ಶ್ರೀಮದ್ ರಾಮಾಯಣಮ್ — 38
ಮದುವೆ ಎಂದರೆ ಕೇವಲ ಒಂದು ಗಂಡು ಹೆಣ್ಣಿನ ಜೋಡಿ ಒಂದಾಗುವದಲ್ಲ. ಎರಡು ಕುಲಗಳು ಒಂದಾಗುವದು. ಸೂರ್ಯವಂಶ ಮತ್ತು ವಿದೇಹವಂಶಗಳ ಅದ್ಭುತ ಪರಿಚಯದೊಂದಿಗೆ ಜನಕ ಮಹಾರಾಜರು ದಶರಥ ಮಹಾರಾಜರಿಗೆ ಮಾಡಿದ ಮದುವೆಯ ವಾಗ್ದಾನ
(You can only view comments here. If you want to write a comment please download the app.)
Santosh Patil,Gulbarga
9:18 PM , 01/05/2021
💐🙏🙏
Narahari Kambaluru,Bengaluru
8:48 PM , 08/05/2020
ಪೂಜ್ಯ ಆಚಾರ್ಯಾಯ ನಮೋ ನಮಃ 🙏🙏🙏🙏. ದಶರಥ ಮಹಾರಾಜರಿಗೆ ಆ ಹೆಸರು ಬಿರುದಾಗಿ ಬಂದಿರುವುದು ಅಲ್ವಾ ಆಚಾರ್ಯರೆ? ಅವರ ನಿಜವಾದ ಹೆಸರು "ದೀರ್ಘಬಾಹು" ಅನ್ನುವುದು ಸರಿಯೆ ಆಚಾರ್ಯರೆ? ಇದರ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖ ಇದೆಯ ಆಚಾರ್ಯರೆ?
Vishnudasa Nagendracharya
ವಾಲ್ಮೀಕಿ ರಾಮಾಯಣದಲ್ಲಿ, ಸಂಗ್ರಹರಾಮಾಯಣದಲ್ಲಿ, ಆಚಾರ್ಯರ ಗ್ರಂಥಗಳಲ್ಲಿ ಇದರ ಉಲ್ಲೇಖ ಇಲ್ಲ.
ಪುರಾಣಗಳಲ್ಲಿಯೂ ನನಗೆ ಇದುವರೆಗೂ ಕಂಡಿಲ್ಲ.
Chandrika prasad,Bangalore
8:02 PM , 07/05/2020
ಗುರುಗಳಿಗೆ ಪ್ರಣಾಮಗಳು . ನಿಮ್ಮ ಉತ್ತರದಿಂದ ಸಂತೋಷ ಆಯಿತು. ರಾಮ ಸಾಕ್ಷಾತ್ ಭಗವಂತ. ಅವನೇ ಎಲ್ಲರ ಮನಸ್ಸನ್ನು ಪ್ರೇರಣೆ ಮಾಡುವವನು. ಜನಕ ಮಹಾರಾಜ ನೂ ವಿಶ್ವಾಮಿತ್ರ ರ ಆಜ್ಞೆ ಪಾಲಿಸಿದ. ಗುರುಗಳ ನುಡಿ ಎಂದರೆ ಭಗವಂತ ನ ಆಜ್ಞೆ. ಆದ್ದರಿಂದ ಇಲ್ಲಿ ಸೀತಾ ಮಾತೆಯನ್ನು ಕೇಳುವ ಪ್ರಶ್ನೆಯೇ ಬರುವುದಿಲ್ಲ. 30 ವರುಷದ ಹಿಂದೆ ಕಲಿಯುಗದಲ್ಲೇ ತಂದೆ ಮಗಳನ್ನು ಕೇಳಿ ವರನನ್ನು ಆರಿಸುತ್ತಿರಲಿಲ್ಲ . ಅಂತಹುದರಲ್ಲಿ ತ್ರೇತಾಯುಗ ಕೇಳಬೇಕೆ. ತಂದೆಯು ಮಕ್ಕಳೂ ಎಲ್ಲಾ ಬಾಂಧವ್ಯ ಗೌರವ ಮಮತೆ ಎಲ್ಲಾ ಚೆನ್ನಾಗೆ ಇತ್ತಲ್ಲವೇ 🙏🙏🙏
Vishnudasa Nagendracharya
ಸತ್ಯ
Nagaraj H R,Tumkur
7:36 AM , 06/05/2020
ಗುರುಗಳೇ ಮದುವೆಯ ಸಮಯದಲ್ಲಿ ಹೆಣ್ಣಿನ ಒಪ್ಪಿಗೆ ಇಲ್ಲದೇ ಜನಕ ಮಹಾರಾಜರು ಒಪ್ಪಿಗೆ ಕೊಟ್ಟದ್ದು ಸರಿಯಾದ ಕ್ರಮವೇ? ನಾವು ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
Vishnudasa Nagendracharya
ಹೆಣ್ಣುಮಕ್ಕಳ ಒಪ್ಪಿಗೆಯನ್ನು ಅವರನ್ನು ಕೇಳಿಯೇ ಪಡೆಯಬೇಕೆಂಬ ನಿಯಮ ಸಾಮಾನ್ಯರಾದಂತಹ ಮನುಷ್ಯರಿಗೆ. ಕಾರಣ, ಮತ್ತೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ನಮಗಿರುವದಿಲ್ಲ.
ಆದರೆ, ಜನಕ ಮಹಾರಾಜರು, ಕುಶಧ್ವಜರು ತಮ್ಮ ಮಕ್ಕಳನ್ನು ಪೂರ್ಣವಾಗಿ ಅರಿತಿದ್ದವರು. ಮಕ್ಕಳಿಗೆ ಮನಸ್ಸಿದೆ ಎಂದು ತಿಳಿದೇ ಅವರು ನಿರ್ಧಾರ ತೆಗೆದುಕೊಂಡಿದ್ದರು.
ಎರಡನೆಯ ಕಾರಣ —
ಇಂದಿನ ಕಲಿಯುಗದಲ್ಲಿ ಈ ವರ್ತನೆ ವಿಚಿತ್ರ ರೂಪವನ್ನು ಪಡೆದುಕೊಳ್ಳುತ್ತಿದೆ. ರಾಮಾಯಣದ ಕಾಲದಲ್ಲಿ ಸರ್ವಥಾ ಹಾಗಿರಲಿಲ್ಲ. ಇವತ್ತಿನಂತೆ ಇಷ್ಟವಿಲ್ಲದ ಮದುವೆಗಳು, ವಿಚ್ಛೇದನಗಳು ಆಗ ಸರ್ವಥಾ ಇರಲಿಲ್ಲ. ತಮ್ಮ ಮಕ್ಕಳ ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ “ಜವಾಬ್ದಾರಿ” ತಂದೆ ತಾಯಿಯರದೇ ಆಗಿರುತ್ತಿತ್ತು. ತಂದೆ ತಾಯಿಯರೂ ಸಹ ಆ ಜವಾಬ್ದಾರಿಯನ್ನು ಹೊರೆ ಎಂದು ಭಾವಿಸದೇ ಪರಿಪೂರ್ಣವಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಹೀಗಾಗಿ ತಮ್ಮ ಮಕ್ಕಳ ಮನಸ್ಸಿಗೆ, ವಯಸ್ಸಿಗೆ, ಅಭಿರುಚಿಗೆ ತಕ್ಕಂತಹ ವರನಿಗೇ ಮದುವೆ ಮಾಡುತ್ತಿದ್ದರು. ಹೀಗಾಗಿ ಅಂದಿನ ಮಕ್ಕಳು, ನಮ್ಮ ಗಂಡಂದಿರನ್ನು, ನಮ್ಮ ಹೆಂಡತಿಯರನ್ನು ನಾವೇ ಆರಿಸಬೇಕು ಎಂಬ ಔದ್ಧತ್ಯವನ್ನು ತೋರಿಸುತ್ತಿರಲಿಲ್ಲ. ಹೇಗೆ ತನ್ನ ಮಗುವಿಗೆ ಬೇಕಾದ ಆಹಾರವನ್ನು ತಾಯಿ ವಿಚಾರ ಮಾಡಿ ನೀಡುತ್ತಿದ್ದಳೋ, ಹೇಗೆ ತನ್ನ ಮಕ್ಕಳಿಗೆ ಬೇಕಾದ ಶಿಕ್ಷಣವನ್ನು ತಂದೆ ನೀಡುತ್ತಿದ್ದಳೋ ಹಾಗೆಯೇ ಮದುವೆಯನ್ನೂ ಅತ್ಯಂತ ಯೋಗ್ಯನಾದ ವರನಿಗೆ ಕೊಟ್ಟು ಮಾಡುತ್ತಿದ್ದರು. ಹೀಗಾಗಿ ಆಗ ಮದುವೆಗಳು ಮುರಿಯುತ್ತಲೇ ಇರಲಿಲ್ಲ.
ಮೂರನೆಯ ಮತ್ತು ಎಲ್ಲದಕ್ಕಿಂತ ಮಹತ್ತ್ವದ ಕಾರಣ —
ಸಮಗ್ರ ಮನುಕುಲಕ್ಕೆ ಹಿತವನ್ನು ಬಯಸುವ, ಇಡಿಯ ವಿಶ್ವಕ್ಕೆ ಮಿತ್ರರಾದ ಸಾಕ್ಷಾತ್ ವಿಶ್ವಾಮಿತ್ರರೇ ಭರತ ಶತ್ರುಘ್ನರು ಕುಶಧ್ವಜರ ಮಕ್ಕಳನ್ನು ಮದುವೆಯಾಗಲಿ ಎಂದು ಹೇಳುತ್ತಿದ್ದಾರೆ. ಸರ್ವದಾ ಸರ್ವರಿಗೂ ಹಿತವನ್ನು ಬಯಸುವ, ದೇವರ ಮನಸ್ಸಿನ ಅಭಿಪ್ರಾಯವನ್ನು ಬಲ್ಲ ಮಹಾನುಭಾವರೇ, ಈ ಮಾತನ್ನು ಹೇಳಿದಾಗ, ಜನಕ ಮಹಾರಾಜರು, ಕುಶಧ್ವಜರು, ಅವರ ಪತ್ನಿಯರು, ಮಾಂಡವೀ ಶ್ರುತಕೀರ್ತಿಯರು, ದಶರಥರು ದಶರಥರ ಪತ್ನಿಯರು, ಭರತ ಶತ್ರುಘ್ನರು ಎಲ್ಲರೂ ಶಿರಸಾವಹಿಸಿ ತಮ್ಮ ಭಾಗ್ಯ ಎಂದು ತಿಳಿದು ಪಾಲಿಸಿದರು.
DESHPANDE P N,BANGALORE
3:00 PM , 06/05/2020
S.Namaskargalu. Anandamaya. Anugrahvirali
Santosh Patil,Gulbarga
10:03 PM, 05/05/2020
Tnx Gurugale 💐🙏💐
Poornima Sowda,Bangalore
9:07 PM , 04/05/2020
ಗುರುಗಳಿಗೆ ಭಕ್ತಿ ಪೂರ್ವಕವಾದ ನಮಸ್ಕಾರಗಳು🙏 ಇವತ್ತಿನ ಪ್ರವಚನ ಅದ್ಭುತವಾಗಿತ್ತು. ಪ್ರವಚನ ಕೇಳಿದಾಗ ಭಾಗವತ ಬುನಾದಿ ಎಂದು ಅರ್ಥವಾಯಿತು. ರಾಮಾಯಣ,ಮಹಾಭಾರತ, ಇತಿಹಾಸ ಸರಿಯಾಗಿ ಅರ್ಥವಾಗಬೇಕಾದರೆ ಭಾಗವತದ ಜ್ಞಾನ ಅತ್ಯವಶ್ಯಕ ಎಂದು ಇವತ್ತು ನನಗೆ ಅರಿವಾಯಿತು.
ಗುರುಗಳಿಗೆ ಭಕ್ತಿಯಿಂದ ನಮಸ್ಕರಿಸಿ.
ಅದ್ಭುತ ಗುರುಗಳೇ ಎಷ್ಟೋ ವರ್ಷಗಳಿಂದ ತಲೆಯಲ್ಲಿ ಇದ್ದ ಸಂಶಯ ದೂರವಾಯಿತು. ಸೂರ್ಯವಂಶ ಮತ್ತು ಜನಕ ಮಹಾರಾಜರ ವಂಶಗಳ ಪರಿಚಯ. ಧನ್ಯನಾದೆ ಗುರುಗಳೇ ನಿಮ್ಮಂತಹ ಗುರುಗಳನ್ನು ಪಡೆದ ನಾನೇ ಧನ್ಯ.
Niranjan Kamath,Koteshwar
8:33 AM , 04/05/2020
ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಎಷ್ಟೊಂದು ಪೂರ್ವ ಸಿದ್ದತೆ ಹಾಗೂ ಅಧ್ಯಯನ ಮಾಡಿದ್ದೀರಿ ಗುರುಗಳೇ. ಆಹಾ ಧನ್ಯರು ನೀವು ಮತ್ತು ನಿಮ್ಮ ಗುರುಗಳು.. ಇಂತಹ ಶಿಷ್ಯರನ್ನು ಪಡೆದು ಈ ಜ್ಞಾನ ಯಜ್ಞದ ಮೂಲಕ ಎಲ್ಲರನ್ನು ಪಾವನ ಮಾಡುತ್ಗಿದ್ದೀರಿ. ಎರಡೂ ಕುಲದ ತಲೆಮಾರಿನ ಎಲ್ಲ ಹೆಸರುಗಳು ಸುಲಲಿತವಾಗಿ ಹೇಳಿದ್ದೀರಿ. ದಶರಥ ಮಹಾರಾಜರು ತಮ್ಮ ಕುಲಗುರು ವಶಿಷ್ಟ ರ ಅನುಜ್ಞೆ ಪಡೆಯುವುದು, ನಂತರ ವಶಿಷ್ಟರು ವಿಶ್ವಾಮಿತ್ರರಲ್ಲಿ ಸಮ್ಮತಿ ಪಡೆಯುವ ರೀತಿ...ಆಹಾ.!! ಪರಮ ಮಂಗಳ. ಕನ್ಯಾ ಯಾಚನೆ, ಜನಕ ಮಹಾರಾಜರ ವಿನಯ, ಎಲ್ಲವೂ ಪರಮ ಪಾವನ. ಧನ್ಯೋಸ್ಮಿ.