Upanyasa - VNU919

ಮಿಥಿಲೆಗೆ ದಶರಥರ ಆಗಮನ

ಶ್ರೀಮದ್ ರಾಮಾಯಣಮ್ — 37 

ಜನಕ ಮಹಾರಾಜರು ದಶರಥ ಮಹಾರಾಜರಿಗೆ ಸಂದೇಶ ಕಳುಹಿಸುವ ಕ್ರಮ, ದಶರಥರ ಮುಂದೆ ದೂತರು ನಿವೇದಿಸಿಕೊಂಡ ಕ್ರಮ, ದಶರಥರನ್ನು ಜನಕ ಮಹಾರಾಜರು ಸ್ವಾಗತಿಸಿದ ಕ್ರಮ, ಜನಕ-ದಶರಥರ ವಿನಯ ಸ್ನೇಹ ಪೂರ್ವಕ ನಡೆಗಳು, ನಮ್ಮ ಇಡಿಯ ಬದುಕನ್ನು ಬಂಗಾರಗೊಳಿಸುವ ಅದ್ಭುತ ಪಾಠಗಳು. ಅವುಗಳ ಚಿತ್ರಣ ಇಲ್ಲಿದೆ. ರಾಮ ಲಕ್ಷ್ಮಣರನ್ನು ಕಂಡ ದಶರಥಮಹಾರಾಜರ ಸಂತಸದ ವರ್ಣನೆಯೊಂದಿಗೆ. 

ಸಾಧ್ವಸ ಎಂಬ ಶಬ್ದದ ಅರ್ಥ
ಶ್ರೀ ನಾರಾಯಣಪಂಡಿತಾಚಾರ್ಯರು ವಾಲ್ಮೀಕಿ ರಾಮಾಯಣಕ್ಕೆ ಹೇಳುವ ಅದ್ಭುತ ಅರ್ಥಗಳು

Play Time: 54:42

Size: 1.37 MB


Download Upanyasa Share to facebook View Comments
3322 Views

Comments

(You can only view comments here. If you want to write a comment please download the app.)
 • C Guru Raja Rao,Hyderabad

  1:14 PM , 19/04/2022

  ಆಚಾರ್ಯ ನಮಸ್ಕಾರ. 
  ಶ್ರೀಲಕ್ಷಣರು, ಶ್ರೀಮಧ್ವಾಚಾರ್ಯರ, ಶ್ರೀರುದ್ರರಿಗೆ ಸಮರ್ಪಕಾಗಿ, ಧನುಸ್ಸನ್ನ ಎತ್ತುವ ಮೊದಲಾದ ಕಾರ್ಯಸಮರ್ಥರಲ್ವಾ..??
  ಶ್ರೇಹರಿ ಸಂಕಲ್ಪ ಅರಿತವರಾದ ಕಾರಣ...ಉದ್ಯುಕ್ತರಾಗಲಿಲ್ಲವೆಂದು ತಿಳಿಯಬೇಕು??

  Vishnudasa Nagendracharya

  ಹೌದು. ಶ್ರೀಹರಿಯ ಸಂಕಲ್ಪವನ್ನು ಲಕ್ಷ್ಮಣರು ಅರಿತಿದ್ದರು. 
  
  ಎರಡನೆಯ ಸ್ಪಷ್ಟ ಕಾರಣವೂ ಇದೆ. 
  
  ಜನಕ ಮಹಾರಾಜರು ವಿಶ್ವಾಮಿತ್ರರ ಬಳಿಯಲ್ಲಿ ಮಾತನಾಡುತ್ತ "ರಾಮಚಂದ್ರ ನನ್ನ ಅಳಿಯನಾಗಬೇಕೆಂಬ ಅಪೇಕ್ಷೆ ನನಗೂ ಇದೆ. ಹೀಗಾಗಿ ರಾಮನೇ ಧನುಷ್ಯವನ್ನು ಹೆದೆಯೇರಿಸಲಿ, ನನ್ನ ಮಗಳನ್ನು ರಾಮನು ವರಿಸಬೇಕೆಂದೇ ಈ ಪಂದ್ಯವನ್ನೇರ್ಪಡಿಸಿದ್ದೇನೆ" ಎಂದು ಪರಿಸ್ಪಷ್ಟವಾಗಿ ಶ್ರೀರಾಮರೇ ಹೆದೆಯೇರಿಸಬೇಕೆಂದು ಹೇಳುತ್ತಾರೆ. ಹೀಗಾಗಿ ಲಕ್ಷ್ಮಣರು ಹೆದೆಯೇರಿಸುವ ಪ್ರಸಕ್ತಿಯೇ ಬರಲಿಲ್ಲ. 
  
  ಇನ್ನು ನೀವು ತಿಳಿಸಿದಂತೆ ಶೇಷದೇವರ ಅವತಾರರಾದ ಲಕ್ಷ್ಮಣರಿಗೆ ಅದನ್ನು ಹೆದೆಯೇರಿಸುವ ಸಾಮರ್ಥ್ಯವಿತ್ತು ಎಂದು ತಿಳಿಯಲು ಅಡ್ಡಿಯಿಲ್ಲ. ಆದರೆ ಮುರಿದು ಹಾಕುವ ಸಾಮರ್ಥ್ಯ ಇರಲಿಲ್ಲ. ಕಾರಣ, ವಾಯುದೇವರನ್ನು ಹೊರತು ಪಡಿಸಿದ ಇತರ ದೇವತೆಗಳಿಗೆ ಮೂಲರೂಪದ ಅಷ್ಟೂ ಶಕ್ತಿ ಸಾಮರ್ಥ್ಯಗಳು ಅವತಾರರೂಪದಲ್ಲಿ ಪ್ರಕಟವಾಗುವದಿಲ್ಲ. 
  
  
  
 • Savitri,Koppal

  11:59 AM, 25/05/2020

  ಧನ್ಯೋಸ್ಮಿ ಗುರುಗಳೇ 
  ಅನಂತ ಪ್ರಣಾಮಗಳು ನಿಮಗೆ
 • Sampada,Belgavi

  7:39 PM , 02/05/2020

  ಯೋಗ್ಯತೆಯಲ್ಲಿ ಹಿರಿಯರಾದವರಿಗೆ ಕಿರಿಯರು ನೀಡಬೇಕಾದ ಗೌರವ ಹೇಗಿರಬೇಕು.. ಮತ್ತೊಬ್ಬರನ್ನ ತಿಳಿದ ಮನುಷ್ಯ ಅವರಿಗೆ ಅನಂದವನ್ನುಂಟು ಮಾಡಬೇಕೆಂಬ ಪರಮ ಧರ್ಮದ ವಿಷಯಗಗಳ ಪಾಠ ನಾವು ಕಲಿಯುವಂತಿದೆ. ಮಾತು ಮನಸ್ಸಿನಲ್ಲಿ ಇರುವದನ್ನೇ ಕೃತಿಗೆ ತರಬೇಕು ಅನ್ನುವದನ್ನ ಮನವರಿಕೆ ಮಾಡಿಕೊಡುವ ಉಪನ್ಯಾಸ. ನಿಜಕ್ಕೂ ಕಲಿಯಬೇಕಾದ ಪಾಠಗಳಿವು. 🙏🙏🙏🙏🙏....
 • Abhishek,Kalaburagi

  4:50 PM , 05/05/2020

  ಆಚಾರ್ಯರೆ
  
  
  
  ಮದುವೆಯ ತಿಂಡಿಯಾಗಿ ಇಡ್ಲಿ ಜೊತೆ ಉದ್ದಿನವಡೆ ಮಾಡಿಸುವುದು ತಪ್ಪು ಅಂತ ಹೇಳಿದಿರಿ.
  
  
  
  ಇದರ ಕುರಿತು ತಿಳಿಸಬೇಕಾಗಿ ವಿನಂತಿ

  Vishnudasa Nagendracharya

  ಉದ್ದಿನ ವಡೆಯನ್ನು ಶ್ರಾದ್ಧದಲ್ಲಿ ಮಾತ್ರ ಮಾಡುವ ಪದ್ಧತಿ. ಹೀಗಾಗಿ ಮದುವೆ ಉಪನಯನಗಳಲ್ಲಿ ಅದನ್ನು ಮಾಡಿಸಬಾರದು. ಹಾಗೆಯೇ ಹೆಸರುಬೇಳೆ ರವೆ ಪಾಯಸವನ್ನೂ ಮಂಗಳಕಾರ್ಯಗಳಲ್ಲಿ ಮಾಡಿಸಬಾರದು. 
  
  ಮಂಗಳಕಾರ್ಯದಲ್ಲಿ ಮಾಡುವ ಪದಾರ್ಥಗಳು ಬೇರೆ, ಶ್ರಾದ್ಧಕಾರ್ಯಗಳಲ್ಲಿ ಮಾಡುವ ಪದಾರ್ಥಗಳು ಬೇರೆ. 
 • Siddharth M,Bangalore

  10:10 PM, 03/05/2020

  ಈ ಪ್ರವಚನದಲ್ಲಿ ಸಕಲರಿಗೂ ಕಲಿಯಲು ತುಂಬಾ ಇದೆ‌‌‌‌... ತಂದೆ ತಾಯಿಯರು ಮಕ್ಕಳೊಂದಿಗೆ ಹೇಗಿರಬೇಕು, ಸಂಬಂಧಿಗಳೊಡನೆ ಹೇಗಿರಬೇಕು ಅಂತ‌... ಇಂದು ನನಗೆನಿಸುತ್ತಿದೆ... ನಮ್ಮ ಶಾಲೆಗಳಲ್ಲಿ, Value education ಅಥವ Moral science ಬದಲು ಅಥವ higher primary ಅಲ್ಲಿ ಕೆಲಸಕ್ಕೆ ಬಾರದ ಗ್ರಂಥ "the dairy of a young girl, athava the story of my life ಬದಲುಇಂತಹ ಗ್ರಂಥಗಳನ್ನಿಟ್ಟಿದ್ದರೆ ವಿದ್ಯಾರ್ಥಿಗಳ overall ವ್ಯಕ್ತಿತ್ವ ಎಷ್ಟು ಅಭಿವೃದ್ಧಿಯಾಗುತ್ತಿತ್ತು ಅಂತ.... ಎಲ್ಲರೂ ರಾಮಾಯಣದಲ್ಲಿ ಬರುವ ಪಾಠಗಳನ್ನು ಮನದಟ್ಟು ಮಾಡಿಕೊಂಡು ಸರಿಯಾದ ಪ್ರಸಂಗಗಳಲ್ಲಿ ಬಳಸಿಕೊಂಡರೆ,ಅಂದೇ ರಾಮರಾಜ್ಯವಾಗುವುದು...
 • Santosh Patil,Gulbarga

  9:52 PM , 02/05/2020

  Tnx Gurugale 💐
 • Vishwnath MJoshi,Bengaluru

  10:48 AM, 01/05/2020

  श्रीगुरुभ्यो नमः। अथ गुरुपादौ नमस्करोमि
  
  ಗುರುಗಳಿಗೆ ನಮಸ್ಕಾರ
  
  ಇವತ್ತಿನ ಪ್ರವಚನ ತುಂಬಾ ಚೆನ್ನಾಗಿ ಮೂಡಿ ಬಂದಿದೆ
  ನಾವೆಲ್ಲ ತಿಳಿದಿದ್ದಂತೆ ಜನಕ ಮಹಾರಾಜರಿಗೆ ೪ ಜನ ಹೆಣ್ಣು ಮಕ್ಕಳು ಅಂಥ . ಇವತ್ತಿನ ಪ್ರವಚನ ಕೇಳಿದೆ ಮೇಲೆ ಜನಕ ಮಹಾರಾಜರಿಗೆ ಎರಡು ಹೆಣ್ಣು ಮಕ್ಕಳು.
  ಇನ್ನಿಬ್ಬರು (ಭರತ ಹಾಗು ಶತ್ರುಘ್ನ) ಅವರ ಪತ್ನಿ ಯಾರು ಯಾರು ಮಕ್ಕಳು. ನಿಮ್ಮ ಪ್ರವಚನದಲ್ಲಿ ಒಬ್ಬರ ಹೆಸರು ಹೇಳಿ ದ್ದಿರಿ. ಅವರ ಬಗ್ಗೆ ತಿಳಿಸಿ ಕೊಡಿ. ಹಾಗು ಜನಕ ಮಹಾರಾಜರಿಗೆ ಏನು ಸಂಬಂಧ.
  ದಯವಿಟ್ಟು ತಿಳಿಸಿ ಕೊಡಿ. ಧನ್ಯವಾದಗಳು ಗುರುಗಳೆ.
  
  ಮದುವೆ ಎನ್ನುವುದು ಈಗಿನ ಕಾಲದ ಜನರು ಕಲಿಯ ಬೇಕಾದ ಪಾಠವನ್ನು ತಿಳಿ ಸಿಕೊಟ್ಟಿದ್ದೀರಿ
  
  

  Vishnudasa Nagendracharya

  ಮುಂದಿನ ಉಪನ್ಯಾಸದಲ್ಲಿ ಇದಕ್ಕೆ ಉತ್ತರ ದೊರೆಯುತ್ತದೆ. 
 • Vijay Kulkarni,Bengaluru

  10:50 AM, 01/05/2020

  ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರ ಗಳು..
  ಹಿಂದಿನ ಪ್ರವಚನ ಕೇಳುವಾಗ ಬಂದಿದ್ದ ಪ್ರಶ್ನೆಗಳಿಗೆ ಇಂದಿನ ಉಪನ್ಯಾಸದಲ್ಲಿ ಉತ್ತರ ಸಿಕ್ಕಿತು... ಅನಂತ ಧನ್ಯವಾದಗಳು
 • deashmukhseshagirirao,Banglore

  4:31 AM , 01/05/2020

  🙏🏻🙏🏻🙏🏻🙏🏻🙏🏻