ಶ್ರೀಮದ್ ರಾಮಾಯಣಮ್ — 36
ಪರಮಾದ್ಭುತ ಸೌಂದರ್ಯದ ಸೀತಾದೇವಿಯರು ಭಕ್ತಿ, ಪ್ರೇಮ, ನಾಚಿಕೆಗಳಿಂದ ನಡೆದು ಬಂದು ಶೃಂಗಾರವಾರಿಧಿಯಾದ ಶ್ರೀರಾಮಚಂದ್ರದೇವರ ಕೊರಳಿಗೆ ಹಾರ ಹಾಕಿದ ಪರಮಮಂಗಳ ಘಟನೆಯ ಚಿತ್ರಣ ಇಲ್ಲಿದೆ. ಕೇಳಿಯೇ ಆನಂದಿಸಬೇಕಾದ ಭಾಗ.
(You can only view comments here. If you want to write a comment please download the app.)
Abburu Rajeeva,Channapattana
10:09 PM, 12/09/2020
🙏🙏🙏
Sampada,Belgavi
7:07 AM , 02/05/2020
ಧನುಷ್ಯ ಭಂಗದ ಶಬ್ದ ಮೂರು ಲೋಕಕ್ಕೆ ವ್ಯಾಪಿಸಿ ಮಂಗಳವಾದ ವಿಷಯವನ್ನು ಮುಟ್ಟಿಸುವ ಕಹಳೆಯಾಗಿ ರಾಮಚಂಗ್ರ ತನ್ನ ಪರಾಕ್ರಮದಿಂದ ಸೀತಾಪತಿ ಆದ … ರಾಜಹಂಸದ ನಡಿಗೆಗೂ ಸಾಟಿಯಾಗದ ನಡಿಗೆಯಲ್ಲಿ ಸೀತಾದೇವಿಯರು ಮೆಲ್ಲ ಮಲ್ಲನೆ ನಡೆದು ಬರುವಾಗ ಆದ ಕಾಲಿನ ಗೆಜ್ಜೆ ಶಬ್ದ .. ನಿಶ್ಶಬ್ದವಾಗಿ ಕಣ್ಣರಳಿಸಿ ನಿಂತು ನೋಡುವ ಜನ… ಅದ್ಭುತವಾದ ವರ್ಣನೆ 🙏🙏 ಶ್ರೀರಾಮನ ಸೌಂದರ್ಯ ಕಂಡು.. ಸೀತಾದೇವಿಯರು ಆ ಒಡೆಯನಿಗೆ ನಾನು ಸಾಟಿಯೆ ಎಂದು ನಾಚಿಕೊಂಡ ಆ ಕ್ಷಣ ನಮ್ಮ ಮುಖದ ಮೇಲೂ ಆನಂದದ ಮಂದಹಾಸ ಬೀರಿಸಿತು. ಅದ್ಭುತವಾದ ಉಪನ್ಯಾಸ. 🙏🙏
Santosh Patil,Gulbarga
9:52 PM , 02/05/2020
Tnx Gurugale 💐
Jayashree Karunakar,Bangalore
9:03 PM , 30/04/2020
ಮೂರು ಲೋಕಗಳನ್ನೂ ವ್ಯಾಪಿಸಿದ ಶಿವ ಧನುಷ್ಯದ ಧ್ವನಿಯು ಮಂಗಳ ವಾದ್ಯದಂತೆ ಮೊಳಗಿದೆ.....
ಆಗ.....
ಬ್ರಹ್ಮದೇವರಿಂದ ನಿರಂತರವಾಗಿ, ಸುಲಲಿತವಾಗಿ ವೇದವಾಣಿಯು ಹೊರಹೊಮ್ಮುವಂತೆ!!!!! ಸೌಂದಯ೯ದ ದೇವತೆಯಾದ ಸೀತಾದೇವಿಯರು ಅಂತಃಪುರದಿಂದ ಹೊರನಡೆದಿದ್ದಾರೆ...
ಕೈಯಲ್ಲಿ ಎಂದೆಂದೂ ಬಾಡದ ಕಮಲದ ಹಾರವನ್ನು ಹಿಡಿದು.....
ಉಸಿರಾಟವನ್ನೂ ಮರೆತು !!!! ದೇವಲೋಕವೆಲ್ಲ ಮಿಥಿಲಾಪುರದ ಜನರೊಡನೆ ಆ ಪರಮಮಂಗಲ ದೃಶ್ಯವನ್ನು ಕಣ್ತುಂಬಿಸಿಕೊಳ್ಳುತ್ತಲಿದೆ...
ಭಗವಂತನ ವಿಡಂಬನೆಗನುಸಾರವಾಗಿ ಸೀತಾದೇವಿಯರ ವಿಡಂಬನೆಯೂ ನಡೆದಿದೆ....
ಉಸಿರನ್ನು ಬಿಗಿಹಿಡಿದು ನಾವೂ ಶ್ರವಣಮಾಡಿದೆವು....
ಸಂತಸಪಟ್ಟೆವು...
ಆನಂದಾಶ್ರುಗಳೂ ಜಾರಿದವು...
ಆದರೆ ಪೂಣ೯ವಾಗಿ ಅಥ೯ವಾಗುವದು ಈಗಲ್ಲವಂತೆ.....
ವೈಕುಂಠದಲ್ಲಿ ಆ ವೈಕುಂಠನಾಥನ ಮುಂದೆ ನಿಂತು, ಅವನ ಸೇವೆಯನ್ನು ಮಾಡುತ್ತಿರುವ ಮಹಾಲಕ್ಷ್ಮೀದೇವಿಯರನ್ನು ಸಾಕ್ಷಾತ್ತಾಗಿ ಎದುರಲ್ಲಿ ಕಂಡಾಗಂತೆ...!! ಅಬ್ಬಾ...
ಆದಿನವು ಬೇಗನೆ ಬರಲಿ...
ಅಲಿಯ ತನಕವೂ ಈ ಮೋಕ್ಷಪ್ರದವಾದ ಶ್ರವಣ ಭಾಗ್ಯವು ನಿರಂತರವಾಗಿರಲಿ....
ಮನದಲಿ ನಿರಂತವಾದ ಇಂತಹ ಭಕ್ತಿಯ ಆರಾಧನೆ ಮಾಡಿಸುತ್ತಿರುವ ಗುರುಗಳಿಗೆ ನಮನ ...
ಲಜ್ಜೆಯನ್ನು ಧಿಕ್ಕರಿಸಿ...ಭಕ್ತಿಯೆಂಬ ಮಹಾಪ್ರವಾಹದಿಂದ ಕೂಡಿದ ಮನಸ್ಸಿನಿಂದ ತಲೆಯೆತ್ತಿ ಮೆಲ್ಲನೆ ರಾಮಚಂದ್ರನನ್ನು "ನೀನೇ ನನ್ನ ಓಡೆಯ....ಈ ಜಗದೊಡೆಯ" ಅನ್ನುವ ಭಾವತುಂಬಿದ ಮಹಾಲಕ್ಷ್ಮೀದೇವಿಯ ಆ ನೋಟ.....
ಅದ್ಯಾವ ಶಬ್ದಗಳಿಗೂ ನಿಲುಕದ ಆನಂದದ ಭಾವ ನಮ್ಮದಾಯಿತು....ಮತ್ತೆ ಮತ್ತೆ ನಿಲ್ಲದ ಆನಂದಾಶ್ರುಗಳು. ಆ ರಾಮಚಂದ್ರನ ಕಥೆಯನ್ನು ಭಕ್ತಿಯಿಂದ ತಿಳಿಸಿದ ಗುರುಗಳಿಗೆ ಮತ್ತೊಮ್ಮೆ ಭಕ್ತಿಯ ನಮನ...
ಬೇರೆ ಬೇರೆಯ ಬ್ರಹ್ಮಕಲ್ಪಗಳಲ್ಲಿ ಬೇರೆ ಬೇರೆ ಬ್ರಹ್ಮದೇವರು....
ಆದರೆ ಅನಂತಕಾಲಕ್ಕೂ ಒಬ್ಬಳೇ ಮಹಾಲಕ್ಷ್ಮೀದೇವಿ ಪರಮಾತ್ಮನ ಮಡದಿ....ಯಾವ ಚೇತನರೂ ಕಾಣದಷ್ಟು ಅನಂತ ಪರಿಪೂಣ೯ಗುಣಗಳನ್ನು ಭಗವಂತನಲ್ಲಿ ಕಾಣುವ ಜಗದೊಡತಿ....!!!!
ಅಡಿಯಿಂದ ಮುಡಿಯವರೆಗೆ
ಮುಡಿಯಿಂದ ಅಡಿಯವರೆಗೆ...
ಭಗವಂತನ ಸೌಂದಯ೯ವನ್ನು ಆಸ್ವಾದಿಸಿದ ಸೀತಾದೇವಿ...
ಇಂದಿರಾ ಚಂಚಲಾ ಪಾಂಗ ನೀರಾಜಿತಮ್....🙏🙏🙏
ನಾವು ಧನ್ಯರು ಗುರುಗಳೆ....ಈ ದಿನ ಪಡೆದುಕೊಂಡ ಪರಮ ಮಂಗಲ ಕ್ಷಣಗಳು...ಭಾವುಕರನ್ನಾಗಿಸಿತು....🙏🙏
Niranjan Kamath,Koteshwar
7:44 AM , 30/04/2020
ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಅತಿ ಆನಂದ , ಮನಮೋಹಕ , ಭಕ್ತಿಪೂರ್ಣ ವಾಗಿತ್ತು . ಅಲ್ಲಿ ನರೆದಿದ್ದ ಎಲ್ಲರ ಭಾಗ್ಯವೋ ಭಾಗ್ಯ. ಗುರುಗಳೇ , ಒಮ್ಮೆ ಸೀತಾದೇವಿಯರು ತಮ್ಮ ಚಕ್ಕ ವಯಸ್ಸಿನಲ್ಲಿ ತಂಗಿಯರೊಡಗೂಡಿ ಆಟವಾಡುವಾಗ ಚೆಂಡನ್ನು ಅರೆಸಿ ಆ ಶಿವಧನಸ್ಸು ಇದ್ದ ಗಾಡಿಯನ್ನು ಸುಲಭವಾಗಿ ತಮ್ಮ ಒಂದು ಕೈಯಿಂದ ಸರಿಸಿದನ್ನು ಕೇಳಿದ್ದೆ. ಅದರ ಬಗ್ಗೆ ಏನಾದರೂ ವಿಶ್ಲೇಷಣೆ ಕೊಡಬಹುದೇ.? ಧನ್ಯೋಸ್ಮಿ.
Vishnudasa Nagendracharya
ಸೀತಾದೇವಿ ತಮ್ಮ ಕೈಯಿಂದ ಧನುಷ್ಯವನ್ನು ಸರಿಸಿದ್ದ ಘಟನೆ ವಾಲ್ಮೀಕಿರಾಮಾಯಣ, ಸಂಗ್ರಹ ರಾಮಾಯಣ ಮತ್ತು ಆಚಾರ್ಯರ ತಾತ್ಪರ್ಯನಿರ್ಣಯದಲ್ಲಿ ಇಲ್ಲ.
ಪುರಾಣಗಳನ್ನು ಸಂಶೋಧಿಸಬೇಕು.