಂಟಾಗುತ್ತದೆ ಎನ್ನುವದರ ವಿವರ ಇಲ್ಲಿದೆ. 

Play Time: 44:31

Size: 1.37 MB


Download Upanyasa Share to facebook View Comments
3017 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  9:41 PM , 06/09/2020

  🙏🙏🙏
 • Abhi,Banglore

  5:48 PM , 16/05/2020

  ಗುರುಗಳೇ ನಿಮ್ಮ ಪ್ರವಚನ ಎಷ್ಟೋ ಸಾರಿ ಮನದಲ್ಲಿ ಗುಣ ಗುಣಿಸುತ್ತಿದೆ ... ಅದ್ಭುತ ....
  
  ನನ್ನ ಒಂದು ಪ್ರಶ್ನೆ , 
  ಸೀತಾ ದೇವಿ ಭೂಮಿಯಲ್ಲಿ ಪ್ರಾದುರ್ಭಾವರಾದರು ಸರಿ , ಆದ್ರೆ ಅಲ್ಲಿ ಋಷಿಗಳು , ಬ್ರಾಹ್ಮಣರು ಇದ್ದರು ಅವರು ಸೀತಾ ದೇವಿ ಸಾಮಾನ್ಯ ಮಾನವ ಅಲ್ಲ , ದೇವತೆ ಅಂತ ತಿಳಿದಿರುತ್ತಾರೆ , ಆದ್ರೆ ಅಲ್ಲಿ ನೆರೆದ ಸಾಮಾನ್ಯ ಜನರು ಹೇಗೆ ತಿಳಿದರು ಅಂದ್ರೆ ಭೂಮಿಯಲ್ಲಿ ಮಗು ಇತ್ತು , ಜೀವಿಸಿದ್ದು ಇವೆಲ್ಲ ಅವರು ಹೇಗೆ ಅರ್ಥೈಸಿಕೊಂಡರು ತಿಳಿಸಿ 🙏

  Vishnudasa Nagendracharya

  ರಾಮದೇವರ ಕಾಲದಲ್ಲಿ ದೇವರ ಬಗ್ಗೆ ತಿಳುವಳಿಕೆ ಇಲ್ಲದೇ ಇದ್ದ ಸಾಮಾನ್ಯ ಜನರು ಇದ್ದದ್ದೇ ಅತ್ಯಂತ ಕಡಿಮೆ. ಕಾರಣ, ರಾಮದೇವರ ಜೊತೆಯಲ್ಲಿ ಸಮಗ್ರ ಭೂಮಿಯ 90 ಪ್ರತಿಶತ ಜನ ಮುಕ್ತಿಗೆ ತೆರಳುತ್ತಾರೆ. 
  
  ಇನ್ನು, ಸಣ್ಣಮಟ್ಟದ ಜ್ಞಾನಿಗಳು ಹಿರಿಯರಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು. 
  
  
 • Padmini Acharya,Mysuru

  5:39 AM , 05/05/2020

  🙏ಶ್ರೀ ಗುರುಭ್ಯೋ ನಮಃ🙏
  
  ಹಿಂದಿನ ಕಾಲದಲ್ಲಿ ಕೃಷಿ ಎಷ್ಟು ಅದ್ಭುತವಾಗಿತ್ತು ಎನ್ನುವ ವಿಷಯ 👌.
  
  ಆಗಿನ ಕಾಲದಲ್ಲಿ ಪ್ರಜೆಗಳು ಸಹಾ ರಾಜನ ಅಪೇಕ್ಷೆ ಈಡೇರಲಿ ಎಂದು ಬಯಸುವ ವಿಷಯ ಅವರ ನಡುವೆ ಇರುವ ಒಂದು ಬಾಂಧವ್ಯವನ್ನು ನಮಗೆ ತಿಳಿಸುತ್ತದೆ.
  
  ಸೀತಾದೇವಿಯರ ಪ್ರಾದುರ್ಭಾವ ಸುಂದರವಾಗಿ ಮೂಡಿ ಬಂದಿದೆ.
 • Jayashree Karunakar,Bangalore

  12:10 PM, 28/04/2020

  ಮಕರಂದ ಭರಿತ ಕುಸುಮವನ್ನು ಧುಂಬಿಗಳು ಲೋಕವನ್ನೇ ಮರೆತು, ಮಕರಂದವನ್ನು ಹೀರುವಂತೆ, ಮಿಥಿಲೆಯತ್ತ ಬಂದ ರಾಮಚಂದ್ರನನ್ನು ಎಲ್ಲರ ಕಣ್ಣೂ ನೆಟ್ಟುಬಿಟ್ಟಿದೆ....!!!!
  ಆಹಾ…ಏನು ಧನ್ಯರೊ ಮಿಥಿಲೆಯ ಜನರು...
  
  ಶ್ರವಣ ಮಾಡಿದ ನಾವೂ ಧನ್ಯರು.....
  
  "ರಾಜ್ಯವನ್ನು ಪಾಲನೆ ಮಾಡುವ ವ್ಯಕ್ತಿ ಭಗವದ್ಅಪರೋಕ್ಷಿ
  ಯಾಗಿದ್ದಾಗ, ಜನರೆಲ್ಲ ವೈಷ್ಣವರಾಗಿರುತ್ತಾರೆ....."
  ಅದೆಂತಹ ಪಾವನವಿರಲಿಕ್ಕಿಲ್ಲ ಆ ಸ್ಥಳ...
  
  ಜನಕ ಮಹಾರಾಜರಲ್ಲಿ ಗೌರವ ಭಕ್ತಿ ಮೂಡುವಂತಹ ವಿವರಣೆ..
  
  ಜನಕ ಮಹಾರಾಜರು ಧನುಷ್ಯವನ್ನು ರುದ್ರದೇವರಿಂದ ಪಡೆದ ಸಂಗತಿಯನ್ನು ಪೂವ೯ಜರ ಪ್ರಯತ್ನದಿಂದ ತನಗೆ ದೊರೆಯಿತು ಅಂತ ವಿನಯ ತುಂಬಿದ ಮಾತಿನಲ್ಲಿ ಅವರ ಎತ್ತರದ ವ್ಯಕ್ತಿತ್ವ ನಮಗೆ ಪಾಠ....
  
  ಎಲ್ಲ ಮಹಾನುಭಾವರ ವ್ಯಕ್ತಿತ್ವವನ್ನೂ ತಿಳಿಸುತ್ತ ಅವರಿಗೆ ಕೈಯೆತ್ತಿ ಮುಗಿಯುವಂತೆ ನಮಗೆ ಪರಿಚಯಿಸುತ್ತಿದ್ದೀರಿ ಗುರುಗಳೆ...ಬಹಳ ಬಹಳ ಪರಿಣಾಮ ಬೀರುತ್ತಿದೆ...
  
  ರಾಮಾಯಣ ತುಂಬಾ ಚೆನ್ನಾಗಿ ಬರುತ್ತಿದೆ ....
  
  ಮಂಜೂಷಾದಲ್ಲಿ ಗಾಳಿಯಿಲ್ಲದೆ ಹೇಗಿದ್ದರು ಸೀತಾದೇವಿಯರು ಅಂತ ಪ್ರಶ್ನೆ ಬಂದರೆ....ಉತ್ತರವೇ ಪರಮಾದ್ಭುತ....ಕೇವಲ ತನ್ನ ಕಣ್ಣೋಟ ಮಾತ್ರದಿಂದಲೇ ಸೃಷ್ಟಿ ಸ್ಥಿತ ಲಯಮಾಡುವ ದೇವತೆಯನ್ನು ಬದುಕಿಸುವದು ವಾಯುದೇವರಲ್ಲ....ವಾಯುದೇವರನ್ನೇ ಬದುಕಿಸುವ ಜಗದೊಡತಿ ಸೀತಾದೇವಿ....!!! ಭಕ್ತಿಭರಿತ ಮಾತು ಕಿವಿಯನ್ನು ಪಾವನಗೊಳಿಸಿತು...ಅಂಭ್ರಣೀಸೂಕ್ತದಲ್ಲಿ ತಿಳಿಸಿದ ವಿಷಯವನ್ನು ಮತ್ತೊಮ್ಮೆ ಆಸ್ವಾದಿಸುವಂತೆ ಮಾಡುತ್ತಿದೆ ಇಂದಿನ ಉಪನ್ಯಾಸ...
 • Vikram Shenoy,Doha

  12:19 AM, 28/04/2020

  ಆಚಾರ್ಯರಿಗೆ ಅನಂತ ಕೋಟಿ ಧನ್ಯವಾದಗಳು..
 • M V Lakshminarayana,Bengaluru

  2:41 PM , 27/04/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ಪ್ರತಿ ಪ್ರವಚನದ ಹಿಂದೆ ಎಷ್ಟು ಅಧ್ಯಯನ ನಡೆದಿದೆ ಎಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅನೇಕ ವಿಷಯಗಳನ್ನು ತಪ್ಪಾಗಿ ತಿಳಿದಿದ್ದ ನಮಗೆ, ಆಧಾರ ಸಹಿತ ಸತ್ಯವನ್ನು ತಿಳಿಸಿದ್ದಕ್ಕಾಗಿ ಅನಂತಾನಂತ ಧನ್ಯವಾದಗಳು.

  Vishnudasa Nagendracharya

  ಶ್ರೀಹರಿ ವಾಯು ದೇವತಾ ಗುರುಗಳು ನಿಂತು ಮಾಡಿಸುತ್ತಿರುವ ಕಾರ್ಯ.
 • Sathya,Mysuru

  4:10 PM , 27/04/2020

  ನಮ್ಮ ಆಚಾರ್ಯರ ಉಪನ್ಯಾಸ ಕೇಳುತಲಿದ್ದರೆ ಕಲಿಯುಗ ತ್ರೇತಾಯುಗವಾಗುವುದು. ಧನ್ಯವಾದಗಳು

  Vishnudasa Nagendracharya

  ಗುರ್ವನುಗ್ರಹ
 • Vishwnath MJoshi,Bengaluru

  7:30 PM , 27/04/2020

  ಗುರುಗಳಿಗೆ ನಮಸ್ಕಾರ 
  श्रीगुरुभ्यो नमः। अथ गुरुपादौ नमस्करोमि
  
  ಇವತ್ತಿನ ರಾಮಾಯಣದ ಪ್ರವಚನದಲ್ಲಿ ಜನಕ ಮಹಾರಾಜರು ಮಹಾಲಕ್ಷ್ಮೀದೇವಿಯರು ತಮ್ಮ ಮಗಳಾಗಿ ಬರಬೇಕೆಂದು ತಪಸ್ಸು ಮಾಡಿದ್ದರು ಎಂದು ಕೆಳಿದೆವು.
  
  ನನ್ನ ಪ್ರಶ್ನೆ ಜನಕ ಮಹಾರಾಜರು ಮಹಾಲಕ್ಷ್ಮೀದೇವಿಯರು ಭೂಮಿ ಯಲ್ಲಿಯೇ ಸಿಗಬೇಕು ಎಂದು ಪರಮಾತ್ಮನಲಿ
  ಪ್ರಾರ್ತಿಸಿದ್ದ ರೆ? ಯಾವ ಕಾರಣಕ್ಕೆ ಜನಕ ಮಹಾರಾಜರು ಭೂಮಿಯನ್ನು ತಾವೆ ಉಳುವರಿ ಮಾಡಲಿಕ್ಕೆ ಬಂದ್ದದ್ದು. ಇದನ್ನೆಲ್ಲ ನೋಡಿದರೆ ಜನಕ ಮಹಾರಾಜರು ಮಹಾಲಕ್ಷ್ಮೀದೇವಿಯರು ಭೂಮಿಯಲ್ಲಿ ಯೇ ಸಿಗುವ ಸುಚನೆ ಇತ್ತು ಅನಿಸುತ್ತದೆ. 
   ನಿಮ್ಮ ಅಭಿಪ್ರಾಯ ಗುರುಗಳೆ
   ಧನ್ಯವಾದಗಳು
  
  

  Vishnudasa Nagendracharya

  ಜನಕ ಮಹಾರಾಜರು ಮಹಾಲಕ್ಷ್ಮಿದೇವಿ ಭೂಮಿಯಲ್ಲಿ ಸಿಗಬೇಕು ಎಂದು ಪ್ರಾರ್ಥನೆ ಮಾಡಿರಲಿಲ್ಲ. 
  
  ಅವರು ಭೂಮಿಯನ್ನು ಉಳಲು ಬಂದದ್ದು ಯಜ್ಞಕ್ಕಾಗಿ. ಯಜ್ಞದ ಭೂಮಿಯನ್ನು ಉಳುವದು ಯಜಮಾನನ ಕರ್ತವ್ಯ. ಲಕ್ಷ್ಮೀದೇವಿ ದೊರೆಯುತ್ತಾರೆ ಎಂದು ಉಳಲು ಬಂದದ್ದಲ್ಲ. ಯಜ್ಞಾಂಗವಾಗಿ ಭೂಮಿಯನ್ನು ಉಳಬೇಕಾದರೆ ಭಗವದಿಚ್ಛೆಯಿಂದ ದೊರೆತದ್ದು. 
  
  ಕನ್ನಡದಲ್ಲಿ ಉಳುವರಿ ಎಂದು ಶಬ್ದವಿಲ್ಲ. ಉಳುಮೆ ಎಂಬ ಶಬ್ದವಿದೆ. 
  
  
 • Sandhya L,Bengaluru

  8:54 PM , 27/04/2020

  ಸೀತಾ ದೇವಿಯ ಪ್ರಾದುರ್ಭಾವದ ಘಟನೆಯನ್ನು ಕೇಳುವಾಗ ನಮಗೂ ಕಣ್ಣಿನಲ್ಲಿ ಆನಂದ ಭಾಷ್ಪ ಬರುವಷ್ಟು ಸೊಗಸಾಗಿತ್ತು ತಮ್ಮ ನಿರೂಪಣೆ,ಧನ್ಯವಾದಗಳು ಗುರುಗಳೇ
 • Santosh Patil,Gulbarga

  8:02 PM , 27/04/2020

  Tnx Gurugale
 • Poornima Sowda,Bangalore

  4:37 PM , 27/04/2020

  ಗುರುಗಳಿಗೆ ಭಕ್ತಿಪೂರ್ವಕವಾದ ನಮಸ್ಕಾರಗಳು🙏. 
  
  ನಿಮ್ಮ ಪ್ರವಚನ ಕೇಳುತ್ತಿದ್ದರೆ ಯಾವ ಬೇರೆ ಯೋಚನೆಗಳೂ ಮನಸ್ಸಿಗೆ ಬರುವುದೇ ಇಲ್ಲ, ಅಷ್ಟು ಚೆನ್ನಾಗಿ ನಿಮ್ಮ ಪ್ರವಚನ ಇರುತ್ತದೆ ಗುರುಗಳೇ.
  
  ನಾನು ತಿಳಿದುಕೊಂಡ ಹಾಗೆ ಶ್ರೀರಾಮ ದೇವರ ಮೈಬಣ್ಣ ಬೆಳ್ಳಗೆ ಹಾಗೂ ಶ್ರೀಕೃಷ್ಣ ಪರಮಾತ್ಮನ ಮೈಬಣ್ಣ ಕಡುಗಪ್ಪು ಅಂತ. 
  
  ಆದರೆ ನೀವು ಶ್ರೀರಾಮದೇವರ ಮೈಬಣ್ಣ ಕಡುಗಪ್ಪು ಅಂತ ಹೇಳಿದ್ದೀರಿ. ಇದಕ್ಕೆ ಕಾರಣವಿದೆಯಾ?

  Vishnudasa Nagendracharya

  ಶ್ರೀರಾಮನೂ ನೀಲಮೇಘಶ್ಯಾಮ, ಅಂದರೆ ಇನ್ನೇನು ಮಳೆ ಸುರಿಸುತ್ತದೆ ಎನ್ನುವಾಗ ಮೋಡಕ್ಕೆ ಯಾವ ಬಣ್ಣ ಇರುತ್ತದೆಯೋ ಆ ಬಣ್ಣದವನು ಶ್ರೀರಾಮ. ಶ್ರೀಮದಾಚಾರ್ಯರು ನಿರ್ಣಯಸಿದ್ದಾರೆ — “ಶ್ಯಾಮಾವದಾತೇ ಜಗದೇಕಸಾರೇ” ಎಂದು. 
 • Vidhya,Gobichettipalayam

  11:43 AM, 27/04/2020

  ಶ್ರೀಮದಾಚಾರ್ಯರ ಮೇಲೆ ಕ್ಷಣ ಕ್ಷಣಕೆ ಭಕ್ತಿ ಹೆಚ್ಚಿಸುವಂಥ ನಿರ್ಣಯಗಳ ಸುಂದರ ನಿರೂಪಣೆ, ಸೀತಾ ದೇವಿಯ ಜನನ ಎಲ್ಲ ಕೇಳಿ ಮನಸಿಗೆ ತುಂಬಾ ಹರುಷ ವಾಯಿತು ಅಚಾರ್ಯರೇ. ಅನಂತಾನಂತ ನಮಸ್ಕಾರಗಳು.
 • Niranjan Kamath,Koteshwar

  7:19 AM , 27/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಲೋಕ ಮಾತೆ ಶ್ರೀ ಸೀತಾ ದೇವಿಯರ ಜನ್ಮ ಚರಿತ್ರೆ, ನೇಗಿಲ ಸ್ಪರ್ಶದ ಮೂಲಕ ಜನ್ಮ ಪಡೆದ ವಿಷಯ , ಶ್ರೀ ಜನಕ ಮಹಾರಾಜರು ಮತ್ತು ಅವರ ಪೂರ್ವಜರು ತಮ್ಮ ಕುಲದಲ್ಲಿ ಸೀತಾಮತೆ ಜನಿಸಲು ಮಾಡಿದ ತಪಸ್ಸು, ಶಿವಧನಸ್ಸು ಪಡೆದ ವಿವರ, ಆಹಾ!!! ಪರಮಾನಂದ ಪರಮಾನಂದ. ಇವೆಲ್ಲ ಸೂಕ್ಷ್ಮ ವಿಚಾರಗಳಿಂದ ಈ ಜೀವನ ಇಷ್ಟು ವರ್ಷ ವ್ಯರ್ಥ ಕಳೆಯಿತಲ್ಲ ಎಂದು ವಿಷಾದ ಪಡುತ್ತಿದೆ. ಧನ್ಯವಾಯಿತು ಗುರುಗಳೇ..ಧನ್ಯವಾಯಿತು ನಿಮ್ಮ ಈ ವಿಶ್ವನಂದಿನಿ ಎಂಬ ಜ್ಞಾನಯಜ್ಞದಲ್ಲಿ ನಾವು ಒಬ್ಬರಾಗುವಂತೆ ಹರಸಿದ ಆ ದೇವರಿಗೂ ನಿಮಗೂ ಅನಂತ ಧನ್ಯವಾದಗಳು. ಧಯೋಸ್ಮಿ.