Upanyasa - VNU917

ಧನುರ್ಭಂಗ

ಶ್ರೀಮದ್ ರಾಮಾಯಣಮ್ — 35 

ಸಕಲ ಇಂದ್ರಾದಿ ದೇವತೆಗಳಿಗೂ ಎತ್ತಲಿಕ್ಕೆ ಸಾಧ್ಯವಿಲ್ಲದ, ಮಹಾಬಲಿಷ್ಠವಾದ ಶಿವಧನುಷ್ಯವನ್ನು ಐರಾವತ ಕಬ್ಬಿನ ಜಲ್ಲೆಯನ್ನು ಲೀಲೆಯಿಂದ ಮುರಿಯುವಂತೆ ರಾಮದೇವರು ಮುರಿದು ಹಾಕಿದ ರೋಮಂಚಕಾರಿ ಪ್ರಸಂಗದ ಚಿತ್ರಣ. 

ಶ್ರೀರಾಮದೇವರು ಪ್ರತಿದಿವಸ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಬೇಕಾದರೆ ಸಾಮಾನ್ಯವಾದ ಧನುಷ್ಯವನ್ನೇ ಗುರುಗಳು ನೀಡುತ್ತಿದ್ದರು, ಅದನ್ನು ರಾಮದೇವರು ಹೆದೆಯೇರಿಸುತ್ತಿದ್ದರು, ಅವು ಮುರಿಯುತ್ತಿರಲಿಲ್ಲ. ಆದರೆ, ದೇವತೆಗಳಿಗೂ ಎತ್ತಲಿಕ್ಕಾಗದ ಶಿವಧನುಷ್ಯ ಮುರಿದು ಬಿತ್ತೇಕೆ? 

ಶಿವಧನುಷ್ಯದ ಮೇಲೆ ರಾಮದೇವರು ಹೆಚ್ಚಿನ ಶಕ್ತಿಯನ್ನು ಪ್ರಯೋಗ ಮಾಡಿದರು ಎಂದು ಹೇಳಿದರೆ, ಲೀಲೆಯಿಂದ ಧನುರ್ಭಂಗ ಮಾಡಿದುರು ಎಂಬ ವಾಲ್ಮೀಕಿ ರಾಮಾಯಣದ ಮಾತು ಕೂಡುವದಿಲ್ಲ. 

ಈ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ. 

Play Time: 31:16

Size: 7.24 MB


Download Upanyasa Share to facebook View Comments
2844 Views

Comments

(You can only view comments here. If you want to write a comment please download the app.)
 • Santosh Patil,Gulbarga

  8:56 AM , 29/01/2021

  Thanks Gurugale🙏
 • Abburu Rajeeva,Channapattana

  10:30 PM, 08/09/2020

  🙏🙏🙏
 • Padmini Acharya,Mysuru

  5:42 AM , 05/05/2020

  🙏ಶ್ರೀ ಗುರುಭ್ಯೋ ನಮಃ🙏
  
  ಗಂಗಾ ಪ್ರವಾಹದಂತಹ ಉಪನ್ಯಾಸ......
  
  ಭಗವಂತ ಶಿವ ಧನುಷ್ಯವನ್ನು ಯಾಕಾಗಿ ಮುರಿದು ಹಾಕಿದ ಎಂಬ ವಿಷಯದ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ
 • Abhishek,Kalaburagi

  8:51 PM , 04/05/2020

  ಆಚಾರ್ಯರಿಗೆ ನಮಸ್ಕಾರಗಳು.
  
  
  ಆಚಾರ್ಯರೇ
  
  
  ರಾಮ ತನ್ನ ಗುರುಗಳನ್ನ ಈ ಧನುಷ್ಯ ಎತ್ತಲಾ ಎಂದು ಪ್ರಶ್ನೆ ಮಾಡುವುದು ಎಂದು ಹೇಳಿದ್ದೀರಿ.
  
  
  ಆದರೆ ತವಕಾದಲ್ಲಿದ್ದ ಜನಕ ಮಹಾರಾಜರು ಅದಕ್ಕೆ ಉತ್ತರಿಸುತ್ತಾರೆ.
  
  
  ಈ ಪ್ರಸಂಗದಲ್ಲಿ ಜನಕ ಮಹಾರಾಜರು ವಿನಯ ಮೀರಿದ ಹಾಗೆ ಆಗುತ್ತಲ್ಲವೇ?
  
  
  ದೊಡ್ಡವರಿಗೆ ಪ್ರಶ್ನೆ ಕೇಳಿದಾಗ ಅವರ ಉತ್ತರಕ್ಕೂ ಕಾಯದೆ ಅವರಿಗಿಂತ ಸಣ್ಣವರು ಉತ್ತರಿಸುವುದು ಸಮಂಜಸವೆ?
  
  
  
  ಪ್ರಶ್ನೆ ತಪ್ಪಾದರೆ ಕ್ಷಮಿಸಬೇಕೆಂದು ಪ್ರಾರ್ಥನೆ.
  
  
  ಉತ್ತರಿಸಬೇಕಾಗಿ ವಿನಂತಿ
 • Suraj Sudheendra,Bengaluru

  2:41 PM , 30/04/2020

  Gurugale, shivadhanushyavu bahala dodda gatraddalla, saamanya gaatraddu aadre adannu yettalikkagi indradi devategalindalu saadyaviruvudilla vendu haagu adannu 8 chakrada gaadiyalli , manjushadalli, ittu 5000 balishta janaru tandarendu adbutavaagi tilisideeri.
  Aa manjushavannu 5000 jana ottige yeledu tarabekaadare adara gaatra aste doddadaagitte athava samanya gaatrada manjushavannu rathavannu yeleyuva haage tandare yembudanna tilisabekagi vinanti.

  Vishnudasa Nagendracharya

  ಧನುಷ್ಯ ಎನ್ನುವದು ಸಾಧಾರಣ ಗಾತ್ರದ್ದು. ಅದರ ಮಂಜೂಷಾ ಸಹಿತ ಅದಕ್ಕೆ ತಕ್ಕುದಾದ ಗಾತ್ರದ್ದು. ಆದರೆ, ಅದರ ಭಾರದಿಂದ ಅದನ್ನು ಎತ್ತಲು ಇತರರಿಗೆ ಸಾಧ್ಯವಾಗುತ್ತಿರಲಿಲ್ಲ. “ಹನುಮಂತದೇವರ ಬಾಲದಂತೆ” ಬಾಲ ಸಣ್ಣದೇ, ಆದರೆ ಅದರ ಭಾರ ಅಧಿಕವಾಗಿತ್ತು. ಹೀಗಾಗಿ ಆ ಮಂಜೂಷಾವನ್ನು ಐದು ಸಾವಿರ ಜನರು ಮುಂದಿನಿಂದ ಎಳೆಯುತ್ತ ಹಿಂದಿನಿಂದ ತಳ್ಳುತ್ತ ತಂದರು. ರಥವನ್ನು ಎಳೆಯುವಂತೆ. 
  
  ಆ ಧನುಷ್ಯ ದೇವಲೋಕದ ಅತ್ಯಪೂರ್ವ ಧಾತುವಿನಿಂದ ಕೂಡಿದ್ದು. ಹೀಗಾಗಿ ಗಾತ್ರ ಅಲ್ಪವಾದರೂ ಭಾರ ಅಧಿಕವಾಗಿತ್ತು. 
 • DESHPANDE P N,BANGALORE

  2:21 PM , 30/04/2020

  S.Namaskargalu Anugrahvirali
 • Vishwnath MJoshi,Bengaluru

  4:16 PM , 29/04/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ 
  
  ಪ್ರತಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮುಂಜಾನೆ 04:೦೦ ಘಂಟೆಗೆ ನಿಮ್ಮ ಪ್ರವಚನ ಬರುತ್ತದೆ. ಬೆಳಗಿನ ಜಾವಾ ನಿಮ್ಮ ಪ್ರವಚನ ಕೇಳಿ ,ಅದರೆ ಜೊತೆಗೆ ಶ್ರೀರಾಮ ನಾಮ ಮತ್ತು ಋಷಿಗಳ ನಾಮಸ್ಮರಣೆಯನ್ನು ಕೇಳಿ. ಅತ್ಯುತ್ತಮವಾದ ಭಾವನೆ ಬರುತ್ತೆದೆ.
 • Srikanth v,Bangalore

  1:04 PM , 29/04/2020

  ವಿಷ್ಣು ಭಕ್ತರಾದ ಆಚಾಯ೯ರಿಗೆ ವಿನಯ ಭಕ್ತಿ ಪೂವ೯ಕ ನಮಸ್ಕಾರಗಳು. ರಾಧಸ ಶಬ್ದದ ಅಥ೯ ಶುಕಗೀತೆಯಲ್ಲಿ ಕೇಳಿದ್ದೆವು, ಶ್ರೀರಾಮಚಂದ್ರನ ಶಿವ ಧನುಶ್ಯದ ಭಂಗದ ಪ್ರಸಂಗದಲ್ಲಿ ಇನ್ನೂ ಸ್ಪಷ್ಟವಾಯಿತು. ನಮಗೂ ಅನಂತ ಆನಂದವಾಯಿತು,  ಅದನ್ನು ತಿಳಿಸಿದ ನಿಮಗೆ ಅನಂತ ಧನ್ಯವಾದಗಳು.
  ಜೈ ಜೈ ಶ್ರೀರಾಮಹರೇ ಜೈ ಜೈ ಶ್ರೀಕೃಷ್ಣಹರೇ
 • Vikram Shenoy,Doha

  1:00 PM , 29/04/2020

  ಆಚಾರ್ಯರಿಗೆ ಅನೇಕ ಕೋಟಿ ನಮನಗಳು. ವೈಕುಂಠ ಲೋಕದಲ್ಲಿ ಶ್ರಿ ರಾಮ ದೇವರು ಅವರ ರಾಮ ದೇವರ ರೂಪದಲ್ಲಿ ಇರುತ್ತಾರೆಯೇ ??
 • Vijay Kulkarni,Bengaluru

  10:40 AM, 29/04/2020

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು.
  ವಿಶ್ವಾಮಿತ್ರರು ಯಜ್ಞ ರಕ್ಷಣೆ ಗಾಗಿ ಶ್ರೀ ರಾಮ ದೇವರು ಮತ್ತು ಶ್ರೀ ಲಕ್ಷ್ಮಣರನ್ನು ಕರೆದುಕೊಂಡು ಹೋಗುವಾಗಲೇ ಶ್ರೀ ದಶರಥ ಮಹಾರಾಜರಿಗೆ ಶ್ರೀ ರಾಮ ದೇವರ ಮದುವೆ ಬಗ್ಗೆ ವಿಚಾರ ಬಂದಿತ್ತು. ನಂತರ ವಿಶ್ವಾಮಿತ್ರರು ಅಯೋಧ್ಯೆಗೆ ಬಂದು ಜನಕ ಮಹಾರಾಜರ ಬಿಲ್ಲು ಪರೀಕ್ಷೆ ಯಲ್ಲಿ ಶ್ರೀ ರಾಮರು ಗೆದ್ದು ಸೀತಾದೇವಿಯರನ್ನು ಮದುವೆ ಆಗುತ್ತಾರೆ. ಈ ಪರಿಸ್ಥಿತಿ ಯಲ್ಲಿ
  ಶ್ರೀ ರಾಮರು ಅಥವಾ ವಿಶ್ವಾಮಿತ್ರರು ದಶರಥ ಮಹಾರಾಜರ ಒಪ್ಪಿಗೆ ಕೇಳುವುದಿಲ್ಲ.
  ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು. ಮದುವೆ ವಿಷಯದಲ್ಲಿ ತಂದೆ ಗಿಂತ ವಿಶ್ವಾಮಿತ್ರರ ನಿರ್ಣಯವೇ ಅಂತಿಮವೇ ?

  Vishnudasa Nagendracharya

  ದಶರಥಮಹಾರಾಜರಿಲ್ಲದೇ ಮದುವೆಯಾಯಿತು ಎಂದು ಎಲ್ಲಿಯೂ ಹೇಳಿಲ್ಲ. 
  
  ವಿಶ್ವಾಮಿತ್ರರ ಜೊತೆಯಲ್ಲಿ ಬಂದ ರಾಮದೇವರು ಧನುರ್ಭಂಗ ಮಾಡುತ್ತಾರೆ. 
  
  ಆ ನಂತರ ವಿಶ್ವಾಮಿತ್ರರ ಆದೇಶದಂತೆ ಜನಕ ಮಹಾರಾಜರು ದಶರಥಮಹಾರಾಜರನ್ನು ಆಹ್ವಾನಿಸುತ್ತಾರೆ. 
  
  ದಶರಥ ಮಹಾರಾಜರು ಚತುರಂಗಬಲಸಮೇತರಾಗಿ ಬರುತ್ತಾರೆ. 
  
  ಆ ಬಳಿಕ ವಾಗ್ದಾನ ನಡೆಯುತ್ತದೆ. 
  
  ಆ ನಂತರ ಮದುವೆ. 
  
  ದಶರಥ ಮಹಾರಾಜರಿಲ್ಲದೇ ಮದುವೆಯಾಗುವದಿಲ್ಲ. 
  
  ಮುಂದೆ ಈ ಎಲ್ಲವನ್ನೂ ಕೇಳುತ್ತೀರಿ. 
 • Niranjan Kamath,Koteshwar

  8:21 AM , 29/04/2020

  ರಾಮಾಯಣದ ರಚನೆ, ಅಯೋಧ್ಯೆಯ ಮಹಿಮೆ, ಯಜ್ಞ ಮಾಡಿದ ಪರಿ, ಋಶ್ಯ ಶಂಗರ ವಿಚಾರ, ಮಳೆ ತರಿಸಿದ್ದು, ಪುತ್ರಕಾಮೇಷ್ಟಿ ಯಾಗ, ಶ್ರೀ ರಾಮನ ಜನ್ಮ, ಅಣ್ಣ ತಮ್ಮಂದಿರ ಬಾಲ್ಯ, ವಿಶ್ವಾಮಿತ್ರ ವಿಚಾರ, ಅಸ್ತ್ರಗಳನ್ನು ಒಪ್ಪಿಸಿದ ರೀತಿ, ಸಿದ್ದಾಶ್ರಮ, ಯಜ್ಞ ರಕ್ಷಣೆ, ಆಹಲ್ಯಾ ದೇವಿಯರ ವೃತ್ತಾಂತ, ನಂತರ ಶತನಂದರು ವಿಶ್ವಾಮಿತ್ರರಲ್ಲಿ ಶ್ರೀ ರಾಮನು ಅವರ ಮಾತ ಪಿತರಲ್ಲಿ ವ್ಯವಹರಿಸಿದ ಪರಿ ಕೇಳುವುದು, ಆಹಾ!! ಅಲ್ಲೇ ಇದ್ದು ಅದನ್ನೇ ಕೇಳುವ ಎಂದೆನಿಸಿತು. ಈಗ ಸೀತಾಮತೆಯ ಜನ್ಮ, ಶಿವಧನಸ್ಸು, ಅದರ ಮಹಿಮೆ, ಅದನ್ನು ಮುರಿದು ಶ್ರೀ ರಾಮ ವಿಶ್ವಾಮಿತ್ರರನ್ನೇ ಮುಗುಳು ನಗುತ್ತಾ ನೋಡಿದ ಪರಿ ಕೇಳುವಾಗ ..ಸಾಕು...ಇದನ್ನೇ ಹೇಳುತ್ತಲೇ ಇರಿ ಎಂಬಂತೆ, ಆ ಘೋರ ಶಬ್ದಕ್ಕೆ ಬೆಚ್ಚಿಬಿದ್ದ ಪರಿ, ಕೊನೆಯಲ್ಲಿ ನಾಳೆ ಸೀತಾದೇವಿಯವರು ಶ್ರೀ ರಾಮನ ಜೊತೆ ನಿಲ್ಲುವುದು ಎನ್ನುವಾಗ, ಇದೆಲ್ಲ ಮರೆತು ..ಆಹಾ ನಾಳೆಯದನ್ನು ಈಗಲೇ ಹೇಳಿ ಎನ್ನುವಂತೆ ಭಾಸವಾಗುತ್ತಿದೆ. ಎನೊಂದು ತಳಮಳ, ಏನೊಂದು ಖುಷಿ...ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ .🙏🚩
 • Niranjan Kamath,Koteshwar

  8:07 AM , 29/04/2020

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಮೊಟ್ಟ ಮೊದಲ ಉಪನ್ಯಾಸ ಕೇಳುವಾಗ ಇದನ್ನೇ ಹೇಳುತ್ತಲೇ ಇರಲಿ ಇದನ್ನೇ ವಿವರಿಸುತ್ತಿರಲಿ ಎಂದೆನಿಸಿತು. ಮುಂದಿನದನ್ನು ಹೇಳುವಾಗ ಪುನಃ ಇದನ್ನೇ ಹೇಳುತ್ತಿರಲಿ ಎಂದೆನಿಸಿತು.
 • deashmukhseshagirirao,Banglore

  7:15 AM , 29/04/2020

  🙏🏻🙏🏻🙏🏻🙏🏻🙏🏻