Upanyasa - VNU921

ಸೀತಾರಾಮಕಲ್ಯಾಣ

ಶ್ರೀಮದ್ ರಾಮಾಯಣಮ್ — 39 

ಜಗತ್ತಿನ ತಂದೆ ತಾಯಿಗಳ ಪರಮ ಮಂಗಳ ಮದುವೆಯ ಚಿತ್ರಣ. ಕೇಳಿಯೇ ಆನಂದಿಸಬೇಕಾದ ಭಾಗ. 

Play Time: 37:00

Size: 1.37 MB


Download Upanyasa Share to facebook View Comments
3192 Views

Comments

(You can only view comments here. If you want to write a comment please download the app.)
 • N.H. Kulkarni,Bangalore

  1:47 PM , 08/04/2022

  ಅನೇಕ ಕಡೆ ಅಕ್ಕನ ಮದುವೆಯಲ್ಲಿ ತಮ್ಮನ ಉಪನಯನ ಅಥವಾ ಸಂಬಂಧೀಕರ ಮದುವೆಯಲ್ಲಿ ಮಗನ ಉಪನಯನ ಮಾಡುವುದು ಕಂಡಿದೆ. ಇದಕ್ಕೆ ಧರ್ಮ ಶಾಸ್ತ್ರದ ಅನುಮತಿ ಇದೆಯೇ? ದಯಮಾಡಿ ತಿಳಿಸಿ.
 • Padmini Acharya,Mysuru

  12:54 PM, 08/04/2022

  ಶ್ರೀ ಗುರುಭ್ಯೋ ನಮಃ
  
  ಅಕ್ಕ ತಂಗಿಯರ ಅಥವಾ ಅಣ್ಣ ತಮ್ಮಂದಿರ ವಿವಾಹವನ್ನು ಒಂದೇ
  ದಿನ ಮಾಡಬಾರದು ಎಂದು ಹೇಳುತ್ತಾರೆ?
  
  ಯಾಕಾಗಿ ಮಾಡಬಾರದು?
  
  ಮತ್ತು ವಸಿಷ್ಠರು ಮತ್ತು ವಿಶ್ವಾಮಿತ್ರರು ಯಾಕಾಗಿ ಈ ವಿಷಯವನ್ನು ದಶರಥ ಮಹಾರಾಜರಿಗೆ ಹೇಳಲಿಲ್ಲ ?

  Vishnudasa Nagendracharya

  ಒಂದೇ ಚಪ್ಪರದಲ್ಲಿ ಒಬ್ಬರ ಮುಂಜೆ ಅಥವಾ ಒಬ್ಬರ ಮದುವೆಯನ್ನು ಮಾತ್ರ ಮಾಡಬೇಕು. ಅನೇಕ ಮದುವೆ ಮುಂಜಿಗಳನ್ನು ಒಂದೇ ಚಪ್ಪರದಲ್ಲಿ ಮಾಡಿದಾಗ ಒಬ್ಬರ ಜೀವನ ಹಾಳಾಗುತ್ತದೆ, ಒಬ್ಬರು ಚನ್ನಾಗಿರುತ್ತಾರೆ. ಇದಕ್ಕೆ ಇವತ್ತಿಗೂ ಹತ್ತಾರು ದೃಷ್ಟಾಂತಗಳನ್ನು ನೋಡಬಹುದು. 
  
  ಅಷ್ಟೇ ಅಲ್ಲ, ಒಮ್ಮೆ ನಾಂದೀಪೂಜೆಯನ್ನು ಮಾಡಿದ ಬಳಿಕ ಒಂದು ವರ್ಷದವರೆಗೆ ಮತ್ತೆ ನಾಂದೀಪೂಜೆಯನ್ನು ಮಾಡಬಾರದು. ಮಾಡಿದರೆ ಆಗಲೂ ಸಹ ಒಬ್ಬರಿಗೆ ಏಳಿಗೆಯಾಗುತ್ತದೆ, ಮತ್ತೊಬ್ಬರು ಜೀವನದಲ್ಲಿ ಕೆಳಗೆ ಬೀಳುತ್ತಾರೆ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಕನಿಷ್ಠ ಆರು ತಿಂಗಳ ಅಂತರವಾದರೂ ಇರಬೇಕು. 
  
  ಇದು ನಮಗೆ ಋಷಿ ಮುನಿಗಳು ಹಾಕಿಕೊಟ್ಟ ಮಾರ್ಗ. 
  
  ಆದರೆ, ಧರ್ಮಶಾಸ್ತ್ರವನ್ನು ನಿರ್ಣಯ ಮಾಡುವ ಶ್ರೀ ವಸಿಷ್ಠಮಹರ್ಷಿಗಳು, ಶ್ರೀ ವಿಶ್ವಾಮಿತ್ರ ಮಹರ್ಷಿಗಳೇ ಅಲ್ಲಿ ನಿಂತು ಒಂದೇ ದಿವಸ ನಾಲ್ಕು ಮದುವೆಗಳನ್ನು ಮಾಡಿಸಿದ್ದಾರೆ. ಪಾಂಡವರಲ್ಲಿ ಸಹಿತ ದಿನಕ್ಕೊಬ್ಬರಂತೆ ನಿರಂತರ ಐದು ದಿನ ಐದು ಜನರು ದ್ರೌಪದೀದೇವಿಯನ್ನು ಮದವೆಯಾಗುತ್ತಾರೆ. ಅಲ್ಲಂತೂ ಸಾಕ್ಷಾತ್ ವೇದವ್ಯಾಸದೇವರೇ ಇದ್ದಾರೆ. 
  
  ಈ ರೀತಿಯ ವಿಷಯಕ್ಕೆ ಮೂರು ಉತ್ತರಗಳಿವೆ — 
  
  ಒಂದು —  ಧರ್ಮ ಎನ್ನುವದು ಯುಗದಿಂದ ಯುಗಕ್ಕೆ ವಿಭಿನ್ನ. ನಮಗೆ ಇದು ಧರ್ಮ ಬೇರೆ ಯುಗದವರಿಗೆ ಬೇರೆಯ ಧರ್ಮಗಳು. ಕಲಿಯುಗದವರು ತಾಯಿಯ ಅಕ್ಕತಂಗಿಯರ ಮಕ್ಕಳನ್ನು ಮದುವೆಯಾಗುವದನ್ನು ಶಾಸ್ತ್ರ ನಿಷೇಧಿಸುತ್ತದೆ. ಆದರೆ ಕೃತಯುಗದಲ್ಲಿ ಆ ನಿಯಮವಿಲ್ಲ. ದ್ವಾಪರದ ಅಂತ್ಯದಲ್ಲಿ ಅವತರಿಸಿದ ಧರ್ಮರಾಜರು, ತಮ್ಮ ಇಂದ್ರಪ್ರಸ್ಥದ ರಾಜ್ಯದಲ್ಲಿ ಕೃತಯುಗದ ಧರ್ಮವನ್ನೇ ಪ್ರವರ್ತಿಸುತ್ತಾರೆ. ಆದಕ್ಕಾಗಿ ಸ್ವಯಂ ತಮ್ಮ ಚಿಕ್ಕಮ್ಮನ ಮೊಮ್ಮಗಳು ದೇವಕಿಯನ್ನು (ಶ್ಯಾಮಲಾದೇವಿಯ ಅವತಾರ, ಶಿಶುಪಾಲನ ಪುತ್ರಿ) ಮದುವೆಯಾಗುತ್ತಾರೆ. ಹೀಗೆ ಬೇರೆಯ ಯುಗಧರ್ಮ ಎನ್ನವದು ಒಂದು ಉತ್ತರ. 
  
  ಎರಡನೆಯದು — ಈ ವಿಧಿ ನಿಷೇಧಗಳೆಲ್ಲ ನಮಗೆ. ಭಗವಂತನಿಗಿಲ್ಲ. ಉಳಿದವರಿಗೆ ಮುಂಜಿ ಮೊದಲು, ಮದುವೆ ನಂತರ. ನಮ್ಮ ಸ್ವಾಮಿ ಶ್ರೀಕೃಷ್ಣದೇವರು ಮುಂಜಿಗಿಂತ ಮೊದಲು ತನ್ನ ಸೋದರಮಾವನ ಮಗಳು ನೀಲಾದೇವಿಯರನ್ನು ಮದುವೆಯಾಗುತ್ತಾರೆ. ಮನುಷ್ಯರ ಮಧ್ಯದಲ್ಲಿ ಅವತರಣ ಮಾಡಿಬಂದಾಗ, ಮನುಷ್ಯಧರ್ಮಗಳನ್ನು ಅನುಸರಿಸುವ ನಮ್ಮ ಸ್ವಾಮಿ, ಆಗಾಗ ಆ ಧರ್ಮವನ್ನು ಮೀರಿ, ತಾನು ವಿಧಿಬದ್ಧನಲ್ಲ ಎನ್ನುವದನ್ನು ಸಾರುತ್ತಾನೆ. ಹೀಗಾಗಿ ರಾಮದೇವರು ಆ ಧರ್ಮವನ್ನು ಮೀರಿ ತಮ್ಮ ತಮ್ಮಂದಿರೊಡಗೂಡಿ ಒಟ್ಟಿಗೇ ಮದುವೆಯಾದರು. 
  
  ಮೂರು — ಎಲ್ಲದಕ್ಕಿಂತ ಪ್ರಧಾನ ಉತ್ತರವಿದು. ಧರ್ಮಶಾಸ್ತ್ರವನ್ನು ನಿರ್ಣಯಿಸುವ ಶ್ರೀವಸಿಷ್ಠ, ವಿಶ್ವಾಮಿತ್ರ ಮಹರ್ಷಿಗಳು ಇದನ್ನು ಧರ್ಮ ಎಂದು ನಿರ್ಣಯಿಸಿ ಅನುಷ್ಠಾನ ಮಾಡಿಸಿದರು. ಸರ್ವವೇದಜ್ಞರಾದ ಅವರು ಮಾಡಿದ ವಿಶೇಷ ಧರ್ಮವಿದು. 
  
  ಹೀಗಾಗಿ ಈ ಮೂರೂ ದೃಷ್ಟಿಗಳಿಂದ ನಾಲ್ಕೂ ಜನ ಮಕ್ಕಳ ಮದುವೆ ಒಂದೇ ಚಪ್ಪರ, ಒಂದೇ ನಾಂದಿಯಲ್ಲಿ ಆದದ್ದು ವಿಶೇಷ ಧರ್ಮ. ನಾವು ನಮಗೆ ವಿಹಿತವಾದ ಸಾಮಾನ್ಯಧರ್ಮವನ್ನಷ್ಟೇ ಆನುಷ್ಠಾನ ಮಾಡಬೇಕು. ಈ ರೀತಿಯ ವಿಶೇಷ ಸಂದರ್ಭಗಳ ಧರ್ಮಗಳನ್ನು ಅನುಷ್ಠಾನ ಮಾಡತಕ್ಕದ್ದಲ್ಲ. 
  
  
  
  
 • Santosh Patil,Gulbarga

  9:18 PM , 01/05/2021

  🙏💐🙏
 • Sampada,Belgavi

  12:21 PM, 07/05/2020

  ವಿಶಾಲವಾದ ಶೋಭಾಯಮಾನವಾದ ವೇದಿಕೆ..... ಅರಸಿನ ಕೊಂಬು ಶ್ರೀಗಂಧ ತೇದು ಸಿದ್ಧಪಡಿಸಿದ ಹಳದಿಯ ಮಂತ್ರಾಕ್ಷತೆ... ಜಗಜ್ಜನನಿಯ ಗೌರಿ ಪೂಜೆ... ಶ್ರೀರಾಮಚಂದ್ರನ ಕೆಂಪಾದ ಅಂಗೈಯಲ್ಲಿ ಕೋಮಲವಾದ ಸೀತಾದೇವಿಯ ಕೈಗಳು... ರಾಮಚಂದ್ರ ಸೀತಾದೇವಿಯ ಪಾಣಿಗ್ರಹಣ ಮಾಡಿದ... ವೇದಿಕೆಯಲ್ಲಿ ಜನಸಾಗರ ನೆರೆದಿದ್ದರೆ ... ಆಕಾಶದಲ್ಲಿ ದೇವತೆಗಳ ಸಮುದಾಯದಿಂದ ಪುಷ್ಪ ವರ್ಷಣ.... ಕಣ್ಣು ತೆರೆದು ಉಪನ್ಯಾಸ ಕೇಳಿದರೂ.. ಕಣ್ಣು ಮುಚ್ಚಿ ಉಪನ್ಯಾಸ ಕೇಳಿದರೂ.. ವೈಭವ ಕಣ್ಣು ಮುಂದೆ ನಡೆದಂತೆ ಇರುತ್ತದೆ... ಏನು ಅಂತ ವರ್ಣಿಸುವುದು ... ಕೇಳಿಯೇ ಆನಂದಿಸಬೇಕು...🙏🙏🙏🙏🙏
 • Sangeetha,Bangalore

  10:19 PM, 05/05/2020

  Namaskara gurugale, urmila, mandovi ,shruthakirthi deviyarige swayamvara Elava?
 • Santosh Patil,Gulbarga

  10:03 PM, 05/05/2020

  Tnx Gurugale 💐🙏💐
 • Poornima Sowda,Bangalore

  2:20 PM , 05/05/2020

  ನಮಸ್ಕಾರಗಳು ಗುರುಗಳೇ... ಊರ್ಮಿಳೆ, ಮಾಂಡವಿ, ಶ್ರುತಕೀರ್ತಿ ದೇವಿಯರು ಯಾವ ಅವತಾರದವರು?

  Vishnudasa Nagendracharya

  ಇದರ ಉಲ್ಲೇಖ ದೊರೆತಿಲ್ಲ. 
 • Vikram Shenoy,Doha

  8:43 AM , 05/05/2020

  ಆಚಾರ್ಯರಿಗೆ ಅನಂತ ಕೋಟಿ ಧನ್ಯವಾದಗಳು
 • deashmukhseshagirirao,Banglore

  5:43 AM , 05/05/2020

  🙏🏻🙏🏻🙏🏻🙏🏻🙏🏻