Upanyasa - VNU916

ಶಿವ ಧನುಷ್ಯದ ವೈಭವ

ಶ್ರೀಮದ್ ರಾಮಾಯಣಮ್ — 34 

ಭೂಮಿಯ ಎಲ್ಲ ರಾಜರೂ, ರಾವಣನೂ ಸಹ ಬಂದು ಶಿವಧನುಷ್ಯವನ್ನು ಅಲ್ಲಾಡಿಸಲು ಸಾಧ್ಯವಾಗದೇ ಹೋದದ್ದು, ಪರಶಿವನ ಪರಮಪ್ರಸಾದದಿಂದಲೇ ಐದು ಸಾವಿರ ಜನ ಮಹಾಬಲಿಷ್ಠರಾದ ಕಿಂಕರರು ಅದನ್ನು ಮಹಾಪ್ರಯತ್ನದಿಂದ ಎಳೆದು ತರುತ್ತಿದ್ದದ್ದು, ಆ ಧನುಷ್ಯದ ಗಾತ್ರ, ರಾಮಚಂದ್ರನಿಗೆ ಆಯುಧಗಳ ಬಗ್ಗೆ ಇದ್ದ ಆಸಕ್ತಿ ಪ್ರೇಮ ಇವೆಲ್ಲದರ ವಿವರಣೆ ಇಲ್ಲಿದೆ. 

ರಾಮ ಧನುಷ್ಯವನ್ನು ಹೆದೆಯೇರಿಸಲಿ ಎಂದು ಜನಕಮಹಾರಾಜರು ಹೇಳಿದಾಗ ಊರಿನ ನಾರಿಯರು ತವಕದಿಂದ ಆಡಿದ ವಿನೋದದ ಮಾತಿನ ಚಿತ್ರಣದೊಂದಿಗೆ. 

“ಬಿಲ್ಲನ್ನು ಹೆದೆಯೇರಿಸುವದು” ಎನ್ನುವ ಮಾತಿನ ಅರ್ಥವಿವರಣೆ ಇಲ್ಲಿದೆ.

Play Time: 47:31

Size: 5.51 MB


Download Upanyasa Share to facebook View Comments
3000 Views

Comments

(You can only view comments here. If you want to write a comment please download the app.)
 • Abburu Rajeeva,Channapattana

  10:00 PM, 08/09/2020

  🙏🙏🙏
 • Padmini Acharya,Mysuru

  5:41 AM , 05/05/2020

  🙏ಶ್ರೀ ಗುರುಭ್ಯೋ ನಮಃ🙏
  
  ಜನಕಮಹಾರಾಜರು ಶಿವ ಧನುಷ್ಯವನ್ನು ಪಡೆದ ವಿವರಣೆ 
  
  ನಮಗೆ ಎಷ್ಟೆ ತಿಳಿದಿದ್ದರು ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಬಾರದು ಎನ್ನುವ ವಿಷಯವನ್ನು ದೇವರು ನಮಗೆ ಆಚರಿಸಿ ತಿಳಿಸಿದ ರೀತಿ ...
  
  ಮತ್ತು ಕ್ಷತ್ರಿಯನಿಗೆ ಆಯುಧಗಳ ಬಗ್ಗೆ ಇರಬೇಕಾದ ಕಾಳಜಿ ಒಲವನ್ನು ದೇವರು ಅಭಿವ್ಯಕ್ತಗೊಳಿಸಿದ ರೀತಿ...
  
  ಆ ಶಿವ ಧನುಷ್ಯವನ್ನು ನೋಡಲು ಅದರ ಮೇಲೆ ಇರುವ ಬಟ್ಟೆಯನ್ನು ತೆಗೆಯಲು ಅದನ್ನು ಸ್ಪರ್ಶ ಮಾಡುಲು ಪ್ರತಿ ಬಾರಿಯ ವಿಶ್ವಾಮಿತ್ರರನ್ನು ವಿನಯದಿಂದ ಕೇಳಿದ ರೀತಿ ಅದ್ಭುತ....
  
  ಉಪನ್ಯಾಸದ ಕೊನೆಯಲ್ಲಿ ಆ ಹೆಣ್ಣು ಮಕ್ಕಳ 
  ಮಾತುಗಳು ನಮ್ಮ ಮುಖದಲೂ ನಗು ಮೂಡಿಸುತ್ತದೆ.

  Vishnudasa Nagendracharya

  ದೊಡ್ಡವರ ಅಧಿಕಪ್ರಸಂಗದ ಮಾತನಾಡುವದು ವಿನಯವನ್ನು ಮೀರಿದಂತಾಗುತ್ತದೆಯೇ ಹೊರತು, ನಮ್ಮ ಉತ್ಸಾಹ ಭಕ್ತಿ ಮುಂತಾದವನ್ನು ಯೋಗ್ಯವಾದ ರೀತಿಯಲ್ಲಿ ಪ್ರಕಟ ಮಾಡುವದು ವಿನಯ ಮೀರುವದು ಸರ್ವಥಾ ಅಲ್ಲ. 
  
  ತಂದೆಯನ್ನು ಮಗ ಒದೆಯುವದು ಅಪರಾಧ. ಆದರೆ, ಅದೇ ಮಗುವನ್ನು ಎದೆಯ ಮೇಲೆ ಕೂಡಿಸಿಕೊಂಡು ತಂದೆ ಕುಣಿಸುವದಿಲ್ಲವೇ. 
  
  ಮತ್ತೂ, ಹಿರಿಯರು ಎಂದರೆ ನಿಷ್ಕರುಣಿಗಳಲ್ಲ. ತಮ್ಮ ಮುಂದೆ ಎಲ್ಲರೂ ನಗದೇ, ಮಾತನಾಡದೇ ನಿಲ್ಲಬೇಕು ಎಂದು ಅಪೇಕ್ಷಿಸುತ್ತಿರಲಿಲ್ಲ. ಧರ್ಮಕ್ಕೆ ವಿರುದ್ಧವಾಗಿ, ಮತ್ತೊಬ್ಬರಿಗೆ ಅವಮಾನವಾಗುವಂತೆ ನಡೆದುಕೊಳ್ಳುವದು ಮಾತ್ರ ಅವಿನಯವಾಗುತ್ತದೆ. ಧರ್ಮಕ್ಕೆ ಅನುಸಾರಿಯಾಗಿ ತಮ್ಮತಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಸ್ವಾತಂತ್ರ್ಯವನ್ನು ಹಿಂದಿನವರು ನೀಡುತ್ತಿದ್ದರು. 
  
  ಹೆಂಡತಿಗೆ ಗಂಡ ಕಾಲೊತ್ತಬಾರದು ನಿಜ. ನನ್ನ ಕಾಲೊತ್ತು ಬಾ ಎಂದು ಹೆಂಡತಿಯೂ ಕರೆಯಬಾರದು ನಿಜ. ಆದರೆ, ಹೆಂಡತಿಗೆ ಕಾಲುನೋವಾದಾಗ ಗಂಡ ಕಾಲೊತ್ತೊವದು, ಕಾಲಿನ ನೋವನ್ನು ಕಡಿಮೆ ಮಾಡಿ ಎಂದು ಹೆಂಡತಿ ಕೇಳುವದು ಸರ್ವಥಾ ಅಪರಾಧವಲ್ಲ.. 
  
  ಪಾಂಡವರು ವನವಾಸದಲ್ಲಿದ್ದಾಗ ಬದರಿಕಾಶ್ರಮಕ್ಕೆ ಹೊರಟಿರುತ್ತಾರೆ. ಆಗ ಹಿಮಾಲಯದಲ್ಲಿ ಜೋರು ಮಳೆಯಾಗುತ್ತದೆ. ದ್ರೌಪದಿ ಕುಸಿದು ಕೆಳಗೆ ಬಿದ್ದರೆ ಧರ್ಮರಾಜರು ತಮ್ಮ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಾರೆ. ಭೀಮಸೇನದೇವರು ಗಾಳಿ ಬೀಸುತ್ತಾರೆ. ನಕುಲ ಸಹದೇವರು ದ್ರೌಪದಿ ದೇವಿಯರ ಕಾಲನ್ನು ತಮ್ಮ ತೊಡೆಯ ಮೇಲಿಟ್ಟುಕೊಂಡು ದ್ರೌಪದಿಯನ್ನು ಸಾಂತ್ವನಗೊಳಿಸುವ ಘಟನೆಯನ್ನು ಮಹಾಭಾರತದಲ್ಲಿ ಕೇಳುತ್ತೇವೆ. 
  
  ಕ್ರಿಯೆಯ ಹಿಂದಿನ ಭಾವನೆ ಅತೀ ಮುಖ್ಯ. ಗಂಡ ಸೇವಕನಂತೆ ಹೆಂಡತಿಯ ಕಾಲೊತ್ತಬಾರದು. ಆದರೆ ಪ್ರೇಮದಿಂದ ಅವಳ ಕಾಲಿನ ನೋವನ್ನು ಪರಿಹರಿಸುವದು ಗಂಡನ ಕರ್ತವ್ಯ. ಶುದ್ಧ ಧರ್ಮ. 
 • Santosh Patil,Gulbarga

  10:00 PM, 29/04/2020

  Tnx Gurugale
 • DESHPANDE P N,BANGALORE

  1:58 PM , 29/04/2020

  S.Namaskargalu. Anugrahvirali
 • Vishwnath MJoshi,Bengaluru

  7:37 PM , 28/04/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ 
  ಇವತ್ತಿನ ರಾಮಾಯಣದ ಪ್ರವಚನದಲ್ಲಿ ಜನಕ ಮಹಾರಾಜರು ವೀರ್ಯ ಸ್ವಯಂವರವನ್ನು ಏರ್ಪಡಿಸಿದ್ದರು ಎಂದು ತಿಳಿಸಿದ್ದೀರಿ. ವಿವಿಧ ರಿತಿಯ ಸ್ವಯಂವರಗಳ್ಳನು ದಯವಿಟ್ಟು ತಿಳಿಸಿ ಕೊಡಿ ಎಂದು ಕೋರುತ್ತೇನೆ
   ಧನ್ಯವಾದಗಳು ಗುರುಗಳೆ

  Vishnudasa Nagendracharya

  ಅವೆಲ್ಲ ವಿಸ್ತಾರವಾದ ವಿಷಯಗಳು. ಮುಂದೆ ಆ ವಿಷಯದ ಕುರಿತು ಮಾತನಾಡುವಾಗ ತಿಳಿಸುತ್ತೇನೆ. 
  
  
 • Siddharth M,Bangalore

  4:58 PM , 28/04/2020

  ಇಂದಿನ ಪ್ರವಚನವಂತೂ ಅತ್ಯದ್ಭುತವಾಗಿತ್ತು ಆಚಾರ್ಯರೆ... ರಾಮಾಯಣದ ಆರಂಭದಲ್ಲಿ ವಾಲ್ಮೀಕಿ ಋಷಿಗಳು ರಾಮಾಯಣವನ್ನು ನಮ್ಮ ಕಣ್ಣಮುಂದೆ ಕಟ್ಟಿದಂತೆ ರಚಿಸಿದ್ದಾರೆ ಎಂದು ಹೇಳಿದ್ದೀರಿ.... ಆದರೆ ಸಂಸ್ಕೃತ ಬಾರದ ನಮ್ಮಂತಹ ಪಾಮರರಿಗೆ ಆ ಅನುಭವವನ್ನು ನೀಡುತ್ತಿರುವ ನಿಮಗೆ ಶತಶತ ಪ್ರಣಾಮಗಳು...
  
  ದೇವರ ಅನುಗ್ರಹ..., ಈ ಪ್ರವಚನ ಶುಕ್ರವಾರ ಪ್ರಕಟವಾಗದೆ ಇರುವುದು... ಇಲ್ಲವೆಂದರೆ ಮುಂದಿನ ಪ್ರವಚನಕ್ಕೆ ಕಾಯುವುದಿನ್ನೂ ಕಷ್ಟವಾಗುತ್ತಿತ್ತು... ಯಾವುದಾದರೊಂದು important announcementಗೆ timer haktare nodi,ಹಾಗಾಗಿದೆ ಇಂದು... ನಾಳೆಯ ಪ್ರವಚನಕ್ಕಿನ್ನೂ ಬರೊಬ್ಬರಿ ೧೧ ಗಂಟೆ...
  
  ಭಾಗವತದಲ್ಲಿ ಅರ್ಜುನನಾಗಮನಕ್ಕೆ ಧರ್ಮ ರಾಜ ಕಾತುರನಾಗಿ ಕಾಯುತ್ತಿರುವಾಗ ಒಂದೊಂದು ದಿನವೂ ವರ್ಷದಂತೆ ಕಳೆಯಿತು ಎಂದಿದ್ದೀರಿ... ಹಾಗೆಯೇ ಆಗಿದೆ ಇಂದು... ಒಂದೊಂದು ಗಂಟೆಯೂ ಒಂದೊಂದು ದಿನವಂತಾಗುತ್ತಿದೆ...🙏🙏🙏🙏 ಹರಹರ ಮಹಾದೇವ....ಜೈ ಶ್ರೀರಾಮ!!!
 • Vikram Shenoy,Doha

  2:31 PM , 28/04/2020

  ಆಚಾರ್ಯರ ನಿಮ್ಮ ಪ್ರವಚನ ಕೇಳಿದಾಗ ಎಲ್ಲ ಕಲಿ ಕಲ್ಮಷ ನಿರ್ಮೂಲವಾದ ಭಾವನೆ. ಅನಂತಕೋಟಿ ಧನ್ಯವಾದಗಳು...
 • Jayashree Karunakar,Bangalore

  3:09 PM , 28/04/2020

  ನಾಳೆಯು ಬೇಗನೆ ಬರಲಿ ಅಂತ ನಮಗಾಗಿ ಪ್ರಾಥ೯ನೆ ಮಾಡಿ ಗುರುಗಳೆ...
  
  ನಾವೂ ಪ್ರಾಥ೯ನೆ ಮಾಡುತ್ತೇವೆ...
  ಭಾಗ್ಯದಾ ಲಕ್ಷ್ಮಿ ಬಾರಮ್ಮಾ....ಅಂತಾ...
  ಆ ಸೀತಾಮಾತೆಯ ದರುಶನಕ್ಕಾಗಿ...🙏
  ಆನಂದಾಶ್ರುಗಳು ಜಾರುತ್ತಲಿದೆ...ಮಾತುಗಳು ಬಾರದಾಗಿದೆ...
  ಹೌದು ಗುರುಗಳೆ ಮೂಡಿಬರುತ್ತಿರುವ ರಾಮಾಯಣದ ವಣ೯ನೆಯು ಶಬ್ದಗಳಿಗೆ ನಿಲುಕದ ವೈಭವವಾಗಿದೆ...
  
  "ಈಗಿನವರೆಂತೆ ವ್ಯಥ೯ವಾದ ಕೆಲಸಮಾಡಿ ದೇಹವನ್ನು ಹುರಿಗಟ್ಟಿಸಿಕೊಳ್ಳವದಲ್ಲ...
  ಅಂದಿನ ಕಾಲದವರು ತಮ್ಮ ಕಾಯ೯ವ್ಯಾಪ್ತಿಯಲ್ಲಿ ಬರುವ ಕೆಲಸಗಳನ್ನೇ ಮಾಡಿ ಮಾಡಿ ತಮ್ಮ ದೇಹಗಳನ್ನು ಹುರಿಗಟ್ಟಿಸಿಕೊಳ್ಳುತಿದ್ದರು."
  ಎಂತಹ ಅಥ೯ಪೂಣ೯ವಾದ ಮಾತು. ಜ್ಯಾ ಬಂಧನದ ವಿವರಣೆಯು ಹೆಂಗಸರಿಗೂ ಮೖರೋಮಾಂಚನವಾಗುವಂತಿದೆ...ಎಲ್ಲಿಯೂ ಕೇಳಿರದ ಅದ್ಭುತವಾದ ಜ್ಞಾನ ದೊರೆಯಿತು...
  
  ಇನ್ನು ಆ ಜನಕ ಮಹಾರಾಜರು ಎದುರಿಗೆ ಬಂದ ರಾಮಚಂದ್ರನನ್ನು  ರಾಮಚಂದ್ರನನ್ನಾಗಿ ಕಾಣದೆ...ತನ್ನ ಹೃದಯದ ಅಂತಯಾ೯ಮಿಯನ್ನಾಗಿ ಕಂಡ ಪುಣ್ಯವದೆಷ್ಟೊ....
  
  ಅನಂತಕೋಟಿ ಬ್ರಹ್ಮಾಂಡದ ನಾಯಕ ರಾಮಚಂದ್ರನ ಸೌಂದಯ೯ವನ್ನು ಆ ಹೆಣ್ಣುಮಕ್ಕಳು ಕಣ್ತುಂಬಿಸಿಕೊಂಡು ತಮ್ಮೊಳಗೆ ಮಾತನಾಡಿಕೊಳ್ಳುವ ಪರಿ....ಅಬ್ಬಾ!!
  
  ಅಪ್ರಾಕೃತವಾದ ಸೌಂದಯ೯ವಿದು...
  ಬ್ರಹ್ಮದೇವರಿಂದ ನಿಮಾ೯ಣವಾದ ಸೌಂದಯ೯ವಲ್ಲ...ಅಬ್ಬಾ!! 
  
  "ಹರ ಹರ ಮಹಾದೇವ...!!! 
  
  ಎನ್ನುತ್ತಾ ರುದ್ರದೇವರ ಸನ್ನಿಧಾನದ ಫಲವಾಗಿ ಧನುಷ್ಯವನ್ನು ಆ ಕಿಂಕರರು ಹೊತ್ತು ತಂದರು" ಅನ್ನುವ ಭಾಗವಂತೂ....ನಾವೇ ಆ ಮೆರವಣಿಗೆಯಲ್ಲಿ ನಿಂತು ನೋಡಿದಂತಾಯಿತು....
  ಅದನ್ನೊಮ್ಮೆ ಮುಟ್ಟಿ ಕೃತಾಥ೯ರಾದ ಭಾವ...
  
  ಹರ ಹರಾ ಮಹಾದೇವ.... !!! 🙏
 • Vidhya,Gobichettipalayam

  11:42 AM, 28/04/2020

  ಗಂಗಾ ಪ್ರವಾಹದಂತೆ ಧನುಸಿನ ವೈಭವವನ್ನು ಅದ್ಭುತ ರೀತಿಯಲ್ಲಿ ನಮಗೆ ವಿವರಿಸಿದಿರಿ. ನಾವು ಅಲ್ಲಿ ಮಿಥಿಲಾ ಪಟ್ಟಣದಲ್ಲಿ ಜನಗಳ ಮಧ್ಯೆ ಕೂತು ನೋಡುತಿದ್ದೇವೋ ಎಂಬ ಭಾವನೆ ಆಯಿತು. ಹೆಂಗಸರ ಮಾತನು ಕೇಳಿ ಗಂಡಸರು ಮಾತ್ರ ಅಲ್ಲ ನಮಗೂ ನಗು ಬಂದಿತು. ರಾಮನ ರೂಪ ವರ್ಣನೆ ಕೇಳಿ ಎಂದು ನಾವು ಈ ರಾಮನ ಕಾಣುವೆವೋ ಅಂಥ ಮನಸಿನಲ್ಲಿ ಹಂಬಲ ಉಂಟಾಗಿದೆ. ಅನಂತ ನಮಸ್ಕಾರಗಳು🙏🏻🙇🏻‍♀️
 • Niranjan Kamath,Koteshwar

  7:58 AM , 28/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಓಹೋ ಏನೊಂದು ವರ್ಣನೆ ಗುರುಗಳೇ...ಮಾತೇ ನಿಂತುಹೋಗಿದೆ. ಇಲ್ಲಿ ಕೇಳಲು ಕುಳಿತಲ್ಲಿಂದ ಏಳಲು ಮನಸೇ ಒಪ್ಪುತ್ತಿಲ್ಲ...ಆ ಪ್ರಸಂಗ ಕಣ್ಣೆದುರು ನೆಡೆಯುತ್ತಲೇ ಇದೆ. ಆ ಜನಕ ಮಹಾರಾಜರ ಆಸ್ಥಾನ, ಅಲ್ಲಿ ನೆರದ ರಾಜ ಮಹಾರಾಜ, ಪ್ರಜೆಗಳು, 5000 ಜನ ಎಳೆದು ತರುವಷ್ಟು ಉದ್ದನೆಯ ವಿಸ್ತಾರವಾದ ಅರಮನೆಯ ಪ್ರಾಕಾರ, ವಿಶ್ವಾಮಿತ್ರರ ಆದೇಶ, ಜನಕ ಮಹಾರಾಜರ ತವಕ, ಹೆಣ್ಣು ಮಕ್ಕಳು ಪುರುಷರು ಆಡಿಕೊಳ್ಳುವ ಮಾತುಗಳು, ಕಡೆಯಲ್ಲಿ ಆಜಾನುಬಾಹು ಅರವಿಂದ ನಯನ ಶ್ರೀ ರಾಮಚಂದ್ರ ಎದ್ದು ಬರುವುದು...ಆ ಜಗನ್ಮಾತೆ ಸೀತಾದೇವಿಯು ಓಡಿ ಬಂದಂತೆ ಭಾಸವಾಗುತ್ತಿದೆ. ನಾಳೆ ಬೇಗ ಬರಲಿ. ಧನ್ಯೋಸ್ಮಿ ..ಧನ್ಯೋಸ್ಮಿ...ಧನ್ಯೋಸ್ಮಿ...ಜಯ ಹೋ ವಿಶ್ವನಂದಿನಿ...ಗುರುಭ್ಯೋ ನಮಃ.